ಪ್ರಚಲಿತ

ಬ್ರೇಕಿಂಗ್! ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ನಡೆಸಿದ ಭಾರತ! ಬೆಳ್ಳಂಬೆಳಗ್ಗೆ ಪಾಕ್ ಸೈನಿಕರನ್ನೇ ಉಡೀಸ್ ಮಾಡಿದ ಭಾರತೀಯ ಸೇನೆ!

ಭಾರತದ ವಿರುದ್ಧ ಪದೇ ಪದೇ ಬಾಲ ಬಿಚ್ಚುತ್ತಾ ಖ್ಯಾತೆ ತೆರೆದು ಜಗಳಕ್ಕೆ ಬರುವ ಪಾಪಿ ಪಾಕಿಸ್ತಾನಕ್ಕೆ ಈ ಬಾರಿಯ ಏಟು ಯಾವ ರೀತಿ ಇದೆ ಎಂದರೆ ಪಾಕಿಸ್ತಾನ ಜಗತ್ತಿನ ಮುಂದೆ ಮೂಲೆಗುಂಪಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಡೆಸಿ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿದ ಮೋದಿ ಸರಕಾರ ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ‌ ಎಂಬುದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿದ ಪಾಕ್ ಸೇನೆಗೆ ತಕ್ಕ ತಿರುಗೇಟು ನೀಡಿದ ಭಾರತೀಯ ಸೇನೆ ಬರೋಬ್ಬರಿ 10 ಪಾಕ್ ಸೈನಿಕರನ್ನೇ ಉಡೀಸ್ ಮಾಡಿದೆ.!

ಪಾಕ್‌ಗೆ ಮತ್ತೊಂದು ಆಘಾತ ನೀಡಿದ ಭಾರತ!

ಭಾರತ ಯಾವ ರೀತಿ ಬಲಿಷ್ಠವಾಗಿದೆ ಎಂಬುದು ಪಾಕಿಸ್ತಾನಕ್ಕೆ ಅರಿವಾಗಿದ್ದರೂ ಕೂಡ ತನ್ನ ನರಿ ಬುದ್ದಿ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಇಂದು ಭಾರತೀಯ ಸೇನೆ ಮತ್ತೊಂದು ಆಘಾತ ನೀಡಿದೆ. ಯಾಕೆಂದರೆ ಇಂದು ಜಮ್ಮು ಕಾಶ್ಮೀರದ ರಾವಲ್‌ಕೋಟ್‌ನ ರಾಖ್‌ಚಿಕರಿ ಸೆಕ್ಟರ್‌ನಲ್ಲಿ ಕಾಶ್ಮೀರದ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸೈನಿಕರು ಫೈರಿಂಗ್ ನಡೆಸಿದ್ದರು. ಆದರೆ ಅದಕ್ಕೆ ತಕ್ಕ ತಿರುಗೇಟು ನೀಡಿದ ಭಾರತೀಯ ಸೇನೆ ಪಾಕ್ ಸೈನಿಕರನ್ನು ಗುರಿಯಾಗಿರಿಸಿ ಪ್ರತಿದಾಳಿ ನಡೆಸಿದ್ದರು. ಭಾರತೀಯ ಸೇನೆಯ ದಾಳಿಗೆ ಪಾಕಿಸ್ತಾನದ ಹತ್ತು ಸೈನಿಕರು ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ. ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡುವ ಪಾಕಿಸ್ತಾನಕ್ಕೆ ಇಂದು ಮತ್ತೊಂದು ಏಟು ನೀಡಿದ ಭಾರತ, ಮತ್ತಷ್ಟು ದಾಳಿ ನಡೆಸುವ ಎಚ್ಚರಿಕೆ ಕೂಡ ನೀಡಿದೆ.!

ಸರ್ಜಿಕಲ್ ಸ್ಟ್ರೈಕ್ ನಂತರದಲ್ಲಿ ಬಾಲ ಮುದುರಿಕೊಂಡು ಕೂತಿದ್ದ ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ಸಂಚು ರೂಪಿಸುತ್ತಲೇ ಇತ್ತು. ಆದರೆ ಭಾರತ ಮತ್ತಷ್ಟು ಎಚ್ಚರಿಕೆಯ ಕ್ರಮ‌ ಕೈಗೊಂಡಿದ್ದರಿಂದ ಪಾಕಿಸ್ತಾನದ ಉಗ್ರರಿಗೆ ಭಾರತದೊಳಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಗಡಿಯಲ್ಲೇ ಪಾಕ್ ಉಗ್ರರನ್ನು ಹೊಡೆದುರುಳಿಸುತ್ತಿದ್ದ ಭಾರತೀಯ ಸೇನೆ, ಎಲ್ಲಾ ರೀತಿಯ ಪ್ರತಿದಾಳಿಗೂ ಸಿದ್ಧವಾಗಿತ್ತು. ಇದರ ಮಧ್ಯೆ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿ ಭಾರತವನ್ನು ಮತ್ತಷ್ಟು ಕೆರಳುವಂತೆ ಮಾಡಿ, ಪಾಕಿಸ್ತಾನದ ಮೇಲೆ ದಾಳಿ ಮಾಡಿ ೨೫೦ಕ್ಕೂ ಹೆಚ್ಚು ಪಾಕ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ದಾಳಿಯ ಉತ್ತರ ನೀಡಿದ ಭಾರತೀಯ ಸೇನೆ ಕಣಿವೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಇದರ ನಡುವೆ ಪಾಕಿಸ್ತಾನ ಮತ್ತೆ ಕಾಶ್ಮೀರದ ನಾಗರಿಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದು ಇದೀಗ ಪ್ರತಿದಾಳಿಗೆ ಪಾಕ್ ಸೈನಿಕರು ನರಕದ ದಾರಿ ಹಿಡಿಯುವಂತಾಗಿದೆ. ಅದೇನೇ ಇರಲಿ ಭಾರತದ ಮೇಲೆ ದಾಳಿ ಮಾಡಲು ಸಂಚು ರೂಪಿಸುವ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದ ಭಾರತೀಯ ಸೇನೆ ಮತ್ತಷ್ಟು ದಾಳಿಯ ಎಚ್ಚರಿಕೆ ನೀಡಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close