ಪ್ರಚಲಿತ

ಸ್ಫೋಟಕ ಸುದ್ಧಿ! ಲೋಕಸಭಾ ಚುನಾವಣೆಗೆ ಬಳ್ಳಾರಿಯಿಂದ ಕಣಕ್ಕಿಳಿಯಲಿದ್ದಾರೆ ರಾಹುಲ್ ಗಾಂಧಿ? ಉಪಚುನಾವಣೆಗೆ ಬಳ್ಳಾರಿಯನ್ನೇ ಟಾರ್ಗೆಟ್ ಮಾಡಿದ ಹಿಂದಿನ ಉದ್ದೇಶವೇನು?

2019ರ ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಮಾತ್ರ ಬಾಕಿ ಉಳಿದಿದೆ, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸಲು ಚುನಾವಣೆಗೆ ಎಲ್ಲಾ ಸಿದ್ಧತೆ ನಡೆಸುತ್ತಿದೆ. ಭಾರತೀಯ ಜನತಾ ಪಕ್ಷ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿ ಮಾಡುವ ಸಿದ್ಧತೆ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸ್ ಸೇರಿದಂತೆ ಕೆಲ ಎಡಪಂಥೀಯ ಪಕ್ಷಗಳು ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಪಣತೊಟ್ಟಿವೆ. ಒಟ್ಟಾರೆಯಾಗಿ ಲೋಕಸಭಾ ಚುನಾವಣೆ ಒಂದು ರೀತಿಯ ರಣರಂಗವೇ ಸರಿ. ಯಾಕೆಂದರೆ 2014ರಲ್ಲಿ ನಡೆದ ಚುನಾವಣೆಯ ನಂತರ ದೇಶದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತಿವೆ ಎಂಬುದನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ನೋಡುತ್ತಿದೆ.

ಬದಲಾವಣೆ ಬಯಸುವ ಪ್ರತಿಯೊಬ್ಬರೂ ಪ್ರಧಾನಿ ಮೋದಿಯವರನ್ನೇ ಮತ್ತೊಮ್ಮೆ ಆಯ್ಕೆ ಮಾಡಿದರೆ, ಏನೂ ಅರಿಯದ ಕೆಲ ಎಡ ಪಕ್ಷಗಳು ಭಾರತ ವಿನಾಶದತ್ತ ಸಾಗುತ್ತಿದೆ ಎಂದು ಬಿಂಬಿಸುತ್ತಿವೆ. ಅದೇನೇ ಆಗಲಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ನಾಯಕರು ಈಗಿಂದಲೇ ತಯಾರಿ ನಡೆಸುತ್ತಿದ್ದು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಿಂದೊಮ್ಮೆ ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಭಾರೀ ಕೇಳಿ ಬರುತ್ತಿತ್ತು, ಆದರೆ ಈ ವಿಚಾರ ಸತ್ಯಕ್ಕೆ ದೂರವಾಗಿದೆ. ಆದರೆ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಸತ್ಯಾಂಶ ಬಯಲಾಗಿದೆ. ಈಗ ನೀವೆಲ್ಲಾ ಯೋಚಿಸುತ್ತಿರಬಹುದು ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧಿಸಿ ಗೆಲ್ಲುತ್ತಾರಾ? ಎಂದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!!

ಉಪಚುನಾವಣೆಯನ್ನೇ ನಂಬಿಕೊಂಡಿದ್ದ ಮೈತ್ರಿ ಕೂಟ ಮಾಡಿದ್ದೇನು?

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಉಪಚುನಾವಣೆಯ ಭಾರೀ ಸುದ್ದಿಯಾಗಿತ್ತು.‌ ಕೆಲವರಿಗಂತೂ ಈ ಉಪಚುನಾವಣೆ ಎಂದರೆ ಏನೆಂದೇ ಗೊತ್ತಿಲ್ಲ, ಆದರೂ ರಾಜಕೀಯ ತಿಳಿದವರು ಉಪಚುನಾವಣೆಯ ಫಲಿತಾಂಶಕ್ಕೆ ಕಾಯುತ್ತಿದ್ದಿದ್ದು ಮಾತ್ರ ನಿಜ. ಯಾಕೆಂದರೆ ದೇಶಾದ್ಯಂತ ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ, ಆದ್ದರಿಂದ ಈ ಚುನಾವಣೆ ಕೂಡ ಮುಖ್ಯ ಎಂದು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸಿದ್ದವು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡೇ ಎದುರಿಸಬೇಕಾಯಿತು.

ಮೂರು ಪಕ್ಷಗಳಿಗೆ ನಡೆಯಬೇಕಾಗಿದ್ದ ಚುನಾವಣೆ ಕೇವಲ ಎರಡು ಪಕ್ಷಗಳಿಗೆ ಎಂಬಂತೆ ನಡೆದು ಹೋಯಿತು. ಮೈತ್ರಿ ಕೂಟ ಅಂದುಕೊಂಡಂತೆ ಬಿಜೆಪಿಯನ್ನು ಮಣಿಸಿತು. ಆದರೆ ಬಿಜೆಪಿಯನ್ನು ಸೋಲಿಸುವ ಉದ್ದೇಶವಿದ್ದರೂ ಹೆಚ್ಚಾಗಿ ಗಣಿನಾಡು ಎಂದು ಕರೆಯಲ್ಪಡುವ ಬಳ್ಳಾರಿಯನ್ನೇ ಟಾರ್ಗೆಟ್ ಮಾಡಿದ್ದು ಯಾತಕ್ಕಾಗಿ? ಎಂದು ಆಲೋಚಿಸಬಹುದು. ಹೌದು ಇದು ನಿಜವಾಗಿಯೂ ರಾಜ್ಯದ ಜನರಲ್ಲಿ ಮೂಡುವ ಪ್ರಶ್ನೆ, ಯಾಕೆಂದರೆ ಮೈತ್ರಿ ಸರಕಾರದ ಘಟಾನುಘಟಿ ನಾಯಕರು ಬಳ್ಳಾರಿಯಲ್ಲೇ ಟೆಂಟ್ ಹಾಕಿ ನಿದ್ದೆಗೆಟ್ಟು ಕೆಲಸ ಮಾಡಿದ್ದಾರೆ ಎಂದರೆ ಈ ಚುನಾವಣೆ ಅಷ್ಟೊಂದು ಮುಖ್ಯನಾ ಅಥವಾ ಬಳ್ಳಾರಿ ಮುಖ್ಯನಾ ಎಂದು ಆಲೋಚಿಸಲೇಬೇಕು. ಬಳ್ಳಾರಿಯಲ್ಲಿ ಶ್ರೀ ರಾಮುಲು ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ಬಿಜೆಪಿ ನಾಯಕರು ನಂಬಿದ್ದರು. ಆದರೆ ಊಹೆ ತಪ್ಪಾಗಿ ಬಿಜೆಪಿ ಸೋಲು ಅನುಭವಿಸಿತು. ಈ ಸೋಲಿಗೆ ಬಿಜೆಪಿಯ ವೈಫಲ್ಯ ಕಾರಣ ಅಲ್ಲ, ಬದಲಾಗಿ ಮೈತ್ರಿ ಕೂಟ ನಡೆಸಿದ ಸ್ಟ್ರಾಟರ್ಜಿ ಕಾರಣ ಎಂಬುದು ಸ್ಪಷ್ಟ.!

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಬ್ಬನೇ ನಡೆಸಿಕೊಂಡು ಹೋಗುವಂತಹ ಸಾಮರ್ಥ್ಯ ಇರುವ ಡಿ ಕೆ ಶಿವಕುಮಾರ್ ಅವರನ್ನೇ ಬಳ್ಳಾರಿಗೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಯಿತು ಎಂದು ಗಮನಿಸಿದರೆ ನಮಗೆ ಸರಿಯಾದ ಉತ್ತರ ಸಿಗುತ್ತದೆ. ಯಾಕೆಂದರೆ ತನಗೆ ಸಂಬಂಧವೇ ಇಲ್ಲದ ಬಳ್ಳಾರಿ ಜಿಲ್ಲೆಗೆ ಡಿಕೆಶಿ ಹೋಗಿ ಕೆಲಸ ಮಾಡುತ್ತಾರೆ ಎಂದರೆ ಇದರ ಹಿಂದಿನ ಗೇಮ್ ಪ್ಲಾನ್ ಹೇಗಿರಬಹುದು ಎಂದು ನೀವೇ ಗಮನಿಸಿ. ಬಳ್ಳಾರಿಯಲ್ಲಿ ಗೆದ್ದ ಉಗ್ರಪ್ಪ ಅಷ್ಟೇನೂ ಯಶಸ್ಸು ಕಂಡ ವ್ಯಕ್ತಿ ಅಲ್ಲ, ಆದರೂ ಅವರನ್ನೇ ಏಕೆ ಚುನಾವಣೆಗೆ ಸ್ಪರ್ಧಿಸಲಾಯಿತು ಎಂದು ನಾವು ತಿಳಿದುಕೊಳ್ಳಬೇಕು.‌ ಇಲ್ಲಿ ಚುನಾವಣೆ ಕೇವಲ ನೆಪ ಅಷ್ಟೇ, ಆದರೆ ಕಾಂಗ್ರೆಸ್‌ಗೆ ಬಳ್ಳಾರಿ ಬಹಳ ಮುಖ್ಯವಾದ ಜಿಲ್ಲೆಯಾಗಿತ್ತು, ಕಾರಣ “ರಾಹುಲ್ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಲಿದ್ದಾರೆ”.!!

ಹೌದು ಈ ಮಾತು ಕೇಳದರೆ ಇದೆಲ್ಲಾ ನಿಜಾನಾ ಎಂದು ನೀವು ಆಶ್ಚರ್ಯಪಡಬಹು, ಆದರೆ ಇದನ್ನು ನಂಬಲೇಬೇಕು.‌ ಯಾಕೆಂದರೆ ಈ ಬಾರಿಯ ಉಪಚುನಾವಣೆಗೆ ಮೈತ್ರಿ ಕೂಟ ನಡೆಸಿದ ಕಸರತ್ತು ನೋಡಿ ನಿಮಗೆ ಈ ಮಾತು ನಿಜ ಎಂದು ಅನಿಸಿರಬಹುದು. ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಠಿಯಲ್ಲಿ ರಾಹುಲ್ ಮಾಡಿರುವ ಶೂನ್ಯ ಅಭಿವೃದ್ಧಿಗೆ ಈ ಬಾರಿ ಅಲ್ಲಿಂದ ಸ್ಪರ್ಧಿಸಿದರೆ ನೂರಕ್ಕೆ ನೂರರಷ್ಟು ಸೋಲು ಖಚಿತ ಎಂದು ಎಲ್ಲಾ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರು ಹೇಳಿಕೊಂಡಿದ್ದಾರೆ. ಆದರೆ ರಾಹುಲ್‌ಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದೆಡೆ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಕರೆಯಲಾಗುತ್ತಿದೆ, ಆದರೆ ಮಹಾಘಟಬಂಧನದಲ್ಲಿ ಇದಕ್ಕೆ ಒಪ್ಪಿಗೆ ಸಿಗುವುದು ಕಷ್ಟ. ಆದರೂ ರಾಹುಲ್‌ಗೆ ಗೆಲುವು ಅನಿವಾರ್ಯ, ಆದ್ದರಿಂದಲೇ ಈಗಿಂದಲೇ ರಾಜ್ಯ ನಾಯಕರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದು ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದು ಎಂದು ಆದೇಶ ನೀಡಲಾಗಿದೆ.!!

ಬಳ್ಳಾರಿಯಿಂದ ಸ್ಪರ್ಧಿಸಿದರೆ ಗೆಲ್ಲುತ್ತಾರಾ ಕಾಂಗ್ರೆಸ್ ಅಧ್ಯಕ್ಷ?

ರಾಹುಲ್ ಗಾಂಧಿ ತನ್ನ ಸ್ವಕ್ಷೇತ್ರ ಅಮೇಠಿಯನ್ನೇ ಅಭಿವೃದ್ಧಿ ಮಾಡಲಾಗದೆ ಅಲ್ಲಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರೆ ಅವರ ಆಡಳಿತ ಹೇಗೆ ಎಂದು ಅರಿವಾಗುತ್ತದೆ. ಆದರೂ ಕಾಂಗ್ರೆಸ್ ಗುಲಾಮರಿಗೆ ರಾಹುಲ್ ಗಾಂಧಿಯೇ ನಾಯಕ.‌ ಅಮೇಠಿಯಿಂದ ಪಲಾಯನ ಮಾಡಲು ಅಷ್ಟು ಸುಲಭವಿಲ್ಲ, ಏಕೆಂದರೆ ತನ್ನ ಕ್ಷೇತ್ರವನ್ನೇ ಬಿಟ್ಟು ಬೇರೆ ಕ್ಷೇತ್ರಕ್ಕೆ ಓಡಿಹೋದ ಎಂಬ ಅವಮಾನ ಎದುರಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದಲೇ ರಾಹುಲ್ ಗಾಂಧಿಗೆ ಮುಂದಿನ ಚುನಾವಣೆ ಕಗ್ಗಂಟಾಗಿದ್ದು ಯಾವ ಕ್ಷೇತ್ರದಿಂದ ಸ್ಪರ್ಧಿಸಿದರೆ ಉತ್ತಮ ಎಂದು ಈಗಿಂದಲೇ ಅಳತೆ ಮಾಡಲು ಆರಂಭಿಸಿದ್ದಾರೆ. ಮಾಹಿತಿಯ ಪ್ರಕಾರ ರಾಹುಲ್ ಗಾಂಧಿ 99% ಕರ್ನಾಟಕದ ಬಳ್ಳಾರಿಯಿಂದಲೇ ಸ್ಪರ್ಧಿಸಲಿದ್ದಾರೆ, ಅದಕ್ಕಾಗಿಯೇ ಮೈತ್ರಿ ಕೂಟದ ನಾಯಕರು ಬಳ್ಳಾರಿಯಲ್ಲಿ ಪಕ್ಷ ಬಲಗೊಳಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.!

ರಾಹುಲ್ ಗಾಂಧಿ ಬಳ್ಳಾರಿಯಿಂದ ಏಕೆ ಸ್ಪರ್ಧಿಸುತ್ತಾರೆ ಎಂದು ಕೇಳಿದರೆ ಅದಕ್ಕೂ ನೂರು ಸಾಕ್ಷಿ ಇದೆ‌. ಇಂದಿರಾಗಾಂಧಿ ಕೂಡ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಅಷ್ಟೇ ಏಕೆ ರಾಹುಲ್ ತಾಯಿ ಸೋನಿಯಾ ಗಾಂಧಿ ಕೂಡ ಬಳ್ಳಾರಿಯಿಂದ ಸ್ಪರ್ಧಿಸಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿದರೆ ರಾಹುಲ್ ಬಳ್ಳಾರಿಯನ್ನೇ ಆಯ್ಕೆ ಮಾಡುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ದಿಗ್ಗಜರಿಗೆ ಗಜಬಲ ನೀಡಿದ ಬಳ್ಳಾರಿಯಲ್ಲಿ ಈ ಬಾರಿ ಮತ್ತೊಮ್ಮೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಕೂಟ ವಿಜಯದ ಬಾವುಟ ಹಾರಿಸಿದೆ. ಮುಂದಿನ‌ ಚುನಾವಣೆಗೂ ಇದೇ ರೀತಿ ಮುಂದುವರೆಯುವ ಮುನ್ಸೂಚನೆ ನೀಡಿದ ಮೈತ್ರಿ ಕೂಟ, ಬಿಜೆಪಿಯನ್ನು ಮಣಿಸಲು ನಾವು ಯಾವ ಮಟ್ಟಕ್ಕೂ ಇಳಿಯುತ್ತೇವೆ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಆದರೆ ಬಳ್ಖಾರಿಯಲ್ಲೇ ಗೂಟ ಹಾಕಿ ಕೂತಿದ್ದ ಮೈತ್ರಿ ಸರಕಾರ ಯಾತಕ್ಕಾಗಿ ಈ ತಯಾರಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಯಿತು ಅಲ್ವೇ???

–ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close