ಅಂಕಣ

ಅಂದು ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾ ಖಾನ್ ಹಠ ಹಿಡಿಯದಿರುತ್ತಿದ್ದರೆ ಇಂದಿರಾ ಗಾಂಧಿ ಭಾರತವನ್ನು ಇಸ್ಲಾಮಿಕ್ ದೇಶಗಳ ಒಕ್ಕೂಟದಲ್ಲಿ ಒಂದಾಗಿಸಿ ನಮ್ಮೆಲ್ಲರ ಜೀವನಕ್ಕೆ ಇತಿಶ್ರೀ ಹಾಕುತ್ತಿದ್ದರು!!

ಹೌದು, ಅಂದೇನಾದರೂ ಪಾಕಿಸ್ತಾನದ ಅಧ್ಯಕ್ಷ ಪಟ್ಟು ಹಿಡಿದು ಕೂರದಿರುತ್ತಿದ್ದರೆ, ಈ ಮುಗಲ ಸಂತಾನಗಳು ನಮ್ಮ ಭಾರತವನ್ನು ಇಸ್ಲಾಮಿಕ್ ದೇಶಗಳ ಸಂಘಟನೆಯಲ್ಲಿ ಶಾಮೀಲು ಮಾಡಿಯೆ ಬಿಡುತ್ತಿದ್ದರು!! ನಮ್ಮ ಪುಣ್ಯ, ಮೈಮುನಾ ಬೇಗಮ್ ಮಾಡಿದ ಒಂದು ತಪ್ಪುನಿಂದಾಗಿ ಮತ್ತು ಪಾಕಿಸ್ತಾನದಿಂದಾಗಿ ಇವತ್ತು ನಮ್ಮ ಕೈಯಲ್ಲಿ ಭಗವದ್ಗೀತೆಯ ಬದಲಿಗೆ ಕುರಾನ್ ಹಿಡಿಯುವುದು ತಪ್ಪಿತು!!

ಭಾರತವೊಂದು ಜಾತ್ಯಾತೀತ ದೇಶ, ಲೋಕತಂತ್ರ ಅಪಾಯದಲ್ಲಿದೆ ಎಂದು ಗಂಟಲು ಹರಿಯುವ ಬುದ್ದಿಜೀವಿ – ಜಾತ್ಯಾತೀತ ಬ್ರಿಗೇಡ್ ಕಾಂಗ್ರೆಸರಿಗೆ ಬಹುಶಃ ಈ ವಿಷಯ ಗೊತ್ತಿಲ್ಲವೇನೋ? ನಲ್ವತ್ತೊಂಬತ್ತು ವರ್ಷಗಳ ಹಿಂದೆ ತಥಾಕಥಿತ “ಜಾತ್ಯಾತೀತ” ಭಾರತವನ್ನು ಇಸ್ಲಾಮಿಗರಿಂದ, ಇಸ್ಲಾಮಿಗಾಗಿಯೆ ನಿರ್ಮಿಸಲಾದ ಅಂತರಾಷ್ಟ್ರೀಯ ಇಸ್ಲಾಮಿಕ್ ದೇಶಗಳ ಸಂಘಟನೆಯೊಳಗೆ ಪ್ರವೇಶ ನೀಡಬೇಕೆಂದು ಖುದ್ದು ಇಂದಿರಾ ಗಾಂಧಿಯೆ ಔಪಚಾರಿಕವಾಗಿ ಅರ್ಜಿ ಗುಜರಾಯಿಸಿದ್ದರು!! ಎಷ್ಟೆಂದರೂ ಮುಗಲರ ರಕ್ತ ದೇಹದೊಳಗೆ ಹರಿಯುತ್ತಿರುವುದಲ್ಲವೆ ಹಾಗೆ ಮೈಮುನಾ ಬೇಗಂಗೆ ಭಾರತ ಮುಸ್ಲಿಂ ಜಗತ್ತಿನ ಭಾಗವಾಗಿ ಇಸ್ಲಾಮೀಕರಣ ಹೊಂದಲಿ ಎನ್ನುವ ಆಸೆ ಪಾಪ!

1969 ರಲ್ಲಿ ಇಸ್ಲಾಮಿಕ್ ದೇಶಗಳ ಅಂತರಾಷ್ಟ್ರೀಯ ಸಂಘಟನೆಯ ಭಾಗವಾಗಲು ಭಾರತವನ್ನು ಸೇರಿಸಲು ಅರ್ಜಿ ಹಾಕಿದ ಇಂದಿರಾ ಗಾಂಧಿ

1969 ಪ್ರಪಂಚದ ಎಲ್ಲಾ ಮುಸ್ಲಿಮ್ ದೇಶಗಳು “ಇಸ್ಲಾಮಿ”ನ ತತ್ವಗಳಿಗನುಗುಣವಾಗಿ ಇಸ್ಲಾಮನ್ನು ಜಗತ್ತಿಗೆ ಪರಿಚಯಿಸಲು ಒಂದು ಒಕ್ಕೂಟವನ್ನು ಸ್ಥಾಪಿಸಲು ನಿರ್ಧರಿಸುತ್ತಾರೆ. ಈ ಒಕ್ಕೂಟವನ್ನು OIC (ಇಸ್ಲಾಮಿಕ್ ಕಾನ್ಫರೆನ್ಸ್ ಸಂಘಟನೆ) ಎಂದು ಹೆಸರಿಸಲಾಯಿತು. ಒಕ್ಕೂಟಕ್ಕೆ 2011 ರಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ ಎಂದು ಮರುನಾಮಕರಣ ಮಾಡಲಾಗಿದೆ. ಇದರ ಮೊದಲ ಸಮ್ಮೇಳನವು ಮೊರಾಕ್ಕೊದಲ ರಬಾಟನಲ್ಲಿ ನಡೆಯಲಿತ್ತು.

ಭಾರತದ ಪ್ರಧಾನಿ ಇಂದಿರಾ ಗಾಂಧಿ ಮೊರಕ್ಕೋದಲ್ಲಿದ್ದ ಭಾರತದ ರಾಜದೂತ ಗುರುಬಚನ್ ಸಿಂಗ್ ಅವರನ್ನು ಮಾತುಕತೆಗೆ ಕಳುಹಿಸಿದ್ದರು. ಗುರುಬಚನ್ ಸಿಂಗ್ ಎಂಬ ಸಿಖ್ಖ್ ವ್ಯಕ್ತಿಯನ್ನು ಕಳುಹಿಸಿದ್ದು ಇಸ್ಲಾಮಿಕ್ ದೇಶಗಳ ದೃಷ್ಟಿಯಲ್ಲಿ ಬಹು ದೊಡ್ದ ತಪ್ಪಾಗಿತ್ತು. ಮುಸ್ಲಿಂ ದೇಶಗಳ ಸಂಘಟನೆಗೆ ಮಾತುಕತೆ ನಡೆಸಲು ಮುಸ್ಲಿಂ ವ್ಯಕ್ತಿಯನ್ನೆ ಕಳುಹಿಸಿ ಕೊಡಬೇಕಾಗಿತ್ತಂತೆ! ಸುದ್ದಿ ತಿಳಿದ ಇಂದಿರಾ ಗಾಂಧಿ ಕಮಿಟಿಗೆ ಬೇಕಾದ ಬದಲಾವಣೆ ಮಾಡಿ ಫಕ್ರುದ್ದೀನ್ ಅಲಿಯನ್ನು ಅಹಮದ್ ಅನ್ನುವ ಮುಸ್ಲಿಂ ವ್ಯಕ್ತಿಯನ್ನು ಕಳುಹಿಸಿ ಕೊಟ್ಟರೂ ಆತ ಮೊರಕ್ಕೋ ತಲುಪಲಿಲ್ಲ.

ಅತ್ತ ಭಾರತ ಮುಸ್ಲಿಂ ಒಕ್ಕೂಟದಲ್ಲಿ ಸದಸ್ಯತ್ವ ಬಯಸುತ್ತದೆ ಎಂದು ಗೊತ್ತಾದ ಕೂಡಲೆ ಪಾಕಿಸ್ತಾನದ ರಾಷ್ಟ್ರಪತಿ ಯಾಹ್ಯಾ ಖಾನ್ ಹುಷಾರಿಲ್ಲದ ನೆಪವೊಡ್ಡಿ ಮೊರಕ್ಕೋದಿಂದ ಹೊರ ಹೋಗುತ್ತೇನೆ ಎಂದು ಇಸ್ಲಾಮಿಕ್ ದೇಶಗಳನ್ನು ಬ್ಲಾಕ್ ಮೇಲ್ ಮಾಡುತ್ತಾನೆ. ಇಸ್ಲಾಮಿಕ್ ದೇಶಗಳ ಬಳಿ ಒಂದೆ ಆಯ್ಕೆ ಇದ್ದದ್ದು. ಒಂದೋ ಸಂಪೂರ್ಣ ಮುಸ್ಲಿಂ ದೇಶವಾದ ಪಾಕಿಸ್ತಾನಕ್ಕೆ ಸದಸ್ಯತ್ವ ನೀಡುವುದು. ಇಲ್ಲ, ಇಸ್ಲಾಮಿಕ್ ದೇಶವಲ್ಲದ ಭಾರತಕ್ಕೆ ಸದಸ್ಯತ್ವ ನೀಡುವುದು. ಇಸ್ಲಾಮಿಕ್ ದೇಶಗಳ ಆಯ್ಕೆ ಸರಿಯಾಗಿಯೆ ಇತ್ತು, ಏಕೆಂದರೆ ಅವರು ಮುಸ್ಲಿಂ ದೇಶ ಪಾಕಿಸ್ತಾನಕ್ಕೆ ಒಕ್ಕೂಟದ ಸದಸ್ಯತ್ವ ನೀಡಿದ್ದರು. ಬಹುಸಂಖ್ಯಾತ ಹಿಂದೂಗಳ ದೇಶಕ್ಕೆ ಇಸ್ಲಾಮಿಕ್ ರಾಜ್ಯಗಳ ಪಟ್ಟಿಯಲ್ಲಿ ಅವರೇಕೆ ಸ್ಥಾನ ನೀಡಿದ್ದಾರೆ?

ಭಾರತದ ಸನಾತನಿಗಳ ಪುಣ್ಯ, ದೊಡ್ಡದೊಂದು ಅನಾಹುತ ಪಾಕಿಸ್ತಾನದಿಂದಾಗಿ ತಪ್ಪಿ ಹೋಯಿತು. ಇಲ್ಲವಾಗಿದ್ದರೆ ಇವತ್ತು ನಮ್ಮ ಕೈಗಳಲ್ಲಿ ಕುರಾನ್ ಇರುತ್ತಿತ್ತು. ಏಕೆಂದರೆ ಈ ಇಸ್ಲಾಮಿಕ್ ಒಕ್ಕೂಟಗಳ ಧ್ಯೇಯ ” In the name of Allah, the most Compassionate, the most Merciful We the Member States of the Organisation of Islamic Cooperation, determined …. to be guided by the noble Islamic values of unity and fraternity … to endeavour to work for revitalizing Islam’s pioneering role in the world … ”ಅನ್ನುವುದೆ ಆಗಿತ್ತು.

ಅಂದರೆ “ಇಸ್ಲಾಮಿನ” ತತ್ವಾದರ್ಶಗಳಿಗೆ ಅನುಗುಣವಾಗಿ ವರ್ತಿಸುವುದೆ ಈ ದೇಶಗಳ ಒಕ್ಕೂಟದ ಮೂಲ ಉದ್ದೇಶ. ಹಾಗಿರುವಾಗ ಭಾರತದಂತಹ ಒಂದು ಹಿಂದೂ ಬಾಹುಳ್ಯದ “ಜಾತ್ಯಾತೀತ” ದೇಶವನ್ನು ಇಂದಿರಾ ಗಾಂಧಿ ಯಾವ ಆಧಾರದ ಮೇಲೆ ಇಸ್ಲಾಮಿಕ್ ದೇಶಗಳ ಒಕ್ಕೂಟಕ್ಕೆ ಸೇರಿಸಲು ಕೇಳಿಕೊಂಡದ್ದು? ಭಾರತ “ಹಿಂದೂ” ರಾಷ್ಟ್ರವಾದರೆ ಜಾತ್ಯಾತೀತತೆಗೆ ಅಪಾಯ, ಲೋಕತಂತ್ರಕ್ಕೆ ಅಪಾಯ, ಆದರೆ ಇಸ್ಲಾಮಿಕ್ ದೇಶದ ಒಕ್ಕೂಟದಲ್ಲಿ ಸೇರಿದ್ದರೆ ಜಾತ್ಯಾತೀತ ಉಳಿಯುತ್ತಿತ್ತೋ? ಹಿಂದೂಗಳು ಉಳಿಯುತ್ತಿದ್ದರೋ? ಇಂದಿರಾ ಗಾಂಧಿಯ ಈ ನಿರ್ಧಾರ ಸರಿಯೋ? ಇಂತಹ ಮುಸ್ಲಿಂ ಪ್ರೇಮಿ ಕಾಂಗ್ರೆಸ್ ಗಠಬಂಧನಕ್ಕೆ ಮತ ನೀಡುತ್ತೀರೋ? ಕಾಂಗ್ರೆಸ್ ಹಿಂದೂ ದ್ವೇಶಿಯೆನ್ನಲು ಇನ್ನೆಷ್ಟು ಪುರಾವೆಗಳು ಬೇಕು ?

-Postcard team

Tags

Related Articles

FOR DAILY ALERTS
 
FOR DAILY ALERTS
 
Close