ಪ್ರಚಲಿತ

ಮೈ ಗಾಡ್.! ಪಾಕಿಸ್ತಾನದ ಸೆಕ್ಸಿ ಬೆಡಗಿಗೆ ಹರಾಜಾಯ್ತು ಭಾರತದ ಅಮೂಲ್ಯ ರಹಸ್ಯಗಳು.! ಬ್ರಹ್ಮೋಸ್ ಕ್ಷಿಪಣಿಯ ಸೀಕ್ರೇಟ್ ಪಾಪಿರಾಷ್ಟ್ರದ ಕೈಸೇರಿದ್ದೇಗೆ..?

ಭಾರತ ಪ್ರತೀ ಕ್ಷೇತ್ರದಲ್ಲೂ ಇತಿಹಾಸ ಸೃಷ್ಟಿಸುವಂತಹಾ ಸಾಧನೆಯನ್ನು ಮಾಡುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನಿ ಗದ್ದುಗೆಯನ್ನು ಅಲಂಕರಿಸಿದ ನಂತರ ಭಾರತದ ಚಿತ್ರಣವೇ ಬದಲಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ವಿವಿಧ ರಂಗದಲ್ಲಿ, ಅದರಲ್ಲೂ ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಮಾಡಿರುವ ಸಾಧನೆ, ಕಾಪಾಡಿಕೊಂಡು ಬಂದಿರುವ ಭಾರತದ ಗೌರವ ನಿಜಕ್ಕೂ ಚಿನ್ನದ ಪುಟವಿದ್ದಂತೆ. ಆದರೆ ಈ ಗೌರವಕ್ಕೆ ಈಗ ಚ್ಯುತಿ ಬಂದಿದೆಯಾ ಎಂಬ ಚಿಂತೆ ಎದುರಾಗಿದೆ.!

ಪಾಕಿಸ್ತಾನದ ಪಾಲಾಯ್ತಾ ಬ್ರಹ್ಮೋಸ್ ಸೀಕ್ರೇಟ್?

ಇತ್ತೀಚೆಗೆ ಡಿ.ಆರ್.ಡಿ.ಒ. ಇಂಜಿನಿಯರ್ ನಿಶಾಂತ್ ಎಂಬಾತನನ್ನು ಏಕಾಏಕಿ ಪೊಲೀಸರು ಬಂಧಿಸುತ್ತಾರೆ. ಭಾರತದ ರಕ್ಷಣಾ ಇಲಾಖೆಯ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಈ ವ್ಯಕ್ತಿಯನ್ನು ಯಾಕೆ ಬಂಧಿಸಿದ್ದಾರೆ ಎನ್ನುವ ಸಂದೇಹ ಎದುರಾದಾಗಲೇ ಸ್ಪೋಟಕ ಮಾಹಿತಿಯೊಂದು ಹೊರಬೀಳುತ್ತೆ. ನಿಶಾಂತ್ ಎಂಬಾತನು ಭಾರತದ ರಕ್ಷಣಾ ಇಲಾಖೆಯ ಗೌಪ್ಯತೆಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದಾನೆ ಎಂಬ ಸ್ಪೋಟಕ ಮಾಹಿತಿ ಹೊರಬೀಳುತ್ತೆ. ಭಾರತದ ಅನ್ನ ತಿನ್ನುತ್ತಿದ್ದ ಈ ಇಂಜಿನಿಯರ್ ಈಗ ದೇಶದ್ರೋಹ ಹಾಗೂ ಸರ್ಕಾರಿ ಇಲಾಖೆಯ ಗೌಪ್ಯತೆಯನ್ನು ಸೋರಿಕೆ ಮಾಡಿರುವ ಕೇಸಿನಲ್ಲಿ ಬಂಧನವಾಗಿದ್ದಾನೆ.

Related image

ಪಾಪಿ ರಾಷ್ಟ್ರದ ಹಾಟ್ ಹುಡುಗಿಗೆ ಬಲಿಯಾದ ನಿಶಾಂತ್.!

ಡಿ.ಆರ್.ಡಿ.ಒ. ಇಂಜಿನಿಯರ್ ನಿಶಾಂತ್ ಎಂಬಾತ ಇಂತಹಾ ಕೃತ್ಯ ಎಸಗಿದ್ದಾನಾ? ಅಲ್ಲಿ ನಿಜಕ್ಕೂ ನಡೆದಿದ್ದೇನು ಗೊತ್ತಾ? ಅಷ್ಟಕ್ಕೂ ನಿಶಾಂತ್ ಎಂಬ ಡಿ.ಆರ್.ಡಿ.ಒ. ಇಂಜಿನಿಯರ್ ಚಿನ್ನದ ಪದಕ ವಿಜೇತ ವಿದ್ಯಾವಂತ ಹುಡುಗ. ಈತನಿಗೆ ಇತ್ತೀಚೆಗೆ ಮದುವೆಯಾಗಿತ್ತು. ಆದರೆ ಈ ಹಿಂದೆಯೇ ಆತನಿಗೆ ಪಾಕಿಸ್ತಾನದ ಬೆಡಗಿಯೋರ್ವಳ ಸಂಪರ್ಕ ಇತ್ತು. ಒಂದು ಫೇಕ್ ಐಡಿ ಇರುವ ಫೇಸ್ ಬುಕ್ ಖಾತೆಯಿಂದ ನಿಶಾಂತ್ ನಿಗೆ ಚಾಟಿಂಗ್ ಆರಂಭವಾಗಿ ಸಂಪರ್ಕ ಸಂಬಂಧವಾಗಿ ಬೆಳೆಯುತ್ತೆ. ರೊಮ್ಯಾಂಟಿಕ್ ಹಾಗೂ ಸೆಕ್ಸೀ ದೇಹವನ್ನು ಪ್ರದರ್ಶಿಸುತ್ತಾ ನಿಶಾಂತ್ ಎಂಬಾತನನ್ನು ಬಲೆಗೆ ಬೀಳಿಸಲು ಯತ್ನಿಸುತ್ತೆ ಈ ನಕಲಿ ಫೇಸ್ ಬುಕ್ ಖಾತೆ. ಹೀಗೆ ಸಂಬಂಧ ಬೆಳೆಸುತ್ತಲೇ ಭಾರತದ ಅತ್ಯಂತ ರಹಸ್ಯ ರಕ್ಷಣಾ ಮಾಹಿತಿಯನ್ನು ಆ ನಕಲಿ ಖಾತೆ ಕೇಳುತ್ತೆ.

ಪಾಕಿಸ್ತಾನದ ಈ ಫೇಕ್ ಬೆಡಗಿಯ ಮೈಮಾಟಕ್ಕೆ ಮರುಗಾದ ಈ ನಿಶಾಂತ್ ಎಂಬ ವಿದ್ಯಾವಂತ ಹುಡುಗ ಭಾರತದ ಬ್ರಹ್ಮೋಸ್ ಎಂಬ ಕ್ಷಿಪಣಿಯ ಅಮೂಲ್ಯ ರಹಸ್ಯಗಳನ್ನು ಈ ಬೆಡಗಿಯ ಜೊತೆಗೆ ಹಂಚಿಕೊಳ್ಳುತ್ತಾನೆ. ಈ ಮೂಲಕ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿಶಾಂತ್ ದೇಶದ್ರೋಹದ ಕೆಲಸವನ್ನು ಮಾಡಿಯೇ ಬಿಡುತ್ತಾನೆ. ಬೆಡಗಿಯ ಮೈಮಾಟಕ್ಕೆ ಬಲಿಬಿದ್ದು ಭಾರತದ ಟಾಪ್ ಸೀಕ್ರೇಟ್ ಗಳನ್ನೇ ಶತ್ರುರಾಷ್ಟ್ರದ ಬುಟ್ಟಿಗೆ ಸುಲಭವಾಗಿ ಹಾಕುತ್ತಾನೆ.

ತನಗೆ ಸಿಕ್ಕಿರುವುದು ಹನಿಟ್ರಾಪ್ ಸಂಪರ್ಕ ಎಂದು ಸ್ವತಃ ನಿಶಾಂತ್ ಗೇ ಗೊತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಇದೊಂದು ಹನಿಟ್ರಾಪ್ ತಂತ್ರ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಭಾರತದ ಬ್ರಹ್ಮೋಸ್ ಕ್ಷಿಪಣಿಯ ಅಮೂಲ್ಯ ರಹಸ್ಯಗಳು ಪಾಕಿಸ್ತಾನದ ಪಾಲಾಗಿದ್ದವು.

ಮದುವೆಯಾಗಿ ಸಂತಸವಾದ ಜೀವನವನ್ನು ಆರಂಭಿಸುವಷ್ಟರ ಹೊತ್ತಿಗೆ ದೇಶದ್ರೋಹವೆಂಬ ಅತ್ಯಂತ ಕಳಂಕ ಪಟ್ಟವನ್ನು ಹೊತ್ತುಕೊಂಡು ಕತ್ತಲೆ ಕೋಣೆಯಲ್ಲಿ ದಿನದೂಡುತ್ತಿದ್ದಾನೆ ನಿಶಾಂತ್ ಎಂಬ ಡಿ.ಆರ್.ಡಿ.ಒ. ಇಂಜಿನಿಯರ್. ರಕ್ಷಣಾ ಇಲಾಖೆಯಲ್ಲಿನ ಗೌಪ್ಯ ಮಾಹಿತಿಗಳು ಹಾಗೂ ಸರ್ಕಾರಿ ಇಲಾಖೆಯ ಮಾಹಿತಿಗಳ ಸೋರಿಕೆ ಮತ್ತು ದೇಶದ್ರೋಹದ ಪ್ರಕರಣಗಳು ಈತನ ಮೈಮೇಲೆ ಬಿದ್ದಿದ್ದು ಈಗ ಪಶ್ಚಾತಾಪ ಪಡುತ್ತಿದ್ದಾನೆ.

ಬ್ರಹ್ಮೋಸ್ ಯಾಕೆ ಟಾರ್ಗೇಟ್.?
ಶತ್ರು ರಾಷ್ಟ್ರ ಪಾಕಿಸ್ತಾನ ಭಾರತದ ಬ್ರಹ್ಮೋಸ್ ಮೇಲೆ ಈ ರೀತಿಯಾಗಿ ಮುಗಿಬೀಳಲು ಕಾರಣವೂ ಇದೆ. ಬ್ರಹ್ಮೋಸ್ ಭಾರತದಲ್ಲಿರುವ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದೆ. ಜಗತ್ತಿನ ಅತ್ಯಂತ ವೇಗದ ಮತ್ತು ನೆಲ, ಜಲ ಮತ್ತು ಆಕಾಶದಿಂದ ಹಾರಿಸಬಲ್ಲ ಕ್ರೂಸ್ ಕ್ಷಿಪಣಿ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದರ ಸಂಕೀರ್ಣ ಭಾಗಗಳನ್ನು ಬಿ.ಎಂ.ಆರ್.ಸಿ. (ಬ್ರಹ್ಮೋಸ್ ಕ್ಷಿಪಣಿ ಸಂಶೋಧನಾ ಕೇಂದ್ರ) ತಯಾರಿಸುತ್ತದೆ. ಈ ಸಂಸ್ಥೆ ಮಹಾರಾಷ್ಟ್ರದ ಕಾನ್ಪುರದಲ್ಲಿದೆ. ಇಂತಹ ಶಕ್ತಿಶಾಲಿ ಕ್ಷಿಪಣಿಯ ರಹಸ್ಯ ಮಾಹಿತಿಗಳನ್ನು ಕಳವು ಮಾಡಲೆಂದೇ ಪಾಕಿಸ್ತಾನ ಅಲ್ಲಿನ ಇಂಜಿನಿಯರ್ ಉದ್ಯೋಗಿ ನಿಶಾಂತ್ ಅಗರ್ವಾಲ್ ನನ್ನು ಬಲೆಗೆ ಬೀಳಿಸಿದೆ. ಈ ಸಂಸ್ಥೆ ಅತ್ಯಂತ ನಂಬಿಕಸ್ಥ ಸಂಸ್ಥೆಯಾಗಿದ್ದು ಇದೇ ಮೊದಲು ಎಂಬಂತೆ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಇದೀಗ ವಿಜ್ಞಾನಿ ನಿಶಾಂತ್ ಅಗರ್ವಾಲನನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಪೊಲೀಸರು ಬಂಧಿಸಿದ್ದು ಆತನ ಕಂಪ್ಯೂಟರ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಪಾಪಿ ರಾಷ್ಟ್ರ ಪಾಕಿಸ್ತಾನ ಭಾರತವನ್ನು ನೇರವಾಗಿ ಎದುರಿಸಲಾಗದೆ ಇಂತಹಾ ಕೃತ್ಯವನ್ನು ನಡೆಸಿ ಭಾರತದ ರಹಸ್ಯಗಳನ್ನು ಪಡೆಯಲು ಯತ್ನಿಸುತ್ತಿದೆ. ಭಾರತದಲ್ಲಿರುವ ಉನ್ನತ ಮಟ್ಟದ ರೀತಿಯ ಯಾವುದೇ ರಕ್ಷಣಾ ಸಾಮಗ್ರಿಯೂ ಪಾಕಿಸ್ತಾನದ ಬಳಿ ಇಲ್ಲ. ಹೀಗಾಗಿಯೇ ಕುತಂತ್ರೀ ನೀತಿಯನ್ನು ಅನುಸರಿಸಿ ಭಾರತವನ್ನು ಹೆಣೆಯಲು ಪಾಕಿಸ್ತಾನ ಯತ್ನಿಸಿದ್ದು, ಭಾರತದ ಚಾಣಕ್ಯ ನಡೆಯಿಂದಾಗಿ ಇದು ಬಯಲಾಗಿದೆ.

-ಸುನಿಲ್ ಪಣಪಿಲ
Tags

Related Articles

FOR DAILY ALERTS
 
FOR DAILY ALERTS
 
Close