ದೇಶಪ್ರಚಲಿತ

ಮತ್ತೊಮ್ಮೆ ಸಿಡಿದೆದ್ದ ಭದ್ರತಾ ಪಡೆ!! ಇಬ್ಬರು ಯೋಧರನ್ನು ಹತ್ಯೆ ಮಾಡಿರುವ ಕೆಂಪು ಉಗ್ರರಿಗೆ ದಿಟ್ಟ ಉತ್ತರ ನೀಡಿದ ಭಾರತೀಯ ಸೇನೆ!!

ಈಗಾಗಲೇ ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಸೇನೆಯ ಮೇಲೆ ಪ್ರತಿದಾಳಿ ನಡೆಸಿದ್ದಲ್ಲದೇ, ಎಪ್ಪತ್ತನೇ ಸೇನಾ ದಿನಾಚರಣೆ ಸಂದರ್ಭದಲ್ಲಿ ಪಾಕಿಸ್ತಾನದ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರವನ್ನೇ ಭಾರತೀಯ ಸೇನೆ ನೀಡಿತ್ತು!! ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಛತ್ತೀಸ್ ಗಡದಲ್ಲಿ ನಕ್ಸಲರ ವಿರುದ್ಧ ಕೈಗೊಂಡ ಕ್ರಮದಿಂದ ಕೆಂಪು ಉಗ್ರರ ಉಪಟಳ ಕಡಿಮೆಯಾಯಿತು ಎನ್ನುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಮಾವೋವಾದಿಗಳು ಸೇನಾನೆಲೆಗಳ ಮೇಲೆ ದಾಳಿ ಮಾಡಿ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಾರೆ.

ಹೌದು…. “ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ಲತ್ತೆಯ ಪೆಟ್ಟು” ಎಂಬ ಗಾದೆ ಮಾತಿನಂತೆ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದ್ದ ಭಾರತೀಯ ಸೇನೆ ಇದೀಗ ಮಾವೋವಾದಿಗಳಿಗೂ ತಕ್ಕ ಪಾಠವನ್ನು ಕಲಿಸಿದೆ. ಈಗಾಗಲೇ ಭಾರತೀಯ ಸೇನೆಯನ್ನು ಕಂಡರೆ ಕಿಡಿಕಾರುತ್ತಾ ದಾಳಿ ನಡೆಸುತ್ತಿದ್ದ ಪಾಕಿಸ್ತಾನಿ ಉಗ್ರಗಾಮಿಗಳಂತೆ ಮಾವೋವಾದಿಗಳು ಕೂಡ ಸೈನ್ಯದ ವಿರುದ್ದ ಕತ್ತಿ ಮಸೆಯುತ್ತಿರುವುದು ಮಾತ್ರ ಬೇಸರ ಸಂಗತಿ.

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರದಿಂದ ಕೆಂಪು ಉಗ್ರರ ಉಪಟಳ ಕಡಿಮೆಯಾಗಿದ್ದರೂ ಇದೀಗ ಮತ್ತೊಮ್ಮೆ ಮಾವೋವಾದಿಗಳು ತಮ್ಮ ಆರ್ಭಟವನ್ನು ಮತ್ತೆ ಆರಂಭಿಸಿದ್ದಾರೆ. ಹಾಗಾಗಿ ಈ ಮಾವೋವಾದಿಗಳು ಸೇನಾನೆಲೆಗಳ ಮೇಲೆ ಮಾಡಿರುವ ದಾಳಿಯಿಂದಾಗಿ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ದಿಟ್ಟ ಪ್ರತಿದಾಳಿ ಮಾಡಿದ್ದು, ಬರೋಬ್ಬರಿ ಇಪ್ಪತ್ತು ನಕ್ಸಲರನ್ನು ಹೊಡೆದುರುಳಿಸಿದ್ದಾರೆ.

ಛತ್ತೀಸ್ ಗಡದ ಸುಕ್ಮಾ ಎಂಬಲ್ಲಿ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಮಾಡಿದ ದಾಳಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದರು. ಇದರಿಂದ ಕೆರಳಿದ ಸೇನೆ ಸತತ ಐದು ಗಂಟೆ ಕಾರ್ಯಾಚರಣೆ ನಡೆಸಿ 20 ಕೆಂಪು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಭಾರತ ತಾನಾಗಿ ಕಾಲ್ಕೆರೆದುಕೊಂಡು ಯಾವುದೇ ದೇಶದ ಮೇಲೆ ಸಮರ ಸಾರಲು ಹೋದ ಇತಿಹಾಸವಿಲ್ಲ. ಆದರೆ, ಪಾಕಿಸ್ತಾನ ರಚನೆಯಾದಂದಿನಿಂದಲೂ ಭಾರತದ ಜತೆಗೆ ಗಡಿ ಕಿರಿಕಿರಿ ಮಾಡುತ್ತಲೇ ಇದೆ. ಅಲ್ಲದೆ, ಆಂತರಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಲೇ ಇದ್ದರು ಕೂಡ ಭಾರತ ಸಹನೆಯಿಂದಲೇ ಎಲ್ಲವನ್ನೂ ತಾಳಿಕೊಳ್ಳುತ್ತಲೇ ಬಂದಿದೆ. ಈಗ ಒಂದೆರಡು ವರ್ಷದಿಂದೀಚೆಗೆ ಭಾರತವೂ ಆಕ್ರಮಣಕಾರಿ ನೀತಿಯ ಮೊರೆ ಹೋಗಿದ್ದು, ಪಾಕಿಸ್ತಾನದ ಕಡೆಯಿಂದಾಗುವ ಪ್ರತಿದಾಳಿಗೂ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದೆ.

ಅಷ್ಟೇ ಅಲ್ಲದೇ, ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಗೆ ಕಠಿಣ ಕ್ರಮದ ಜತೆಗೆ, ಜಮ್ಮು ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದ ಪ್ರತ್ಯೇಕತಾವಾದಿಗಳ ವಿರುದ್ಧವೂ ಹಲವು ಆಯಾಮದ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇತ್ತ ದೇಶದೊಳಗೆ ಆಕ್ರಂಧನಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿರುವ ಮಾವೋವಾದಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಭದ್ರತಾ ಪಡೆ ಈಗಾಗಲೇ 20 ನಕ್ಸಲರನ್ನು ಹೊಡೆದುರುಳಿಸಿದರೂ ಕೂಡ ನಮ್ಮ ಮಾಧ್ಯಮಗಳು ಮಾತ್ರ ತುಟಿಕ್ ಪಿಟಿಕ್ ಎನ್ನದೆ ಮೌನವಹಿಸಿದೆ ಎನ್ನುವುದೇ ಬೇಸರದ ಸಂಗತಿ!!!

ಈ ಹಿಂದೆ ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ ಮಾವೋವಾದಿಗಳು ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಪತ್ರಗಳನ್ನು ಬಸ್ತರ್, ಛತ್ತೀಸ್‍ಘಡ ಮೊದಲಾದ ಕಡೆಗಳಲ್ಲಿ ಹಂಚಿದ್ದ ಮಾವೋಗಳು, ಸಲೆಬ್ರಿಟಿಗಳು ಹಾಗೂ ಪ್ರಖ್ಯಾತರು ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಪರ ನಿಲ್ಲಬೇಕು ಹಾಗೂ ಅವರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಬಗ್ಗೆ ಧ್ವನಿಯೆತ್ತಬೇಕು ಎಂದು ಪತ್ರದಲ್ಲಿ ಮಾವೋವಾದಿಗಳು ಹೇಳಿದ್ದರು.

ಅಷ್ಟೇ ಅಲ್ಲದೆ, ಅಕ್ಷಯ್ ಕುಮಾರ್ ಹಾಗೂ ಸೈನಾ ಯೋಧರ ಪರವಾಗಿ ನಿಲ್ಲಬಾರದಿತ್ತು ಎಂದು ಈ ಪತ್ರದಲ್ಲಿ ಹೇಳಲಾಗಿದ್ದು, ಕಳೆದ ಮಾರ್ಚ್ ನಲ್ಲಿ ಸುಕ್ಮಾದಲ್ಲಿ ಮಡಿದ 12 ಮಂದಿ ಯೋಧರ ಕುಟುಂಬಕ್ಕೆ ನಟ ಅಕ್ಷಯ್ ಕುಮಾರ್ ತಲಾ 9 ಲಕ್ಷ ರೂ. ಹಣವನ್ನು ನೀಡಿದ್ದರು. ಅಲ್ಲದೇ ಹುತಾತ್ಮರ ಕುಟುಂಬಕ್ಕೆ ದೇಶದ ನಾಗರಿಕರು ನೇರವಾಗಿ ಆರ್ಥಿಕ ಸಹಾಯ ಮಾಡಬಹುದಾದ “ಭಾರತ್ ಕೀವೀರ್ ಡಾಟ್ ಕಾಮ್” ಎನ್ನುವ ಸರ್ಕಾರಿ ಪೆÇೀರ್ಟಲ್‍ಗೆ ಚಾಲನೆ ನೀಡಿದ್ದರು. ಇವರ ಬಳಿಕ ಆಟಗಾರ್ತಿ ಸೈನಾ ಕೂಡ ಯೋಧರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದು, ಸೈನಾ 12 ಯೋಧರ ಕುಟುಂಬಕ್ಕೆ ತಲಾ 50,000 ರೂಪಾಯಿ ಪರಿಹಾರ ಧನವನ್ನು ನೀಡಿದ್ದರು. ಈ ಕುರಿತು ಕೆಂಡಾಮಂಡಲರಾಗಿದ್ದ ಮಾವೋಗಳು ಎಚ್ಚರಿಕೆಯ ಪತ್ರವನ್ನು ನೀಡಿದ್ದರು.

ಇದಾದ ಕೆಲವೇ ತಿಂಗಳ ಬಳಿಕ ಜಾರ್ಖಂಡ್ ನ ಲಟೇಹಾರ್ ಜಿಲ್ಲೆಯ ಗರು ಅರಣ್ಯದಲ್ಲಿ ಜಿಲ್ಲೆಯ ಗರು ಪೊಲೀಸ್ ಠಾಣಾ ವ್ಯಾಪ್ತಿಯ ಭೀಟರ್ ಪಂದ್ರಾ ಗ್ರಾಮದ ಸಮೀಪ ಮಾವೋವಾದಿಗಳ ಚಲನವಲನದ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಬಿಹಾರ್ – ಜಾರ್ಖಂಡ್ ವಿಶೇಷ ಪ್ರದೇಶ ಸಮಿತಿ(ಬಿಜೆಎಸ್’ಎಸಿ)ಗೆ ಸದಸ್ಯನ ರ್ಯಾಕ್ ಗೆ ಪದೋನ್ನತಿ ಹೊಂದಿದ್ದ ಮಾವೋವಾದಿ ನಾಯಕ ಬಿರ್ಬಾಲ್ ಓರಾನ್ ನನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆಗೈದಿತ್ತು!!

ಇದೇ ಸಂದರ್ಭದಲ್ಲಿ ಇತರ ಮಾವೋವಾದಿಗಳು ಕೂಡ ಗಾಯಗೊಂಡಿದ್ದು, ಗಾಯಗೊಂಡ ಮಾವೋವಾದಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದರು. ಇದೀಗ ಛತ್ತೀಸ್ ಗಡದ ಸುಕ್ಮಾ ಎಂಬಲ್ಲಿ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಮಾಡಿದ ದಾಳಿಯಲ್ಲಿ ಇಬ್ಬರು ಯೋಧರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದರಿಂದ ಕೆರಳಿದ ಸೇನೆ ಸತತ ಐದು ಗಂಟೆ ಕಾರ್ಯಾಚರಣೆ ನಡೆಸಿ 20 ಕೆಂಪು ಉಗ್ರರನ್ನು ಹತ್ಯೆ ಮಾಡಿದ್ದಾರೆ.

“ಪರಿಸ್ಥಿತಿ ತಿಳಿಯಾಗಿದೆ ಎಂದು ಭದ್ರತಾ ಸಿಬ್ಬಂದಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಆಗ ನಕ್ಸಲರು ಭಾರಿ ಗುಂಡಿನ ದಾಳಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ನಮ್ಮ ಸಿಬ್ಬಂದಿ ಸಹ ಗುಂಡಿನ ಸುರಿಮಳೆಗೈದರು. ದಾಳಿಯಲ್ಲಿ 20 ನಕ್ಸಲರನ್ನು ಹತ್ಯೆ ಮಾಡಲಾಗಿದೆ” ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ಪಡೆಯ ವಿಶೇಷ ಡಿಜಿ ಡಿ.ಎಂ. ಅಸ್ವಥಿ ಮಾಹಿತಿ ನೀಡಿದ್ದಾರೆ. ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ಮತ್ತು ಜಂಟಿ ವಿಶೇಷ ಕಾರ್ಯಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಇದುವರೆಗೂ ಹತ್ಯೆ ಮಾಡಲಾಗಿರುವ ನಕ್ಸಲರ ದೇಹ ಪತ್ತೆಯಾಗಿಲ್ಲ, ಹುಡುಕಾಟ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಸುಕ್ಮಾದಲ್ಲಿ ನಕ್ಸಲರು ದಾಳಿ ಮಾಡಿರುವ ಹಿನ್ನೆಲೆ ಇರುವುದರಿಂದ ಭದ್ರತಾ ಸಿಬ್ಬಂದಿ ಹಗಲು-ರಾತ್ರಿ ನಕ್ಸಲರ ಬೇಟೆಗಾಗಿ ಹಾತೊರೆಯುತ್ತಿದ್ದು, ಅದಕ್ಕಾಗಿ ಅಪಾರ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ. ಪಾಕ್ ಉಗ್ರರ ಉಪಟಳ ದೇಶದ ಗಡಿ ಭಾಗದಲ್ಲಾದರೇ ನಮ್ಮ ದೇಶದವರೇ ಆದ ಮಾವೋಗಳು ನಮ್ಮ ಸೈನಿಕರ ವಿರುದ್ದ ಹೋರಾಡುತ್ತಿದ್ದಾರೆ ಎಂದರೆ ನಿಜಕ್ಕೂ ಕೂಡ ಬೇಸರದ ವಿಚಾರ.

– ಅಲೋಖಾ

Tags

Related Articles

Close