ಪ್ರಚಲಿತ

ಬಿಜೆಪಿ ಸರಕಾರ ಇರುವವರೆಗೂ ನಾನು ಭಾರತಕ್ಕೆ ಬರುವುದಿಲ್ಲ! ಮೋದಿ ಸರಕಾರಕ್ಕೆ ಬೆದರಿದ ವ್ಯಕ್ತಿ ಯಾರು ಗೊತ್ತಾ?

ಅಬ್ಬಬ್ಬಾ, ನರೇಂದ್ರ ಮೋದಿ ಎಂದರೆ ದೇಶದ್ರೋಹಿಗಳು ಈ ರೀತಿ ಬೆಚ್ಚಿ ಬೀಳುತ್ತಾರೆ ಎಂದರೆ ನಿಜಕ್ಕೂ ಮೋದಿ ದೇಶಕಾಯೋ ಚೌಕಿದಾರ ಎಂಬುದರಲ್ಲಿ ಸಂಶಯವಿಲ್ಲ. ‌ಯಾಕೆಂದರೆ ಮೋದಿ ಪ್ರಧಾನಿಯಾದ ನಂತರ ನಮ್ಮ ದೇಶದಲ್ಲಾದ ಬದಲಾವಣೆ ಒಂದಲ್ಲ ಎರಡಲ್ಲ, ದಿನೇ ದಿನೇ ಹೊಸ ಹೊಸ ಸುದ್ಧಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ವಿರೋಧಿಗಳು ವಿರೋಧಿಸಿದಷ್ಟು ಮೋದಿಯವರ ಜನಪ್ರಿಯತೆ ಹೆಚ್ಚುತ್ತಲೇ ಇದೆ ಯಾಕೆಂದರೆ ಮೋದಿ ಯಾವೊಬ್ಬ ದೇಶದ್ರೋಹಿಯನ್ನೂ ಸುಮ್ಮನೆ ಬಿಡುತ್ತಿಲ್ಲ.‌ ಇದಕ್ಕೆ ಸಾಕ್ಷಿ ನಮ್ಮ ಕಣ್ಣ ಮುಂದೆ ಇದೆ, ನೀರವ್ ಮೋದಿ, ವಿಜಯ್ ಮಲ್ಯ, ಹೀಗೆ ಯಾರೆಲ್ಲಾ ದೇಶಕ್ಕೆ ಅನ್ಯಾಯ ಮಾಡುತ್ತಿದ್ದರೋ ಅವರೆಲ್ಲರೂ ಇಂದು ಪರದಾಡುವಂತಾಗಿದೆ.

ಇದೀಗ ಮತ್ತೊಬ್ಬ ವ್ಯಕ್ತಿ ಬಹಿರಂಗವಾಗಿ ತನ್ನ ಭಯವನ್ನು ಹೊರಹಾಕಿದ್ದು, ಭಾರತದಲ್ಲಿ ಬಿಜೆಪಿ ಸರಕಾರ ಇರುವವರೆಗೂ ನಾನು ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ಮೋದಿ ಭಾರತದಲ್ಲಿ ಅಧಿಕಾರದಲ್ಲಿ ಇರುವುದರಿಂದ ನನಗೆ ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡ ವ್ಯಕ್ತಿ ಸದ್ಯ ಮಲೇಷಿಯಾದಲ್ಲಿ ತಲೆಮರೆಸಿಕೊಂಡಿದ್ದಾನೆ.!

ಭಯೋತ್ಪಾದನೆಗೆ ಪ್ರಚೋದನೆ ನೀಡಿದ ವ್ಯಕ್ತಿ ಮೋದಿಗೆ ಹೆದರಿದ್ಯಾಕೆ?

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತದಲ್ಲೇ ಆರಾಮವಾಗಿ ತಿರುಗಾಡುತ್ತಿದ್ದ ವಿವಾದಿತ ಪೀಸ್ ಟಿವಿ ಮುಖ್ಯಸ್ಥ ಝಾಕೀರ್ ನಾಯ್ಕ್ ಇದೀಗ ಮಲೇಷಿಯಾದಲ್ಲಿ ತಲೆಮರೆಸಿಕೊಂಡಿದ್ದು, ಭಾರತದಲ್ಲಿ ಬಿಜೆಪಿ ಸರಕಾರ ಇರುವವರೆಗೂ ನಾನು ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಯಾಕೆಂದರೆ ಮೋದಿ ಅಧಿಕಾರ ವಹಿಸಿಕೊಂಡ ದಿನವೇ ಹೇಳಿದ ಮೊದಲ ಮಾತು, “ದೇಶದ ಸಂಪತ್ತನ್ನು ನಾನೂ ತಿನ್ನುವುದಿಲ್ಲ, ಬೇರೆಯವರಿಗೆ ತಿನ್ನಲು ಬಿಡುವುದಿಲ್ಲ” ಎಂದು. ಹೇಳಿದ ಪ್ರಕಾರ ನಡೆದುಕೊಂಡು ಬಂದ ಮೋದಿ ದೇಶಕ್ಕೆ ಮಾರಕವಾದ ಒಬ್ಬೊಬ್ಬರನ್ನು ಹೆಡೆಮುರಿಕಟ್ಟುತ್ತಿದ್ದಾರೆ.

ಝಾಕೀರ್ ನಾಯ್ಕ್‌ನ ಮಾತು ಕೇಳಿ ಅದೆಷ್ಟೋ ಯುವಕರು ಭಯೋತ್ಪಾದನ ಸಂಘಟನೆಗೆ ಸೇರಿಕೊಂಡಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ಕೂಡ ಅಂದಿನ ಕಾಂಗ್ರೆಸ್ ಸರಕಾರ ಈತನ ಮೇಲೆ ಯಾವುದೇ ಕ್ರಮ‌ ಕೈಗೊಂಡಿರಲಿಲ್ಲ. ಅಷ್ಟೇ ಅಲ್ಲದೆ ಅಕ್ರಮ‌ ಹಣದ ಪೂರೈಕೆಯಲ್ಲೂ ಭಾಗಿಯಾಗಿದ್ದ ಝಾಕೀರ್ ನಾಯ್ಕ್ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದವು. ಆದರೆ ಕಾಂಗ್ರೆಸ್‌ನ ಕೃಪಕಾಟಕ್ಷದಿಂದ ರಾಜಾರೋಷವಾಗಿ ತಿರುಗಾಡುತ್ತಿದ್ದ ಈತನಿಗೆ ಮೋದಿ ಬಂದ ನಂತರ ಕಂಟಕ ಶುರುವಾಗಿತ್ತು.‌ ಇದನ್ನರಿತ ಝಾಕೀರ್ ನಾಯ್ಕ್ ಭಾರತದಿಂದ‌ ಪರಾರಿಯಾಗಿ ಮಲೇಷಿಯಾದಲ್ಲಿ ಆಶ್ರಯ ಪಡೆದುಕೊಂಡಿದ್ದ. ಇದೀಗ ಸ್ವತಃ ಝಾಕೀರ್ ನಾಯ್ಕ್ ಈ ಬಗ್ಗೆ ಹೇಳಿಕೆ ನೀಡಿದ್ದು ಪ್ರಧಾನಿ ಮೋದಿ ಯಾವ ರೀತಿ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿಯುತ್ತದೆ.

See the source image

ಅದೇನೇ ಇರಲಿ ಮೋದಿ ಏನೂ ಮಾಡಿಲ್ಲ ಎನ್ನುವ ವಿರೋಧಿಗಳಿಗೆ ಕೂಡ ಮೋದಿ ಏನು ಮಾಡಿದ್ದಾರೆ ಎಂಬುದು ಅರ್ಥ ಆಗಿದೆ ಎಂಬುದಂತು ಸ್ಪಷ್ಟ.!

-ಸಾರ್ಥಕ್ ಶೆಟ್ಟಿ

 

Tags

Related Articles

FOR DAILY ALERTS
 
FOR DAILY ALERTS
 
Close