ಪ್ರಚಲಿತ

ಮೋದಿಯನ್ನು ಸೋಲದಂತೆ ನೋಡಿಕೊಳ್ಳಿ ಎಂದ ಅಮೇರಿಕಾದ ಪ್ರಜೆ! ಅಪಾಯದ ಸೂಚನೆ ನೀಡಿದ ಆ ಅಮೇರಿಕಾ ಪ್ರಜೆ ಯಾರು? ಆತನಿಗೇನು ಗೊತ್ತು ಮೋದಿಯ ಗತ್ತು?

ನವಭಾರತದ ಉಜ್ಜಲ ಭವಿಷ್ಯದ ಕನಸನ್ನು ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಭವಿಷ್ಯವನ್ನೇ ಬದಲಾಯಿಸುವ ಕ್ರಾಂತಿಕಾರಿ ನಾಯಕರಾಗಿ ಹೊರಹೊಮ್ಮಿದ್ದಲ್ಲದೇ, ಅದೆಷ್ಟೋ ಮಂದಿಗೆ ರೋಲ್ ಮಾಡೆಲ್… ನರೇಂದ್ರ ಮೋದಿ ಪ್ರಧಾನಿ ಪಟ್ಟ ಅಲಂಕರಿಸಿದ ಸಮಯದಿಂದಲೂ ನಮ್ಮ ದೇಶ ಸದೃಢತೆ ಹಾಗೂ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಅದೆಷ್ಟೋ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ!! ಅಲ್ಲದೇ ತಾನು ದೇಶಕ್ಕೋಸ್ಕರ, ದೇಶದ ಜನತೆಗೋಸ್ಕರ ಮಾಡಿದ ಕೆಲಸಗಳ ಬಗ್ಗೆ ಯಾವತ್ತೂ, ಎಲ್ಲಿಯೂ ಕೂಡ ಹೇಳಿಕೊಳ್ಳದೆ ಇರುವ ವ್ಯಕ್ತಿ!!

Image result for modi

ಇನ್ನು ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂಬ ಆಸೆಯಿಂದ ಯಾವುದೇ ಕೆಲಸವನ್ನು ಕೂಡಾ ಮಾಡಲ್ಲ!! ಎಲ್ಲರೂ ಒಂದೇ ಎನ್ನುತ್ತಾ ಯಾವ ಜಾತಿ ಧರ್ಮ ಎಂದು ಎಂದಿಗೂ ಭೇದ ಭಾವ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡುವ ಪ್ರಧಾನ ಸೇವಕ ಮೋದೀಜೀ!! ಅವರ ಕನಸು ಕೇವಲ ದೇಶದ ಅಭಿವೃದ್ಧಿ ಮಾತ್ರ!! ಎಲ್ಲೇ ಹೋದರೂ ಮೋದಿಜೀಯನ್ನು ದೇವರಂತೆ ಆರಾಧಿಸುತ್ತಾರೆ!! ತಮಗೆ ಸಮಯ ಸಿಕ್ಕಾಗಲೆಲ್ಲಾ ವಿದೇಶಿ ಪ್ರವಾಸವನ್ನು ಕೈಗೊಂಡು ಭಾರತ ಮತ್ತು ಹೊರ ರಾಷ್ಟ್ರಗಳೊಂದಿಗೆ ಸಂಭಂದವನ್ನು ವೃದ್ಧಿಗೊಳಿಲು ಶ್ರಮ ಪಡುತ್ತಾರೆ!! ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿದ ಬಳಿಕ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಹೆಸರುವಾಸಿಯಾಗಿದಲ್ಲದೆ ಮುಂದಿನ ಬಾರಿಯೂ ಮೋದಿಜೀಯೇ ಪ್ರಧಾನಿಯಾಗಬೇಕು.. ಒಂದು ವೇಳೆ ಮೋದಿಜೀ ಪ್ರಧಾನಿಯಾಗದಿದ್ದರೆ ಭಾರತದ ಸ್ಥಿತಿಯೇ ಬದಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ವ್ಯಕ್ತಿ ಯಾರು ಗೊತ್ತೇ?!

ಅಮೆರಿಕದ ಖ್ಯಾತ ಉದ್ಯಮಿ ಮೋದೀಜಿ ಬಗ್ಗೆ ಹೇಳಿದ್ದೇನು ಗೊತ್ತೇ?

ಇದೀಗಾಗಲೇ ಮುಂದಿನ ಲೋಕಸಭಾ ಚುನಾವಣೆಯ ಕುರಿತು ಚರ್ಚೆಗಳು ಆರಂಭವಾಗಿರುವ ಸಮಯದಲ್ಲಿಯೇ ಅಮೆರಿಕದ ಖ್ಯಾತ ಉದ್ಯಮಿ ಮೋದೀಜಿ ಬಗ್ಗೆ ನೀಡಿರುವ ಹೇಳಿಕೆ ಹೊಸ ಸಂಚಲನವನ್ನು ಸೃಷ್ಟಿಸಿದೆ. ಭಾರತೀಯರಿಗೆ ಅಮೆರಿಕದ ಉದ್ಯಮಿ ಜಾನ್ ಚೇಂಬರ್ಸ್ ನೀಡಿರುವ ಎಚ್ಚರಿಕೆ ಎಲ್ಲರನ್ನು ಅಚ್ಚರಿ ಪಡುವಂತೆ ಮಾಡಿದೆ.. ಮುಂದಿನ ಬಾರಿಯೂ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಳ್ಳಿ. ಇಲ್ಲದೇ ಹೋದರೆ ನಿಮ್ಮ ದೇಶದ ಬೆಳವಣಿಗೆಗೆ ಅಪಾಯ ಕಾದಿದೆ’ ಎಂದು ಅಮೆರಿಕದ ಖ್ಯಾತ ಉದ್ಯಮಿ ಜಾನ್ ಚೇಂಬರ್ಸ್ ಭಾರತೀಯರಿಗೆ ಎಚ್ಚರಿಕೆ ನೀಡಿದ್ದಾರೆ!!

ನಿಮ್ಮ ಬಲಿಷ್ಠ ಭಾರತವು ಅತ್ಯಂತ ಶಕ್ತಿಶಾಲಿ ಹಾಗೂ ಸಮಗ್ರ ದೇಶವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮುತ್ತಿದೆ. ಇನ್ನಷ್ಟು ಬಲಶಾಲಿಯಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀವು ಕನಿಷ್ಠ ಹತ್ತು ವರ್ಷವಾದರೂ ಅವಕಾಶವನ್ನು ನೀಡಲೇ ಬೇಕು. ಹಾಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಯನ್ನಾಗಿ ಆಯ್ಕೆ ಮಾಡಿ’ ಎನ್ನುವ ಸಲಹೆಯನ್ನು ಭಾರತೀಯರಿಗೆ ನೀಡಿದ್ದಾರೆ ಎಂದರೆ ಮೋದಿಜೀಯ ಆಡಳಿತ ವೈಖರಿ ಎಷ್ಟರ ಮಟ್ಟಿಗೆ ಇರಬಹುದು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವಂತಹ ಸಿಸ್ಕೋ ಕಂಪನಿಯ ಸಿಇಒ ಜಾನ್ ಚೇಂಬರ್ಸ್ ಈ ಹೇಳಿಕೆ ನೀಡಿದ್ದು ನರೇಂದ್ರ ಮೋದಿಯವರಿಗೆ ಭಾರತದ ಕುರಿತು ಸ್ಪಷ್ಟವಾದ ಪರಿಕಲ್ಪನೆಯಿದೆ. ಅದನ್ನು ಪೂರ್ಣಗೊಳಿಸಲು ಕನಿಷ್ಠ ಹತ್ತು ವರ್ಷವನ್ನಾದರೂ ನೀಡಬೇಕು!!. ಮೋದಿ ದೇಶದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ… ಅಂತಹ ನಾಯಕನನ್ನು ಕಳೆದುಕೊಳ್ಳದಿರಿ.!! ಅದಲ್ಲದೆ ಮೋದಿ ಅಧಿಕಾರ ವಹಿಸಿದ ಬಳಿಕ ಇಡೀ ಭಾರತವನ್ನೇ ಬದಲಾಯಿಸಿದ್ದಾರೆ!! ಅಂಥವರಿಗೆ ಅಧಿಕಾರವನ್ನು ಮತ್ತೊಮ್ಮೆ ನೀಡದಿದ್ದರೆ ನಿಮ್ಮ ದೇಶಕ್ಕೆ ಅಪಾಯ ಕಾದಿದೆ. ಒಬ್ಬ ಅದ್ಭುತ ನಾಯಕನಾಗಿ ನಿಮ್ಮ ದೇಶವನ್ನು ಮುನ್ನಡೆಸುತ್ತಿದ್ದು ರಾಷ್ಟ್ರವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ’ ಎಂದು ಹೇಳಿದ್ದಾರೆ!!

ಅದಲ್ಲದೆ  ಒಂದು ಪತ್ರಿಕಾಗೋಷ್ಠಿಯಲ್ಲಿ ಕೆಲವು ಪತ್ರಿಕಾಗಾರರು ಮೋದಿಯವರ ಜೊತೆ ಇಷ್ಟು ಅವಿನಾಭಾವ ಸಂಬಂಧ ಹೊಂದಿರುವಿರುವಿರಲ್ಲವೇ ಹಾಗಾದರೆ ಮುಂದಿನ ಬಾರಿಯೂ ಮೋದಿಯೇ ಪ್ರಧಾನಿಯಾಗುವ ಅರ್ಹತೆ ಇದೆಯಾ ಎಂಬ ಪ್ರಶ್ನೆಯನ್ನು ಟ್ರಂಪ್‍ರವರಿಗೆ ಕೇಳಿದ್ದರು!! ಇಂತಹ ಪ್ರಶ್ನೆಗೆ ಉತ್ತರ ಹೇಳಲು ನನಗೆ ತುಂಬಾ ಖುಷಿಯಾಗುತ್ತದೆ ಮೋದಿ ಒಬ್ಬ ಮಹಾನ್ ವ್ಯಕ್ತಿ!! ಮೋದಿಯವರನ್ನು ಅಜೀವ ಪ್ರಧಾನಿಯನ್ನಾಗಿ ಘೋಷಿಸಿ ಅಂದರೆ ಅವರು ಬದುಕಿರುವವರೆಗೂ ಪ್ರಧಾನಮಂತ್ರಿಯಾಗಿ ಘೋಷಿಸುವುದು ಒಳ್ಳೆಯದು!! ಹೀಗೆ ಮುಂದುವರಿದರೆ ನಮ್ಮನ್ನು ಮೀರಿಸಿದರೂ ಅಚ್ಚರಿಯಿಲ್ಲ!! ಆದರೂ ಭಾರತದ ಪ್ರೀತಿ ವಿಶ್ವಾಸಕ್ಕೆ ನಾವು ಚಿರರುಣಿ ಎಂದಿದ್ದು ಟ್ರಂಪ್‍ರವರ ಇಂತಹ ಮಾತು ಇಡೀ ಭಾರತೀಯರಿಗೆ ಖುಷಿಯನ್ನು ಕೊಟ್ಟಿದೆ ಎಂದು ಈಗಾಗಲೇ ಮೋದಿ ಬಗ್ಗೆ ಟ್ರಂಪ್ ಬಗ್ಗೆ ಹಾಡಿ ಹೊಗಳಿದ್ದಾರೆ!!

Image result for modi with trump

ಮೋದೀಜೀ ಎಲ್ಲೇ ಹೋದರೂ ಅವರನ್ನು ಆ ದೇಶದ ಜನರು ಕೊಂಡಾಡುತ್ತಾರೆ… ಯಾಕೆಂದರೆ ಅವರ ಆಡಳಿತದ ವೈಖರಿ ಅಂತಹದ್ದು!! ಇತ್ತೀಚೆಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಕೂಡಾ ಮೋದೀಜೀಯನ್ನು ಹಾಡಿ ಕೊಂಡಾಡಿದ್ದರು!! ಅಂತಾರಾಷ್ಟ್ರೀಯ ಸಮುದಾಯಕ್ಕೆ `ಭಾರತವೇ ಸ್ಫೂರ್ತಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಮುಕ್ತ ಕಂಠದಿಂದ ಶ್ಲಾಘಿಸಿದ್ದರು!! ವಿಶ್ವಸಂಸ್ಥೆ ರಾಯಭಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ನಾಯಕತ್ವ, ಅಭಿವೃದ್ಧಿಗಾಗಿ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ದಕ್ಷಿಣ ಸಹಕಾರ ಸೇರಿ ಹಲವು ವಿಷಯಗಳಲ್ಲಿ ಭಾರತ ಹೊಂದಿರುವ ಬದ್ಧತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರೇರಣಾದಾಯಕ ಎಂದು ವರ್ಣಿಸಿದ್ದರು ಇದೆಲ್ಲಾ ಮೋದೀಜಿ ಆಡಳಿತ ವೈಖರಿಯಿಂದ ಹೇಳುವುದಕ್ಕೆ ಹೆಮ್ಮೆಯಾಗುತ್ತದೆ!!

ಈಗಾಗಲೇ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮೋದಿಜೀಯ ಆಡಳಿತ ವೈಖರಿಯನ್ನು ಕಂಡು ಇಡೀ ಭಾರತವೇ ಮೋದಿಗೆ ನಮೋ ಎಂದಿದ್ದು ಮುಂದೆಯೂ ಮೋದಿಜೀಯೇ ನಮ್ಮ ಪ್ರಧಾನಿಯಾಗಬೇಕು ಎಂದು ಹಾತೊರೆಯುತ್ತಿದ್ದಾರೆ!! ಅದಲ್ಲದೆ ವಿದೇಶದಲ್ಲೂ ಕೆಲವು ಉನ್ನತ ವ್ಯಕ್ತಿಗಳು ಮೋದಿಜೀಯೇ ಅಧಿಕಾರವಹಿಸಬೇಕು ಎಂದು ಹಾತೊರೆಯುತ್ತಿದ್ದಾರೆ ಎಂದರೆ ಮೋದಿಜೀಯ ಆಡಳಿತ ವೈಖರಿ ಎಷ್ಟರ ಮಟ್ಟಿಗೆ ಇರಬಹುದು?…

source : www.moneycontrol.com

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close