ದೇಶ

ಪಾಕಿಸ್ತಾನದ ವಿರುದ್ದ ಭಾರತೀಯ ಸೇನೆಯ ಸೇಡಿನ ಪ್ರತಿಶೋಧ!! ಪಾಕ್ ಸೇನೆಯ ಬ್ರಿಗೇಡ್ ಪ್ರಧಾನ ಕಚೇರಿಯನ್ನೆ ಧ್ವಂಸ ಮಾಡಿದ ನಮ್ಮ ವೀರ ಯೋಧರ ಶೌರ್ಯಕ್ಕೆ ಕಕ್ಕಾಬಿಕ್ಕಿಯಾದ ಪಾಕ್ ಸೇನೆ!!

ಭಾರತೀಯ ಸೇನೆಯ ಪರಾಕ್ರಮವನ್ನು ಎಷ್ಟು ವರ್ಣಿಸಿದರೂ ಕಮ್ಮಿಯೆ ಎಂದು ಭಾಸವಾಗುತ್ತದೆ. ಪ್ರಪಂಚದಲ್ಲೆ ಅತಿ ಶಕ್ತಿಶಾಲಿ ಸೇನೆಯೊಂದಿದ್ದರೆ ಅದು ಭಾರತೀಯ ಸೇನೆ. ನಮ್ಮ ಸೇನೆಯ ಒಬ್ಬೊಬ್ಬ ಸೈನಿಕನೂ ಒಂದೊಂದು ಅಣು ಬಾಂಬ್. ಶಸ್ತ್ರವೆ ಇಲ್ಲದಿದ್ದರೂ ತಮ್ಮ ರಟ್ಟೆ ಬಲ ಮತ್ತು ಆತ್ಮ ಶಕ್ತಿಯೊಂದರಿಂದಲೆ ಶತ್ರುಗಳನ್ನು ಯಮಪುರಿಗಟ್ಟುವ ಭಾರತೀಯ ಸೇನೆಗೆ ಪ್ರಪಂಚದ ಅಷ್ಟೂ ರಾಷ್ಟ್ರಗಳು ಗೌರವ ನೀಡುತ್ತವೆ.

ಇಂತಹ ಭಾರತೀಯ ಸೇನೆಯು ಮತ್ತೊಮ್ಮೆ ತನ್ನ ಪರಾಕ್ರಮ ಮೆರೆದಿದೆ. ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನ ಸೇನೆಯ ಹಝೀರಾ ಸೇನಾಪಡೆಯ ಪ್ರಧಾನ ಕಚೇರಿಯನ್ನೆ ನಮ್ಮ ಸೈನಿಕರು ಬಾಂಬ್ ದಾಳಿ ಮೂಲಕ ಧ್ವಂಸ ಮಾಡಿದ್ದಾರೆಂದು ವರದಿಯಾಗಿದೆ. ಅಕ್ಟೋಬರ್ 23ರಂದು ಪಾಕಿಸ್ತಾನವು ಭಾರತದ ಪೂಂಛ್ ನಲ್ಲಿರುವ 93 ನೇ ಪದಾತಿಸೈನ್ಯದ ಬ್ರಿಗೇಡ್ ಕೇಂದ್ರ ಕಾರ್ಯಾಲಯದ ಮೇಲೆ ಶೆಲ್ ದಾಳಿ ನಡೆಸಿತ್ತು. ಅದೃಷ್ಟವಶಾತ್ ಭಾರತೀಯ ಸೈನಿಕರ ಪ್ರಾಣಕ್ಕೆ ಹಾನಿಯಾಗಿರಲಿಲ್ಲ. ಪಾಕ್ ದಾಳಿಗೆ ಪ್ರತಿಶೋಧವಾಗಿ ನಮ್ಮ ಸೇನೆಯು ಬಾಂಬ್ ದಾಳಿ ನಡೆಸಿದೆ ಮತ್ತು ಈ ದಾಳಿಯಲ್ಲಿ ಪಾಕ್ ಸೈನಿಕರು ಹರೋಹರ ಎಂದಿದ್ದಾರೆ.

ಹಲವಾರು ಉಗ್ರರ ಕ್ಯಾಂಪ್ ಗಳೂ ಕೂಡಾ ಧ್ವಂಸ

ಪಾಕಿಸ್ತಾನದ ಕಚೇರಿಯ ಪಕ್ಕದಲ್ಲೆ ನಾಯಿಕೊಡೆಗಳಂತೆ ತಲೆ ಎತ್ತಿದ್ದ ಉಗ್ರರ ಶಿಬಿರಗಳೂ ಧೂಳೀಪಟವಾಗಿದೆ ಎಂದು ಸೇನೆ ಸ್ಪಷ್ಟ ಪಡಿಸಿದೆ. 120 ಮಿ.ಮೀ. ಮೊಟಾರ್ಸ್ ಮತ್ತು ಫಿರಂಗಿ ಸಾಮಗ್ರಿಗಳ ಮೂಲಕ ಒಟ್ಟು 12 ಸುತ್ತುಗಳನ್ನು ಆಕ್ರಮಣದಲ್ಲಿ ಬಳಸಲಾಗಿದೆ. ಭಾರತದ ದಾಳಿಗೆ ಬೆದರಿರುವ ಪಾಕಿಸ್ತಾನ ಸದ್ದಿಲ್ಲದೆ ಸ್ಥಳದಿಂದ ಕಾಲ್ಕಿತ್ತಿದೆ. ಭಾರತದ ದಾಳಿಗೆ ಅತ್ತಿನಿಂದ ಪ್ರತಿ ದಾಳಿ ನಡೆದಿಲ್ಲ. ಬಹುಶಃ ಸೈನಿಕರು ಮತ್ತು ಉಗ್ರರೆಲ್ಲ “ಜನ್ನತಿನ ಹೂರ್” ಗಳ ಬಳಿ ತೆರಳಿರಬೇಕು!

ಅಕ್ಟೋಬರ್ 23, 2018 ರಂದು ಪೂಂಚ್ ಮತ್ತು ಝಲ್ಲಾಸಿನ ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ಸೈನ್ಯದ ಆಡಳಿತ ಕೇಂದ್ರ ಕಚೇರಿಗೆ ಭಾರತೀಯ ಸೈನ್ಯವು ಗುಂಡಿನ ಮೂಲಕ ಬಲವಾದ ಸಂಕೇತವನ್ನು ಕಳುಹಿಸಿದೆ ಮತ್ತು ಗಡಿ ಗ್ರಾಮಗಳ ನಿವಾಸಿಗಳು ಕೂಡ ಹೊಗೆ ಹೊರಸೂಸುವಿಕೆಯನ್ನು ಖಾತ್ರಿ ಪಡಿಸಿದ್ದಾರೆ ಎಂದು ಸೇನೆಯ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ

ಇದು ಮೋದಿ ರಾಜ್ಯ. ಇಲ್ಲಿ ಒಂದು ತಲೆಗೆ ಹತ್ತು ತಲೆ ಕಡಿಯಲಾಗುತ್ತದೆ. ಒಂದು ದಾಳಿಗೆ ಪ್ರತಿಯಾಗಿ ಹದಿನೆರಡು ದಾಳಿ ನಡೆಯುತ್ತದೆ. ದಾಳಿಯನ್ನು ಬಾಯಿ ಮಾತಿನಲ್ಲಿ “ಖಂಡಿಸುತ್ತಾ” ಕಣ್ಣಿಗೆ ಮಣ್ಣೆರಚುವ ಕಾಲ ಈಗ ಬದಲಾಗಿದೆ. ಈಗೇನಿದ್ದರು ಶತ್ರು ರಾಷ್ಟ್ರದ ಒಳನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಕಾಲ. ಎಪ್ಪತ್ತು ವರ್ಷಗಳ ಬಳಿಕ ಭಾರತೀಯ ಸೇನೆಗೆ ಸರ್ವತಂತ್ರ ಸ್ವತಂತ್ರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ.

2016 ರ ಸರ್ಜಿಕಲ್ ಸ್ಟ್ರೈಕ್ ಬಳಿಕ 138 ಪಾಕಿಸ್ತಾನಿ ಸೈನಿಕರು ಯಮಲೋಕಕ್ಕೆ ತೆರಳಿದ್ದಾರೆ. ಈ ವರ್ಷ ಮೇ ವರೆಗೆ ಎಲ್.ಓ.ಸಿಯಲ್ಲಿ ಭಾರತೀಯ ಸೈನ್ಯದ ಕಾರ್ಯಾಚರಣೆಯಲ್ಲಿ ಸುಮಾರು 70 ಪಾಕಿಸ್ತಾನಿ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಹೆಮ್ಮೆಯ ವಿಚಾರವೆಂದರೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಸರಹದ್ದಿನಲ್ಲಿರುವ ಒಬ್ಬೆ ಒಬ್ಬ ನಾಗರಿಕನ ಜೀವಕ್ಕೂ ಹಾನಿಯಾಗಿಲ್ಲ. ತನ್ನ ಮತ್ತು ತನ್ನ ಶತ್ರು ದೇಶದವರ ನಾಗರಿಕರ ರಕ್ಷಣೆ ಮಾಡುತ್ತಾ ಕೇವಲ ಶತ್ರುಗಳನ್ನು ಮಾತ್ರ ಸಂಹಾರ ಮಾಡುವ ನಮ್ಮ ಸೇನೆ ನಮ್ಮ ಹೆಮ್ಮೆ. ನಮ್ಮ ಸೇನೆಯ ಬೆನ್ನುಲುಬಾಗಿ ನಿಂತಿರುವ ನಮ್ಮ ಪ್ರಧಾನಿ ನಮ್ಮ ಹೆಮ್ಮೆ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close