ಪ್ರಚಲಿತ

ರಾಜಯೋಗ ಇರುವ ಮೋದಿ ಅಖಂಡ ಭಾರತವನ್ನು ಆಳುತ್ತಿದ್ದಾರೆ ಎಂದರೆ ಭಾರತಕ್ಕಿಲ್ಲ ಸೋಲು! ೭೦೦ ವರ್ಷ ಇತಿಹಾಸ ಪ್ರಸಿದ್ಧ ದೇವಾಲಯದ ಅರ್ಚಕರ ಮಾತು!

ಅಖಂಡ ಭಾರತದ ಇತಿಹಾಸದಲ್ಲಿ ಭಾರತವನ್ನಾಳಿದ ರಾಜರುಗಳ ಪೈಕಿ ಅನೇಕರು ದೇಶ ಧರ್ಮಕ್ಕಾಗಿ ಹೋರಾಟ ನಡೆಸಿದರೆ ಇನ್ನೂ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೋರಾಟ ನಡೆಸಿರುವ ಕಥೆ ಪುರಾಣ ನಮ್ಮ ಕಣ್ಣ ಮುಂದೆ ಇದೆ. ಇದು ಕೇವಲ ಇತಿಹಾಸದಲ್ಲಿ ಮಾತ್ರ ಇಲ್ಲ ಸದ್ಯದ ಪರಿಸ್ಥಿತಿಯಲ್ಲಿ ಕೂಡ ಭಾರತದ ಸ್ಥಿತಿ ಇದೇ ರೀತಿ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನಾಳಿದ ಕಾಂಗ್ರೆಸ್‌ ಪಕ್ಷವು ಕೇವಲ ತನ್ನ ಕುಟುಂಬಕ್ಕಾಗಿ ದೇಶವನ್ನು ಬಳಿಸಿಕೊಂಡಿತೇ ವಿನಃ ದೇಶವನ್ನು ಅಭಿವೃದ್ಧಿ ಮಾಡಲೇ ಇಲ್ಲ. ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನು ಅನೇಕರು ಆಳ್ವಿಕೆ ನಡೆಸಿದರು, ಆದರೆ ಇಡೀ ದೇಶ ಇಡೀ ಜಗತ್ತು ಇಂದು ಒಬ್ಬನ ಹೆಸರನ್ನು ಬಳಿಸಿಕೊಂಡು ದಿನನಿತ್ಯ ಒಂದಲ್ಲಾ ಒಂದು ಚರ್ಚೆ ನಡೆಸುತ್ತಿದೆ ಎಂದರೆ ಆತನಲ್ಲಿ ಒಂದು ಅಪರೂಪದ ಶಕ್ತಿ ಇರಲೇಬೇಕು ಅಲ್ಲವೇ. ಹೌದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲೇ ಒಂದು ಶಕ್ತಿ ಇದೆ ಮತ್ತು ಒಂದೇ ಮಾತಿನಲ್ಲಿ ಹೇಳುವುದಾದರೆ ಮೋದಿಯವರದು ರಾಜಯೋಗ ಎಂಬುದು ಸ್ಪಷ್ಟ.!

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಸಂಕಲ್ಪ ಮಾಡಿ ಈಗಾಗಲೇ ದೇಶಾದ್ಯಂತ ಹೊಸ ಹೊಸ ರೀತಿಯ ಅಭಿಯಾನ ಆರಂಭವಾಗಿದೆ, ಅನೇಕ ಸಂಘ ಸಂಸ್ಥೆಗಳು ಮೋದಿಗಾಗಿ ಶ್ರಮಿಸುತ್ತಿದೆ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರೆ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಮೋದಿ ದೇಶದ ಜನರಲ್ಲಿ ಯಾವ ರೀತಿ ಬೆರೆತು ಹೋಗಿದ್ದಾರೆ ಎಂದು. ಹೌದು ಹೇಗಾದರೂ ಮಾಡಿ ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಬಲವಾದ ನಿರ್ಧಾರ ದೇಶದ ಜನರು ಕೈಗೊಂಡಿದ್ದು ಶಿವರಾತ್ರಿ ಸಂದರ್ಭದಲ್ಲಿ ಮಂಗಳೂರು ನಗರದ ಮೂಡಬಿದಿರೆ ಎಂಬಲ್ಲಿ ಜವನೆರ್ ಬೆದ್ರ ಎಂಬ ಯುವ ಸಂಘಟನೆಯ ಕಾರ್ಯಕರ್ತರು ಪುರಾತನ ದೇವಾಲಯಕ್ಕೆ ಭೇಟಿ ನೀಡಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಮಾತ್ರವಲ್ಲದೆ ಭಾರತೀಯ ಸೇನಾ ಯೋಧರಿಗೂ ಯಾವುದೇ ತೊಂದರೆಯಾಗದಂತೆ ಕಾಪಾಡಿಕೊಳ್ಳಲು ಪರಶಿವನಲ್ಲಿ ಪ್ರಾರ್ಥಿಸಿದ್ದರು.

ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರು ಹೇಳಿದ ಮಾತು ನಿಜಕ್ಕೂ ಅದ್ಭುತ, ಯಾಕೆಂದರೆ ಯಾವುದೇ ರಾಜಕೀಯ ಪಕ್ಷಗಳಿಗೆ ಅಥವಾ ಯಾವ ರಾಜಕಾರಣಿಯ ಹಂಗಿನಲ್ಲೂ ಇರದ ದೇವಾಲಯದ ಅರ್ಚಕರು ಘಂಟಾಘೋಷವಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಮತ್ತು ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಾರೆ ಎಂದರೆ ಅವರ ಮಾತಿನ ಅರ್ಥ ನಾವು ಅರಿತುಕೊಳ್ಳಬೇಕು.!

ಇತಿಹಾಸ ಪ್ರಸಿದ್ಧ ದೇವಾಲಯದ ಅರ್ಚಕರ ಮಾತು!

ಜವನೆರ್ ಬೆದ್ರ ಸಂಘಟನೆಯ ಕಾರ್ಯಕರ್ತರು ನರೇಂದ್ರ ಮೋದಿಯವರ ಹೆಸರಿನಲ್ಲಿ ಪೂಜೆ ಸಲ್ಲಿಸಿದ ನಂತರ ಪುರಾತನ ದೊಡ್ಮನೆ ಚಂದ್ರಶೇಖರ ದೇವಾಲಯದ ಅರ್ಚಕರು ಮಾತನಾಡಿದ್ದರು. ಇತಿಹಾಸದ ಬಗ್ಗೆ ಮಾತನಾಡಿದ ಅರ್ಚಕರು ನೇರವಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಬಗ್ಗೆ ಉಲ್ಲೇಖಿಸಿದರು. ನವ ಭಾರತ ನಿರ್ಮಾಣಕ್ಕಾಗಿ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರು ಸೋಲಲು ಸಾಧ್ಯವೇ ಇಲ್ಲ, ಯಾಕೆಂದರೆ ಅವರದು ರಾಜಯೋಗ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ರಾಜಯೋಗ ಇರುವ ವ್ಯಕ್ತಿ ದೇಶವನ್ನು ಆಳುತ್ತಿದ್ದರೆ ಪ್ರಜೆಗಳ ಸಮೇತ ದೇಶ ಸುಭದ್ರವಾಗಿರುತ್ತದೆ, ದೇಶವು ಏಳಿಗೆ ಹೊಂದುತ್ತಲಿದೆ ಎಂಬುದು ಈಗಾಗಲೇ ನಮ್ಮ ಗಮನಕ್ಕೆ ಬಂದಿರುತ್ತದೆ. ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚಾಗುತ್ತಿದೆ ಎಂದರೆ ಅದಕ್ಕೆ ಕಾರಣ ಸನಾತನ ಧರ್ಮ ಮತ್ತು ಧರ್ಮ‌ ರಕ್ಷಕ ನರೇಂದ್ರ ಮೋದಿಯಿಂದ‌ ಮಾತ್ರ ಎಂದು ಹೇಳಿಕೊಂಡಿದ್ದಾರೆ. ಸನಾತನ ಧರ್ಮ ಈವರೆಗೆ ಯಾರಿಗೂ ಕೇಡು ಉಂಟು ಮಾಡಿಲ್ಲ ಮತ್ತು ಮುಂದೆ ಮಾಡುವುದೂ ಇಲ್ಲ, ಹೀಗಿರುವಾಗ ಮೋದಿ ನಮ್ಮ ದೇಶಕ್ಕೆ ಸಿಕ್ಕಿರುವ ಅಪರೂಪದ ಮಾಣಿಕ್ಯ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಇಂದು ಭಾರತ ಜಗತ್ತಿನ ಮುಂದೆ ವಿಜೃಂಭಿಸುತ್ತಿದೆ ಮತ್ತು ಅನಿವಾಸಿ ಭಾರತೀಯರು ಕೂಡ ನಾವು ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದು ಒಬ್ಬ ವ್ಯಕ್ತಿ ಮಾಡಿದ ಚಮತ್ಕಾರ, ಕಳೆದ ೬೦-೭೦ ವರ್ಷಗಳಲ್ಲಿ ಮಾಡಿದ ಕೆಲಸವನ್ನು ಕೇವಲ ೫ ವರ್ಷದಲ್ಲಿ ಮಾಡಿ ಮುಗಿಸಿದ ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗಿ ಆಯ್ಕೆ ಆಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ದೇಶ ಕಾಯುವ ಸೈನಿಕನಿಗೆ ನಾವು ಯಾವ ರೀತಿ ಗೌರವ ನೀಡುತ್ತೇವೆಯೋ ಅದೇ ರೀತಿ ಇಂದು ಪ್ರಧಾನಿಗೆ ಗೌರವ ನೀಡಲಾಗುತ್ತಿದೆ. ಇದಕ್ಕೆ ಕಾರಣ ಸೈನಿಕನ ರೀತಿಯಲ್ಲಿ ಮೋದಿ ಕೂಡ ಭಾರತವನ್ನು ಕಾಯುತ್ತಿದ್ದಾರೆ ಎಂಬ ನಂಬಿಕೆ ಜನರಲ್ಲಿದೆ ಎಂದರು. ದೇಶವನ್ನು ಸೋಲಲು ಬಿಡದ ಮೋದಿಯವರನ್ನು ಸೋಲಲು ಈ ದೇಶದ ಜನರು ಬಿಡುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದ ವೇಳೆ ಸಂಘಟನೆಯ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಸೇರಿದ್ದು ಎಲ್ಲರ ಸಂಕಲ್ಪ ಒಂದೇ ಆಗಿತ್ತು “ಮೋದಿ ಮತ್ತೊಮ್ಮೆ.”

ಅದೇನೇ ಇರಲಿ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಯಾರೂ ಕೂಡ ರಾಜಕಾರಣಿಯ ಗುಣ ಕಾಣುತ್ತಿಲ್ಲ ಬದಲಾಗಿ ಅಪ್ಪಟ ಭಾರತೀಯ, ದೇಶಪ್ರೇಮಿ ಮತ್ತು ಧರ್ಮ ರಕ್ಷಕ ಎಂಬ ಗುಣವನ್ನು ನೋಡುತ್ತಿದ್ದಾರೆ ಎಂಬುದಂತು ಸ್ಪಷ್ಟ.!

-ಪಿ ಆರ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close