ಪ್ರಚಲಿತ

ಸಿದ್ದರಾಮಯ್ಯ ವಿರುದ್ದ ಮತ್ತೆ ಸಿಡಿದೆದ್ದ ಐಪಿಎಸ್ ಅಧಿಕಾರಿಗಳು!! ಕಾಂಗ್ರೆಸ್ ಸರ್ಕಾರ ಕೆಲಸವೇ ಮಾಡಲು ಬಿಡುತ್ತಿಲ್ಲವಂತೆ ಯಾಕೆ ಗೊತ್ತಾ..?

ಇದೇ ಮೊದಲಲ್ಲ ಖಾಕಿ ಪಡೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೇಳೋದು. ಈ ಹಿಂದೆ ಪೊಲೀಸ್ ಪೇದೆಗಳು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದು ಸಾಮೂಹಿಕ ರಜೆಯನ್ನು ಹಾಕಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದವು. ತಮಗೆ ನೀಡುವ ವೇತನ ಸಾಕಾಗೋದಿಲ್ಲ ಹಾಗೂ ನಮಗೆ ಯಾವುದೇ ರೀತಿಯ ಭದ್ರತೆಯನ್ನು ಸರ್ಕಾರ ನೀಡುತ್ತಿಲ್ಲ ಎಂದು ಬೀದಿಗಿಳಿದಿದ್ದವು. ಆದರೆ ದುರಹಂಕಾರಿ ರಾಜ್ಯ ಸರ್ಕಾರ ಮಾತ್ರ ಆ ಪೊಲೀಸ್ ಪೇದೆಗಳನ್ನು ಬೆದರಿಸಿ, ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಮಾಡಿದ್ದರು. ರಾಜ್ಯ ಸರ್ಕಾರದ ಕೆಲವು ಗೊಡ್ಡು ಬೆದರಿಕೆಗಳನ್ನು ಲೆಕ್ಕಿಸದೆ ಪ್ರತಿಭಟನೆ ಮಾಡಿದ ಕೆಲವು ಪೊಲೀಸ್ ಪೇದೆಗಳನ್ನು ಅಮಾನತು ಮಾಡುವ ಶಿಕ್ಷೆಯನ್ನು ನೀಡಿತ್ತು ರಾಜ್ಯ ಕಾಂಗ್ರೆಸ್ ಸರ್ಕಾರ…

ರೈತರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೈದ್ಯರು, ಅಂಗನವಾಡಿ ಕಾರ್ಯಕರ್ತರು, ಸರ್ಕಾರಿ ಸಾರಿಗೆ ಇಲಾಖೆಗಳು, ಶಿಕ್ಷಣ ವರ್ಗ, ವಕೀಲರು, ಸಿನಿ ರಂಗ, ಕ್ರಿಕೆಟ್ ತಾರೆಯರು ಸಹಿತ ಯಾರೂ ಬಾಕಿ ಬಿಡದೆ ಎಲ್ಲರೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ. ಇತಿಹಾಸದಲ್ಲಿ ಯಾರೆಲ್ಲಾ ಪ್ರತಿಭಟನೆಗಳನ್ನು ಸಲ್ಲಿಸಿಲ್ಲವೋ ಅವರೆಲ್ಲಾ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಸರ್ಕಾರದ ವಿಭಜಿತ ಧೋರೆಣೆಯಿಂದ ಸಹಿಸಲಾರದೆ ಈ ನಿರ್ಧಾರವನ್ನು ಪ್ರತಿಯೊಂದು ರಂಣಗವೂ ಸಿಡಿದೇಳಿತ್ತು.

ಸಿಡಿದೆದ್ದಿದೆ ಪೊಲೀಸ್ ಮಹಾಪಡೆ..!

ಕೆಲ ವರ್ಷಗಳ ಹಿಂದೆಯಷ್ಟೇ ಪೊಲೀಸ್ ಪೇದೆಗಳು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಈಗ ಸ್ವತಃ ಐಪಿಎಸ್ ಅಧಿಕಾರಿಗಳೇ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಸ್ವತಃ ಎಐಡಿಜಿಪಿ ವರ್ಗವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮನ್ನಾಳುವ ಹಾಗೂ ತಮ್ಮನ್ನು ಗುಲಾಮರಂತೆ ಟ್ರೀಟ್ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ.

ನಮ್ಮನ್ನು ಕೆಲಸ ಮಾಡಲು ಬಿಡುತ್ತಿಲ್ಲ…!

ಪೊಲೀಸ್ ಅಧಿಕಾರಿಗಳು ಕರ್ನಾಟಕ ಸರ್ಕಾರದ ಕಾರ್ಯದರ್ಶಿ ರತ್ನ ಪ್ರಭಾ ಅವರಿಗೆ ಬರೆದ ಪತ್ರದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ನಮ್ಮನ್ನು ಸರಿಯಾಗಿ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ. ಈವರೆಗೂ ನಡೆದಿದ್ದ ಹಲವಾರು ಅಹಿತಕರ ಘಟನೆಗಳಿಗೆ ನಮ್ಮನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ಪೊಲೀಸರನ್ನು ತಮ್ಮ ಕೆಲಸದಾಳುಗಳ ಹಾಗೆ ನೋಡಿಕೊಳ್ಳುವ ಈ ಸರ್ಕಾರ ಸ್ವಲ್ಪವೇ ತಪ್ಪು ನಡೆದರೂ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ನಮ್ಮನ್ನು ಅಮಾನತು ಶಿಕ್ಷೆಗೆ ಗುರಿಪಡಿಸುತ್ತಾರೆ. ಇದು ನಮಗೆ ಹಿತವಲ್ಲ” ಎಂದು ಕಿಡಿ ಕಾರಿದ್ದಾರೆ.

ಪತ್ರದಲ್ಲಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳನ್ನ ಕೀಳು ಮಟ್ಟದಲ್ಲಿ ನೋಡುತ್ತಿದೆ. ಹಲವು ಪ್ರಕರಣಗಳ ತನಿಖೆ ವೇಳೆ ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಾರೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿಸಲಾಗಿದೆ.

Image result for siddaramaiah

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪತ್ರದಲ್ಲಿ ಉಲ್ಲೇಖಸಿರುವ ಐಪಿಎಸ್ ಸಂಘದ ಅಧ್ಯಕ್ಷರಾಗಿರುವ ಎಡಿಜಿಪಿ ಆರ್ ಪಿ ಶರ್ಮಾ ಅವರು, ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣ, ಐಪಿಎಸ್ ಅಧಿಕಾರಿಗಳ ಪದೇ ಪದೇ ವರ್ಗಾವಣೆ, ಪೊಲೀಸರ ವರ್ಗಾವಣೆ, ಮೈಸೂರು ಐಎಎಸ್ ಆಧಿಕಾರಿ ರಶ್ಮಿ ಮೇಲೆ ಕಚೇರಿಯಲ್ಲೆ ಹಲ್ಲೆ ಪ್ರಕರಣ, ಮೈಸೂರು ಡಿಸಿ ಶಿಖಾ ಅವರ ಮೇಲಿನ ದಾಳಿ ಹಾಗೂ ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಳ್ಳಲು ತಡ ಮಾಡಿರುವ ಘಟನೆ, ಯುಬಿ ಸಿಟಿ ಬಳಿ ದಾಳಿ ಪ್ರಕರಣ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿಲು ಯತ್ನಿಸಿದ ರಾಜಕಾರಣಿ ಪ್ರಕರಣಗಳನ್ನು ತಮ್ಮ ಪತ್ರದ ಮೂಲಕ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದಾರೆ.

ಭಾರತೀಯ ಪೊಲೀಸ್ ಇಲಾಖೆಗೆ ತನ್ನದೇ ಸಂಸ್ಕೃತಿ ಇದೆ, ಆದರೆ ಅದಕ್ಕೆ ಈಗ ಕರಿನೆರಳು ಬಿದ್ದಿದೆ. ಪೊಲೀಸ್ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದೇ ತಪ್ಪು ಕಂಡು ಬಂದರೂ ಪೊಲೀಸರನ್ನೇ ಬಲಿಪಶುವಾಗಿ ಮಾಡಲಾಗುತ್ತಿದೆ. ಪೊಲೀಸರು ಮನಸ್ಫೂರ್ತಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಂಗಳೂರು ಆರು ಮಂದಿ ಆಯುಕ್ತರನ್ನು ಕಂಡಿದೆ. ಐಪಿಎಸ್ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಸ್ವತಂತ್ರ್ಯ ನೀಡಬೇಕು. ಚುನಾವಣೆಗೆ ಮುನ್ನ ಪೊಲೀಸ್ ಆಧಿಕಾರಿಗಳು ಹಾಗೂ ಮಾಜಿ ಪೊಲೀಸರನ್ನು ಸೇರಿಸಿ ಸಭೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ಆರ್.ಪಿ.ಶರ್ಮಾ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅಂದು ವೇತನ ಇಂದು ಕಿರಕಿರಿ…!!!

ಅಂದು ವೇತನಕ್ಕಾಗಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದ ಪೊಲೀಸ್ ಪೇದೆಗಳು ಇಂದು ತಮಗೆ ವೇತನ ನೀಡದಿದ್ದರೂ ಪರವಾಗಿಲ್ಲ ನಮ್ಮನ್ನು ದಕ್ಷತೆಯಿಂದ ಕೆಲಸ ಮಾಡಲು ಬಿಡಿ ಎಂದು ಅಂಗಲಾಚುತ್ತಿದ್ದಾರೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಕೆಲಸ ಮಡಲು ಬಿಡಿ ಎಂದು ಸರ್ಕಾರಕ್ಕೆ ತಮ್ಮನ್ನು ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರ ಮಡುವ ಹಲವಾರು ತಪ್ಪುಗಳಿಂದ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಬರುತ್ತಿದೆ. ಸಚಿವರ ಕೆಲವು ಧೋರಣೆಯಿಂದ ದಕ್ಷ ಪೊಲೀಸರೇ ಕಳಂಕವನ್ನು ಹೊತ್ತುಕೊಂಡು ತಿರುಗಾಡುತ್ತಿದ್ದಾರೆ. ಕೋಮು ಸೂಕ್ಷ್ಮ ಜಿಲ್ಲೆಗಳಾದ ದಕ್ಷಿಣ ಕನ್ನಡ ಸಹಿತ ಕೆಲವು ಜಿಲ್ಲೆಗಳಲ್ಲಿ ದಕ್ಷ ಪೊಲೀಸ್ ಅಧಿಕರಿಗಳು ತಮ್ಮ ದಕ್ಷತೆಯನ್ನೇ ಕಳೆದುಕೊಳ್ಳುವಂತೆ ಮಾಡಿದ್ದರು. ಅಲ್ಲಿಯೂ ಪೊಲೀಸರೇ ರಾಜ್ಯದ ಜನತೆಯ ಪಾಲಿಗೆ ಖಳನಾಯಕರಾಗಿದ್ದರು.

ಒಟ್ಟಿನಲ್ಲಿ ಈಗ ಸ್ವತಃ ಐಪಿಎಸ್ ಅಧಿಕಾರಿಗಳೇ ಮುಖ್ಯಮಂತ್ರಿ ಸಿದ್ದರಮಯ್ಯ ಸರ್ಕಾರದ ವಿರುದ್ದ ತೊಡೆ ತಟ್ಟಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ರೀತಿಯಲ್ಲಿ ಮುಂದುವರೆದರೆ ರಾಜ್ಯದಲ್ಲಿ ಇನ್ಯಾವ ಗಂಡಾಂತರವನ್ನು ಎದುರಿಸಬೇಕೋ ಎನ್ನುವ ಭಯವೂ ಜನತೆಗೆ ಕಾಡಲಾರಂಭಿಸಿದೆ. ಐಪಿಎಸ್ ಅಧಿಕಾರಿಗಳ ಈ ನಡೆ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಪರಿಣಾಮವನ್ನು ಎದುರಿಸಬೇಕಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close