ದೇಶ

ಡಿಲೀಟ್ ಆಗಲಿದೆ ವಾಟ್ಸಾಪ್..?! ವಾಟ್ಸಾಪ್ ಬಳಕೆದಾರರು ನೋಡಲೇಬೇಕಾದ ಸ್ಟೋರಿ.!

ಸಾಮಾಜಿಕ ಜಾಲತಾಣ ಜಗತ್ತಿನಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ಖ್ಯಾತಿ ಫೇಸ್‌ಬುಕ್‌ ಒಡೆತನದ ವಾಟ್ಸಾಪ್ ಗೆ ಸಲ್ಲುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ಸಾಯಲು ಹೊರಟ ಮುದುಕರಲ್ಲೂ ವಾಟ್ಸಾಪ್ ಎಂಬ ಪುಟ್ಟ ಜಗತ್ತು ಇದ್ದೇ ಇರುತ್ತದೆ. ವಾಟ್ಸಾಪ್ ನ ಮಹಿಮೆಯೇ ಅಂತಹದ್ದು, ಯಾಕೆಂದರೆ ಸಾವಿರಾರು ಮೈಲು ದೂರದಲ್ಲಿ ನಡೆದ ಘಟನೆಯನ್ನು ತಕ್ಷಣ ಅಂಗೈಯಲ್ಲಿ ನೋಡುವಂತಹ ಒಂದು ಅನುಕೂಲತೆ ಇದೆ ಎಂದರೆ ಅದು ವಾಟ್ಸಾಪ್ ನಿಂದ ಸಾಧ್ಯ. ಫೇಸ್‌ಬುಕ್‌, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಹೈಕ್, ಇಂತಹ ಅನೇಕ ಆಪ್ ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವಂತಹ ವಾಟ್ಸಾಪ್ ಗೆ ಇದೀಗ ಕಂಟಕ ಎದುರಾಗಿದೆ.

ಹೌದು, ಕೂತಾಗ ನಿಂತಾಗ ಮಲಗಿದಾಗ ಈ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಸ್ಮಾರ್ಟ್ ಫೋನ್ ಇದೆ ಎಂದರೆ ವಾಟ್ಸಾಪ್ ಇರಲೇಬೇಕಲ್ಲವೇ. ಯಾಕೆಂದರೆ ಇಂದಿನ ಈ ಸೋಷಿಯಲ್ ಮೀಡಿಯಾ ಜಗತ್ತಿಗೆ ಪ್ರತಿಯೊಬ್ಬರೂ ಅಂಟಿಕೊಂಡಿದ್ದಾರೆ. ವಾಟ್ಸಾಪ್ ಹಲವಾರು ರೀತಿಯಲ್ಲಿ ನಮಗೆ ಉಪಯೋಗವೂ ಆಗುತ್ತದೆ ಮತ್ತು ಅದೇ ರೀತಿಯಲ್ಲಿ ಇದರಿಂದ ನಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆಯೂ ಆಗಬಹುದು ಎಂಬ ಕಾರಣಕ್ಕಾಗಿ ಇದೀಗ ವಾಟ್ಸಾಪ್ ಎಂಬ ಜಗತ್ತನ್ನೇ ಡಿಲೀಟ್ ಮಾಡಲು ತಜ್ಞರು ಚಿಂತಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.!

ವಿಶ್ವದ ಶೇ ೨೫ಕ್ಕಿಂತ ಹೆಚ್ಚು ಮಂದಿಯಿಂದ ವಾಟ್ಸಾಪ್ ಬಳಕೆ..!

ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡಾ ೨೫ಕ್ಕಿಂತ ಹೆಚ್ಚು ಜನ ವಾಟ್ಸಾಪ್ ಗೆ ಅಂಟಿಕೊಂಡಿದ್ದಾರೆ ಎಂದರೆ ನಂಬಲು ಕೊಂಚ ಕಷ್ಟವಾಗಬಹುದು. ಆದರೆ ನಂಬಲೇಬೇಕು , ಯಾಕೆಂದರೆ ಪ್ರತಿಯೊಬ್ಬರ ಕೈಗೂ ಸ್ಮಾರ್ಟ್ ಫೋನ್ ಬಂದಾಗಿನಿಂದ ವಾಟ್ಸಾಪ್ ಬಳಕೆ ಹೆಚ್ಚುತ್ತಲೇ ಇದೆ. ಸಂಬಂಧಿಕರ ಜೊತೆ ಗೆಳೆಯರ ಜೊತೆ ಕಾಲಹರಣ ಮಾಡಲು ಕೆಲವರು ವಾಟ್ಸಾಪ್ ಬಳಸಿಕೊಂಡರೆ , ಇನ್ನೂ ಕೆಲವರಿಗೆ ಈ ವಾಟ್ಸಾಪ್ ನಿಂದಲೇ ಜೀವನದ ಆದಾಯವು ಬರುತ್ತದೆ ಎಂದರೆ ಆಶ್ಚರ್ಯವಾಗಬಹುದು. ಕೆಲವೊಂದು ವ್ಯವಹಾರಗಳು ವಾಟ್ಸಾಪ್ ಮುಖಾಂತರವೇ ನಡೆಯುತ್ತದೆ. ಯಾಕೆಂದರೆ ವಾಟ್ಸಾಪ್ ಎಲ್ಲರ ಪಾಲಿಗೂ ಸುರಕ್ಷಿತವಾಗಿದೆ ಎಂಬ ನಂಬಿಕೆಯಿದೆ. ಆದರೆ ತಜ್ಞರ ಪ್ರಕಾರ ವಾಟ್ಸಾಪ್ ಸೇಫ್ ಅಲ್ಲ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.!

ವಾಟ್ಸಾಪ್ ನಲ್ಲಿ ನಡೆಯುತ್ತೆ ಕಳ್ಳ ವ್ಯವಹಾರ.!

ವಾಟ್ಸಾಪ್ ನಲ್ಲಿ ಬಳಕೆದಾರರ ನಡುವೆ ನಡೆಯುವ ಪರಸ್ಪರ ಸಂವಹನವನ್ನು ಗೂಢಲಿಪಿಗೆ ಪರಿವರ್ತಿಸಲಾಗುತ್ತದೆ ಎಂದು ವಾಟ್ಸಾಪ್ ಸಂಸ್ಥೆ ಹೇಳಿಕೊಂಡಿತ್ತು, ಇದರಿಂದ ಯಾವುದೇ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹೇಳಲಾಗುತ್ತಿತ್ತು, ಆದರೆ ಅಮೇರಿಕಾದ ತಂತ್ರಜ್ಞಾನ ಉದ್ಯಮಿಯೊಬ್ಬರ ಪ್ರಕಾರ ವಾಟ್ಸಾಪ್ ನಿಂದ ಎಲ್ಲಾ ಮಾಹಿತಿಗಳನ್ನು ವಾಟ್ಸಾಪ್ ಸಂಸ್ಥೆ ಹಣಕ್ಕಾಗಿ ಹಂಚುತ್ತಿದೆ ಎಂಬ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಕರೆ, ಮೆಟಾಡೇಟಾ ಮುಂತಾದವುಗಳನ್ನು ಸಂಗ್ರಹಿಸುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಹೇಳಿದ್ದಾರೆ.

ವಾಟ್ಸಾಪ್ ಉದ್ಯಮಿಗಳಿಗೆ ಸಂಬಳ , ಆಪ್ ನಿರ್ವಹಣೆ, ಬೌದ್ಧಿಕ ನೀತಿಗಳ ಹಕ್ಕುಗಳ ತಯಾರಿಕೆ ಇತ್ಯಾದಿಗಳ ನಿರ್ವಹಣೆಗೆ ಸಾಕಷ್ಟು ಖರ್ಚಾಗುತ್ತದೆ. ಆದ್ದರಿಂದ ಉಚಿತವಾಗಿ ಸೇವೆ ನೀಡುವ ವಾಟ್ಸಾಪ್, ಬಳಕೆದಾರರ ಮಾಹಿತಿ ಸಂಗ್ರಹಿಸಿ ಫೇಸ್‌ಬುಕ್‌ ಸೇರಿದಂತೆ ಇತರರ ಜೊತೆ ಹಂಚಿಕೊಳ್ಳುವ ಮೂಲಕ ವಾಟ್ಸಾಪ್ ಹಣ ಗಳಿಸುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಫೇಸ್‌ಬುಕ್‌ ಬಳಕೆದಾರರ ಎಲ್ಲಾ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಗಂಭೀರ ಆರೋಪದ ಮೇರೆಗೆ ಸ್ವತಃ ಫೇಸ್‌ಬುಕ್‌ ಮಾಲಿಕ ಮಾರ್ಕ್ ಜುಕನ್ ಬರ್ಗ್ ಕ್ಷಮೆ ಯಾಚಿಸಿ, ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಇದೀಗ ವಾಟ್ಸಾಪ್ ಮೇಲೂ ಇದೇ ರೀತಿ ಆರೋಪ ಕೇಳಿ ಬರುತ್ತಿರುವುದರಿಂದ ವಾಟ್ಸಾಪ್ ಡಿಲೀಟ್ ಆಗುವ ಸಾಧ್ಯತೆ ಇದೆ.

–ಅರ್ಜುನ್

 

Tags

Related Articles

Close