ಪ್ರಚಲಿತರಾಜ್ಯ

ನೋಟ್‍ಬ್ಯಾನ್ ಜಿಎಸ್‍ಟಿ ವಿರೋಧಿಗಳಿಗೆ ಮೋದಿ ಬಿಟ್ಟರು ಬ್ರಹ್ಮಾಸ್ತ್ರ!! ಈ ಬಾರಿ ಬೆಳಕಿಗೆ ಬಂದ ಅಂಶವೇನು ಗೊತ್ತಾ?!

“ಅಪನಗದೀಕರಣವು ಮೋದಿ ಸರ್ಕಾರದ ಮಹಾಪ್ರಮಾದ. ಸಂಘಟಿತ ಲೂಟಿ ಮತ್ತು ಕಾನೂನಾತ್ಮಕ ದರೋಡೆ” ಎಂದು ಬೊಬ್ಬಿರಿದಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅದೆಷ್ಟೋ ಮಂದಿ ನರೇಂದ್ರ ಮೋದಿ ಸರ್ಕಾರವು ಹಳೆ ನೋಟು ಚಲಾವಣೆ ರದ್ದು ಮಾಡಿದ್ದರಿಂದ ಇದುವರೆಗೆ ಯಾವುದೇ ಆರ್ಥಿಕ ಲಾಭ ಆಗಿಲ್ಲ ಹಾಗಾಗಿ ಜಿಡಿಪಿ ಮೇಲೆ ಗಣನೀಯವಾಗಿ ಪರಿಣಾಮ ಬೀರಿದೆ ಎಂದು ಹೇಳಿದವರಿಗೆಲ್ಲ ಇದೀಗ ಅಘಾತವೊಂದು ಕಾದಿದೆ!!

ಹೌದು… ನೋಟು ನಿಷೇಧ, ಜಿಎಸ್’ಟಿ ಜಾರಿ, ತ್ರಿವಳಿ ತಲಾಖ್ ರದ್ದು ಮಸೂದೆ, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ಹೀಗೆ ಯಾವುದೇ ಪ್ರಮುಖ ನಿರ್ಧಾರ ಕೈಗೊಂಡರೂ ಮೋದಿ ಸರ್ಕಾರದ ನಿರ್ಧಾರವನ್ನೇ ತೆಗಳುತ್ತಿರುವ ಬುದ್ದಿಜೀವಿಗಳು ಮೋದಿ ಸೋತು ಸುಣ್ಣವಾದರು ಎಂದು ಗಹಗಹಿಸಿ ನಕ್ಕಿದ್ದೇ ನಕ್ಕಿದ್ದು!! ಅದರಲ್ಲೂ ಕೇಂದ್ರ ಸರ್ಕಾರ ಭ್ರಷ್ಟಾಚಾರ ತೊಲಗಿಸಲು ಹಾಗೂ ತೆರಿಗೆ ಪದ್ಧತಿ ಸುಧಾರಣೆ ಮಾಡಲು ನೋಟುನಿಷೇಧ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೊಳಿಸಿದಾಗಲಂತೂ ಈ ಮೋದಿ ವಿರೋಧಿ ಪಡೆ ಆರ್ಥಿಕ ತಜ್ಞರಂತೆ, ಭಾರತದ ಆರ್ಥಿಕತೆ ಕುಸಿಯುತ್ತದೆ, ಜಿಡಿಪಿ ದರ ನೋಡಿ ಕುಸಿಯುತ್ತಿದೆ, ಮೋದಿ ಅವರು ದೇಶದ ವಿತ್ತೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದರು ಎಂದು ಬೊಬ್ಬೆ ಹಾಕಿದರು.

ಆದರೆ ಬೊಬ್ಬೆ ಹಾಕಿದ ಬಾಯಿ ಇದೀಗ ತೆಪ್ಪಗಾಗಿದ್ದಲ್ಲದೇ, ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ಬೆದರಿ ಹೋಗಿದ್ದಂತೂ ಅಕ್ಷರಶಃ ನಿಜ!! ಅದಕ್ಕೆ ಸಾಕ್ಷಿ ಎಂಬಂತೆ ನೋಟು ಅಮಾನ್ಯೀಕರಣ, ಜಿಎಸ್’ಟಿ ಜಾರಿಯಿಂದಾಗಿ ಸ್ವಲ್ಪ ಕಳೆಗುಂದಿದ್ದ ಭಾರತದ ಆರ್ಥಿಕತೆ ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ. ತ್ವರಿತ ಬೆಳವಣಿಗೆಯ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪೂರಕವಾಗಿ ಭಾರತದ ಜಿಡಿಪಿ ಬೆಳವಣಿಗೆ ದರ 2ನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್)ದಲ್ಲಿದ್ದ ಶೇಕಡ 6.3ರಿಂದ 3ನೇ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್)ದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಿದೆ.

ಈ ಮೂಲಕ ಚೀನಾವನ್ನು ಹಿಂದಿಕ್ಕಿ ಅರ್ಥ ವ್ಯವಸ್ಥೆಯ ಕುರಿತು ಧನಾತ್ಮಕ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಇದರ ಪರಿಣಾಮವಾಗಿ 2017-18ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಈಗಿರುವ ನಿರೀಕ್ಷಿತ ಶೇಕಡ 6.6 ಮೀರಬಹುದೆಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ, ನೋಟು ಅಪಮೌಲ್ಯ ಮತ್ತು ಜಿಎಸ್ ಟಿ ಜಾರಿಯಿಂದಾಗಿ ಕುಸಿತದ ಹಾದಿಯಲ್ಲಿದ್ದ ದೇಶದ ಅಭಿವೃದ್ಧಿ ದರ ಚೇತರಿಕೆ ಕಾಣಲು ಶುರು ಮಾಡಿದ್ದು, ಸಹಜವಾಗಿಯೇ ಕೇಂದ್ರ ಸರಕಾರಕ್ಕೆ ಖುಷಿ ತಂದಿದೆ.

ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದರಿಂದ ಭಾರತದ ಜಿಡಿಪಿ ದರ ಇಳಿಕೆಯಾದ್ದರಿಂದ ಚೀನ ಮೊದಲ ಸ್ಥಾನಕ್ಕೆ ಹೋಗಿತ್ತು. ಸದ್ಯ ನೆರೆಯ ಅಭಿವೃದ್ಧಿ ದರ ಶೇ. 6.8ರಷ್ಟಿದ್ದು, ಬುಧವಾರ ಡಿ.ವಿ. ಸದಾನಂದ ಗೌಡ ನೇತೃತ್ವದ ಕೇಂದ್ರೀಯ ಸಾಂಖೀಕ ಇಲಾಖೆ ವಾಸ್ತವ ದತ್ತಾಂಶ ಬಿಡುಗಡೆ ಮಾಡಿದೆ.

ಈ ಬಗ್ಗೆ ಮೂಡೀಸ್ ಹೇಳಿದ್ದೇನು ಗೊತ್ತೇ??

ಈ ಹಿಂದೆ…. ಸರಕು ಮತ್ತು ಸೇವಾ ತೆರಿಗೆ, ಭೂಸ್ವಾಧೀನ ತಿದ್ದುಪಡಿ ಮಸೂದೆಯಂತಹ ಮಹತ್ವದ ಆರ್ಥಿಕ ಸುಧಾರಣಾ ಕ್ರಮಗಳು ನೆನೆಗುದಿಗೆ ಬಿದ್ದಿರುವುದರಿಂದ ಭಾರತದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯವಾಗಿ ತಗ್ಗಲಿದೆ ಎಂದು ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಮೂಡೀಸ್’ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು!! ಆದರೆ ಇದೀಗ ಭಾರತದ ಆರ್ಥಿಕತೆಯು ನೋಟು ಅಮಾನ್ಯ ಮತ್ತು ಜಿಎಸ್‍ಟಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವದ ಪ್ರಮುಖ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಮೂಡಿಸ್ ಹೇಳಿದೆ.

ಆದರೆ, ಇದೇ ವೇಳೆ ಜಿಡಿಪಿ ಬೆಳವಣಿಗೆ ಅಂದಾಜನ್ನು ಶೇ. 7.6ಕ್ಕೆ ನಿಗದಿಗೊಳಿಸಿದ್ದು, ಕಳೆದ ನವೆಂಬರ್‍ನಲ್ಲಿ ಮೂಡೀಸ್ ಭಾರತದ ರೇಟಿಂಗ್ ಅನ್ನು 13 ವರ್ಷಗಳ ನಂತರ ಏರಿಕೆ ಮಾಡಿ, ಬಿಎಎ3 ಇಂದ ಬಿಎಎ2ಗೆ ಹೆಚ್ಚಿಸಿತ್ತು. ಅಲ್ಲದೆ ಮುನ್ನೋಟವನ್ನು ಧನಾತ್ಮಕ ಎಂಬುದರಿಂದ ಸ್ಥಿರ ಎಂಬುದಾಗಿ ದಾಖಲಿಸಿತ್ತು. ಹಾಲಿ ವಿತ್ತ ವರ್ಷದಲ್ಲಿ ಜಿಡಿಪಿ ಶೇ. 7.6 ಮತ್ತು 2018-19ರಲ್ಲಿ ಜಿಡಿಪಿ ಶೇ.7.5ರಷ್ಟಾಗಿರಲಿದೆ ಎಂದು ಮೂಡೀಸ್ ಅಂದಾಜಿಸಿದೆ. ಬಜೆಟ್‍ನಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಸುಸ್ಥಿರಗೊಳಿಸುವ ಕ್ರಮಗಳಿವೆ. ಈ ಭಾಗದ ಆರ್ಥಿಕತೆಯು ನೋಟು ಅಮಾನ್ಯ ನಿರ್ಧಾರದಿಂದ ಆಘಾತಕ್ಕೀಡಾಗಿತ್ತು. ಅಲ್ಲದೆ ಬ್ಯಾಂಕ್ ಮರುಬಂಡವಾಳ ಯೋಜನೆ ಕಾಲ ಕಳೆದಂತೆ ಅಭಿವೃದ್ಧಿ ದರ ಹೆಚ್ಚಲು ಕಾರಣವಾಗಬಲ್ಲದು ಎಂದಿದೆ.

ಇನ್ನು ರಾಯ್ಟರ್ಸ್ ಪ್ರಕಾರ, ಭಾರತದ ವಾರ್ಷಿಕ ಬೆಳವಣಿಗೆ ದರ ಅಕ್ಟೋಬರ್-ಡಿಸೆಂಬರ್ ನಲ್ಲಿ ಶೇಕಡ 6.9 ಎಂದಿತ್ತು. ಅಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಇತ್ತೀಚಿನ ನಿರೀಕ್ಷೆ ಪ್ರಕಾರ, ಭಾರತದ ವಾರ್ಷಿಕ ಬೆಳವಣಿಗೆ ದರ 2018ರಲ್ಲಿ ಶೇಕಡ 7.4 ಮತ್ತು 2019ರಲ್ಲಿ ಶೇಕಡ 7.8. ಆಗಿದೆ ಎಂದು ಹೇಳಿದೆ!! ಇನ್ನು ಹದಿಮೂರು ವರ್ಷಗಳಲ್ಲಿ ಮೊದಲ ಬಾರಿಗೆ 2017ರಲ್ಲಿ ಭಾರತದ ರೇಟಿಂಗನ್ನು ಮೂಡಿಸ್ ಏರಿಕೆ ಮಾಡಿತ್ತಲ್ಲದೇ ಅನಾಣ್ಯೀಕರಣ ಮತ್ತು ಜಿಎಸ್’ಟಿ ಜಾರಿ ಪರಿಣಾಮ ಅಂದಾಜಿಸಿ, ಭಾರತದ ಜಿಡಿಪಿ ದರ 2018ರಲ್ಲಿ ಶೇಕಡ 7.6 ಮತ್ತು 2019ರಲ್ಲಿ ಶೇಕಡ 7.5 ಆಗಿರಲಿದೆ ಎಂದು ಅದು ಅಂದಾಜಿಸಿದೆ.

ಈ ಹಿಂದಿನ ಜಿಡಿಪಿ ಹೇಗಿತ್ತು ಗೊತ್ತೇ?

ಅನಾಣ್ಯೀಕರಣ, ಜಿಎಸ್’ಟಿ ಜಾರಿ ಮುಂತಾದ ಆರ್ಥಿಕ ಸುಧಾರಣಾ ಕ್ರಮ ಗಳಿಂದಾಗಿ ಜಿಡಿಪಿ ಬೆಳವಣಿಗೆ ದರ ಇಳಿಕೆಯ ಹಾದಿ ಹಿಡಿದಿತ್ತು. 2016ರ ನವೆಂಬರ್ 8ರಂದು ಅನಾಣ್ಯೀಕರಣ ಘೋಷಿಸಿದ ನಂತರದಲ್ಲಿ ಆ ತ್ರೈಮಾಸಿಕ(2016-17ರ ಅಕ್ಟೋಬರ್-ಡಿಸೆಂಬರ್)ದ ವರದಿ ಬಂದಾಗ ಹಿಂದಿನ ತ್ರೈಮಾಸಿಕ(2016-17ರ ಜುಲೈ-ಸೆಪ್ಟೆಂಬರ್) ದಲ್ಲಿದ್ದ ಶೇಕಡ 7.5 ಜಿಡಿಪಿ, ಶೇಕಡ 7ಕ್ಕೆ ಇಳಿದಿತ್ತು. ನಂತರ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ದರ 6.1ಕ್ಕೆ ಇಳಿಯಿತು.

ಪ್ರಸಕ್ತ ಹಣಕಾಸು ವರ್ಷ(2017-18) ಮೊದಲ ತ್ರೈಮಾಸಿಕದಲ್ಲಿ ಶೇಕಡ 5.7ಕ್ಕೆ ಇಳಿದಿದ್ದ ಜಿಡಿಪಿ ದರ ಎರಡನೇ ತ್ರೈಮಾಸಿಕದಲ್ಲಿ ಕೊಂಚ ಚೇತರಿಕೆ ಕಂಡು ಶೇಕಡ 6.3ಕ್ಕೆ ಏರಿಕೆಯಾಗಿತ್ತು. ಈಗ ಮತ್ತೆ ಶೇಕಡ 0.9 ಅಂಶ ಏರಿಕೆ ಕಂಡ ಕಾರಣ, ಭಾರತದ ಆರ್ಥಿಕತೆ ಮತ್ತೆ ಪುಟಿದೇಳುತ್ತಿರುವ ಸಂದೇಶ ರವಾನೆಯಾಗಿದೆ. ಅಷ್ಟೇ ಅಲ್ಲದೇ, ಕಾರ್ಪೆರೇಟ್ ಆದಾಯ, ಕೈಗಾರಿಕೆ ಉತ್ಪಾದನೆ ದತ್ತಾಂಶ ಮುಂತಾದವು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುವ ಗರಿಷ್ಠ ಸಂಕೇತಗಳಾಗಿ ಹೊರಹೊಮ್ಮಿವೆ. ಸರ್ಕಾರ ಅಕ್ಟೋ ಬರ್-ಮಾರ್ಚ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 7ರ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಿತ್ತು.

Image result for gdp

ಆದರೆ ಇದೀಗ ಉತ್ಪಾದನಾ ಕ್ಷೇತ್ರದ ಜಿಡಿಪಿ 3ನೇ ತ್ರೈಮಾಸಿಕದಲ್ಲಿ ಶೇಕಡ 8.1 ತಲುಪಿದ್ದು, ವಾರ್ಷಿಕ ಜಿಡಿಪಿ ಈಗ ಅಂದಾಜಿಸಿರುವ ಶೇಕಡ 5.1 ದಾಟಿ ಮುನ್ನಡೆಯುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ, ಜಿಎಸ್’ ಟಿ ಅನುಷ್ಠಾನಕ್ಕೆ ಎದುರಾದ ಆರಂಭಿಕ ಅಡ್ಡಿ ಆತಂಕದ ಕಾರಣಕ್ಕೆ ಕಾರ್ಖಾನೆ ಮತ್ತು ಸೇವಾ ವಲಯದ ಸಂಸ್ಥೆಗಳ ಉತ್ಪಾದಕತೆಯಲ್ಲಿ ಹಿನ್ನಡೆ ಉಂಟಾಗಿತ್ತು. ಈಗ ಆ ಲೋಪದೋಷ ಸರಿಪಡಿಸಿಕೊಂಡಿರುವ ಫಲಿತಾಂಶ ಜಿಡಿಪಿ ಬೆಳವಣಿಗೆಯಲ್ಲಿ ದಾಖಲಾಗಿದೆ.

ವ್ಯವಹಾರ ತಂತ್ರದ ಭಾಗವಾಗಿ ಜೂನ್‍ನಲ್ಲಿ ಉತ್ಪಾದನೆ ಕಡಿತಗೊಳಿಸಿದ್ದ ಕಂಪನಿಗಳು, ನಂತರದ ತಿಂಗಳುಗಳಲ್ಲಿ ಮತ್ತೆ ಸಹಜವಾಗಿ ಕಾರ್ಯನಿರ್ವಹಿಸಲಾರಂಭಿಸಿವೆ. ಅಲ್ಲದೇ, ಸರ್ಕಾರದ ಕಂದಾಯ ವೆಚ್ಚ(ಬಡ್ಡಿ ರಹಿತ ಪಾವತಿ) ಹಿಂದಿನ ವರ್ಷ ಶೇಕಡ 12 ಇದ್ದು, ಶೇಕಡ 24ಕ್ಕೆ ಏರಿಕೆಯಾಗಿದೆ. ಇನ್ನು, ಕೃಷಿಯೇತರ ಕ್ಷೇತ್ರಗಳಲ್ಲಿ ಉತ್ತಮ ಹೂಡಿಕೆಯ ಕಾರಣದಿಂದ ಸುಧಾರಣೆಯ ಲಕ್ಷಣಗಳು ಕಂಡುಬಂದಿದ್ದು, ಸಾರ್ವಜನಿಕ ಆಡಳಿತ ಮತ್ತು ಸಾಲದ ಬೆಳವಣಿಗೆಯ ಸೂಚ್ಯಂಕಗಳು ಕೂಡ ಧನಾತ್ಮಕವಾಗಿರುವುದು ಕಂಡು ಬಂದಿದೆ.

ಒಟ್ಟಿನಲ್ಲಿ, ಕಳೆದ ಸೆಪ್ಟೆಂಬರ್ ನಲ್ಲಿ ಶೇ.6.3ರಷ್ಟಿದ್ದ ಜಿಡಿಪಿ ವರ್ಷಾಂತ್ಯದ ವೇಳೆಗೆ 6.5 ತಲುಪಿತ್ತು!! ಪ್ರಸಕ್ತ ವರ್ಷದಲ್ಲಿ ಈ ದರ ಶೇ.7.1 ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜಿಡಿಪಿ ದರದಲ್ಲಿ ಬೆಳವಣಿಗೆಯಾಗಿದ್ದು, 7.2 ತಲುಪಿರುವ ಮೂಲಕ ಜಿಎಸ್ಟಿ, ನೋಟು ನಿಷೇಧ ವಿರೋಧಿಸಿದವರಿಗೆ ಸರಿಯಾದ ಉತ್ತರವೇ ಸಿಕ್ಕಂತಾಗಿದೆ.

ಕೃಪೆ: ವಿಜಯವಾಣಿ

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close