ಇತಿಹಾಸ

ಸಾವಿರಾರು ವರ್ಷಗಳ ಹಿಂದೆಯೇ ಭಾರತದ ಪ್ರತಿ ಮನೆಯಲ್ಲಿಯೂ ಖಾಸಗಿ ಸ್ನಾನಗೃಹ, ಶೌಚಾಲಯಗಳಿದ್ದವು, ಮಹಿಳೆಯರು ಮೇಕಪ್, ಲಿಪ್ ಸ್ಟಿಕ್‍ಗಳನ್ನು ಬಳಸುತ್ತಿದ್ದರು….

ಜಗತ್ತಿನಲ್ಲಿ ಅದೆಷ್ಟು ವಿಚಿತ್ರಗಳು ನಡೆದು ಹೋಗಿದೆ ಎಂದರೆ ಭೂಗರ್ಭದಲ್ಲಿ ಅಡಗಿರುವ ಅದೆಷ್ಟೋ ಪುರಾತನ ವಸ್ತುಗಳು ಇಂದು ಕಾಣಸಿಗುತ್ತಿದೆಯಲ್ಲದೇ, ಪ್ರತಿ ವಸ್ತುಗಳು ತನ್ನದೇ ಆದ ಇತಿಹಾಸವನ್ನು ಹೊಂದಿರುವ ಬಗ್ಗೆಯೂ ಸಾರಿ ಸಾರಿ ಹೇಳುತ್ತಿವೆ. ಅದಕ್ಕೆ ಉದಾಹರಣೆ ಎನ್ನುವಂತೆ ಜಗತ್ತಿನ ಅತೀ ಪುರಾತನವಾದ ಸನಾತನ ಹಿಂದೂ ಧರ್ಮದ ಗಢ್ ಎಂದೆ ಕರೆಸಿಕೊಳ್ಳುವ ಕೇಶರಪಾಲ್ ಎಂಬ ಸ್ಥಳದಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯ ದೇವರ ವಿಗ್ರಹಗಳನ್ನು ಹುಡುಕುವ ಕೆಲಸ ಶುರುವಾಗಿರೋದು!! ಆದರೆ ಸಾವಿರಾರು ವರ್ಷಗಳ ಹಿಂದೆಯೂ ಭಾರತದಲ್ಲಿನ ಜನಜೀವನವು ಇಂದಿನ ಯುಗವನ್ನು ಹೋಲುತ್ತಿತ್ತು ಎಂದರೆ ಅದು ನಂಬಲು ಸಾಧ್ಯವೇ??

ಆದರೆ ಅದನ್ನು ನಂಬಲೇಬೇಕು!! ಯಾಕೆಂದರೆ ಸಾವಿರಾರು ವರ್ಷಗಳ ಹಿಂದೆ ಅಂದಿನ ಜನರು ಮಾಡಿರುವುದು ಸರ್ಚ್!! ಆದರೆ ಈಗಿನ ಪೀಳಿಗೆ ಮಾಡುತ್ತಿರುವುದೆಲ್ಲವೂ ರಿಸರ್ಚ್ ಅನ್ನೋದನ್ನು ನಾವು ನೆನಪಿನಲ್ಲಿಡಬೇಕಾದ ವಿಚಾರ!! ಅದಕ್ಕೆ ಉತ್ತಮ ನಿದರ್ಶನ ಎಂದರೆ, ರಾಮಾಯಣ ಕಾಲದಲ್ಲಿದ್ದ ಪುಷ್ಪಕ ವಿಮಾನದ ವಿಚಾರ!!. ವೇದ ಭೂಮಿಯಾಗಿದ್ದ ಭಾರತಕ್ಕೆ ವೈಮಾನಿಕ ಶಾಸ್ತ್ರ ಹೊಸದೇನಲ್ಲ. 1895ರಲ್ಲಿ ಚೌಪತಿ ಸಮೀಪ ಶಿವಕರ್ ಬಾಪೂಜಿ ತಲ್ಪಾಡೆಯವರು ರೈಟ್ ಬ್ರದರ್ಸ್‍ಗೂ ಮೊದಲೇ ವಿಮಾನ ಹಾರಿಸಿದ್ದರು ಎನ್ನುವ ಸತ್ಯವನ್ನು ಈಗಾಗಲೇ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಭಾರತದ ಬಡ ಪರಿಸ್ಥಿತಿ, ಬ್ರಿಟಿಷ್ ದಬ್ಬಾಳಿಕೆ ಮತ್ತಿತರ ಕಾರಣಗಳಿಂದಾಗಿ ಈ ವಿಚಾರ ಹೆಚ್ಚು ಪ್ರಚಾರ ಗಿಟ್ಟಿಸಲಿಲ್ಲ ಮತ್ತು ವಿಶ್ವ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ ಎನ್ನಬಹುದು. ಅಗಸ್ತ್ಯ ಮತ್ತು ಭರದ್ವಾಜ ಎಂಬ ವಿಜ್ಞಾನಿಕ ಋಷಿಗಳು, ವಿಮಾನ ನಿರ್ಮಾಣದ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದರು ಎಂದು ಅನೇಕ ದಾಖಲೆಗಳಿಂದ ತಿಳಿದುಬಂದಿದೆ. ಈ ವಿಚಾರ ಕೂಡಾ ಎಷ್ಟೋ ಜನಕ್ಕೆ ತಲುಪಿಲ್ಲ ಎಂಬುದು ದುಃಖಕರ!!

ಆದರೆ ಸಾವಿರಾರು ವರ್ಷಗಳ ಹಿಂದೆಯೂ ಭಾರತದಲ್ಲಿನ ಜನಜೀವನ ಕಲಿಯುಗದ ಜಗತ್ತನ್ನೇ ಹೂಲುತ್ತದೆ ಎಂದರೆ ನಾವು ಸಂಶೋಧನೆ ಅಥವ ರಿಸರ್ಚ್ ಯುಗದಲ್ಲಿದ್ದೇವೆ ಎಂದಾಯಿತು!!! ಯಾಕೆಂದರೆ ಈ ಹಿಂದೆ ಟಿವಿ, ಇಂಟರ್ನೆಟ್, ಮೋಟಾರ್ ಕಾರ್ ಮುಂತಾದ ಈಗಿನ ಅನೇಕ ತಾಂತ್ರಿಕ ಸಾಧನಗಳು ಇಲ್ಲದಿದ್ದರೂ ಆಗಿನ ಜನರೂ ವೈವಿಧ್ಯಮಯ ಸಾಧನಗಳನ್ನು ಬಳಸುತ್ತಿದ್ದರು. ಆನಂದವಾಗಿ ಜೀವನದ ಸಂತೋಷ ಅನುಭವಿಸುತ್ತಿದ್ದರು. ಹಾಗಾಗಿ ಸಾವಿರಾರು ವರ್ಷಗಳ ಹಿಂದೆಯೂ ಭಾರತದಲ್ಲಿ ಜನಜೀವನ ಸರಿಸುಮಾರು ಈಗಿರುವಂತೆಯೇ ಇತ್ತು ಎನ್ನುವುದು ದೃಢವಾದ ನಂಬಿಕೆ!!

ಹೌದು…. ಕ್ರಿ.ಪೂ. 3500 ವರ್ಷಗಳ ಹಿಂದಿನ ಸಿಂಧೂ-ಸರಸ್ವತಿ ನಾಗರಿಕತೆಯು, ವೈದಿಕ ನಾಗರಿಕತೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿರುವ ವಿಚಾರ ತಿಳಿದೇ ಇದೆ!! ಆದರೆ   ಐದಾರು ಸಾವಿರ ವರ್ಷಗಳ ಹಿಂದೆ ಈ ಹಿಂದೂಗಳು ದೊಡ್ಡ ನಗರಗಳನ್ನು ನಿರ್ಮಿಸಿದ್ದರು. ಅಲ್ಲದೇ, ವಿಶಾಲವಾದ ನೇರವಾದ ರಸ್ತೆಗಳನ್ನು ನಿರ್ಮಿಸಿದ್ದರು ಎನ್ನುವುದನ್ನು ಹೇಳಲಾಗಿದೆ!! ಅಷ್ಟೇ ಅಲ್ಲದೇ ಇಟ್ಟಿಗೆಗಳಿಂದ ಸುಂದರವಾದ, ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿದ್ದರು. ಪ್ರತಿ ಮನೆಗೂ ಖಾಸಗಿ ಸ್ನಾನಗೃಹ, ಶೌಚಾಲಯಗಳಿದ್ದವು. ಇವುಗಳು ಮಾತ್ರವಲ್ಲದೇ ಸಿಂಧೂ ಕಣಿವೆಯ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಿದ್ದರು. ಮಹಿಳೆಯರು, ಚಿನ್ನಾಭರಣಗಳನ್ನು ತೊಡುತ್ತಿದ್ದರು, ಮೇಕಪ್, `ಲಿಪ್ ಸ್ಟಿಕ್’ (ಈಗಿನ ರಾಸಾಯನಿಕ ಲಿಪ್ಸ್ಟಿಕ್ಕಲ್ಲ)ಗಳನ್ನೂ ಸಹ ಬಳಸುತ್ತಿದ್ದರು!! ಅಷ್ಟೇ ಅಲ್ಲದೇ ಕೇಶವಿನ್ಯಾಸದ ಬಗ್ಗೆ, ವಸ್ತ್ರಗಳ ಬಗ್ಗೆಯೂ ಅವರಿಗೆ ಅರಿವಿತ್ತು ಎನ್ನುವುದೂ ತಿಳಿದು ಬಂದಿದೆ!!

ಅಷ್ಟಕ್ಕೂ ಈ ವಿಚಾರ ತಿಳಿದು ಬಂದಿದ್ದಾದರೂ ಹೇಗೆ ಗೊತ್ತೇ??

1922ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಹರಪ್ಪ ಎಂಬ ಕುತೂಹಲಕಾರಿ ಸ್ಥಳದಲ್ಲಿ ಪ್ರಾಚೀನ ನಗರದ ಅವಶೇಷಗಳನ್ನು ಪತ್ತೆ ಹಚ್ಚಿದ್ದರು!! ಆದರೆ ಈಗ ಈ ಪ್ರದೇಶವು ಪಾಕಿಸ್ತಾನಕ್ಕೆ ಸೇರುತ್ತದೆ. ಹರಪ್ಪದಿಂದ 700 ಕಿ.ಮೀ. ದೂರದಲ್ಲಿ ಮಹೆಂಜೊ-ದಾರೊ ಎಂಬ ಸ್ಥಳ ಇದೆ. ಅಲ್ಲಿಯೂ ಪ್ರಾಚೀನ ನಗರದ ಅವಶೇಷಗಳನ್ನು ಅಗೆದು ಹೊರತೆಗೆದುದರಿಂದ ಇಂತಹ  ಕೆಲ ಕುತೂಹಲಕಾರಿ ವಿಚಾರಗಳು ಪತ್ತೆಯಾಗಿದೆ!! ಅಷ್ಟೇ ಅಲ್ಲದೇ, ಗುಜರಾತಿನ ಧೋಲವೀರದಲ್ಲೂ ಪ್ರಾಚೀನ ನಗರ ಪತ್ತೆಯಾಗಿತ್ತು!! ಈ ನಾಗರಿಕತೆಯನ್ನು `ಹರಪ್ಪ ನಾಗರಿಕತೆ’, `ಸಿಂಧೂ ಕಣಿವೆ ನಾಗರಿಕತೆ’ ಎಂದು ಕರೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರದೇಶದ ಜನರು ಬರೀ ಸಿಂಧೂ ನದಿಯನ್ನು ಮಾತ್ರ ಆಶ್ರಯಿಸಿರಲಿಲ್ಲ, ಅತಿ ವಿಶಾಲವಾದ ಸರಸ್ವತೀ ನದಿ ಅವರ ಜೀವನಾಡಿಯಾಗಿತ್ತು ಎಂಬ ಅಂಶ ಈಚೆಗೆ ಸಾಬೀತಾಗಿದೆ. ಉಪಗ್ರಹಗಳಿಂದ ತೆಗೆದ ಚಿತ್ರಗಳು ವೇದಗಳಲ್ಲಿ ಹೇಳಿರುವ ಸರಸ್ವತಿ ನದಿಯ ಪಾತ್ರವನ್ನು ಗುರುತಿಸಿವೆ. ಈಗ ಹರಪ್ಪ ನಾಗರಿಕತೆಯನ್ನು `ಸಿಂಧೂ-ಸರಸ್ವತಿ ನಾಗರಿಕತೆ’ ಎಂದು ಸಕಾರಣವಾಗಿ ಕರೆಯಲಾಗುತ್ತಿದೆ.

ಈಗಾಗಲೇ ಮಹಾಭಾರತದ ಶ್ರೀಕೃಷ್ಣನ ದ್ವಾರಕಾ ನಗರದ ಬಗ್ಗೆ ಉಲ್ಲೇಖಗಳು ಸಿಕ್ಕಿವೆ ಅನ್ನೋ ವಿಚಾರ ತಿಳಿದೇ ಇದೆ!! ದ್ವಾರಕಾ ನಗರ ಸಾವಿರಾರು ವರ್ಷಗಳ ಹಿಂದೆ ದೊಡ್ಡ ಪ್ರವಾಹದಲ್ಲಿ ಕೊಚ್ಚಿ ನೀರಿನಲ್ಲಿ ಮುಳುಗಿಹೋಯಿತು ಅನ್ನೋದನ್ನೂ ಕೂಡ ಅದೇ ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಆದರೆ ಎಷ್ಟೋ ವರ್ಷಗಳವರೆಗೆ ಇದನ್ನ ಸುಳ್ಳು ಅಂತಲೇ ನಂಬಲಾಗಿತ್ತು ಆದರೆ 80 ರ ದಶಕದಲ್ಲಿ ಎಸ್.ಆರ್.ರಾವ್ ಎಂಬ ವಿಜ್ಞಾನಿಯೊಬ್ಬರು ಶ್ರೀಕೃಷ್ಣನ ಕಾಲ ದ್ವಾರಕಾ ಪಟ್ಟಣದ ಬಗ್ಗೆ ರಿಸರ್ಚ್ ಮಾಡಲು ಮುಂದಾದಾಗ ದ್ವಾರಕೆಯ ಹತ್ತಿರವಿರುವ ಸಮುದ್ರದಲ್ಲಿ ಮರೈನ್ ಆರ್ಕಿಯಾಲಾಜಿಸ್ಟ್ ಗಳ ಸಹಾಯದಿಂದ ಸಮುದ್ರದಾಳದಲ್ಲಿ ಹುಡುಕಾಟ ನಡೆಸಿದಾಗ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿತ್ತು.

ಸುಮಾರು ಕಿಲೋಮೀಟರ್ ಗಳ ದೂರ ಸಮುದ್ರದಲ್ಲಿ ತೆರಳಿ ನಂತರ ಅಲ್ಲಿ ಸುಮಾರು 70 ರಿಂದ 150 ಅಡಿ ಸಮುದ್ರದಾಳದಲ್ಲಿ ಹಾಗು ಸುಮಾರು 370 ಮೀಟರ್ ಗಳಷ್ಟು ದೂರದಲ್ಲಿ ವಿಶೇಷಜ್ಞರು ಹುಡುಕಿದಾಗ ಸಾವಿರಾರು ವರ್ಷಗಳ ಹಿಂದೆ ಅಲ್ಲೊಂದು ನಗರವಿತ್ತು, ಅಲ್ಲಿನ ಸಾಮ್ರಾಜ್ಯದ ಗೋಡೆಗಳು, ನಗರವಿರುವ ಎಲ್ಲಾ ಕುರುಹುಗಳನ್ನೂ ನೋಡಿ ಸ್ವತಃ ವಿಜ್ಞಾನಿಗಳೇ ಬೆಚ್ಚಿಬಿದ್ದಿದ್ದರು. ಶ್ರೀಕೃಷ್ಣನ ದ್ವಾರಕಾ ಈಗಲೂ ಸಮುದ್ರದಲ್ಲಿದ್ದು ಅಲ್ಲಿನ ಗೋಡೆ ಸಮುದ್ರದಲ್ಲಿ ಎಷ್ಟು ವಿಶಾಲವಾಗಿದೆಯೆಂದರೆ ಗುಜರಾತಿನ ದ್ವಾರಕಾದ ಸಮುದ್ರದಿಂದ 800 ಕಿ.ಮೀ ದೂರವಿರುವ ಭರೂಚ್ ಎಂಬ ಜಿಲ್ಲೆಯಲ್ಲಿನ ಸಮುದ್ರದವರೆಗೂ ಆ ಗೋಡರ ಈಗಲೂ ಸಮುದ್ರದಲ್ಲಿದೆ ಅನ್ನೋದನ್ನ ವಿಜ್ಞಾನಿಗಳು ಅದಾಗಲೇ ಕಂಡು ಹಿಡಿದಿದ್ದಾರೆ.

ಇದರಿಂದ ತಿಳಿದುಬರುವ ವಿಷಯವೆಂದರೆ ದ್ವಾರಕಾ ಕೇವಲ ಒಂದು ನಗರವಾಗಿರದೆ ಅದೊಂದು ರಾಜ್ಯವಾಗಿತ್ತು ಅನ್ನೋದು. ಮಹಾಭಾರತದಲ್ಲಿ ಉಲ್ಲೇಖಿತವಾಗಿರುವ ಸುಮಾರು 35 ಇಂತಹ ಜಾಗಗಳನ್ನು ಸಂಶೋಧನಾಕಾರರು ಅದಾಗಲೇ ಗುರುತಿಸಿದ್ದಾರೆ. ಆದರೆ ಇದೀಗ ಸಿಂಧೂ-ಸರಸ್ವತಿ ನಾಗರಿಕತೆಯು ಪ್ರಸ್ತುತ ಜನರ ಜನಜೀವನವನ್ನೇ ಹೋಲುತ್ತಿದ್ದರು ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ಈ ಮೂಲಕ ಹಿಂದಿರುವ ಜನಜೀವನವನ್ನೇ ನಾವು ಅನುಸರಿಸುತ್ತಿದ್ದೇವೆ ಅನ್ನೋದು ತಿಳಿದು ಬರುತ್ತದೆ!!

ಒಟ್ಟಿನಲ್ಲಿ, ಹೊರಜಗತ್ತು ಇನ್ನೂ ಜೀವ ವಿಕಾಸವನ್ನೇ ಹೊಂದಿರದಿದ್ದಾಗ ಭಾರತ ಹಾಗು ಇಲ್ಲಿನ ಜನ ಸುಸಂಸ್ಕೃತರಾಗಿದ್ದರು, ಅಲ್ಲಿನ ಜನ ಬಟ್ಟೆಯೆಂದರೆ ಏನು ಅಂತ ಅರಿಯುವ ಸ್ಥಿತಿಯಲ್ಲಿದ್ದಾಗಲೇ ನಮ್ಮಲ್ಲಿ ವೈಜ್ಞಾನಿಕ ರೀತಿಯಲ್ಲಿ ನಗರಗಳ ನಿರ್ಮಾಣ, ಜನಜೀವನ, ಟೆಕ್ನಾಲಾಜಿಗಳು ಉತ್ತುಂಗಕ್ಕೆ ಹೋಗಿತ್ತು ಅನ್ನೋದಕ್ಕೆ ಇದೇ ಸಾಕ್ಷಿಯಾಗಿ ನಿಂತಿದೆ!!!

ಮೂಲ: https://goo.gl/fu3md2

https://goo.gl/yr8DmZ

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close