ಪ್ರಚಲಿತ

ಭಾರತ ಈಗ ಅತಿದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ರಾಷ್ಟ್ರ!! ವಿಶ್ವಸಂಸ್ಥೆಯಿಂದ ಭಾರತಕ್ಕೆ ಬಹುಪರಾಕ್! ಮೋದಿಯ ಮತ್ತೊಂದು ಸಾಧನೆ!

ಮೋದೀಜೀ ಅಧಿಕಾರ ಸ್ವೀಕರಿಸಿದಾಗಿನಿಂದ ಭಾರತದ ಸ್ಥಿತಿಯೇ ಬದಲಾಗಿದೆ ಎಂದು ಹೇಳಬಹುದು!! ಯಾಕೆಂದರೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಭಾರತದ ಸ್ಥಿತಿಯೇ ಬದಲಾಗಿತ್ತು.. ಪ್ರತೀಯೊಂದು ವಿಚಾರವನ್ನು ಗಮನಿಸಿದರು ಕೂಡಾ ಯಾವ ಕ್ಷೇತ್ರವನ್ನೂ ಯುಪಿಎ ಸರಕಾರ ಅಭಿವೃದ್ಧಿ ಪಡಿಸಿದ ಇತಿಹಾಸವೇ ಇಲ್ಲ… ಆದರೆ ಮೋದಿಜೀಯನ್ನು ಕೆಲವರು ಚಹಾ ಮಾರುವವರು ಎಂದು ಹೀಗಳಿಯುತ್ತಿದ್ದರು!! ಆದರೂ ಮೋದೀಜೀ ಯಾವುದಕ್ಕೂ ಕ್ಯಾರೇ ಎನ್ನದೆ ಒಬ್ಬ ಚಹಾ ಮಾರಾಟಗಾರ ದೇಶದ ಇತಿಹಾಸವನ್ನೇ ಬದಲಿಸಿಬಿಟ್ಟರು!!

Image result for modi

ಮೋದಿಜೀಯವರು ನೋಟ್ ಬ್ಯಾನ್ ಮತ್ತು ಜಿಎಸ್‍ಟಿಯಂತಹ ಕಠೋರ ನಿರ್ಧಾರಗಳನ್ನು ತೆಗೆದುಕೊಂಡಾಗ ಕೆಲ ಬುದ್ಧಿ ಜೀವಿಗಳು ಅವರನ್ನು ಬಾಯಿಗೆ ಬಂದಂತೆ ಜರಿದರು. ಜಿಎಸ್‍ಟಿ, ನೋಟ್‍ಬ್ಯಾನ್‍ನಿಂದಾಗಿ ಭಾರತದ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂದು ಕೆಲವರು ಜರಿದದ್ದೇ ಜರಿದದ್ದು… ಆದರೆ ಅವರೆಲ್ಲರ ಅಪವಾದ-ಅನುಮಾನಗಳನ್ನು ಮೀರಿ ಭಾರತವು ಆರ್ಥಿಕವಾಗಿ ಸಬಲ ರಾಷ್ಟ್ರವಾಗಿ ರೂಪುಗೊಳ್ಳುತ್ತಲಿದೆ. ಈಗಾಗಲೇ ಮಾರ್ಚ್ ವರೆಗಿನ ತ್ರೈಮಾಸಿಕ ಮೌಲ್ಯಮಾಪನದ ಪ್ರಕಾರ ಭಾರತದ ಆರ್ಥಿಕತೆಯು ಅತಿ ವೇಗವಾಗಿ ಬೆಳೆದು ಚೀನಾದ ಆರ್ಥಿಕತೆಯನ್ನು ಹಿಂದಿಕ್ಕಿತ್ತು!! ಚೀನಾದ ಆರ್ಥಿಕತೆಯು 6.8% ಇದ್ದರೆ ಭಾರತದ 7.7% ರಷ್ಟಿತ್ತು!! ಇದೀಗ ಭಾರತ ಮತ್ತೆ ಆರ್ಥಿಕತೆಯ ವೇಗದಲ್ಲಿ ಫ್ರಾನ್ಸ್ ನ್ನು ಹಿಂದಿಕ್ಕಿದೆ..

ಜಗತ್ತಿನ 6ನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದ ಭಾರತ!!

ಭಾರತ ಜಗತ್ತಿನ 6ನೇ ಅತಿದೊಡ್ಡ ಅರ್ಥಿಕತೆಯಾಗಿ ಹೊರಹೊಮ್ಮಿದ್ದು, ಈ ವರೆಗೆ ಆ ಸ್ಥಾನದಲ್ಲಿದ್ದ ಫ್ರಾನ್ಸ್ 7ನೇ ಸ್ಥಾನಕ್ಕೆ ಕುಸಿದಿದೆ ಎಂದು 2017ರ ವಿಶ್ವಬ್ಯಾಂಕ್ ವರದಿ ತಿಳಿಸಿದೆ.. 2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟವಾಗಿದ್ದು ಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವ ಬ್ಯಾಂಕ್ ನ ಅಪ್ಡೇಟೆಡ್ ಅಂಕಿ ಅಂಶಗಳ ಪ್ರಕಾರ ಜಿಡಿಪಿ ಲೆಕ್ಕದಲ್ಲಿ ಫ್ರಾನ್ಸ್ ನ್ನು ಹಿಂದಿಕ್ಕಿರುವ ಭಾರತದ ಜಗತ್ತಿನ 6 ನೇ ಬಲಿಷ್ಠ ಆರ್ಥಿಕತೆಯಾಗಿ ಹೊರಹೊಮ್ಮಿದ್ದರೆ, ನಂತರದ ಸ್ಥಾನದಲ್ಲಿ ಫ್ರಾನ್ಸ್ ಇದೆ.

2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು 2.582 ಟ್ರಿಲಿಯನ್ ಜಿಡಿಪಿ  2017 ರ ಜುಲೈ ನಂತರ ಚೇತರಿಕೆ ಕಂಡಿದೆ. ಕೇವಾ 67 ಮಿಲಿಯನ್ ಜನಸಂಖ್ಯೆಯುಳ್ಳ ಫ್ರಾನ್ಸ್ ನ ಜಿಡಿಪಿ 2.582 ಟ್ರಿಲಿಯನ್ ಡಾಲರ್ ನಷ್ಟಿತ್ತು, ಭಾರತದ ತಲಾದಾಯಕ್ಕಿಂತ 20 ರಷ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಕಳೆದ ವರ್ಷ ಜಿಡಿಪಿಗೆ ಉತ್ಪಾದನಾ ವಲಯ ಹಾಗೂ ಕನ್ಸೂಮರ್ ಸ್ಪೆಂಡಿಂಗ್ (ಗ್ರಾಹಕ ಖರ್ಚು) ಹೆಚ್ಚು ಪರಿಣಾಮ ಬೀರಿದ್ದು, ಜಿಎಸ್ ಟಿ ಹಾಗೂ ನೋಟು ನಿಷೇಧವನ್ನು ದೂಷಿಸಲಾಗಿತ್ತು. ಕಳೆದ 10 ವರ್ಷಗಳಲ್ಲಿ ಭಾರತ ಜಿಡಿಪಿ ದ್ವಿಗುಣಗೊಂಡಿದ್ದು, ಏಷ್ಯಾದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಾಮಥ್ರ್ಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2.597 ಟ್ರಿಲಿಯನ್ (25,97,000 ಕೋಟಿ) ಡಾಲರ್‍ಗಳಿಗೆ ಏರಿದೆ. ಇದೇ ಅವಧಿಯಲ್ಲಿ ಫ್ರಾನ್ಸ್‍ನ ಜಿಡಿಪಿ 2.582 ಟ್ರಿಲಿಯನ್ ಡಾಲರ್‍ಗಳಾಗಿವೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

Image result for modi

ಭಾರತದ ಜನಸಂಖ್ಯೆ ಸರಿಸುಮಾರು 134 ಕೋಟಿಯಾಗಿದ್ದರೆ, ಫ್ರಾನ್ಸ್‍ನ ಜನಸಂಖ್ಯೆ ಕೇವಲ 6.7 ಕೋಟಿ ಆಗಿದೆ. ಹೀಗಾಗಿ ಭಾರತದ ತಲಾ ಜಿಡಿಪಿಗೆ ಹೋಲಿಸಿದರೆ ಫ್ರಾನ್ಸ್‍ನ ತಲಾವಾರು ಜಿಡಿಪಿ 20 ಪಟ್ಟು ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಜಿವಿಎ ಅಂದರೆ ತೆರಿಗೆ ರಹಿತ ಜಿ.ಡಿ.ಪಿಯು ಆರ್ಥಿಕತೆಯಲ್ಲಿ ಉತ್ಪತ್ತಿಯಾದ ಸರಕುಗಳು ಮತ್ತು ಸೇವೆಗಳ ಒಟ್ಟಾರೆ ಮೌಲ್ಯದಲ್ಲಿನ ಬದಲಾವಣೆಯನ್ನು ಅಳೆಯಲು ಹೆಚ್ಚು ಪ್ರಾಮಾಣಿಕವಾದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂಬುದನ್ನು ದೇಶೀ ಮತ್ತು ವಿದೇಶೀ ಸಂಸ್ಥೆಗಳು ಪ್ರತಿಪಾದಿಸುತ್ತಲೆ ಬಂದಿವೆ. .

ಹೀಗಾಗಿ ಮೋದಿಜೀ ದೇಶಕ್ಕಾಗಿ ಏನೇ ಮಾಡಿದರೂ ಅದು ಪರಿಪೂರ್ಣವಾಗಿರುತ್ತದೆ!! ಜಿಎಸ್‍ಟಿ, ನೋಟ್‍ಬ್ಯಾನ್ ಜಾರಿಗೆ ತಂದಾಗ ಅದೆಷ್ಟೋ ಮೋದಿಜೀ ವಿರೋಧಿಗಳು ಹಲ್ಲುಕಿರಿದಿದ್ದರು!! ಆದರೆ ಅದು ಯಾವುದಕ್ಕೂ ಮೋದಿಜೀ ಕ್ಯಾರೇ ಅನ್ನಲಿಲ್ಲ!! ಯಾಕೆಂದರೆ ಮೊದಿಜೀಗೆ ಬೇಕಾಗಿದ್ದು ವಿರೋಧಿಗಳ ಮಾತಲ್ಲ ಬದಲಾಗಿ ಮೋದೀಜೀಗೆ ಬೇಕಾಗಿದ್ದು ದೇಶದ ಅಭಿವೃದ್ಧಿ ಅಷ್ಟೇ!!..ಕಳೆದ ವರ್ಷ ಉತ್ಪಾದನೆ ಹಾಗೂ ಗ್ರಾಹಕ ವೆಚ್ಚಗಳು ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ. ನೋಟು ಅಮಾನ್ಯೀಕರಣ ಮತ್ತು ಜಿಎಸ್‍ಟಿ ಜಾರಿಗೊಳಿಸಿದ ಬಳಿಕವೂ ಭಾರತದ ಅಭಿವೃದ್ಧಿ ವೇಗ ಪಡೆದುಕೊಂಡಿದೆ ಎಂದರೆ ಅದು ಮೋದಿಜೀಗೆ ಮಾತ್ರ ಸಾಧ್ಯ!!

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close