ಪ್ರಚಲಿತ

ಒಂದೇ ವರ್ಷದಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಟಿ ಮಾಡಿದ ಮೋದಿ ಸರಕಾರ! ಉದ್ಯೋಗ ಸೃಷ್ಟಿಯಲ್ಲಿ ಮೋದಿ ಫೈಲ್ ಎಂದವರಿಗೆ ಕಪಾಳಮೋಕ್ಷ ಮಾಡಿದ ರಿಪೋರ್ಟ್!

ನರೇಂದ್ರ ಮೋದಿಯವರು ೨೦೧೪ರ ಚುನಾವಣೆಯ ಮೊದಲು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರದಲ್ಲಿ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಮೋದಿ, ನಮ್ಮ ಸರಕಾರ ಆಡಳಿತಕ್ಕೆ ಬಂದರೆ ದೇಶದಲ್ಲಿ ವರ್ಷಕ್ಕೆ ಸಾವಿರಾರು ಉದ್ಯೋಗ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಅದೇ ರೀತಿ ಪ್ರಧಾನಿಯಾದ ನಂತರ ಹಲವಾರು ರೀತಿಯಲ್ಲಿ ಉದ್ಯೋಗ ನಿರ್ಮಿಸುತ್ತಾ ಬಂದಿರುವ ಮೋದಿ ಕಳೆದ ೫ ವರ್ಷದಲ್ಲಿ ಕೋಟ್ಯಾಂತರ ನಿರುದ್ಯೋಗಿಗಳಿಗೆ ಉದ್ಯೋಗ ನಿರ್ಮಾಣ ಮಾಡಿ, ಲಕ್ಷಾಂತರ ಜನರು ಸ್ವಂತ ಉದ್ಯೋಗ ನಡೆಸುವಂತೆ ಕೆಲವೊಂದು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು. ಆದರೆ ಈ ವಿಪಕ್ಷಗಳು ಮಾತ್ರ ಮೋದಿಯನ್ನು ಪ್ರಶ್ನಿಸುವುದನ್ನು ಕಡಿಮೆ ಮಾಡಲೇ ಇಲ್ಲ, ಮೋದಿ ಯಾವ ನಿರ್ಧಾರ ಕೈಗೊಂಡರು ಕೂಡ ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳು ಟೀಕೆ ಮಾಡುತ್ತಲೇ ಬಂದರು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಆಡಳಿತ ನಡೆಸುತ್ತಾ ಬಂದಿರುವ ಮೋದಿ ಕೇವಲ ಕಳೆದ ಒಂದು ವರ್ಷದಲ್ಲೇ ಕೋಟ್ಯಾಂತರ ಉದ್ಯೋಗ ಸೃಷ್ಟಿಸಿದ್ದಾರೆ ಎಂಬ ವರದಿ ಇದೀಗ ಬಹಿರಂಗವಾಗಿದ್ದು, ಮೋದಿ ವಿರುದ್ಧ ಟೀಕೆ ಮಾಡುತ್ತಿದ್ದವರು ನಾಪತ್ತೆಯಾಗಿದ್ದಾರೆ.!

ಒಂದೇ ವರ್ಷದಲ್ಲಿ ಒಂದೂವರೆ ಕೋಟಿ ಉದ್ಯೋಗ ಸೃಷ್ಟಿ!

೨೦೧೪ರಿಂದ ೨೦೧೮ರವರೆಗೆ ಮೋದಿ ಸರಕಾರ ಕೈಗೊಂಡ ಒಂದೊಂದು ಯೋಜನೆಗಳು ಕೂಡ ಭಾರತದಲ್ಲಿ ಉದ್ಯೋಗ ನಿರ್ಮಿಸುತ್ತಿದೆ. ಮೇಕ್ ಇನ್ ಇಂಡಿಯಾದಂತಹ ಯೋಜನೆಯಿಂದ ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಗ ಪಡೆದು ಜೀವನ ನಡೆಸುವಂತಾಗಿದೆ.‌ ಕಳೆದ ಒಂದು ವರ್ಷದಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಯಲ್ಲಿ ಬರೋಬ್ಬರಿ ೧.೪೯ ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಸ್ವತಃ ಭಾರತೀಯ ಉದ್ಯಮಗಳ ಒಕ್ಕೂಟ (ಸಿಐಐ) ಸಮೀಕ್ಷೆಯ ಪ್ರಕಾರ ವರದಿ ಮಾಡಿದೆ. ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ‌ ಕೈಗಾರಿಕೆಗಳನ್ನು ಸಮೀಕ್ಷೆ ಮಾಡಲಾಗಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಕೂಡ ಇದೇ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಮತ್ತು ಎಂಎಸ್‌ಎಂಇ ವಲಯಕ್ಕೆ ಸೇರ್ಪಡೆಯಾಗಿದೆ ಎಂದು ವರದಿ ಮಾಡಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಮೀಕ್ಷೆ ಮಾಡಲಾಗಿದ್ದು, ಎಂಎಸ್‌ಎಂಇ ವಲಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇ.13.9ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಅಂದರೆ, ವಾರ್ಷಿಕ ಶೇ.3.3 ರ ಬೆಳವಣಿಗೆ ಕಂಡು ಬಂದಿದೆ. ಕಾರ್ಮಿಕ ಇಲಾಖೆ ಪ್ರಕಾರ 2017-18 ರಲ್ಲಿ ದೇಶದಲ್ಲಿ ಒಟ್ಟು 45 ಕೋಟಿ ಕೆಲಸಗಾರರಿದ್ದಾರೆ. ಈ ವಲಯಕ್ಕೆ ವಾರ್ಷಿಕ ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ ಎಂದು ಸಿಐಐ ಹೇಳಿದೆ.!

ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಗುಜರಾತ್ ಹಾಗೂ ತೆಲಂಗಾಣ ರಾಜ್ಯಗಳು ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ರಫ್ತು ಮಾಡುವ ರಾಜ್ಯಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ. ಹಾಸ್ಪಿಟಾಲಿಟಿ, ಜವಳಿ ಉದ್ಯಮ ಹಾಗೂ ಲೋಹದ ಉತ್ಪಾದನೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಯಂತ್ರೋಪಕರಣಗಳ ತಯಾರಿಕೆ ಹಾಗೂ ಟ್ರಾನ್ಸ್‌ಪೋರ್ಟ್‌ ವಲಯದಲ್ಲಿ ಕೂಡ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ವರದಿ ಮಾಡಲಾಗಿದೆ.!

ಪ್ರಧಾನಿ ನರೇಂದ್ರ ಮೋದಿಯವರ ಒಂದೊಂದು ಯೋಜನೆಗಳು ಕೂಡ ಹೊಸ ಹೊಸ ಇತಿಹಾಸ ನಿರ್ಮಿಸುತ್ತಿದೆ ಮತ್ತು ಕೋಟ್ಯಾಂತರ ಉದ್ಯೋಗ ನಿರ್ಮಾಣವಾಗುತ್ತಿದೆ. ಆದರೂ ಕೂಡ ಮೋದಿ‌ ವಿರೋಧಿಗಳು ಪ್ರತಿಯೊಂದು ವಿಚಾರದಲ್ಲೂ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಮತ್ತು ಮೋದಿಯವರನ್ನು ವಿರೋಧಿಸುತ್ತಲೇ ಇದ್ದಾರೆ. ಆದರೆ ಇದೀಗ ಬಂದ ರಿಪೋರ್ಟ್ ಸ್ವತಃ ಮೋದಿ ವಿರೋಧಿಗಳಿಗೆ ಕಪಾಳಮೋಕ್ಷ ಮಾಡಿದಂತಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close