ಪ್ರಚಲಿತ

ಭಾರತಕ್ಕೆ ದೊರಕಲಿದೆ ಮೊತ್ತ ಮೊದಲ ಕೃತಕ ಬುದ್ದಿಮತ್ತೆಯ ಸೂಪರ್ ಕಂಪ್ಯೂಟರ್!! ಜಗತ್ತಿನ ಮುಂದುವರಿದ ದೇಶಗಳ ಸಾಲಿನಲ್ಲಿ ತಲೆ ಎತ್ತಿ ನಿಲ್ಲಲಿದೆ ವಿಶ್ವಗುರು ಭಾರತ!!

ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವೀಗ ವಿಶ್ವದ ದೊಡ್ಡಣ್ಣ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ. ಅಮೇರಿಕಾ-ರಷ್ಯಾಗಳು ಭಾರತಕ್ಕೆ ಸೂಪರ್ ಕಂಪ್ಯೂಟರ್ ತಂತ್ರಜ್ಞಾನವನ್ನು ಕೊಡಲು ನಿರಾಕರಿಸಿದಾಗ ತಾನೇ ಸೂಪರ್ ಕಂಪ್ಯೂಟರ್ ತಯಾರಿಸಿ ವಿಶ್ವವನ್ನು ದಂಗು ಬಡಿಸಿತ್ತು ಭಾರತ! ಭಾರತದಲ್ಲಿ ಪ್ರತಿಭೆಗೆ ಕೊರತೆಯಿರಲಿಲ್ಲ, ಆದರೆ ಅವಕಾಶದ ಕೊರತೆಯಿತ್ತು. ಪ್ರತಿಭಾನ್ವಿತರು ಅಮೇರಿಕಾ-ಇಂಗ್ಲೆಂಡ್ ದೇಶಗಳಿಗೆ ಹಾರಿ ಹೋಗುತ್ತಿದ್ದರು. ಮೋದಿ ಅವರು ಭಾರತದ ಪ್ರತಿಭೆಗಳಿಗೆ ತಾಯ್ನಾಡಿನಲ್ಲೆ ಸಾಧಿಸಲು ಅವಕಾಶ ಮಾಡಿಕೊಟ್ಟರು. ಭಾರತೀಯರನ್ನು ತಮ್ಮ ಕಾಲ ಮೇಲೆ ನಿಲ್ಲುವಂತೆ(Start up India, Stand up India) ಪ್ರೋತ್ಸಾಹಿಸಿದ್ದರಿಂದಾಗಿ ದೇಶದ ಪ್ರತಿ ವ್ಯಕ್ತಿಯ ಹೃದಯದಲ್ಲೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿದೆ.

ಫಲಶೃತಿಯಾಗಿ ಭಾರತದಲ್ಲಿ ಮೊತ್ತ ಮೊದಲ ಕೃತಕ ಬುದ್ದಿಮತ್ತೆಯ (Artificial Intelligence) ಸೂಪರ್ ಕಂಪ್ಯೂಟರ್ ತಯಾರಾಗಲಿದೆ! ಹಿಂದಿನ ಸರಕಾರಗಳೆಲ್ಲ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದಿದ್ದರೆ ಭಾರತ ಯಾವಾಗಲೋ ಅಭಿವೃದ್ದಿ ಹೊಂದಿರುತ್ತಿತು. ತಡವಾಗಿಯಾದರೂ ಸರಿ ಭಾರತಕ್ಕೆ ಮೋದಿಯಂತಹ ಸಮರ್ಥ ನಾಯಕ ದೊರೆತಿದ್ದಾರೆ ನಮ್ಮ ಪುಣ್ಯ.

ಈ ಕೃತಕ ಬುದ್ದಿಮತ್ತೆ ಎಂದರೇನು? ಭಾರತಕ್ಕೆ ಈ ತಂತ್ರಜ್ಞಾನ ಏಕೆ ಬೇಕು?

ಈಗ ಕಂಪ್ಯೂಟರ್ ಗಳಿಗೆ ಪ್ರೋಗ್ರಾಮಿಂಗ್ ಬರೆಯುತ್ತಿರುವುದು ಮಾನವ. ಕಂಪ್ಯೂಟರ್ ಗಳು ಮಾನವನ ಅಣತಿಯಂತೆಯೆ ಕೆಲಸ ಮಾಡುತ್ತವೆ. ಕಂಪ್ಯೂಟರ್- ರೊಬೋಟ್ ಗಳು ಮಾನವನಂತೆ ಸ್ವತಂತ್ರವಾಗಿ ಯೋಚಿಸುವಂತೆ ಮತ್ತು ಕಾರ್ಯ ನಿರ್ವಹಿಸುವಂತೆ ಮಾಡುವ ತಂತ್ರಜ್ಞಾನವೆ ಕೃತಕ ಬುದ್ದಿಮತ್ತೆ. ಐ ರೋಬೋಟ್, ಎಂಥಿರನ್, ಈಗಲ್ ಐ ಮುಂತಾದ ಚಲನಚಿತ್ರಗಳನ್ನು ನೋಡಿದವರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಗೊತ್ತಿರುತ್ತದೆ. ಇಲ್ಲಿ ಕಂಪ್ಯೂಟರ್ ಮತ್ತು ರೋಬೋಟ್ ಗಳು ತಮ್ಮ ನಿರ್ಧಾರಗಳನ್ನು ತಾವೆ ತೆಗೆದುಕೊಳ್ಳುವಷ್ಟು ಸಮರ್ಥವಾಗಿರುತ್ತವೆ. ಈ ಕೃತಕ ಬುದ್ದಿಮತ್ತೆಯ ಕಂಪ್ಯೂಟರ್ ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದಾಗಿ ಕೆಲಸ ಕಾರ್ಯಗಳಿಗಾಗಿ ಮಾನವನ ಮೇಲೆ ಅವಲಂಬಿತವಾಗಿರುವುದು ತಪ್ಪುತ್ತದೆ.

ಪ್ರಸ್ತುತ ಜಗತ್ತಿನಲ್ಲಿ ನಾಲ್ಕನೆ ಕೈಗಾರಿಕಾ ಕ್ರಾಂತಿ ನಡೆಯುತ್ತಿದೆ. ಅಮೇರಿಕಾ ಮತ್ತು ಚೀನಾ ದೇಶಗಳು ಈಗಾಗಲೆ ಕೃತಿಕ ಬುದ್ದಿಮತ್ತೆ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿದೆ. ಇನ್ನು ಜಪಾನ್ ಅಂತೂ ಕೃತಕ ಬುದ್ದಿಮತ್ತೆಯ ಪಿತಾಮಹ! ಹೀಗಿರುವಾಗ ಭಾರತ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸದಿದ್ದರೆ ಮತ್ತೆ ಅಮೇರಿಕಾ-ಚೀನಾ ದೇಶಗಳ ಎದುರು ಕುಬ್ಜನಾಗ ಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಇಡಿಯ ಜಗತ್ತೆ ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸುವ ಸಮಯ ಬರಲಿದೆ ಆಗ ಭಾರತ ಹಿಂದುಳಿಯಲು ಸಾಧ್ಯವಿಲ್ಲ ಅದಕ್ಕಾಗಿಯೆ ಭಾರತಕ್ಕೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಭಿವೃದ್ದಿ ಪಡಿಸುವ ಅವಶ್ಯಕತೆ ಇದೆ.

ಇದರ ಅಂಗವಾಗಿ ಭಾರತದಲ್ಲಿ ಮೊತ್ತ ಮೊದಲ ಕೃತಕ ಬುದ್ದಿಮತ್ತೆಯ ಸೂಪರ್ ಕಂಪ್ಯೂಟರ್ ತಯಾರಾಗಲಿದೆ. ಅಮೇರಿಕಾದ ಪ್ರತಿಷ್ಟಿತ NVIDIA ಕಂಪನಿ ಮತ್ತು ನವದೆಹಲಿಯ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಭಾರತದ ರಾಜಧಾನಿ ದೆಹಲಿಯ Centre of Excellence at Central Electronics Engineering Research Institute (CEERI) ನಲ್ಲಿ ತಂತ್ರಜ್ಞಾನ ಅಭಿವೃದ್ದಿಗೊಳ್ಳಲಿದೆ ಎಂದು ಅನಾಲಿಟಿಕಾ ಇಂಡಿಯಾ ವರದಿ ಮಾಡಿದೆ. ಇಲ್ಲಿ ತಯಾರಾದ ಸೂಪರ್ ಕಂಪ್ಯೂಟರ್ ಗಳನ್ನು ಕೈಗಾರಿಕಾ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗುವುದು.

ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುವ AI ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು CEERI ಅಧ್ಯಕ್ಷ ಶಾಂತನು ಚೌಧರಿ ಹೇಳಿದ್ದಾರೆ. ಆರೋಗ್ಯ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಆಹಾರ ಉತ್ಪಾದನೆ, ಭದ್ರತೆ ಮತ್ತು ಸಾರಿಗೆಯಂತಹ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗಾಗಿ ಈ ಕೇಂದ್ರವನ್ನು ಬಳಸಿಕೊಳ್ಳಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಇನ್ನು ಮುಂದೆ ಅಮೇರಿಕಾ-ರಷ್ಯಾ-ಚೀನಾ ಮತ್ತು ಜಪಾನ್ ಗಳಂತೆಯೆ ಭಾರತವೂ ತನ್ನದೆ ಆದ ಕೃತಕ ಬುದ್ದಿಮತ್ತೆಯ ಸೂಪರ್ ಕಂಪ್ಯೂಟರ್ ಗಳನ್ನು ಹೊಂದಲಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಿಗಿಂತಲೂ ವೇಗವಾಗಿ ಹೆಜ್ಜೆ ಹಾಕುತ್ತಾ ಭಾರತ ವಿಶ್ವಗುರುವಾಗಲಿದೆ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close