ಪ್ರಚಲಿತ

ನೀರಿನಲ್ಲಿ ತೆಪ್ಪದಂತೆ ತೇಲುವ ಸೌರ ವಿದ್ಯುತ್ ಸ್ಥಾವರ!! ಇಂತಹ ಯೋಜನೆಯೊಂದು ದೇಶದ ಇತಿಹಾಸದಲ್ಲೆ ಮೊದಲು!! ಒಬ್ಬ ಚಾಯವಾಲಾನಿಗೆ ಹೊಳೆದಿದ್ದು ಅರ್ಥಶಾಸ್ತ್ರಿಗಳಿಗೆಲ್ಲಾ ಏಕೆ ಹೊಳೆಯಲಿಲ್ಲ ಎನ್ನುವುದೆ ಬ್ರಹ್ಮ ರಹಸ್ಯ!

ಹೀಗೂ ಸಾಧ್ಯವೆ? ನದಿಯ ಮೇಲೆ ತೆಪ್ಪಗಳು ತೇಲಿದಂತೆ ಸೋಲಾರ್ ಪ್ಯಾನಲ್ ಗಳನ್ನು ಹರಡಿ ಅದರಿಂದಲೂ ವಿದ್ಯುತ್ ಉತ್ಪಾದಿಸಬಹುದೆ? ಹೀಗೂ ಸಾಧ್ಯವಾಗುತ್ತದೆ ಎಂದು ತಿಳಿದಿರಲಿಲ್ಲ. ಮೋದಿ ಸರಕಾರ ಬರುವವರೆಗೂ ಈ ದೇಶದಲ್ಲಿ ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗಗಳು ಜೀವಂತವಾಗಿವೆಯೋ ಎನ್ನುವುದೆ ತಿಳಿದಿರಲಿಲ್ಲ. ಅದ್ಯಾವ ಘಳಿಗೆಯಲ್ಲಿ ಮೋದಿ ದೇಶದ ಆಡಳಿತದ ಚುಕ್ಕಾಣಿ ಹಿಡಿದರೋ ಭಾರತವು ನಾಲ್ಕೂವರೆ ವರ್ಷಗಳಲ್ಲಿ ಹಲವು ಪ್ರಪ್ರಥಮಗಳ ಸರದಾರನಾಯಿತು! ದೊಡ್ಡ ದೊಡ್ಡ ಅರ್ಥಶಾಸ್ತ್ರಿಗಳಿಗೂ ಸಾಧ್ಯವಾಗದ್ದು ಯಕಶ್ಚಿತ್ ಚಾಯವಾಲನಿಗೆ ಹೇಗೆ ಸಾಧ್ಯವಾಯಿತೋ ಗೊತ್ತಿಲ್ಲ. ಈತ ಭಾರತದ ಭಾಗ್ಯೋದಯಕ್ಕಾಗಿ ದೇವರಿಂದಲೆ ಕಳಿಸಲ್ಪಟ್ಟ ಯೋಗಿಯೋ ಅರಿಯಲಾಗುತ್ತಿಲ್ಲ. ಇಚ್ಛಾಶಕ್ತಿಯೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದೆನ್ನುವುದಕ್ಕೆ ಮೋದಿ ಸಾಕ್ಷಿ ಎನ್ನುವುದಷ್ಟೆ ಗೊತ್ತು.

ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಅಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರಿಂದಲೆ ಜನ ಪ್ರತಿ ಬಾರಿಯೂ ಅವರನ್ನು ಗೆಲ್ಲಿಸಿದ್ದು ಎನ್ನುವುದು ಈಗ ಸ್ಪಷ್ಟವಾಗುತ್ತಿದೆ. ಸುಮ್ಮನೆ ಗಿಮಿಕ್ ಮಾಡಿ ಈ ವ್ಯಕ್ತಿ ಹದಿನೆರಡು ವರ್ಷಗಳವರೆಗೆ ಆಡಳಿತ ಹಿಡಿದ್ದಿದ್ದರು ಎಂದರೆ ಇದು ನಂಬುವ ಮಾತಲ್ಲ. ಹಾಗೆ ಹದಿನೆರಡು ವರ್ಷಗಳವರೆಗೆ ಜನರನ್ನು ಮಂಗ ಮಾಡುವುದು ಸಾಧ್ಯವೂ ಇಲ್ಲ. ಮೋದಿ ವಿಕಾಸದ ಹರಿಕಾರ ಎನ್ನುವುದು ಸತ್ಯಸ್ಯ ಸತ್ಯ. ನಾಳೆ ಅವರು ಗುಜರಾತಿನಲ್ಲಿ ಚುನಾವಣೆಗೆ ನಿಂತರೆ ಜನ ಈಗಲೂ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎನ್ನುವುದು ಸುಸ್ಪಷ್ಟ.

ಮೋದಿಯ ಚಾಣಕ್ಷತೆಗೆ ಹಿಡಿದ ಕೈಗನ್ನಡಿ ನೀರಿನಲ್ಲಿ ತೇಲುವ ಸೌರ ವಿದ್ಯುತ್ ಸ್ಥಾವರ

ಭಾರತವೀಗ ನವೀಕರಿಸಬಲ್ಲ ಇಂಧನ ಬಳಕೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಚೀನಾವನ್ನು ಏಳನೇ ಸ್ಥಾನಕ್ಕೆ ತಳ್ಳಿದ ಭಾರತ ಇನ್ನೇನು ಕೆಲವೆ ಸಮಯದಲ್ಲಿ ಒಂದನೆ ಸ್ಥಾನಕ್ಕೇರಿದರೂ ಏರಬಹುದು. ಈಗ ಭಾರತದ ರೈಲುಗಳು, ಟಾಯ್ಲೆಟ್ ಗಳು, ಮನೆಗಳು, ಮರುಭೂಮಿ, ಬೆಟ್ಟ ಗುಡ್ಡ, ರಸ್ತೆ, ಎಲ್ಲೆಲ್ಲೂ ಸೌರ ಶಕ್ತಿಯ ಕಾರುಬಾರು. ಸೂರ್ಯನಿಂದ ಬರುವ ಬೆಳಕಿಗೆ ಹಣವೆ ಕೊಡಬೇಕಾಗಿಲ್ಲ. ಸೂರ್ಯನ ಶಕ್ತಿ ಎಂದೂ ಮುಗಿಯುವುದಿಲ್ಲ. ಇದನ್ನು ಪುಸ್ತಕದಲ್ಲಿ ಓದಿದ್ದೆ ವಿನಹ ಪ್ರಾಯೋಗಿಕವಾಗಿ ಯಾರೂ ಅಳವಡಿಸಿರಲಿಲ್ಲ. ಈಗ ಮೋದಿ ಸರಕಾರ ಇದನ್ನು ಪ್ರಾಯೋಗಿಕವಾಗಿ ಅಳವಡಿಸುತ್ತಿದೆ.

ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿರುವ ರಿಹಾಂಡ್ ಅಣೆಕಟ್ಟಿನ ಮೇಲೆ 150 MW ಯೋಜನೆಯ ಮೊದಲ ಬ್ಲಾಕ್ ಅನ್ನು ಸ್ಥಾಪಿಸುವ ಹಕ್ಕನ್ನು ಶಪೂರ್ಜಿ ಪಲ್ಲೋಂಜಿ ಗ್ರೂಪ್ ಗೆ ನೀಡಲಾಗಿದೆ. ಶೀಘ್ರದಲ್ಲೇ ಭಾರತವು ತನ್ನ ಮೊದಲ ದೊಡ್ಡ ಪ್ರಮಾಣದ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಹೊಂದಲಿದೆ. ಭಾರತದ ಅತಿ ದೊಡ್ಡ ಕೃತಕ ಸರೋವರಕ್ಕೆ ರಿಹಾಂಡ್ ಅಣೆಕಟ್ಟನ್ನು ಕಟ್ಟಲಾಗಿದೆ. ಇಲ್ಲಿಯೆ ಸೋಲಾರ್ ಪ್ಯಾನಲ್ ಗಳನ್ನು ನೀರಿನ ಮೇಲೆ ತೇಲಿ ಬಿಡಲಾಗುತ್ತದೆ

ತೇಲುವ ಸೌರ ವಿದ್ಯತ್ ಸ್ಥಾವರದ ಪ್ರಯೋಜನಗಳೇನು

1.ಪಾರಂಪರಿಕ ಸೌರ ವಿದ್ಯುತ್ ಸ್ಥಾವರಗಳಿಗೆ ಜಾಗದ ಕೊರತೆ, ಭೂ ಸ್ವಾಧೀನ ಪಡಿಸುವಾಗ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

2.ವಿದ್ಯುತ್ ಸರಬರಾಜು ನಡೆಸಲು ಮೂಲಭೂತ ಸೌಕರ್ಯಗಳಿಗೆ ಅಧಿಕ ವೆಚ್ಚ ಮತ್ತು ಸಮಯ ತಗಲುತ್ತದೆ

3.ಈ ಸೌರ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಸರಬರಾಜು ಮಾಡಲು ಈಗಿರುವ ಹೈಡ್ರೋ ಪವರ್ ಸ್ಟೇಷನ್ ಗಳನ್ನೆ ಉಪಯೋಗಿಸಿಕೊಳ್ಳುವುದರಿಂದ ಹೆಚ್ಚುವರಿ ಖರ್ಚು ಬರುವುದಿಲ್ಲ

4.ಕಡಿಮೆ ಖರ್ಚಿಗೆ ಹೆಚ್ಚು ವಿದ್ಯುತ್ ಉತ್ಪಾದಿಸುವ ಅತ್ಯಂತ ಸರಳ ಮತ್ತು ಸುಲಭ ಉಪಾಯ ತೇಲುವ ಸೌರ ವಿದ್ಯುತ್ ಸ್ಥಾವರ

ಈಗಾಗಲೆ ಹಲವಾರು ದೇಶಗಳು ಇಂತಹ ತೇಲುವ ಸೌರ ವಿದ್ಯುತ್ ಸ್ಥಾವರಗಳನ್ನು ತಮ್ಮ ದೇಶದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡಿವೆ. ಮೋದಿ ವಿದೇಶ ಯಾತ್ರೆ ಕೈಗೊಳ್ಳುವಾಗ ಇಂತಹ ಅನ್ವೇಷಣೆಗಳನ್ನು ಕೂಲಂಕುಷವಾಗಿ ಗಮನಿಸುತ್ತಾರೆ ಮಾತ್ರವಲ್ಲ ಅದನ್ನು ಭಾರತದಲ್ಲಿ ಅಳವಡಿಸಿಕೊಳ್ಳುತ್ತಾರೆ. ಈ ತೇಲುವ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಎರಡು ವರ್ಷಗಳ ಹಿಂದೆಯೆ ಬಿಡ್ ಕರೆಯಲಾಗಿತ್ತು. ಆದರೆ ದರದಲ್ಲಿ ಕೆಲವು ವ್ಯತ್ಯಾಸಗಳಿದ್ದುದ್ದರಿಂದ ಯೋಜನೆ ಅನುಷ್ಟಾನಕ್ಕೆ ಬರಲು ಸ್ವಲ್ಪ ತಡವಾಯಿತು.

ಮೋದಿ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದಾಗ ಗದ್ದೆಗೆ ನೀರು ಹರಿಸಲಾಗುವ ಕಾಲುವೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಿದ್ದರಂತೆ. ಇದರಿಂದ ಕಾಲುವೆಯ ನೀರು ಆವಿಯಾಗುವುದೂ ಉಳಿಯುತ್ತಿತ್ತು ಮತ್ತು ಸೌರ ಶಕ್ತಿಯಿಂದ ಗದ್ದೆಗೆ ಬೇಕಾದ ವಿದ್ಯುತ್ ಕೂಡಾ ದೊರೆಯುತ್ತಿತ್ತು. ಇಂತಹ ಉಪಾಯಗಳೆಲ್ಲಾ ವಿದೇಶದಲ್ಲಿ ಕಲಿತ ಅರ್ಥಶಾಸ್ತ್ರಿ ಪಿ.ಎಚ್.ಡಿಗಳಿಗೆಲ್ಲಾ ಯಾಕೆ ಹೊಳೆಯುವುದಿಲ್ಲವೋ ದೇವರೆ ಬಲ್ಲ.

ಮೋದಿ ಏನೇ ಮಾಡಲಿ ಅದರಲ್ಲಿ ದೇಶದ ಹಿತವೆ ಅಡಗಿರುತ್ತದೆ ಹೊರತು ಅವರ ಸ್ವಾರ್ಥಕ್ಕಾಗಿ ಏನೂ ಇರುವುದಿಲ್ಲ. ಆ ಫಕೀರನಿಗೆ ದುಡ್ಡು ಕಾಸಿನ ಆಸೆಯೂ ಇಲ್ಲ. ಇಂತಹ ಕರ್ಮಠ ಯೋಗಿ ಸಂತನಿಗೆ ಒಂದಲ್ಲ ನೂರು ಅವಕಾಶಗಳನ್ನು ಕೊಟ್ಟರೂ ಕಮ್ಮಿಯೆ

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close