ಅಂಕಣ

ದೇಶದ ಅತಿ ದೊಡ್ಡ ಕುಳಗಳನ್ನು ನ್ಯಾಯಾಲಯದ ಕಟಕಟಗೆ ಎಳೆದು ಬೆವರಿಳಿಸುವ ಡಾ. ಸುಬ್ರಮಣ್ಯನ್ ಸ್ವಾಮಿಯೆಂಬ ಒಂಟಿ ಸಲಗ ಕಾನೂನು ಪಧವೀಧರನಲ್ಲ!! ಡಾ. ಸ್ವಾಮಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳಿವೆ ಓದಿ

ತಮಿಳುನಾಡಿನ ಮೈಲಾಪುರದಲ್ಲಿ ಸೀತಾರಾಮನ್ ಸುಬ್ರಮಣ್ಯನ್ ಮತ್ತು ಪದ್ಮಾವತಿ ದಂಪತಿಗಳ ಪುತ್ರ ಸುಬ್ರಮಣ್ಯನ್ ಸ್ವಾಮಿ ಎಂದರೆ ಸಾಕು, ವಿರೋಧಿಗಳ ಬೆನ್ನಹುರಿಯಲ್ಲಿ ಸಣ್ಣಗೆ ನಡುಕ ಉಂಟಾಗುತ್ತದೆ. ಇಂದು ರಾತ್ರಿ ಸುಬ್ರಮಣ್ಯನ್ ಸ್ವಾಮಿಯವರೇನಾದರೂ ನಾಳೆ ನಾನು ಮಹತ್ವದ ವಿಚಾರವನ್ನು ಹೇಳುತ್ತೇನೆ ಎಂದರೆ ವಿರೋಧಿ ಪಾಳಯದಲ್ಲಿ ಬಿಡಿ ಸ್ವಂತ ಸರಕಾರದ ಪಾಳಯದಲ್ಲೂ ಜನರಿಗೆ ನಿದ್ದೆ ಹತ್ತಲ್ಲ. ಈ ಸ್ವಾಮಿ ನಾಳೆ ಯಾವ ಬಾಂಬ್ ಸಿಡಿಸುತ್ತಾರೋ ಎಂದು ನಿದ್ದೆ ಬಿಟ್ಟು ಅತ್ತಿತ್ತ ಓಡಾಡುತ್ತಿರುತ್ತಾರೆ. ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೋ ಎನ್ನುವ ಆತಂಕ ಎಲ್ಲರಲ್ಲೂ ಮನೆ ಮಾಡಿರುತ್ತದೆ.

ಸುಬ್ರಮಣ್ಯನ್ ಸ್ವಾಮಿಯೇನಾದರೂ ಫೈಲು ಹಿಡಿದು ಅಖಾಡಕ್ಕೆ ಬಂದರೆಂದರೆ ಅಲ್ಲಿಗೆ ಕಥೆ ಮುಗಿಯಿತು. ಎದುರಾಳಿಯನ್ನು ನ್ಯಾಯಾಲಯದ ಕಟಕಟೆಗೆ ಹತ್ತಿಸದೆ ಬಿಡುವುದಿಲ್ಲ. ಆದರೆ ವಿಶೇಷವೆಂದರೆ ಈ ವ್ಯಕ್ತಿ ಕಾನೂನು ಪದವಿಯನ್ನು ಪಡೆದೇ ಇಲ್ಲ. ಸುಬ್ರಮಣ್ಯನ್ ಸ್ವಾಮಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಕನಾಮಿಕ್ಸ್ ನಲ್ಲಿ ಡಾಕ್ಟರೇಟ್ ಪದವಿ ಪಡೆದವರು. ಆದರೆ ಇವತ್ತು ಕೋರ್ಟಿನಲ್ಲಿ ವಾದಕ್ಕೆ ನಿಂತರೆಂದರೆ ಎದುರಾಳಿ ವಕೀಲ ಅತ್ಲಾಗಿರ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಗಳೆ ಉತ್ತರಿಸಲು ತಡವರಿಸುತ್ತಾರೆ!!

ಡಾ.ಸುಬ್ರಹ್ಮಣ್ಯನ್ ಸ್ವಾಮಿಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು:

# ರಾಮ ಸೇತು ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದ ವಾದದಲ್ಲಿ ಎದುರಾಳಿಗಳು ರಾಮಸೇತುವನ್ನು ಪೂಜಿಸಲು ಯಾರು ಸಮುದ್ರಕ್ಕೆ ಹೋಗುತ್ತಾರೆ ಎಂದಾಗ “ನಾವು ಸೂರ್ಯನನ್ನು ಪೂಜಿಸುತ್ತೇವೆ ಆದರೆ ಅದನ್ನು ಪೂಜಿಸಲು ನಾವು ಅದರ ಬಳಿ ಹೋಗುವುದಿಲ್ಲ” ಎಂದು ಪ್ರತ್ಯುತ್ತರ ನೀಡಿ ಇಡಿಯ ಕೋರ್ಟ್ ಆವರಣವನ್ನೆ ದಂಗಾಗಿಸಿದ್ದರು.

# ಸುಬ್ರಹ್ಮಣ್ಯನ್ ಸ್ವಾಮಿಯವರು ತಮ್ಮ 24 ನೇ ವಯಸ್ಸಿಗೆ ಹಾರ್ವರ್ಡಿನಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.

# ಮುಂಬೈ ಡೈಲಿಯಲ್ಲಿರುವ ಒಂದು ಲೇಖನದಲ್ಲಿ ಅವರು “ಮುಸ್ಲಿಮರು ಮತದಾನದ ಹಕ್ಕು ಅಥವಾ ಪ್ರಜಾಪ್ರಭುತ್ವವನ್ನು ನಂಬುವುದಿಲ್ಲ.” ಎಂದು ಬರೆಯುತ್ತಾರೆ. ಈ ಹೇಳಿಕೆ ವಿವಾದವನ್ನು ಹುಟ್ಟು ಹಾಕುತ್ತದೆ ಮತ್ತು ಹಾರ್ವರ್ಡಿನಿಂದ ಅವರನ್ನು ಹೊರಹಾಕಲಾಗುತ್ತದೆ.

# ಮುಂದಿನ ದಿನಗಳಲ್ಲಿ ಅವರು ಭಾರತದಲ್ಲಿ ನೆಲೆಯಾಗಿ ದೆಹಲಿ ಐಐಟಿಯಲ್ಲಿ ಪ್ರೊಫೆಸರ್ ಆಗಿ ನಿಯುಕ್ತರಾಗುತ್ತಾರೆ. ಅಲ್ಲಿ ಅವರು ನೆಹರೂರವರ ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸಿ “ಭಾರತವು ನೆಹರೂರವರ ಸೋವಿಯತ್ ಮಾದರಿಯನ್ನು ಅನುಸರಿಸಬಾರದು ಮತ್ತು ಖಾಸಗಿ ಉದ್ಯಮಗಳಿಗೆ ಅಧಿಕಾರವನ್ನು ನೀಡಬೇಕು” ಎಂದು ಬರೆಯುತ್ತಾರೆ.

# ಈ ಹೇಳಿಕೆಯಿಂದಾಗಿ ಐಐಟಿಯಿಂದಲೂ ಅವರನ್ನು ಹೊರದಬ್ಬಲಾಗುತ್ತದೆ. ಆಗ ಭಾರತದ ಪ್ರಧಾನಮಂತ್ರಿಯಾಗಿದ್ದವರು ಇಂದಿರಾ ಗಾಂಧಿ. ಐಐಟಿಯ ವ್ಯವಹಾರದಿಂದ ಕ್ರುದ್ದರಾದ ಡಾ.ಸ್ವಾಮಿ ಐಐಟಿ ಮೇಲೆ ಕೇಸು ಜಡಿಯುತ್ತಾರೆ.

# ಸತತ ಹದಿನೆಂಟು ವರ್ಷಗಳವರೆಗೆ ತಾವೇ ಕಾನೂನು ಹೋರಾಟ ನಡೆಸಿ ಸುಪ್ರೀಂ ಕೋರ್ಟ್ ನಿಂದ ಐಐಟಿಗೆ ಮತ್ತೆ ವಾಪಾಸಾಗುವಂತೆ ಆದೇಶ ಪಡೆದುಕೊಳ್ಳುತ್ತಾರೆ. ಆದರೆ ಐಐಟಿ ಸೇರಿದ ಕೆಲವೆ ದಿನಗಳೊಳಗೆ ವಿದ್ಯಾಸಂಸ್ಥೆಗೆ ರಾಜೀನಾಮೆ ನೀಡಿ ಆಡಳಿತಕ್ಕೆ ಪಾಠ ಕಲಿಸುತ್ತಾರೆ.

# ಹಾರ್ವಡಿನಲ್ಲಿ ಕಲಿಯುತ್ತಿರುವ ಸಮಯದಲ್ಲಿ ರೋಕ್ಸನಾ ಎಂಬ ಪಾರ್ಸಿ ಸಹವರ್ತಿ ವಿದ್ಯಾರ್ಥಿನಿ ಅವರಿಗೆ ಚೈನೀಸ್ ಕಲಿಯಲು ಪಂಥಾಹ್ವಾನ ನೀಡುತ್ತಾರೆ. ಪಂಥವನ್ನು ಒಪ್ಪಿಕೊಂಡ ಸ್ವಾಮಿ ಚೈನೀಸ್ ಕಲಿತು ನಿರರ್ಗಳವಾಗಿ ಮಾತನಾಡುತ್ತಾರೆ. ಇದೆ ಕಾರಣಕ್ಕಾಗಿ ಮುಂದೆ ಅವರನ್ನು ಚೀನಾಗೆ ಭಾರತದ ರಾಯಭಾರಿಯಾಗಿ ನಿಯುಕ್ತಿಗೊಳಿಸಲಾಗುತ್ತದೆ. ಇವತ್ತು ಸ್ವಾಮಿಜಿಯವರ ಕಾರಣದಿಂದಗಿಯೆ ಕೈಲಾಸ-ಮಾನಸ ಸರೋವರದ ಬಾಗಿಲುಗಳು ಭಾರತೀಯರಿಗೆ ತೆರೆದಿರುವುದು. ಮುಂದೆ ರೋಕ್ಸನಾ ಇವರ ಬಾಳ ಸಾಂಗಾತಿಯಾಗುತ್ತಾರೆ.

# ಚಂದ್ರಶೇಖರ್ ಪ್ರಧಾನಿಯಾಗಿದ್ದ ಕಾಲದಲ್ಲಿ ಸ್ವಾಮಿ ಅವರು ಭಾರತದಲ್ಲಿ ಆರ್ಥಿಕ ಸುಧಾರಣೆಗಳ ಬಗ್ಗೆ ಬ್ಲೂಪ್ರಿಂಟ್ ನೀಡಿದ್ದನ್ನು ಮುಂದೆ ನರಸಿಂಹ ರಾವ್ ಸಮಯದಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅಳವಡಿಸಿ ಹಳ್ಳ ಹಿಡಿದಿದ್ದ ಭಾರತದ ಆರ್ಥಿಕತೆಯನ್ನು ಮೇಲೆತ್ತುತ್ತಾರೆ.

# ದೇಶದ ಸುಪ್ರಸಿದ್ದ ವಕೀಲ ರಾಮ್ ಜೇಠ್ಮಲಾನಿಯವರು ಸ್ವಾಮಿಜಿ ಮೇಲೆ ನಾಲ್ಕು ಮಾನನಷ್ಟ ಮೊಕದ್ದಮೆಗಳನ್ನು ಹೂಡಿ ನಾಲ್ಕರಲ್ಲೂ ಸೋತು ಸುಣ್ಣವಾಗುತ್ತಾರೆ. ಸ್ವಾಮಿ ಕೈಯಲ್ಲಿ ಸೋತು ಇಂಗು ತಿಂದ ಮಂಗನಾದ ಜೇಠ್ಮಲಾನಿ ಸ್ವಾಮಿಜಿಗೆ ನಾವಿಬ್ಬರೂ ಸ್ನೇಹಿತರಾಗಿರೋಣ ಎಂದು ಕೈ ಮುಗಿಯುತ್ತಾರೆ.

# ಹಾರ್ವರ್ಡಿನಲ್ಲಿರುವ ತಮ್ಮ ಸಂಪರ್ಕಗಳನ್ನು ಉಪಯೋಗಿಸಿ ಇಟಲಿ ಬಾರ್ ಬಾಲೆ ಮತ್ತು ಆಕೆಯ ಮಗನ ನಕಲಿ ಪದವಿಯ ಸತ್ಯವನ್ನು ಜಗಜ್ಜಾಹೀರು ಮಾಡುತ್ತಾರೆ. ಮಾತ್ರವಲ್ಲ ತಾಯಿ-ಮಕ್ಕಳ ನಿಜ ಹೆಸರು, ಅವರ ಇಟಲಿ ನಾಗರಿಕತ್ವ, ಮೇಡಮ್ ಜಿಯ ಕುಂಟುಬಿಕರ ಜಾತಕವನ್ನೆ ಜಾಲಾಡಿ ದೇಶದ ಎದುರಿಟ್ಟು ಆಗಬಹುದಾಗಿದ್ದ ಬಹು ದೊಡ್ಡ ಗಂಡಾತರವನ್ನು ತಪ್ಪಿಸುತ್ತಾರೆ.

# ಸ್ವಾಮಿಯವರು ಘೋರ ಹಿಂದುತ್ವವಾದಿಯಾಗಿ ಬದಲಾಗಲು ಕಂಚಿ ಮಠದ ಸ್ವಾಮಿ ಜಯೇಂದ್ರ ಸರಸ್ವತಿ ಅವರನ್ನು ಸೋನಿಯಾ ಗಾಂಧಿ ಮತ್ತು ಜಯಲಲಿತಾ ಸೇರಿ ಸಂಚು ನಡೆಸಿ ಬಂಧಿಸಿದ್ದೆ ಕಾರಣವೆನ್ನುತ್ತಾರೆ. ತಾವು ವರ್ಷಗಳಿಂದಲೂ ಕಂಡ ಒಬ್ಬ ನಿರಪರಾಧಿ ಹಿಂದೂ ಸಂತನನ್ನು ಸುಳ್ಳು ಕೇಸು ಜಡಿದು ದರದರನೆ ಎಳೆದುಕೊಂಡು ಹೋಗಿದ್ದನ್ನು ನೋಡಿ ಸ್ವಾಮಿಜಿಗೆ ಕೆಂಡಾಮಂಡಲ ಕೋಪ ಬಂದಿತ್ತು. ಭಾರತದಲ್ಲಿ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯ ಅವರನ್ನು ನ್ಯಾಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿತ್ತು.

# ಮೊದ ಮೊದಲಿಗೆ ಇತರರಂತೆಯೆ ಸಂಘದ ಬಗ್ಗೆ ಸ್ವಾಮಿಜಿಗೂ ಅನುಮಾನಗಳಿದ್ದವು. ಆರ್.ಎಸ್.ಎಸ್ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂದು ಇತರರಂತೆ ಅವರೂ ನಂಬಿದ್ದರಂತೆ. ಆದರೆ ಬರಬರುತ್ತಾ ಆರ್.ಎಸ್.ಎಸ್ ಯಾವುದೇ ಕಾರಣಕ್ಕೂ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಮತ್ತು ಈ ದೇಶದಲ್ಲಿ ಹಿಂದುತ್ವಕ್ಕಾಗಿ ಹೋರಾಡುವ ಸಂಘಟನೆ ಅದೊಂದೆ ಎಂದು ಅರಿವಾದ ತಕ್ಷಣ ಆರ್.ಎಸ್.ಎಸ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿ ಸಂಘದ ಅಭಿಮಾನಿಯಾದರು.

ಒಬ್ಬ ಹುಟ್ಟಾ ಹೋರಾಟಗಾರ, ನ್ಯಾಯಕ್ಕಾಗಿ ಧ್ವನಿ ಎತ್ತುವ, ಯಾರ ಬೆದರಿಕೆಗೂ ಜಗ್ಗದ ಒಂಟಿ ಸಲಗ ಡಾ.ಸುಬ್ರಮಣ್ಯನ್ ಸ್ವಾಮಿ. ಕಾನೂನು ಪದವಿಯನ್ನೆ ಪಡೆಯದಿದ್ದರೂ ಕೇವಲ ಪುಸ್ತಕಗಳನ್ನು ಓದಿ ಹೆಸರಾಂತ ವಕೀಲರ ಹೆಡೆಮುರಿ ಕಟ್ಟಿದ ಸ್ವಾಮಿಜಿಯವರಿಂದ ಮುಂದಿನ ವಕೀಲ ಪೀಳಿಗೆಗಳು ಕಲಿಯುವುದು ಬಹಳಷ್ಟಿದೆ. ವಕೀಲಿಕೆಯನ್ನು ಕೇವಲ ಹಣ ಗಳಿಸುವ ಮಾಧ್ಯಮವಾಗಿಸದೆ ಸ್ವಾಮಿ ಅವರಂತೆ ದೇಶ-ಧರ್ಮಕ್ಕಾಗಿ ಹೋರಾಡುವ ವಕೀಲರ ಅವಶ್ಯಕತೆ ದೇಶಕ್ಕಿದೆ.

-Postcard team

Tags

Related Articles

FOR DAILY ALERTS
 
FOR DAILY ALERTS
 
Close