ಇತಿಹಾಸಪ್ರಚಲಿತ

ಸಹಸ್ರಾರು ವರ್ಷಗಳಿಂದ ಸಾಧುಗಳು ಹಿಮಾಲಯದಲ್ಲಿ ತಪಸ್ಸು ಮಾಡುತ್ತಿರುವರೇ?! ಇಲ್ಲಿದೆ ಅಧಿಕೃತ ಮಾಹಿತಿ!

ಮೇಲಿನ ಪ್ರಶ್ನೆಗೆ ಮೊದಲೇ ಉತ್ತರ ಹೇಳಬೇಕೆಂದರೆ, “ಹೌದು!! ಯಾಕಿಲ್ಲ?!”

ಇದು ಕೇವಲ ನನ್ನೊಬ್ಬನ ಉತ್ತರವಲ್ಲ! ಬದಲಿಗೆ, ಸನಾತನ ಭಾರತವನ್ನು ಗೌರವಿಸುವ ಮತ್ತು, ವೇದಗಳ ಕಾಲದ ಬಗ್ಗೆ ಅರಿವಿರುವ ಪ್ರತಿಯೊಬ್ಬನೂ ಸಹ
ಹೀಗೆಯೇ ಉತ್ತರ ಕೊಡುತ್ತಾನೆ! ಆದರೆ, ಯಾರೂ ಕೂಡಾ ಸಾವಿರ ವರ್ಷಗಳಷ್ಟು ಬದುಕಲು ಸಾಧ್ಯವೇ ಇಲ್ಲವೆಂದೂ ಸದಹ ಯಾಕೆ ಹಲವರು ಅಭಿಪ್ರಾಯಿಸುತ್ತಾರೆ ಎಂಬುದನ್ನೂ ನಾನು ಹೇಳುತ್ತೇನೆ!

ಅದೊಂದು “Human Psychology”!! ಹಾ!! ಯಾರಿಗೆ ಕೆಲವು ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲವೋ ಮತ್ತು, ಕೆಲವಷ್ಟನ್ನು ಅನುಭವಿಸಿರುವುದಿಲ್ಲವೋ ಅಥವಾ ನೋಡಿರುವುದಿಲ್ಲವೋ, ಅದನ್ನು ಮನುಷ್ಯನೆನ್ನಿಸಿಕೊಂಡವನು ನಿರಾಕರಿಸಿಬಿಡುತ್ತಾನೆ! ತಾಜಾ ಉದಾಹರಣೆ
ಕೊಡಬೇಕೆಂದರೆ, ನಮ್ಮ ಸನಾತನ ಧರ್ಮದ ಯೋಗ ಕಲೆ!! ಯೋಗವೆನ್ನುವುದರಿಂದ ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ ಅಥವಾ, ಕೆಲ ಅನಾರೋಗ್ಯಗಳು ಗುಣಮುಖವಾಗುತ್ತವೆಂಬುದನ್ನಯ ಪಾಶ್ಚಾತ್ಯರು ಒಪ್ಪುವುದೇ ಇಲ್ಲ! ಆದರೆ, ಅದೇ ನಮ್ಮ ಪ್ರಾಚೀನ ಭಾರತದಲ್ಲಿ , ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿಯೂ ಸಹ ಯೋಗವೆಂದರೆ ದಿನದ ಊಟಕ್ಕೆ ಕೊಡುವಷ್ಟು ಪ್ರಾಶಸ್ತ್ಯವನ್ನು ನೀಡುತ್ತಿದ್ದರಲ್ಲವಾ?! ಯಾಕೆ ಹೇಳಿ?! ತಲೆತಲಾಂತರದಿಂದ ಸಿಕ್ಕ ಬಳುವಳಿ ಯೋಗವೆಂಬುದಾದರೆ, ಅದಕ್ಕಿರುವ ಮಹತ್ವವನ್ನು ಭಾರತೀಯರು ತಿಳಿದಿದ್ದಕ್ಕೇ ಯೋಗವನ್ನು ಒಪ್ಪಿ ನಡೆದರು! ಅದೇ, ಪಾಶ್ಚಾತ್ಯರಿಗೆ ಅದು ತೀರಾ ಕ್ಲಿಷ್ಟವಾದ, ಆರಾಮವಾದ ಆಸನಕ್ಕೆ ಯೋಗ್ಯವಲ್ಲದಂತಹದ್ದು! ಎಲ್ಲಿಯ ವರೆಗೆ?! ಯೋಗವನ್ನು ಅಭ್ಯಸಿಸುವವರೆಗೆ ಮಾತ್ರ!!

ಹಠ ಯೋಗದಲ್ಲಿನ ಕೆಲ ಭಂಗಿಗಳು, ಆಸನಗಳು, ಕ್ರಮಗಳು ಅಷ್ಟು ಸುಲಭದ್ದಲ್ಲ! ಒಂದೇ ದಿನಕ್ಕೆ ಕಲಿತುಬಿಡುವಂತಹದ್ದೂ ಅಲ್ಲ! ಬದಲಿಗೆ, ನಿರಂತರವಾದ ಅಭ್ಯಾಸಕ್ಕೆ ಕಟ್ಟುಬಿದ್ದು ಅಭ್ಯಸಿಸುವ ಭಂಗಿಗಳು, ಒಬ್ಬ ಮನುಷ್ಯನಾದವನು ತನ್ನ ದೇಹದ ಭಾಗಗಳನ್ನು ಈ ರೀತಿಯಲ್ಲಿ ಮಡಚಬಹುದೇ ಎಂದು ಬೆರಗಾಗುವಷ್ಟು!! ಆದರೆ, ಅಭ್ಯಸಿಸುತ್ತ ಹೋದಂತೆ ಸಾಧ್ಯವಾಗಿಸಬಲ್ಲಂತಹ ಜ್ವಲಂತ ವಿಸ್ಮಯಗಳು ಅವೆಲ್ಲ!! ವಿಷಯ ಇಷ್ಟೇ!! ಪೃಕ್ರತಿಯ ಅದೆಷ್ಟೋ ವಿಸ್ಮಯಗಳು ಮೊದ ಮೊದಲಿಗೆ ಅಸಾಧ್ಯವೆನ್ನಿಸಿದರೂ ಸಹ, ಅದರ ಜಾಡು ಹಿಡಿದಂತೆ, ಅಭ್ಯಾಸದ ಮೂಲಕ ಅನುಭಾವಿಸುತ್ತ ಹೋದಂತೆ ಸಾಧ್ಯವಾಗುತ್ತದೆಂಬುದಷ್ಟೇ ವಿಚಾರ!!

ಹಾಗಾದರೆ, ಈ ಹಠ ಯೋಗ ಅಥವಾ ಯೋಗ ಆಸನ ಎಂದರೇನು ಗೊತ್ತೇ?!

Image result for hatha yogaImage result for hatha yogaRelated image

ಯೋಗ ಆಸನ ಎಂದರೆ, ಎಂಟು ಹಂತಗಳನ್ನೊಳಗೊಂಡ ಸಂಪೂರ್ಣ ಯೋಗ ಎಂಬುದು ಯೋಗಾಸನ! ಯೋಗ ಎನ್ನುವುದು ಕೇವಲ ಆಸನವೂ ಅಲ್ಲ! ಯೋಗ ಎಂದರೆ, ಸ್ವಯಂ ಸಂಯೋಗ! ಬಾಹ್ಯಗಳ ಸಂಯೋಗದ ಜೊತೆ ಆಂತರಿಕ ಸಂಯೋಗ! ದೈಹಿಕ ದಂಡನೆಯ ಮೂಲಕ, ಆಂತರಿಕವಾಗಿ ಏಕಾಗ್ರ ಗೊಳ್ಳುವುದು ಯೋಗವಾದರೆ, ಅದಕ್ಕೆ ಅದರದೇ ಆದ ಕೆಲವು ಹಂತಗಳಿವೆ!! ಈ ಎಂಟು ಹಂತಗಳೂ ಸಹ ಆಂತರಿಕವಾದಂತಹ ಋಣಾತ್ಮಕತೆಗಳನ್ನು ಧನಾತ್ಮಕವಾಗಿಸುತ್ತಾ ತನ್ನನ್ನು ತಾ ಅರಿಕೆ ಮಾಡುತ್ತ ಹೋಗುವುದೇ ಯೋಗ!!

೧. ಯಮ – ನೈತಿಕ ಮಾನದಂಡಗಳು
೨. ನಿಯಮ – ಸ್ವಯಂ ಶಿಸ್ತು
೩. ಆಸನ – ಭೌತಿಕ ಭಂಗಿ
೪‌. ಪ್ರಾಣಾಯಾಮ – ಉಸಿರಾಟದ ನಿಯಂತ್ರಣ
೫. ಪ್ರತ್ಯಾಹಾರ – ಸಂವೇದನೆಯ ನಿಯಂತ್ರಣ
೬. ಧಾರಣ – ಏಕಾಗ್ರತೆ
೭. ಧ್ಯಾನ – ಸ್ವ – ಏಕಾಗ್ರತೆ
೮. ಸಮಾಧಿ – ಸ್ವ – ಅರಿಕೆ

ಈ ಸಂಪೂರ್ಣ ಹಂತಗಳನ್ನು ಗಮನಿಸಿ ನೋಡಿ! ತನ್ನ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುತ್ತ, ಆಲೋಚನೆಗಳನ್ನು ನಿಯಂತ್ರಿಸುತ್ತ, ದೇಹವನ್ನು ದಂಡಿಸುತ್ತ, ಉಸಿರಾಟವನ್ನು ಗಮನಿಸುತ್ತಾ, ಪ್ರಜ್ಞೆಯ ಅವಸ್ಥೆಯವರೆಗೂ ಕೊಂಡುಯ್ಯುವುದಿದೆಯಲ್ಲವಾ?! ದೇಹ ಅಥವಾ ಮನಸ್ಸಿಗೆ ಸಂಬಂಧಿಸಿದ ಯಾವುದನ್ನೇ ಆದರೂ, ನಿಯಂತ್ರಿಸಿ, ಆದಿ ಅಥವಾ ಅಂತ್ಯಗೊಳಿಸುವವರೆಗೂ ಸಹ ಯೋಗ ಎಂಬುದು ತನ್ನ ಹಂತಗಳಲ್ಲಿ ಅರಿಕೆ ಮಾಡಿಸುತ್ತ ಹೋಗುತ್ತದೆ!! ಅಭ್ಯಾಸಗಾರನೊಬ್ಬ ಯಾವಾಗ ತನ್ನಲ್ಲಿ ತಾ ಲೀನವಾಗುತ್ತಾನೋ, ಆ ಸ್ಥಿತಿಯನ್ನು ಸಮಾಧಿ ಸ್ಥಿತಿಯೆನ್ನುತ್ತಾರೆ! ಆ ಸ್ಥಿತಿಯಲ್ಲಿ ಆತನಿಗೆ ಯಾವ ಆಹಾರದ ಅವಶ್ಯಕತೆಯೂ ಇರುವುದಿಲ್ಲ, ಯಾವ ದ್ರವ್ಯದ ಅವಶ್ಯಕತೆಯೂ ಇರುವುದಿಲ್ಲ. ಕೇವಲ ಗಾಳಿಯೊಂದನ್ನೇ ಸೇವಿಸಿ ಚಿರಂತನವಾಗುವ ಆ ಸ್ಥಿತಿ ದಕ್ಕಲು ಅದೆಷ್ಟೋ ದಶಕಗಳ ಸಾಧನೆಯೂ ಬೇಕಾಗುತ್ತದೆ!

ಧ್ಯಾನದ ಅಂತಿಮ ಉದ್ದೇಶವೇ ಅದು!! ಜಗತ್ತು, ಮತ್ತದರ ಬ್ರಹ್ಮಾಂಡ ಸ್ವರೂಪವನ್ನು ಅನುಭಾವಿಸುವುದು ಮತ್ತು ನಿರಂತರ ಅಭ್ಯಾಸದ ಮೂಲಕ ಬ್ರಹ್ಮಾಂಡದ ಜೊತೆಗೆ ಏಕತೆಯನ್ನು ಹೊಂದುವುದು! ತನ್ಮೂಲಕ, ನಮ್ಮ ಅಂತರಂಗವೊಂದು ಜಾಗೃತವಾಗುತ್ತ ಹೋಗುತ್ತದೆ! ಧ್ಯಾನ ಮಾಡುವ ಪ್ರತಿಯೊಬ್ಬ ಸಾಧುವೂ ಕೂಡ ಜಗದೊಳಗೆ ಲೀನವಾಗುವ ಹಂಬಲದಿಂದ ಮಾತ್ರವಷ್ಟೇ ಧ್ಯಾನಕ್ಕಿಳಿಯುತ್ತಾನೆಯೇ ಹೊರತು ಬೇರೇನೂ ಅಲ್ಲ!!

ಹಿಮಾಲಯದ ಸಾಧುಗಳು ಅಥವಾ , ಯೋಗಿಗಳು ಅಭ್ಯಸಿಸುವುದು ತೀರಾ ಕ್ಕಿಷ್ಟವಾದ ಯೋಗ ಸೂತ್ರಗಳನ್ನು! ಪರೋಕ್ಷವಾಗಿಯೋ ಅಥವಾ ಅಪರೋಕಗ್ಷವಾಗಿಯೋ, ಯೋಗದಲ್ಲಿ ಹೇಳಿದಂತಹ ಸೂತ್ರಗಳನ್ನನುಭವಿಸದೇ ಆತ ಸಮಾಧಿ ಸ್ಥಿತಿಗೇರುವುದಕ್ಕೆ ಸಾಧ್ಯವೇ ಇಲ್ಲ!

ಟಿಬೆಟ್ಟಿನ ಯೋಗಿಗಳೂ ಸಹ ಅನುಸರಿಸುವುದು ಗೌತಮ ಬುದ್ಧನ ಪದ್ಮಾಸನ ಬದ್ಧವಾದ ಸೂತ್ರಗಳನ್ನು! ಗೌತಮ ಬುದ್ಧ ಸಹ ಅನುಸರಿಸಿದ್ದು, ಪ್ರಾಚೀನ ಭಾರತದಲ್ಲಿ ಅನುಸರಿಸಲಾಗುತ್ತಿದ್ದ ಯೋಗ ಸೂತ್ರವನ್ನೆ!! ಹಾಗಾದರೆ, ಪದ್ಮಾಸನವೆಂಬುದು ಅಷ್ಟು ಶಕ್ತಿಯುತವಾದದ್ದು ಎಂದರೆ ನಂಬಲಾರಿರಿ! ಪದ್ಮಾಸನದ ಭಂಗಿ, ನಮ್ಮೊಳಗಿನ ಏಳು ಚಕ್ರಗಳನ್ನು ಜಾಗೃತಗೊಳಿಸುತ್ತ ಸಾಗುವುದಲ್ಲದೇ, ಅದೇ ಧ್ಯಾನಕ್ಕೆ ಹೆಚ್ಚು ಪ್ರಾಶಸ್ತ್ಯವಾಗಿರುವಂತಹ ಯೋಗ
ಸೂತ್ರದ ಆಸನ!

ಪ್ರಶ್ನೆ ಇಷ್ಟೇ! ಇಂತಹ ಯೋಗ ಸೂತ್ರಗಳ ಮೂಲಕ, ಮನುಷ್ಯನ ಆಯಸ್ಸು ವೃದ್ಧಿಗೊಳ್ಳುವುದೇ?!

ಯೋಗ ಸೂತ್ರಗಳನ್ನು ಬಿಟ್ಟು ಬೇರೆ ಆಧಾರದ ಮೂಲಕವೂ ಹೇಳುವುದಾದರೆ ಹೌದು!! ಮನುಷ್ಯನ ಆಯಸ್ಸು ವೃದ್ದಿಗೊಳ್ಳುವುದು!! ಜೈವಿಕ ಶಾಸ್ತ್ರದಲ್ಲಿಯೂ ಸಹ ಇದು ಧೃಢಪಟ್ಟಿದೆ! ಯಾವಾಗ, ನಮ್ಮ ದೇಹದ ಜೀವಕೋಶಗಳು ಹಾನಿಗೊಳಗಾಗುವ ಪ್ರಮಾಣ ತಗ್ಗುತ್ತದೆಯೋ, ಆಗ ಮನುಷ್ಯನ ಆಯಸ್ಸೂ ಸಹ ವೃದ್ಧಿಯಾಗುತ್ತದೆ! ಇದು, ವೈಜ್ಞಾನಿಕತೆಯ ಆಧಾರದ ಮೇಲೆ ಧೃಢಪಟ್ಟಂತಹ ವಾಸ್ತವಗಳು!

ಸಂವೇದನೆಯ ನಿಯಂತ್ರಣ ಅಥವಾ , ಸಂವೇದನೆಯೊಂದು ವಾಪಸ್ಸಾಗುತ್ತ ತನ್ನ ಮೊದಲ ಸ್ಥಿತಿಗೆ ಹೋಗುವುದು ಪ್ರಾಕೃತಿಕವಾದ ಸಹಜ ಪ್ರಕ್ರಿಕೆಯಾಯದರೂ ಸಹ, ಪ್ರತ್ಯಾಹಾರವೆಂಬುದನ್ನು ಸ್ವತಃ ಪ್ರಾಣಿಗಳು ಮಾಡಿಕೊಳ್ಳುತ್ತವೆ!

ಈ ಪ್ರಕ್ರಿಯೆಗಳನ್ನೆಲ್ಲ, ಸೂಕ್ಷ್ಮವಾಗಿ ಅಭ್ಯಸಿಸಿ, ಅದೆಷ್ಟೋ ಪ್ರಯೋಗ ಅಭ್ಯಾಸಗಳ ನಂತರ, ದೇಹದ ಅಂಗರಚನೆಗಳನ್ನು ಅಥವಾ ಜೀವಕೋಶಗಳ ಆಯಸ್ಸನ್ನು ವೃದ್ಧಿಗೊಳಿಸುವಂತಹ ಯೋಗ ಸೂತ್ರಗಳಷ್ಟೇ ಆದರೂ, ಮಾನವನ ಆಯಸ್ಸನ್ನೂ ಸಹ ಹೆಚ್ಚಿಸುವಷ್ಟು ಶಕ್ತಿಯುತವಾಗಿರುವಂತಹದ್ದು!!

ಹಿಮಾಲಯದ ಸಾಧುಗಳ ವಿಸ್ಮಯಗಳನ್ನು, ಬ್ರಿಟಿಷ್ ವರದಿಗಾರರಾಗಿದ್ದ ಪಾಲ್ ಬ್ರಂಟನ್ ದಾಖಲಿಸಿದ್ದರು!! ಸ್ವತಃ ಭಾರತಕ್ಕೆ ಬಂದು, ಯೋಗ ಶಾಸ್ತ್ರಗಳ ಅಧ್ಯಯನ ಮಾಡಿ, ತದನಂತರ ಹಿಮಾಲಯದ ಸಾಧುಗಳನ್ನೂ ಭೇಟಿಯಾಗಿದ್ದ ಪಾಲ್ ಬ್ರಂಟನ್, ರಮಣ ಮಹರ್ಷಿಗಳ ಶಿಷ್ಯರಾದ ಮೇಲೆ, ದಾಖಲಿಸಿದ್ದ ಭಾರತದ ಪ್ರಾಚೀನ ಯೋಗ ಸೂತ್ರಗಳ ವಿಸ್ಮಯಗಳು ಇಡೀ ಜಗತ್ತನ್ನು ಅಚ್ಚರಿಗೆ ದೂಕಿತ್ತು! ನೆನಪಿಡಿ! ಭಾರತಕ್ಕೆ ಬರುವ ಮುನ್ನ ಅವರೊಬ್ಬರು ವೃತ್ತಿಪರ ವರದಿಗಾರರಾಗಿದ್ದರಲ್ಲದೇ, ಅಪ್ಪಟ ನಾಸ್ತಿಕರಾಗಿದ್ದಂತಹವರು! ಇದೇ ಪ್ರಶ್ನೆಗೆ ಉತ್ತರ ಹುಡುಕಲು ಭಾರತಕ್ಕೆ ಕಾಲಿಟ್ಟ ಬ್ರಿಟಿಷ್ ಚಿಂತಕರು!! (

೨೦ ನೇ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಪಾಲ್ ಬ್ರಂಟನ್, ಅದೆಷ್ಟೋ ಸಾವಿರಗಟ್ಟಲೇ ಭಾರತೀಯರಿಂದ ಹಿಡಿದು, ಜಾದೂಗಾರರನ್ನು, ಮಾಂತ್ರಿಕರನ್ನು ಮತ್ತು, ಕೊನೆ ಕೊನೆಗ ಹಿಮಾಲಯದ ಸಾಧುಗಳನ್ನೂ ಭೇಟಿಯಾಗಿ ಭಾರತದ ಯೋಗ ಸಂಪ್ರದಾಯದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ ನಾಸ್ತಿಕರಾದ ಪಾಲ್ ಬ್ರಂಟನ್ ಕೊನೆಗೆ ಅಧ್ಯಾತ್ಮಿಕ ಚಿಂತಕರಾಗುವ ಉನ್ನತ ಹಂತವನ್ನು ತಲುಪಿದ್ದರು! ಹೇಳಲೇಬೇಕೆಂದರೆ, ಅವರ ಸಂಗ್ರಹಿಸಿಟ್ಟ ದಾಖಲೆಗಳಿಗೆ, ದುರ್ಲಭವಾದ ಮಾಹಿತಿಗಳಿಗೆ, ಛಾಯಾಚಿತ್ರಗಳಿಗೆ ನಿಜಕ್ಕೂ ಭಾರತೀಯರು ಕೃತಜ್ಞತೆಯನ್ನು ಅರ್ಪಿಸಲೇಬೇಕು! ಯಾಕೆ ಗೊತ್ತಾ?! ಶತಮಾನದ ಕೊನೆಯ ಅಧ್ಯಾತ್ಮ ರತ್ನಗಳಾದ ರಮಣ ಮಹರ್ಷಿಗಳನ್ನು, ಪರಮಹಂಸ ಯೋಗಾನಂದರನ್ನು, ಮಾತಾ ಅಮೃತಾನಂದ ಮಯಿ ಮತ್ತು ಇತರೆ ವಿಶೇಷ ಅಧ್ಯಾತ್ಮ ಸಾಧಕರನ್ನು ಜಗತ್ತಿಗೆ ಪರಿಚಯಿಸಿದ ರೀತಿಯಿದೆಯಲ್ಲವಾ!? ಪಾಲ್ ಬ್ರಂಟನ್ ರನ್ನು ಭಾರತ ಕೊನೆಯವರೆಗೂ ಸ್ಮರಿಸಿಕೊಳ್ಳುವಂತಾಯಿತು!!

Paul met a young Yogi called Brahma, who demonstrated him how he can Stop Breathing completely.

Paul writes “if I had not experienced this myself, I would have never believed that this is possible.”.

Further, when he asked Brahma about it, Brahma told that his master can even do more. He can make a cut on his hand, and when the blood flows, he can stop it at will, explaining that this is a part of their practice of body control.

ಪಾಲ್ ಬ್ರಂಟನ್ ರ ಪುಸ್ತಕದಲ್ಲಿ ದಾಖಲಿಸಿರುವ ಪ್ರಕಾರ, ಉಸಿರನ್ನು ಸಂಪೂರ್ಣವಾಗಿ ನಿಲ್ಲಿಸಿ, ಮತ್ತೆ ದೇಹಕ್ಕೆ ಜೀವ ತುಂಬುವಂತಹದ್ದನ್ನು ತೋರಿಸಿಕೊಟ್ಟದ್ದು ಸಾಧುವಾಗಿದ್ದ ಬ್ರಹ್ಮ ಯೋಗಿಗಳು!! ಅದನ್ನೂ ನಂಬದ ಪಾಲ್ ಹೇಳುತ್ತಾರೆ! “ಇದನ್ನು ಸ್ವತಃ ನಾನು ಅನುಭವಿಸದೇ, ನನಗೆ ನಂಬಲು ಸಾಧ್ಯವೇ ಇಲ್ಲ” ಎಂದು! ಆದರೆ, ಮತ್ತೊಮ್ಮೆ ಪಾಲ್ ಬ್ರಹ್ಮರನ್ನು ಈ ಹಠ ಯೋಗದ ಬಗ್ಗೆ ಕೇಳಿದಾಗ, ತನ್ನ ಗುರುಗಳು ಇದಕ್ಕಿಂತ ಹೆಚ್ಚಿನದನ್ನು ಮಾಡಬಲ್ಲರೆಂದ ಬ್ರಹ್ಮರು, ತಮ್ಮ ಗುರುಗಳು ತಮ್ಮ ಕೈಯ್ಯನ್ನು ಕತ್ತರಿಸಿಕೊಂಡು, ರಕ್ತ ಹರಿಯುವಾಗ ತಟ್ಟನೇ ನಿಲ್ಲಿಸಬಲ್ಲರು! ಇದೆಲ್ಲ, ದೈಹಿಕ ನಿಯಂತ್ರಣದಿಂದ ಮಾತ್ರ ಸಾಧ್ಯವೆನ್ನುತ್ತಾರೆ!”

ಅಚ್ಚರಿಯೆಂದರೆ, ಕ್ರೈಸ್ತ ಮತದ ಕೃತೃನಾದ ಜೀಸಸ್ ಒಮ್ಮೆ, ಟಿಬೆಟ್ ಗೆ ಭೇಟಿ ನೀಡಿದ್ದನೆಂದೂ, ಅಲ್ಲಿ ತನ್ನ ೧೪ ನೇ ವಯಸ್ಸಿನಿಂದ ೩೦ ವರ್ಷಗಳಾಗುವವರೆಗೆ ಇದ್ದು, ಪ್ರಾಚೀನ ಭಾರತದ ಯೋಗ ಸೂತ್ರಗಳನ್ನು ಅಭ್ಯಸಿಸಿ ತದನಂತರ ತನ್ನ ತಾಯ್ನಾಡಿಗೆ ಹಿಂತಿರುಗಿದನೆಂದು ಹೇಳಲಾಗುತ್ತದೆ! ಈ ಸಾಧನೆಯೇ, ಆತನ ದೈಹಿಕ ನಿಯಂತ್ರಣಕ್ಕೆ ಸಹಾಯವಾಯಿತು ಮತ್ತು, ಶಿಲುಬೆಗೇರಿಸಿದ ನಂತರ ಸಮಾಧಿ ಸ್ಥಿತಿಯನ್ನು ಹೊಂದಲು ಸಹಾಯವಾಯಿತೆಂದು ನಂಬಲಾಗುತ್ತದೆ!!

It is believed that, Jesus Christ visited Tibet and learnt these practices during his stay from the age of 14 to 30 before returning his land. This helped him to stop the bodily functions completely and resurrect after he was hung. (you may search more articles for this on Google.)

ಇನ್ನೂ ಹೆಚ್ಚಿನ ಅಚ್ಚರಿಗಳಾಗುವುದು, ಪರಮಹಂಸ ಯೋಗಾನಂದರ “ಯೋಗಿಯ ಆತ್ಮಕಥೆ” ಎನ್ನುವ, ಅದೆಷ್ಟೋ ವಿಸ್ಮಯಗಳನ್ನೊಳಗೊಂಡ ಪುಸ್ತಕವನ್ನು ಅಭ್ಯಸಿಸಿದಾಗ!! ಈ ಪುಸ್ತಕವೂ ಸಹ, ಅಂತಹ ಯೋಗಿಗಳ ಪರಿಚಯವನ್ನು, ಮತ್ತು ಅವರ ಅಸ್ತಿತ್ವವನ್ನು ಧೃಢಪಡಿಸುತ್ತದೆ! ಅದಲ್ಲದೇ, ಕ್ರಿಯಾಯೋಗವನ್ನು ಅಭ್ಯಸಿಸುತ್ತಿರುವ , ನೂರು ವರ್ಷಕ್ಕೂ ಮೇಲ್ಪಟ್ಟಂತಹ ಯೋಗ ಗುರುಗಳನ್ನು ಪರಿಚಯಿಸುತ್ತದೆ!

(You can also refer the Book “Autobiography of a Yogi” By Paramhansa Yogananda)

ಈ ಕೆಳಗಿನವು ಐತಿಹಾಸಿಕವಾದಂತಹ ಕೆಲವು ಉದಾಹರಣೆಗಳು ಮತ್ತು ದಾಖಲೆಗಳು!!

ಮಹಾವತಾರ್ ಬಾಬಾಜಿ : ಇವರನ್ನು ಕ್ರಿಯಾಯೋಗದ ಕೃತೃರು ಮತ್ತು, ಹಲವು ಯೋಗಿಗಳ ಗುರುವೆಂದು ಭಾವಿಸಲಾಗುತ್ತದೆ! ಅದೆಷ್ಟೋ, ಅವರನ್ನು ಭೇಟಿಯಾಗಿರುವಂತಹ ಯೋಗಿಗಳು ಅವರು ನೋಡಲಿಕ್ಕೆ ೩೦ ವರ್ಷದವರ ಹಾಗೆ ಕಾಣುತ್ತಿದ್ದರೂ ಅವರ ವಯಸ್ಸು ೧೦೦೦ ಕ್ಕೂ ಹೆಚ್ಚಾಗಿತ್ತೆಂದು ಧೃಢಪಡಿಸುತ್ತಾರೆ!

Related image

ತ್ರೈಲಂಗಾ ಅಥವಾ ತೆಲಂಗಾ ಸ್ವಾಮಿ : ಬ್ರಿಷಿಷರ ಅಧಿಕೃತ ದಾಖಲೆಗಳೇ ಹೇಳುವಂತೆ, ಇವರು ಬದುಕಿದ್ದದ್ದು ೨೮೦ ವರುಷಗಳವರೆಗೆ!!

Image result for trailanga swami

ದೇವ್ರಹಾ ಬಾಬಾ : ಅಧಿಕೃತ ದಾಖಲೆಗಳ ಪ್ರಕಾರ ಬದುಕಿದ್ದದ್ದು ೨೫೦ ವರುಷಗಳವರೆಗೆ!!

Image result for devraha baba

ಜಪಾನಿನ ಓಕಿನವಾ ಜನರ ಕನಿಷ್ಟ ವಯಸ್ಸೇ ೧೦೦ ವರುಷಗಳಿಗಿಂತಲೂ ಹೆಚ್ಚು!!

In a nutshell, if people without training of increasing life with Yoga, can live more than hundred years in several countries, then those who specialize the art and science of body, mind, respiration control can easily stretch it to hundreds of year.

ಸಂಕ್ಷಿಪ್ತವಾಗಿ ಹೇಳುವುದಾದರೆ, ಉಸಿರಾಟದ ನಿಯಂತ್ರಣದ ಮೂಲಕ, ಇಂದ್ರಿಯ ನಿಗ್ರಹಗಳ ಮೂಲಕ, ಭೌತಿಕ ವ್ಯಾಯಾಮಗಳ ಮೂಲಕ,. ಹೀಗೆ ಮಾನವನ ಆಯಸ್ಸನ್ನು ಹೆಚ್ಚಿಸಬಹುದು ಎಂದು ವೈಜ್ಞಾನಿಕವಾಗಿಯೂ ಮತ್ತು, ಪ್ರಾಚೀನ ಭಾರತದ ಯೋಗ ಸೂತ್ರಗಳ ಮೂಲಕವೂ ಧೃಢಪಟ್ಟಿದೆ!! ಹಾಗಿದ್ದಾಗ, ಹಿಮಾಲಯದಲ್ಲಿ ಸಾಧುಗಳಿಲ್ಲ ಎಂಬುವುದು ಅತಿಶಯೋಕ್ತಿಯೇ! ಇವತ್ತಿಗೂ, ಹಿಮಾಲಯದಲ್ಲೆಲ್ಲೋ ಅವಿತ ಸಿದ್ಧಗಂಗಾವೆಂಬ ಆಶ್ರಮದಲ್ಲಿ ಅದೆಷ್ಟೋ ಸಹಸ್ರ ವರಷಗಳಿಂದ ತಪಸ್ಸು ಮಾಡುತ್ತ ಕುಳಿತ ಮಹರ್ಷಿಗಳಿದ್ದಾರೆಂದು, ಮತ್ತು ಸೂಕ್ಷ್ಮ. ಶರೀರದ ಸಾಧುಗಳು ವಾಸವಿದ್ದಾರೆಂದು ನಂಬಲಾಗಿದೆ! ಕೇವಲ, ನಂಬಿಕೆಯೊಂದೇ ಅಲ್ಲ! ಬದಲಿಗೆ, ಅದನ್ನು ಸಾಕ್ಷೀಕರಿಸಿದವರೂ ಇದ್ದಾರೆ!

Source :https://en.m.wikipedia.org/wiki/Trailanga

https://en.wikipedia.org/wiki/Devraha_Baba

https://en.wikipedia.org/wiki/Mahavatar_Babaji

– ಅಜೇಯ ಶರ್ಮಾ

Tags

Related Articles

FOR DAILY ALERTS
 
FOR DAILY ALERTS
 
Close