ಅಂಕಣ

ಸತತ 2 ಯುದ್ಧಗಳಲ್ಲಿ ಚೀನೀಯರನ್ನು ಸೋಲಿಸಿತ್ತು ಭಾರತ !! ಇದು ಯಾರೂ ಹೇಳದ ಮಾಧ್ಯಮದವರು ಬಚ್ಚಿಟ್ಟ ಸತ್ಯ ಕಥೆ !!

ಚೀನಾವು 1962 ರ ಯುದ್ಧದಲ್ಲಿ ಭಾರತವನ್ನು ಸೋಲಿಸಿದೆ ಎಂದು ಪ್ರತಿಯೊಬ್ಬರಿಗೂ ತಿಳಿದ ವಿಚಾರವೇ. ಸತತ 2 ಯುದ್ಧಗಳಲ್ಲಿ ಭಾರತೀಯ ಸೇನೆಯು ಚೀನಿಯರನ್ನು ಹಿಂದಕ್ಕೆ ಕಳುಹಿಸಿದೆ ಎಂಬುದು ಮಾತ್ರ ಅನೇಕರಿಗೆ ತಿಳಿದಿಲ್ಲ.

ಹೌದು, ಪ್ರತಿಯೊಬ್ಬ ಭಾರತೀಯರು ಇದನ್ನು ಹೆಮ್ಮೆಯಿಂದ ಹೇಳಬೇಕು.

ಸೆಪ್ಟೆಂಬರ್ 11, 1967 ರಂದು ಸಿಕ್ಕಿಂನ ನಾಥು ಲಾನಲ್ಲಿ ಮತ್ತು ಅಕ್ಟೋಬರ್ 1, 1967 ರಂದು ಚೋ ಲಾದಲ್ಲಿ ಚೀನೀ ಪಡೆಗಳು ಅವಮಾನಕರ ಸೋಲನ್ನು ಎದುರಿಸಬೇಕಾಯಿತು.

ಚೀನೀ ಸಾಮಗ್ರಿಗಳನ್ನು ಮತ್ತು ಚೀನೀ ಸರಕಾರವನ್ನು ನಂಬುವುದಕ್ಕೆ ಕಾರಣಗಳೇ ಇಲ್ಲ. “ಇಂಡಿಯಾ-ಚೀನಿ ಭಾಯಿ ಭಾಯಿ” ಪದವನ್ನು ಎಂದಿಗೂ ನಂಬಬೇಡಿ, ಏಕೆಂದರೆ ನಿಯಮಿತ ಅವಧಿಯಲ್ಲಿ ಚೀನಾವು ಭಾರತದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಭಾರತಕ್ಕಿಂತ ಚೀನಾ ಹೆಚ್ಚು ಬಲಶಾಲಿ ಎಂದು ಹೇಳುವವರು ಕೆಳಗೆ ತಿಳಿಸಿದ ಸತ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ.

ನಾಥು ಲಾ : ಸುಮಾರು 500 ಚೀನೀ ಯೋಧರನ್ನು ಕೊಂದ ಭಾರತೀಯ‌ ಸೇನೆ !!

ನಾಥು ಲಾ 14,200 ಅಡಿ ಎತ್ತರದಲ್ಲಿದೆ ಮತ್ತು ಟಿಬೆಟ್-ಸಿಕ್ಕಿಂ ಗಡಿಯ ಮೇಲೆ ಒಂದು ಪ್ರಮುಖ ಹಾದಿಯಾಗಿದ್ದು, ಇದು ಹಳೆಯ ಗ್ಯಾಂಗ್ಟಾಕ್-ಯಾತುಂಗ್-ಲಾಸಾ ವಾಣಿಜ್ಯ ಮಾರ್ಗದಲ್ಲಿ ಹಾದುಹೋಗುತ್ತದೆ. 17 ಮಾರ್ಚ್ 1980 ರ ಆಂಗ್ಲೊ-ಚೀನಾದ ಒಪ್ಪಂದವು ಗಡಿಯ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಆದರೆ ಚೀನಾ ಯಾವುದೇ ಒಪ್ಪಂದಗಳನ್ನು ಅನುಸರಿಸಲು ಇಷ್ಟವಿಲ್ಲದ ರಾಷ್ಟ್ರವೆಂದು ನಮಗೆ ಅರಿವಿದೆ. 1965 ರಲ್ಲಿ ಚೀನಾವು ನಾಥು ಲಾವನ್ನು ತೆರವುಗೊಳಿಸಲು ಭಾರತಕ್ಕೆ ಆದೇಶಿಸಿತು, ಆದರೆ ಲೆಫ್ಟಿನೆಂಟ್ ಜನರಲ್ ಸಾಗತ್ ಸಿಂಗ್ ಅವರು ಚೀನಾದ ಆದೇಶಗಳನ್ನು ನಿರಾಕರಿಸಿದ್ದರು.

ಅಂದಿನಿಂದ ನಾಥು ಲಾದಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಕಾವಲು ಕಾಯುತ್ತಿದ್ದರು; ಮೌಖಿಕ ಕಾದಾಟಗಳು ಸಾಮಾನ್ಯವಾಗಿದ್ದವು. ಇಂಗ್ಲಿಷ್ ಮಾತನಾಡಲು ಇತರರು ತಿಳಿದಿಲ್ಲದ ಕಾರಣ ಕೇವಲ ಒಬ್ಬ ಚೀನೀ ಮಾತ್ರ ಮುರಿದ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದ. ಆದರೆ ಸೆಪ್ಟೆಂಬರ್ 6 ರಂದು, ವಾದಗಳು ಮುರಿದುಬಿದ್ದವು ಮತ್ತು ಚೀನೀಯರ ರಾಜಕೀಯ ಕಮಿಷರ್ ನನ್ನು ತಳ್ಳಲ್ಪಟ್ಟು ತನ್ನ ಗಾಜನ್ನು ಒಡೆದರು.

ಈ ಹೋರಾಟ ಮತ್ತಷ್ಟು ಏರಲು ಭಾರತ ಬಯಸಲಿಲ್ಲ, ಆದ್ದರಿಂದ ಭಾರತೀಯರು ಪಾಸ್ ನ ಮಧ್ಯಭಾಗದಲ್ಲಿ ನಾತು ಲಾ ನಿಂದ ಸೆಬುಗೆ ತಂತಿ ಹಾಕಬೇಕೆಂದು
ನಿರ್ಧರಿಸಿದರು. ಸೆಪ್ಟೆಂಬರ್ 11, 1967 ರ ಬೆಳಗ್ಗೆ ಈ ಕೆಲಸ ಪ್ರಾರಂಭವಾಯಿತು.

ಆದರೆ ಚೀನಾದ ರಾಜಕೀಯ ಮುಖಂಡರು ಭಾರತೀಯ ಸೈನ್ಯದ ನಡೆಯನ್ನು ವಿರೋಧಿಸಿದರು. ಆದರೆ ಭಾರತೀಯ ಸೇನೆಯ ಆದೇಶವು ಸ್ಫುಟವಾಗಿ, ಅಚಲವಾಗಿತ್ತು. ಆದ್ದರಿಂದ ಭಾರತ ಹಿಂದಕ್ಕೆ ಹೋಗಲಿಲ್ಲ. ಸ್ವಲ್ಪ ಚರ್ಚೆಯ ನಂತರ, ಚೀನೀಯರು ಮರಳಿ ಹೋದರು.

ಆದರೆ ಕೆಲವೇ ನಿಮಿಷಗಳ ನಂತರ ಒಂದು ಶಬ್ಧವು ಚೀನೀ ಭಾಗದಲ್ಲಿ ಕೇಳಿತು . ಉತ್ತರ ಭಾಗದ ಮಧ್ಯಮ ಮೆಷಿನ್ ಗನ್ ಗುಂಡಿನ ಶಬ್ದ‌ ಅದಾಗಿತ್ತು. 70 ಫೀಲ್ಡ್ ಕಂಪನಿಗಳು ಮತ್ತು 18 ರಜಪೂತರ ಜವಾನರು ಇದನ್ನು ನಿರೀಕ್ಷಿಸಲಿಲ್ಲ. ಭಾರತೀಯ ವೀರ ಯೋಧರಿಗೆ ಗಂಭೀರ ಹಾನಿ ಉಂಟಾಗಿತ್ತು. ಹಲವಾರು ಅಧಿಕಾರಿಗಳು ಮತ್ತು ಜವಾನರು ತಮ್ಮ ಜೀವವನ್ನು ಕಳೆದುಕೊಂಡರು.

ಭಾರತೀಯ ಶಸ್ತ್ರಸಜ್ಜಿತ ಸೇನೆಯು ಸ್ಪಷ್ಟವಾಗಿ ಹಿನ್ನಡೆಯನ್ನು ಅನುಭವಿಸಿತು. ಆದರೆ ಶೀಘ್ರದಲ್ಲೇ ಭಾರತದ ಪಡೆಗಳು ರಾಕ್ಷಸ ಚೀನಿಯರ ವಿರುದ್ಧ ಅಸಾಧಾರಣ
ಶೌರ್ಯವನ್ನು ತೋರಿಸಿದವು. ಮೆಷಿನ್ ಗನ್ಗಳು, MMG ಗಳು, ಮೊಟಾರ್ಗಳು ಮತ್ತು ಫಿರಂಗಿಯ ಶಬ್ದಗಳು ಪ್ರಾರಂಭವಾದವು.

ಸತತ ಮೂರು ದಿನಗಳ ಕಾಲ ಹಗಲೂ ರಾತ್ರಿ ಈ ಹೋರಾಟ ಮುಂದುವರೆಯಿತು.ಚೀನೀಯರಿಗಂತೂ ತಕ್ಕ ಪಾಠ ಕಲಿಸಲಾಯಿತು. ಚೀನಿಯರು ಏರ್ ಫೋರ್ಸ್ ಅನ್ನು ಬಳಸವುದಾಗಿ ಬೆದರಿಕೆಯನ್ನೂ ಹಾಕಿದ್ದರು. ಅಂತಿಮವಾಗಿ ಯುದ್ಧವು ಅಂತ್ಯವಾಗಿ ಎಂದಿನಂತೆ ಚೀನಿಯರು ಭಾರತವೇ ಕದನ ವಿರಾಮ ಉಲ್ಲಂಘನೆ ಮಾಡಿದ್ದರೆಂದೇ ಆರೋಪಿಸಿದರು. ಸೆಪ್ಟೆಂಬರ್ 15 ರಂದು, ಸ್ಯಾಮ್ ಮನೇಕ್ಷಾ, ಅರೋರಾ ಮತ್ತು ಸಾಗತ್ ಉಪಸ್ಥಿತಿಯಲ್ಲಿ, ಮೃತ ದೇಹಗಳನ್ನು ವಿನಿಮಯ ಮಾಡಲಾಯಿತು.. ಚೀನೀ ಅತಿ ಹೆಚ್ಚು ಸಾವುನೋವುಗಳನ್ನು ಅನುಭವಿಸಿತು, ಅವರ ಸ್ವಂತ ಅಂದಾಜಿನ ಪ್ರಕಾರ ಚೀನೀ ಸೈನಿಕರು 400 ಕ್ಕಿಂತಲೂ ಹೆಚ್ಚು ,ಆದರೆ ಭಾರತೀಯ 88 ಯೋಧರು ವೀರಮರಣ ಹೊಂದಿದರು.

ಚೋ ಲಾ ಸಂಘರ್ಷ: ಚೀನಾವನ್ನು 3 ಕಿ.ಮೀ. ಹಿಂದಕ್ಕೆ ಕಳುಹಿಸಿದ ಭಾರತೀಯ ಸೇನೆ :

ಅತೀವವಾಗಿ ಮುಜುಗರಗೊಂಡ ಚೀನಿಯರು ಭಾರತವನ್ನು ಸೋಲಿಸಲು ಬಯಸಿದ್ದರು. 1 ಅಕ್ಟೋಬರ್ 1967 ರಂದು ಚೂ ಲಾದಲ್ಲಿ ಭಾರತ ಮತ್ತು ಚೀನೀ ನಡುವೆ ಮತ್ತೊಂದು ಮುಖಾಮುಖಿಯಾಯಿತು. ನಾಥೂ ಲಾಗೆ ಕೆಲವೇ ಕಿಲೋಮೀಟರ್ ಉತ್ತರಕ್ಕಿರುವ ಸಿಕ್ಕಿಂ-ಟಿಬೆಟ್ ಗಡಿಯಲ್ಲಿ ಇನ್ನೊಂದು ಹಾದುಹೋಗುವ
ಪ್ರದೇಶವಾಗಿತ್ತು ಚೋ‌ ಲಾ.

ಭಾರತೀಯ ಸೇನೆಯು‌ ಇಲ್ಲಿಯೂ ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ 7/11 GR ಮತ್ತು 10 JAK RIF ತಂಡ ಧೈರ್ಯವಾಗಿ ಹೋರಾಡಿದರು. ಚೀನಾದ
ಸೇನೆಯನ್ನು 3 ಕಿಲೋಮೀಟರ್ಗಳ ಹಿಂದೆ ಕಳಿಸುವಷ್ಟು‌ಆಕ್ರಮಣಕಾರಿಯಾಗಿ ಭಾರತೀಯ ಸೈನ್ಯ ತಿರುಗೇಟು ನೀಡಿತು. ನೆನಪಿರಲಿ..ಚೋ ಲಾ ಈಗಲೂ ಭಾರತದ ಕೈಯಲ್ಲಿದೆ.

ಇಬ್ಬರು ಕೆಚ್ಚೆದೆಯ ಗ್ರೆನೇಡಿಯರ್ಸ್ ಯೋಧರನ್ನು ನೆನಪಿಟ್ಟುಕೊಳ್ಳಲು, ಯುದ್ಧವು ನಡೆದ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ.

ಆದ್ದರಿಂದ, ಭಾರತ 50 ವರ್ಷಗಳ ಹಿಂದೆ ಚೀನಿಯನ್ನು ಸೋಲಿಸಿದೆಯೆಂಬ ವಿಚಾರ ನಮಗೆ‌ ಗೊತ್ತಿರಲಿ.. ಈಗ ಎಲ್ಲರಿಗೂ ಭಾರತೀಯ ಸೈನ್ಯದ ಶಕ್ತಿ ತಿಳಿದಿದೆ. ಅದಕ್ಕಿಂತ ‌ಹೆಚ್ಚಾಗಿ ಈಗ ಇರುವುದು ಮೋದಿ ಆಡಳಿತವೇ ಹೊರತು ನೆಹರೂವಿನದ್ದು ಅಲ್ಲ. ಚೀನೀಯರು ಇನ್ನೂ ಪಾಠ ಕಲಿಯದಿದ್ದರೆ, ಭಾರತೀಯ ಸೈನ್ಯವು ಅವರಿಗೆ ಪಾಠ ಕಲಿಸಲು ಸಿದ್ಧವಾಗಿದೆ.

postcard team

Tags

Related Articles

Close