ಪ್ರಚಲಿತ

ಕೇಂದ್ರ ಸರಕಾರದಿಂದ ಮಹತ್ವದ ನಿರ್ಧಾರ!! ಸಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳ ನಿಷೇಧಕ್ಕೆ ಮುಂದಾದ ಮೋದಿ ಸರಕಾರ!!

ಇದೀಗ ಕೇಂದ್ರ ಸರಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು ಅಸುರಕ್ಷಿತ ನೋವು ನಿವಾರಕ ಮಾತ್ರೆಗಳಿಗೆ ಮೋದಿ ಸರಕಾರದಿಂದ ಬ್ರೇಕ್ ಬಿದ್ದಿದೆ. ಸಾರಿಡನ್, ಪೆಂಡ್ರೆಮ್ ಸೇರಿದಂತೆ ಹಲವಾರು ಔಷಧಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು ಅಸುರಕ್ಷಿತ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸರಕಾರ ಕಡಿವಾಣ ಹಾಕಿದೆ!!

300ಕ್ಕೂ ಅಧಿಕ ಮಾತ್ರೆಗಳ ನಿಷೇಧಕ್ಕೆ ಮುಂದಾದ ಕೇಂದ್ರ ಸರಕಾರ!!

ಸುಮಾರು 300ಕ್ಕೂ ಅಧಿಕ ಮಾತ್ರೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು ಮಾತ್ರೆಗಳ ಪಟ್ಟಿಯಲ್ಲಿ ಖ್ಯಾತನಾಮ ಸಂಸ್ಥೆಗಳ ಮಾತ್ರೆಗಳು, ಆಂಟಿ ಬಯಾಟಿಕ್ಸ್ ಗಳು, ಖ್ಯಾತ ಸ್ಕಿನ್ ಕ್ರೀಮ್ ಪ್ಯಾಂಡರ್ಮ್ ಸೇರಿದಂತೆ ಹಲವು ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಲು ಆದೇಶ ಹೊರಡಿಸಿದೆ. ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾರ್ಮ್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ ಮತ್ತು ಔಷಧಿಗಳ ತಯಾರಿಕೆ, ಮಾರಾಟದ ಮೇಲೆ ತಕ್ಷಣದಿಂದಲೇ ನಿಷೇಧ ಹೇರಿದೆ. ಅಲ್ಲದೆ, 6 ಪೇಯ್ನ್ ಕಿಲ್ಲರ್ ಟ್ಯಾಬ್ಲೆಟ್‍ಗಳ ಮೇಲೂ ತಕ್ಷಣದ ನಿರ್ಬಂಧ ಹೇರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

Image result for modiji

ಎಫ್‍ಡಿಸಿ ಎಂದರೇನು?

ಒಂದೇ ಡೋಸೇಜ್ ರೂಪದಲ್ಲಿ ಎರಡು ಅಥವಾ ಹೆಚ್ಚಿನ ಔಷಧಿಗಳನ್ನು ಸ್ವೀಕರಿಸುವ ವಿಧಾನಕ್ಕೆ ಎಫ್‍ಡಿಸಿ ಎನ್ನಲಾಗುತ್ತದೆ!! ಹೆಚ್ಚಿನ ರೋಗಗಳನ್ನು ನಿವಾರಿಸಲು ಕಡಿಮೆ ದರದಲ್ಲಿ ಸಿಗುವ ಔಷಧ ಇದಾಗಿದ್ದು ಆರೋಗ್ಯದ ಮೇಲೆ ಇವುಗಳು ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತವೆ. ಈ ಕಾರಣಕ್ಕಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಇವುಗಳನ್ನು ನಿಷೇಧ ಮಾಡಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿದೆ. ಇನ್ನುಮುಂದೆ ಇವುಗಳ ಮಾರಾಟ ಉತ್ಪಾದನೆ ಖರೀದಿ ಸಂಪೂರ್ಣವಾಗಿ ನಿಷೇಧಿಸಿದ್ದು ಫಿಕ್ಸೆಡ್ ಡೋಸ್ ಕಾಂಬಿನೇಷನ್(ಎಫ್‍ಡಿಸಿ)ಔಷಧಿಗಳ ಮೇಲೆ ಕ್ರಮಕೈಗೊಳ್ಳುವ ಪ್ರಯತ್ನದ ಭಾಗವಾಗಿ ಈ ಔಷಧಿಗಳನ್ನು ನಿಷೇಧ ಮಾಡಲಾಗಿದೆ.

ನಿಷೇಧದ ಪ್ರಯತ್ನಗಳು 2016ರಿಂದಲೇ ಜಾರಿಯಲ್ಲಿತ್ತು. ಈ ಔಷಧಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಡ್ರಗ್ಸ್ ಟೆಕ್ನಿಕಲ್ ಅಡ್ವೈ ಬೋರ್ಡ್ ವರದಿಯ ಅನುಸಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕ್ರಮದಿಂದಾಗಿ ಸುಮಾರು ರೂ. 25,000 ಕೋಟಿ ಮೌಲ್ಯದ 6,000 ಮೆಡಿಸಿನ್ ಬ್ರ್ಯಾಂಡ್‍ಗಳ ಮೇಲೆ ಹೊಡೆತ ಬೀಳಲಿದೆ!! ಈಗಾಗಲೇ ಕಳೆದ ಎರಡು ವರ್ಷಗಳಿಂದ ದೇಶದ ಹಲವು ಹೈಕೋರ್ಟ್ ಗಳು ಹಾಗೂ ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಈ ಮಧ್ಯೆ, ಇದೀಗ ಎರಡು ವರ್ಷಗಳ ಅವಧಿಯಲ್ಲಿ ಔಷಧಿಗಳಲ್ಲಿ ಬಳಸುವ ಅಂಶಗಳನ್ನು ಶೇಕಡಾ 2ರಷ್ಟು ಪ್ರಮಾಣವನ್ನು ಕಡಿತಗೊಳಿಸಿದ್ದೇವೆ ಎಂದು ಕಂಪನಿಗಳು ವಾದಿಸಿದ್ದವು. ಆರೋಗ್ಯ ಇಲಾಖೆ ಮತ್ತು ಔಷಧಿ ತಯಾರಕರ ಕಂಪನಿಗಳ ನಡುವೆ 2016ರಿಂದಲೂ ಈ ಡ್ರಗ್ಸ್ ವಾರ್ ನಡೆಯುತ್ತಿದ್ದು, ಔಷಧಿ ತಯಾರಿಕಾ ಕಂಪನಿಗಳ ನಿಲುವಿನ ಮೇಲೆ ಕೇಂದ್ರ ಸರ್ಕಾರ ಕೆಂಗಣ್ಣು ಬೀರಿತ್ತು.

Related image

ಆದರೆ ಕೇಂದ್ರ ಸರ್ಕಾರದ ಈ ನಡೆಯನ್ನು ವೀರೋಧಿಸಿ ಅನೇಕ ಔಷಧ ತಯಾರಕ ಕಂಪನಿಗಳು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನ ಮೆಟ್ಟಿಲೇರಿದ್ದರು. ಈ ಸಂಬಂಧ ಸುಪ್ರೀಂಕೋರ್ಟ್ 2017ರಲ್ಲಿ ಔಷಧ ತಾಂತ್ರಿಕ ಸಲಹಾ ಮಂಡಳಿಗೆ ಪರಿಶೀಲಿಸಲು ಸೂಚಿಸಿತ್ತು. ಹಾಗೇ ಈ ಔಷಧಿಗಳ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರಕ್ಕೂ ತಿಳಿಸಿತ್ತು. ಈ ಸಂಬಂಧ ಔಷಧ ತಾಂತ್ರಿಕ ಸಲಹಾ ಮಂಡಳಿ ನೀಡಿರುವ ಶಿಫಾರಸಿನಲ್ಲಿ ಇತರೆ ಔಷಧಗಳಿಗೆ ಹೋಲಿಸದರೆ, ರದ್ದು ಮಾಡಲಾಗಿರುವ 328 ಎಫ್‍ಡಿಸಿಯಲ್ಲಿ ಚಿಕಿತ್ಸಕ ಸಮರ್ಥನೆ ನೀಡುವಂತಹ ಪದಾರ್ಥಗಳನ್ನು ಒಳಗೊಂಡಿಲ್ಲ. ಅಲ್ಲದೆ, ಇಂತಹ ಔಷಧಗಳು ಮನುಷ್ಯನ ಜೀವಕ್ಕೆ ಅಪಾಯಕಾರಿ ಆಗಿವೆ ಎಂದು ತಿಳಿದುಬಂತು!!

ಸೆಕ್ಷನ್ 26 ಎ ಮತ್ತು 2017ರ ಔಷಧ ಮತ್ತು ಕಾಸ್ಮೇಟಿಕ್ ಕಾಯಿದೆ ಅಡಿಯಲ್ಲಿ ಇಂತಹ ಎಫ್‍ಡಿಸಿ ಔಷಧಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ಅವಶ್ಯಕವಾಗಿ ನಿಷೇಧಿಸಬೇಕು ಎಂದು ಮಂಡಳಿ ಸಲಹೆ ನೀಡಿತ್ತು. ಮತ್ತೊಂದು ಪರಿಣಿತರ ಸಮಿತಿಯೂ ಈ ಬಗ್ಗೆ ತನ್ನ ಶಿಫಾರಸು ನೀಡಿ, ಇಂತಹ ಔಷಧಗಳು ಅಸಂಬದ್ಧವಾಗಿದ್ದು, ಇದರಲ್ಲಿ ಯಾವುದೇ ರಕ್ಷಣೆಯಿಲ್ಲ. ಅಲ್ಲದೆ, ಇವು ಚಿಕಿತ್ಸಕ ಸಮರ್ಥನೆಯ ಕೊರತೆಯನ್ನು ಎದುರಿಸುತ್ತಿವೆ ಎಂದು ಔಷಧ ತಾಂತ್ರಿಕ ಸಲಹಾ ಮಂಡಳಿ ಶಿಫಾರಸಿಗೆ ಸಹಮತ ವ್ಯಕ್ತಪಡಿಸಿತ್ತು.

ಕೇಂದ್ರ ಸರಕಾರದ ಈ ನಿರ್ಧಾರ ಇಂತಹ ಔಷಧಿ ತಯಾರಕ ಕಂಪನಿಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಬಹುದು.. ಆದರೆ ಇಂತಹ ನೋವು ನಿವಾರಕ ಮಾತ್ರೆಗಳಿಂದ ಅದೆಷ್ಟೋ ಜೀವಗಳಿಗೆ ಹಾನಿಯಾಗುವುದನ್ನು ತಡೆಯಬಹುದು.. ಕೇಂದ್ರ ಸರಕಾರ ಯಾವ ನಿರ್ಧಾರವನ್ನು ತೆಗೆದುಕೊಂಡರೂ ಅದರ ಹಿಂದೆ ಅದೆಷ್ಟೋ ಒಳ್ಳೆಯ ನಿರ್ಧಾರಗಳಿರುತ್ತವೆ ಎಂಬುವುದನ್ನು ಮರೆಯಬಾರದು!!

source: vijayakarnataka

kannadaprabha

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close