ಪ್ರಚಲಿತ

ಯಾರೂ ಊಹಿಸದ ರೀತಿಯಲ್ಲಿ ಬೆಳವಣಿಗೆ ಕಂಡ ಭಾರತ! ಮೊಬೈಲ್ ಉತ್ಪಾದನೆಯಲ್ಲಿ ಭಾರತವನ್ನು ಉತ್ತುಂಗಕ್ಕೇರಿಸಿದ ಮೋದಿಯ ಯೋಜನೆಗಳು!

ಕಳೆದ ಐದು ವರ್ಷಗಳಲ್ಲಿ ಭಾರತ ಯಾವ ರೀತಿ ಬದಲಾವಣೆ ಹೊಂದಿದೆ ಎಂದರೆ ಇಂದು ಜಗತ್ತು ಭಾರತವನ್ನು ನೋಡುವ ದೃಷ್ಟಿಯೇ ಬೇರೆ ಆಗಿದೆ. ಯಾವ ದೇಶಗಳು ಭಾರತದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹಿಂದೇಟು ಹಾಕುತ್ತಿದ್ದವೋ ಇಂದು ಅದೇ ರಾಷ್ಟ್ರಗಳು ತಮ್ಮ ವ್ಯಾಪಾರ ವಹಿವಾಟು ನಡೆಸಲು ಭಾರತವನ್ನು ಆಯ್ಕೆ ಮಾಡುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅಧಿಕಾರ ವಹಿಸಿಕೊಂಡ ನಂತರ ಯಾರೂ ಊಹಿಸದ ರೀತಿಯಲ್ಲಿ ಬದಲಾವಣೆ ಭಾರತದಲ್ಲಾಯಿತು, ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆ ಕಂಡ ಭಾರತ ಮೊಬೈಲ್ ಉತ್ಪಾದನೆಯಲ್ಲಿ ಜಗತ್ತಿನ ಅತಿ ದೊಡ್ಡ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನಕ್ಕೆ ಏರಿದೆ. ಈ ಹಿಂದೆ ಮೊಬೈಲ್ ಬಳಕೆದಾರರ ಸಂಖ್ಯೆ ಕೂಡ ಕಡಿಮೆ ಇತ್ತು, ಇದಾದ ನಂತರ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೇಚ್ಚುತ್ತಲೇ ಬಂದಿದ್ದು ಮೊಬೈಲ್ ಬೇಡಿಕೆ ಹೆಚ್ಚಾಯಿತು. ಇದನ್ನೇ ಗಂಭೀರವಾಗಿ ಪರಿಗಣಿಸಿದ ಭಾರತ, ಬೇರೆ ರಾಷ್ಟ್ರಗಳಿಂದ ಮೊಬೈಲ್ ಖರೀದಿ ಮಾಡುವುದಕ್ಕಿಂತ ಭಾರತದಲ್ಲೇ ಮೊಬೈಲ್ ಉತ್ಪಾದನೆ ಮಾಡಲು ನಿರ್ಧರಿಸಿತು.‌ ಇದರ ಪರಿಣಾಮವಾಗಿ ಮೊಬೈಲ್ ಉತ್ಪಾದನೆಯಲ್ಲಿ ಭಾರತ ಇಂದು ಜಗತ್ತಿನ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿದೆ.!

ಒಂದು ದೇಶದ ಆಡಳಿತಗಾರ ಸಮರ್ಥನಾಗಿದ್ದರೆ ಆ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ ಪ್ರಧಾನಿ ಮೋದಿ.‌ ಹೌದು ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ವಿಯೆಟ್ನಾಂ ನ್ನು ಹಿಂದಿಕ್ಕಿ ಭಾರತ ಇಂದು ಎರಡನೇ ಸ್ಥಾನಕ್ಕೇರಿದೆ. ಚೀನಾ ಮೊದಲನೇ ಸ್ಥಾನದಲ್ಲಿದ್ದು ಜಗತ್ತಿನಾದ್ಯಂತ ಭಾರತದ ಮೊಬೈಲ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತ ರಫ್ತು ಮತ್ತು ಆಮದು ಎರಡಕ್ಕೂ ಹೆಚ್ಚು ಗಮನ ಹರಿಸುತ್ತಿದ್ದು ದಿನೇ ದಿನೇ ಮೊಬೈಲ್ ಆಮದು ಕಡಿಮೆ ಆಗುತ್ತಿದ್ದು ರಫ್ತು ಹೆಚ್ಚಾಗುತ್ತಿದೆ. 2014ರಲ್ಲಿ ಭಾರತದಲ್ಲಿ ಕೇವಲ 30 ಲಕ್ಷ ಮೊಬೈಲ್ ಉತ್ಪಾದನೆಯಾಗಿತ್ತು, ಆದರೆ 2017ರ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 1.1 ಕೋಟಿಗೂ ಅಧಿಕ ಮೊಬೈಲ್ ಉತ್ಪಾದನೆಯಾಗುತ್ತಿದೆ. ವಿಶೇಷವೆಂದರೆ 2017-18 ರಲ್ಲಿ ಭಾರತ ಆಮದು ಮಾಡುವುದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಳಿಸಿದ್ದು ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲೇ ಹೆಚ್ಚು ಹೆಚ್ಚು ಮೊಬೈಲ್ ಉತ್ಪಾದನೆಗೆ ಒತ್ತು ನೀಡುತ್ತಿದೆ.!

ಭಾರತದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಹೆಚ್ಚಳ ಕಾಣಲು ಮೂಲ ಕಾರಣ ಎಂದರೆ, ಸ್ವತಃ ಕೇಂದ್ರ ಸರಕಾರ ಮೊಬೈಲ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡುತ್ತಿದೆ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಮೊಬೈಲ್ ಉತ್ಪಾದನೆಗೆ ವಿದೇಶೀಯ ಕಂಪನಿಗಳು ಕೂಡ ಭಾರತವನ್ನು ಆಯ್ಕೆ ಮಾಡಿಕೊಳ್ಳುವಂತಾಗಿದೆ. ಈಗಾಗಲೇ ಅತೀ ದೊಡ್ಡ ಕಂಪನಿಗಳಾದ ಆ್ಯಪಲ್, ಕ್ಸಿಯೋಮಿ, ಹೀಗೆ ಅನೇಕ ಕಂಪನಿಗಳು ಭಾರತದಲ್ಲೇ ಮೊಬೈಲ್ ಉತ್ಪಾದನೆ ಮಾಡುತ್ತಿದ್ದು ಇದು ಭಾರತದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ರಿಪೋರ್ಟ್ ಹೇಳಿಕೊಂಡಿರುವಂತೆ ಮೊಬೈಲ್ ಉತ್ಪಾದನೆಯಲ್ಲಿ ಭಾರತ ಜಗತ್ತಿನ ಅತಿ ದೊಡ್ಡ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನ ಗಳಿಸಿಕೊಂಡಿದೆ ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ಭಾರತ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.!

ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು ವಿರೋಧಿಸುತ್ತಾ ರಾಜಕೀಯ ಬೇಳೆ ಬೇಯಿಸಿಕೊಂಡವರಿಗೆ ಇದೀಗ ರಿಪೋರ್ಟ್ ಕಂಡು ಕಪಾಳಮೋಕ್ಷ ಮಾಡಿದಂತಾಗಿದೆ. ಯಾಕೆಂದರೆ ಮೋದಿಯವರ ಯಾವ ಯೋಜನೆಗಳು ಕೂಡ ವಿಫಲವಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅದೇನೇ ಇರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಚಾರ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close