ಅಂಕಣಇತಿಹಾಸ

ಅಫ್ಘಾನಿಸ್ಥಾನ ಮೊದಲು ಹಿಂದೂ ರಾಷ್ಟ್ರವಾಗಿತ್ತಾ?! ಇಲ್ಲಿದೆ ಪುರಾವೆಗಳು!!

ಭಾರತೀಯರಾಗಿರುವ ನಮ್ಮಲ್ಲಿರುವ ಬಹುಕೆಟ್ಟದಾದ ಹವ್ಯಾಸ ಎಂದರೆ ನಮ್ಮ ಸಂಸ್ಕೃತಿಯನ್ನು ಕಡೆಗಾಣಿಸುತ್ತಿರುವುದಲ್ಲದೇ ನಮ್ಮ ದೇಶವನ್ನು ದುರ್ಬಲ ರಾಷ್ಟ್ರ ಎಂದು ಕರೆಯುವುದು!! ಅಷ್ಟೇ ಅಲ್ಲದೇ, ಇಂದು ನಾವು ನಮ್ಮ ರಾಷ್ಟ್ರವನ್ನೇ ಹಿಂದು ಸಾಮ್ರಾಜ್ಯವೆಂದು ದೃಢೀಕರಿಸಲು ಹಿಂಜರಿಯುತ್ತೇವೆ ಎಂದರೆ ಅದಕ್ಕಿಂತ ದೊಡ್ಡ ದೌರ್ಭಾಗ್ಯ ಬೇರೊಂದಿಲ್ಲ!! ಇಂದು ಹಿಂದೂ ಧರ್ಮವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಇತರ ಕೆಲವು ದೇಶಗಳಲ್ಲಿ ಜನರು ಅನುಸರಿಸುತ್ತಿರುವುದು ತಿಳಿದಿದ್ದೇವೆ. ಆದರೆ ಅಫ್ಘಾನಿಸ್ತಾನ, ಉಜೆಕಿಸ್ತಾನ್ ಮತ್ತು ತಜಕಿಸ್ತಾನ್ ಪ್ರದೇಶಗಳಲ್ಲಿ 900 ಸಿಇ ವರೆಗೆ ಹಿಂದೂ ಸಾಮ್ರಾಜ್ಯವು ವ್ಯಾಪಕ ಹಬ್ಬಿತ್ತು ಎನ್ನುವುದು ನಿಮಗೆ ತಿಳಿದಿದೆಯೇ??

ಹೌದು, ಅಫ್ಘಾನಿಸ್ತಾನವು ಹಿಂದೂ ಸಾಮ್ರಾಜ್ಯವಾಗಿದ್ದಲ್ಲದೇ, ಹಿಂದು ಮತ್ತು ಬುದ್ಧರು ಪ್ರಾಬಲ್ಯ ಸ್ಥಾಪಿಸಿದ್ದ ಪ್ರದೇಶವಾಗಿತ್ತು!! ಆದರೆ ಯಾವಾಗ ರಾಜಾ ಜಯ ಪಾಲ್ ಸಬುಕ್ಟಾಗಿನ್ ಮೇಲೆ ಆಕ್ರಮಣ ಮಾಡಿದನೋ ಅಂದಿನಿಂದ ಅಂದರೆ 980 ಸಿಇ ನಂತರದಲ್ಲಿ ಈ ಹಿಂದೂ ಪ್ರದೇಶವಾದ ಅಫ್ಘಾನಿಸ್ತಾನದಲ್ಲಿ ಮುಸ್ಲಿಂ ಸಾಮ್ರಾಜ್ಯವು ಬೇರೂರಲು ಆರಂಭವಾಯಿತು!! ಆದರೆ ಜಯಾ ಪಾಲ್ ನ ಆಳ್ವಿಕೆಯಲ್ಲಿ, ಅಫ್ಘಾನಿಸ್ತಾನದ ಎಲ್ಲ ಸ್ಥಳಗಳಲ್ಲಿಯೂ ಕೂಡ ಶಿವನ ಆರಾಧನೆಯೇ ಪ್ರಧಾನವಾಗಿತ್ತು. ಹಾಗಾಗಿ ಈ ಸ್ಥಳಗಳಲ್ಲಿ ನೂರಾರು ಶಿವ ದೇವಾಲಯಗಳು ಇದ್ದು ನಿರಂತರ ಪ್ರಾರ್ಥನೆಗಳು, ಮಂತ್ರಘೋಷಗಳು ಮೊಳಗುತ್ತಿದ್ದಂತಹ ಪವಿತ್ರ ಹಿಂದೂ ಭೂಮಿಯಾಗಿತ್ತು.

Image result for the-untold-hindu-history-of-afghanistan

ಅಫ್ಘಾನಿಸ್ತಾನದ ಹೆಸರು ಸಹ ಸಂಸ್ಕೃತ ಶಬ್ದದಿಂದ ಬಂದಿದೆ, ಅಂದರೆ ಉಪ-ಗಾನ-ಸ್ಟಾನ್ ಅಂದರೆ “ಮೈತ್ರಿ ಪಂಗಡಗಳು ನೆಲೆಸಿದ ಸ್ಥಳ”. ವಾಸ್ತವವಾಗಿ, ಇಂದಿನ ಅಫಘಾನಿಸ್ತಾನದ ಕಾಂದರ ದೇಶವು ಮಹಾಭಾರತದಲ್ಲಿನ ಗಾಂಧರ ದೇಶವಾಗಿತ್ತು !! ಆ ದೇಶದ ಮುಖ್ಯ ನಗರವಾಗಿ ತಕ್ಷಶಿಲ ಪ್ರಸಿದ್ಧಿ ಹೊಂದಿದೆ. ಹಾಗಾಗಿ ಈ ರಾಜ್ಯದಿಂದಾಗಿಯೇ ದೃತರಾಷ್ಟ್ರನ ಪತ್ನಿಯಾದ ಗಾಂಧರಿ ಮತ್ತು ಕೌರವರ ಮಾವನಾದ ಶಕುನಿ ಬಂದರು ಎಂದು ಹೇಳಲಾಗಿದೆ!! ಆದರೆ ಇಂದು ಇದೇ ಗಾಂಧರ ಸ್ಥಳವನ್ನು ಕಂದಹಾರ್ ಎಂದು ಕರೆಯಲಾಗುತ್ತದೆ. ಇನ್ನು ಕುಶಮ್ ಮತ್ತು ಕಿದಾರಾ ಎನ್ನುವ ಇಬ್ಬರು ಪ್ರಸಿದ್ಧ ರಾಜರು ಈ ಪ್ರದೇಶವನ್ನು ಆಳುತ್ತಿದ್ದರು. ಈ ಅವಧಿಯಲ್ಲಿ ಅಫಘಾನ್ ಪ್ರದೇಶವು ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನದ ವರೆಗೆ ವಿಸ್ತರಿಸಿತ್ತು. ಇದಕ್ಕೆಲ್ಲಾ ಸಾಕ್ಷಿ ಎನ್ನುವಂತೆ ತಾಷ್ಕೆಂಟ್ ಪ್ರದೇಶದಲ್ಲಿ ಇಂದಿಗೂ ಕೂಡ ಅತ್ಯಂತ ಹಳೆಯ ಶಿವ ದೇವಾಲಯ ಇರುವುದನ್ನು ಕಾಣಬಹುದಾಗಿದೆ.

ಬ್ರಿಟಿಷ್ ಆರ್ಕಿಯಾಲಜಿಸ್ಟ್ ಆಗಿದ್ದ ಸರ್ ಎಸ್ಟೈನ್ ಎಂಬುವವರು ಅಫ್ಘಾನಿಸ್ತಾನ ಪ್ರದೇಶದಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಹಲವಾರು ದೇವಾಲಯಗಳು, ಗೋಪುರಗಳು ಮತ್ತು ಶಾಸನಗಳನ್ನು ಕಂಡುಕೊಂಡಿದ್ದರು. ಹಾಗಾಗಿ ಸರ್ ಎಸ್ಸ್ಟೈನ್ ತನ್ನ ನಾಲ್ಕು ಪುಸ್ತಕಗಳಲ್ಲಿ ಇಲ್ಲಿನ ಪ್ರಸಿದ್ಧ ಸೂರ್ಯ ದೇವಸ್ಥಾನ, ಗಣೇಶನ ಮೂರ್ತಿಯ ಬಗ್ಗೆ ವಿವರಿಸಿದ್ದಲ್ಲದೇ ಈ ಬಗ್ಗೆ ಮಾಹಿತಿಯನ್ನು ದಾಖಲಿಸಿದ್ದಾರೆ. ಇನ್ನು, ಇಸ್ಲಾಮಾಬಾದ್ ವಿಶ್ವವಿದ್ಯಾನಿಲಯದ ಅಫಘಾನ್ ಪ್ರಾಧ್ಯಾಪಕ ಅಬ್ದುಲ್ ರೆಹಮಾನ್ ಅವರು ಆ ಕಾಲದಲ್ಲಿನ ರಾಷ್ಟ್ರದ ಘನತೆ ಮತ್ತು ಸಮೃದ್ಧಿಯ ಬಗ್ಗೆ ಅವರು ತನ್ನ ಪುಸ್ತಕಗಳಲ್ಲಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಬುಖಾರ ಪ್ರದೇಶವನ್ನು ಹಿಂದೂ ರಾಜ ಆಳಿದ್ದನಲ್ಲದೇ ಆ ಪ್ರದೇಶವನ್ನು ಶಾಹ್ ವಿಹಾರ್ ಎಂದು ಕರೆಯುತ್ತಿದ್ದರು. ಆದರೆ ಅರಬ್ಬರು ಈ ಪ್ರದೇಶವನ್ನು ಆಕ್ರಮಿಸಿದಾಗ ಆ ಪ್ರದೇಶದ ರಾಣಿ ಅರಬ್ಬರ ದೌರ್ಜನ್ಯದಿಂದ ತಪ್ಪಿಸಿಕೊಂಡು ಮಿಲಿಟರಿ ಸಹಾಯಕ್ಕಾಗಿ ಕಾಶ್ಮೀರ ಪ್ರದೇಶಕ್ಕೆ ತೆರಳಿದ್ದಳು ಎನ್ನುವುದನ್ನು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ!!
Image result for the-untold-hindu-history-of-afghanistan

ಅಬ್ದುಲ್ ರೆಹಮಾನ್ ಅವರು ತನ್ನ ಪುಸ್ತಕದಲ್ಲಿ, ಹಿಂದು ಇತಿಹಾಸಕಾರನಾಗಿದ್ದ ಕಲ್ಹನ್, ಕಾಶ್ಮೀರ ಆಡಳಿತಗಾರ ಅರಬ್ ಖಲೀಫಾ ಮಮೂನ್ನನ ವಿಶಾಲವಾದ ಸೈನ್ಯದ ವಿರುದ್ಧ ಯಾವ ರೀತಿ ಹೋರಾಡಿದ ಎನ್ನುವ ಸಂಗತಿಯನ್ನು ಕೂಡ ತನ್ನ ಪುಸ್ತಕದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಇನ್ನು ಅರಬ್ಬರು ಬುಖಾರಾ ಪ್ರದೇಶವನ್ನು ವಶಪಡಿಸಿಕೊಂಡು ಬಾಗ್ದಾದ್ ಅನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡರು. ಆ ಸಂದರ್ಭದಲ್ಲಿ ಹಿಂದೂಗಳು ಬಹಳ ವಿಶ್ವಾಸಾರ್ಹರಾಗಿದ್ದರಲ್ಲದೇ ಆ ದಿನಗಳಲ್ಲಿ ವಿನಮ್ರರಾಗಿದ್ದರು ಕೂಡ!! ಆದರೆ ಅರಬ್ಬರು ಆ ಸಂದರ್ಭದಲ್ಲಿ ಅನೇಕ ಹಿಂದೂಗಳ ದೇವಸ್ಥಾನಗಳನ್ನು, ವಾರಣಾಸಿಯಲ್ಲಿನ ಆಯುರ್ವೇದ ವೈದ್ಯಾಲಯಗಳನ್ನು ಆಕ್ರಮಿಸಿ ನಾಶಪಡಿಸಿದರು. ಈ ಸಂದರ್ಭದಲ್ಲಿ ಆಯುರ್ವೇದಿಕ್ ಚಿಕಿತ್ಸೆಗಳಿಂದ ಅರಬ್ಬರು ಪ್ರೇರಿತರಾಗಿದ್ದರು. ಹಾಗಾಗಿ ಅವರು ಆಯುರ್ವೇದದ ಅನೇಕ ವಿಧಾನಗಳನ್ನು ಅರೇಬಿಕ್ ಗೆ ಭಾಷಾಂತರಿಸಿದ್ದು, ಅದು ಇಂದಿಗೂ ಸಹ ‘ಫ್ರಿಶ್ಟ್’ ಎಂಬ ಪರಿಮಾಣದಲ್ಲಿ ಲಭ್ಯವಿದೆ.

ಪ್ರಸಿದ್ಧ ಪೆಟ್ರೋಲಿಯಂ ಕ್ಷೇತ್ರಗಳಿಗೆ ಹೆಸರುವಾಸಿಯಾಗಿರುವ ಅಜೆರ್ಬೈಜಾನ್ ಪ್ರದೇಶದ ರಾಜಧಾನಿ ಬಾಕು ಭೂಗತವಾದ ಶಿವ ದೇವಾಲಯವನ್ನು ಹೊಂದಿರುವಂತಹ ಪ್ರದೇಶವಾಗಿದೆ. ಅಷ್ಟೇ ಅಲ್ಲದೇ ಪಂಜಾಬಿ ಗುರುಮಾಕಿ ಲಿಪಿಯಲ್ಲಿ ದಾಖಲಿಸಲ್ಪಟ್ಟ ಈ ದೇವಸ್ಥಾನವು ಪಂಜಾಬಿ ಪ್ರಿಸ್ಟ್(ಸಂತರು) ಒಬ್ಬರು ಈ ದೇವಸ್ಥಾನವನ್ನು ಕಟ್ಟಿಸಿದ್ದಾರೆ ಎಂದು ಹೇಳಲಾಗುತ್ತದೆ. ಕಾಬುಲ್ ಮತ್ತು ಗಾಂಧರ್ ಪ್ರದೇಶವು 7 ನೇ ಶತಮಾನದಲ್ಲಿ ಶಾಹಿ ರಾಜರು ಆಳ್ವಿಕೆ ನಡೆಸಿದ್ದು, ಇದು ಕಾಶ್ಮೀರ ಆಡಳಿತಗಾರರಿಗೆ ಸಂಬಂಧಿಸಿದೆ. ಈ ಸಮಯದಲ್ಲಿ ಈ ಪ್ರದೇಶವು ಅತ್ಯಂತ ಶ್ರೀಮಂತವಾಗಿದ್ದಲ್ಲದೇ ಸಮೃದ್ಧಿ ಹೊಂದಿದ ಪ್ರದೇಶ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಹಿಂದೂಗಳ ಪುರಾತನ ದೇವಾಲಯ ಎಂದು ಹೆಸರುವಾಸಿಯಾಗಿರುವ ಈ ದೇವಾಲಯದ ಸ್ಥಳದಲ್ಲಿಯೇ ಇಂದು ಕಾಬುಲ್ ನ ಪ್ರಮುಖ ಮಸೀದಿಯೊಂದು ನೆಲೆಯೂರಿದೆ ಎಂದರೆ ಎಂತಹ ವಿಪರ್ಯಾಸ ಅಲ್ವೇ??

660 ಎಡಿ ಯಿಂದ 850 ಎಡಿ ವರೆಗೆ, ಖಿಂಗ್ಲಾ ಸಾಮ್ರಾಜ್ಯ ಮತ್ತು ಕಲ್ಕಾ ಬ್ರಾಹ್ಮಣ ರಾಜರು ಅರಬ್ ದಾಳಿಕೋರರಿಂದ ಮತ್ತೆ ನಾಶವಾದ ಪ್ರದೇಶವನ್ನು ಆಳಿದರು. 10 ನೇ ಶತಮಾನದಲ್ಲಿ ಭಾರತವನ್ನು ಆಕ್ರಮಿಸಿದ ಸಬುಕ್ತಾಗಿನ್ ನ ಮಗನಾದ ಮಹಮ್ಮದ್ ಗಝ್ನಾವಿ (ಘಜ್ನಿ) ದಂಡೆತ್ತಿ ಬಂದ ನಂತರ ಹಿಂದೂ ರಾಜಮನೆತನಕ್ಕೆ ಅತಿದೊಡ್ಡ ಕಂಟಕವೇ ಎದುರಾಯಿತು. ಆದರೆ ಜೈ ಪಾಲ್ ದೇವ್ ಘಜ್ನಿಯ ಆಕ್ರಮಣವನ್ನು ಎದುರಿಸುವಲ್ಲಿ ವಿಫಲನಾದ. ಅಷ್ಟೇ ಅಲ್ಲದೇ ಈ ಸೋಲನ್ನು ಅನುಭವಿಸಿದ ಆತ ಆತ್ಮಹತ್ಯೆ ಮಾಡಿಕೊಂಡರು.

ಮಹಮ್ಮದ್ ಘಜ್ನಿ ತನ್ನ ರಾಜ್ಯವನ್ನು ವಿಸ್ತರಿಸಿದನಲ್ಲದೇ, ಹಲವಾರು ಹಿಂದೂ ಸಾಮ್ರಾಜ್ಯಗಳನ್ನು ಅತಿಕ್ರಮಿಸಿ ಸಾವಿರಾರು ಹಿಂದು ನಗರಗಳನ್ನು ಕೆಡವಿ, ದೇವಾಲಯಗಳನ್ನು ಮತ್ತು ಗೋಪುರಗಳನ್ನು ನಾಶಪಡಿಸುತ್ತಾನೆ. ಅಷ್ಟೇ ಅಲ್ಲದೇ, ಹಿಮಾಚಲ ಪ್ರದೇಶದಲ್ಲಿರುವ ತನ್ನ ಪ್ರದೇಶವನ್ನು ಲಾಹೋರ್ ಮತ್ತು ಕಾಂಗ್ರಾ ವರೆಗೆ ವಿಸ್ತರಿಸಿದನು.

ವೆಕಾ ಎಂದು ಕರೆಯಲ್ಪಡುತ್ತಿದ್ದ ಒಬ್ಬ ಹಿಂದು ರಾಜನು ಆ ದಿನಗಳಲ್ಲಿ ಅತ್ಯಂತ ಶಕ್ತಿಯುತವನಾಗಿದ್ದನಲ್ಲದೇ ತನ್ನ ಪಡೆಗಳಿಂದ ಭೂಮಿ, ಮಾರುಕಟ್ಟೆಗಳು ಮತ್ತು ಕೋಟೆಗಳನ್ನು ವಶಪಡಿಸಿಕೊಂಡು ಘಜ್ನಿಗಿಂತಲೂ ಎಂಟು ಪಟ್ಟು ಹೆಚ್ಚು ಪಡೆಗಳನ್ನು ಹೊಂದಿದ್ದಂತಹ ಪ್ರಬಲ ರಾಜನಾಗಿದ್ದನು. ಹಾಗಾಗಿ ದಕ್ಷಿಣ ಅಫ್ಘಾನಿಸ್ತಾನದಲ್ಲಿ ಅರಬ್ಬರನ್ನು ನಿಯಂತ್ರಿಸುವಲ್ಲಿ ಆತ ಯಶಸ್ವಿಯಾಗಿದ್ದನು. ಆದ್ದರಿಂದ ಭಾರತವು ಕೇವಲ ಕಾಶ್ಮೀರ ಪ್ರದೇಶ ಅಥವಾ ಪಂಜಾಬ್ ಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಅಫ್ಘಾನಿಸ್ತಾನದ ಗಡಿಯನ್ನು ಮೀರಿದೆ!!

Image result for the-untold-hindu-history-of-afghanistan
ಒಟ್ಟಾರೆಯಾಗಿ, ಅರಬ್ಬರು ಮತ್ತು ಮೊಘಲ್ ದಾಳಿಕೋರರು ಗಡಿಯನ್ನು ದಾಟಿ, ಅಫಘಾನ್ ಪ್ರದೇಶಕ್ಕೆ ನುಗ್ಗಿ ಹಿಂದುತ್ವದ ಅಸ್ತಿತ್ವವನ್ನು ನಾಶಮಾಡುವವರೆಗೆ ಅಫಘಾನ್ ಹಿಂದೂ ಭೂಮಿ ಆಗಿದ್ದಂತೂ ಅಕ್ಷರಶಃ ನಿಜ!! ಯಾವಾಗ ಅರಬ್ಬರು ಮತ್ತು ಮೊಘಲರು ದಂಡೆತ್ತಿ ಬಂದರೋ ಅಂದಿನಿಂದ ಹಿಂದೂ ಭೂಮಿಯಾಗಿದ್ದ ಅದೆಷ್ಟೋ ಪ್ರದೇಶಗಳು ಮುಸ್ಲಿಂ ರಾಷ್ಟ್ರಗಳಾಗಿ ಮೆರೆಯಲು ಆರಂಭಿಸಿರೋದು ಮಾತ್ರ ವಿಪರ್ಯಾಸ!!

ಮೂಲ:http://postcard.news/the-untold-hindu-history-of-afghanistan/

– Postcard team

Tags

Related Articles

FOR DAILY ALERTS
 
FOR DAILY ALERTS
 
Close