ಪ್ರಚಲಿತ

ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರ ಗುರು ಒಬ್ಬ ಮುಸಲ್ಮಾನ ವ್ಯಕ್ತಿ?! ಯೋಗಿಗೆ ಸಂನ್ಯಾಸ ದೀಕ್ಷೆ ನೀಡಿದ್ದ ಆ ಗುರು ಯಾರು ಗೊತ್ತಾ?!

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ.. ಅದಕ್ಕೂ ಮುಂಚೆ ಅವರೊಬ್ಬ ಸಂತ ಕುಲದ ಶ್ರೇಷ್ಠ ಸನ್ಯಾಸಿ!! ಹಿಂದೂಗಳ ಹೃದಯ ಸಾಮ್ರಾಟ!! ತನ್ನ ಉಗ್ರ ಹಿಂದುತ್ವವಾದದಿಂದಲೇ ಹಿಂದೂಗಳ ಮನಗೆದ್ದ ದೇಶದಲ್ಲಿಯೇ ಹಿಂದುತ್ವದ ಬೆಂಕಿ ಚೆಂಡು ಎಂದು ಗುರುತಿಸಿಕೊಂಡವರು.. ತನ್ನ ಪ್ರಖರವಾದ ಮಾತುಗಳಿಂದ ಜನರನ್ನು ಮಂತ್ರ ಮುಗ್ಧರನ್ನಾಗಿಸಿ ದೇಶ ಸೇವೆಯ ಮುಖ್ಯ ವೇದಿಕೆಗೆ ಬರುವಂತೆ ಪ್ರಯತ್ನ ಪಟ್ಟವರು ಯೋಗಿ ಆದಿತ್ಯನಾಥರು!! ಇಡೀ ಉತ್ತರಪ್ರದೇಶವನ್ನು ಮುಖ್ಯಮಂತ್ರಿಯಾದ ಬಳಿಕ ಇಡೀ ಉತ್ತರ ಪ್ರದೇಶವನ್ನೇ ಬದಲಾಯಿಸಿದ ಮಹಾ ಚತುರ!!

ಯೋಗಿ ಆದಿತ್ಯನಾಥರು ಮುಸ್ಲಿಮ್ ವಿರೋಧಿ ಎಂದು ಹೇಳುತ್ತಿದ್ದವರು ಒಂದು ಈ ಬಾರಿ ಸ್ಟೋರಿಯನ್ನು ಓದಲೇ ಬೇಕಾಗಿದೆ!! ತದ ನಂತರವಾದರೂ ಇಲ್ಲಿಯವರೆಗೆ ಯೋಗಿಜೀಯನ್ನು ದೂರುತ್ತಿದ್ದ ವ್ಯಕ್ತಿಗಳು ಈಗ ಬಾಯಿಗೆ ಬೀಗ ಹಾಕಿ ಕುಳಿತುಕೊಳ್ಳಬೇಕಾಗುತ್ತದೆ.. ಅದಲ್ಲದೆ ಹಿಂದೂ ಧರ್ಮವನ್ನು ಹೀಯಾಳಿಸುವ ಕೆಲ ಜನರಿಗೆ ಮುಖಕ್ಕೆ ಹೊಡೆದಂತಾಗಬಹುದು.. ಯೋಗಿ ಆದಿತ್ಯನಾಥರ ಗುರುವಿನ ಬಗ್ಗೆ ಯಾರಿಗಾದರೂ ತಿಳಿದಿದೆಯಾ? ಅವರ ಗುರು ಹಿಂದೂ ಧರ್ಮ ಸ್ವೀಕರಿಸುವ ಮೊದಲು ಯಾವ ಧರ್ಮಕ್ಕೆ ಸೇರಿದವರು ಎಂದು ತಿಳಿದಿದೆಯಾ?

ಯೋಗಿ ಆದಿತ್ಯರ ಗುರು ಗುಲ್ ಮೊಹಮ್ಮದ್ ಪಠಾಣ್!!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೂ ಗುಜರಾತ್‍ಗೂ ಅವಿನಾಭಾವ ಸಂಬಂಧ. ಕಟ್ಟಾ ಹಿಂದೂವಾದಿಗಳೆಂದು ಹೆಸರಾಗಿರುವ ಆದಿತ್ಯನಾಥರಿಗೆ ದೀಕ್ಷೆ ನೀಡಿದ ಗುರುಗಳಾರೆಂದು ತಿಳಿದರೆ ನಿಮಗೆ ಆಶ್ವರ್ಯವಾದೀತು! ಗುಜರಾತ್‍ನ ವಿಸ್ನಾಗರ್‍ದಲ್ಲಿರುವ ನಾಥ ಸಂಪ್ರದಾಯ ಮಠದ ಹಿಂದಿನ ಗುರುಗಳಾದ ಗುಲಾಬ್ ನಾಥ್ ಬಾಪು ಯೋಗಿ ಆದಿತ್ಯನಾಥರ ಧಾರ್ಮಿಕ ಗುರು!! ಆಶ್ಚರ್ಯಕರ ವಿಚಾರ ಅಂದರೆ ಗುಲಾಬ್ ನಾಥ್ ಬಾಪುರವರು ಹುಟ್ಟು ಮುಸ್ಲಿಮರಾಗಿದ್ದು, ಹಿಂದೂ ತೀವ್ರವಾದಿ ಎಂದೇ ಗುರುತಿಸಿಕೊಂಡಿದ್ದಾರೆ!!…

ಬಾಪು ಅವರ ಪೂರ್ವಾಶ್ರಮದ ಹೆಸರು ಗುಲ್ ಮೊಹಮ್ಮದ್ ಪಠಾಣ್, ನಾಥ ಪಂಥಕ್ಕೆ ಮನಸೋತ ಪಠಾಣ್ ಬಾಪು ಆಗಿ ಪರಿವರ್ತನೆ ಹೊಂದಿದರು. ಮುಸ್ಲಿಂ ಧರ್ಮದಿಂದ ನಾಥ ಪರಂಪರೆಗೆ ಬದಲಾದರು.. ಯೋಗಿ ಆದಿತ್ಯನಾಥರ ಪ್ರತೀಯೊಂದು ಕಲಿಕೆಯಲ್ಲೂ ಗುಲಾಬ್ ನಾಥ್ ಬಾಪು ರಿದ್ದರು.. ಒಂದೇ ಆಶ್ರಮದಲ್ಲಿ ಒಂದಿಷ್ಟು ದಿನವಿದ್ದ ಕಾರಣದಿಂದ ಇಬ್ಬರ ನಡುವೆ ಅನೋನ್ಯ ನಂಟು ಬೆಳೆದಿತ್ತು. ವಯಸ್ಸಿನ ಅಂತರವಿದ್ದರೂ ಸಂಬಂಧ ವಯಸ್ಸಿನ ಅಂತರದಂತೆ ಇರಲಿಲ್ಲ.!! ಗುರು ಗುಲಾಬ್ ನಾಥ್ ಬಾಪು ಅವರೇ ಯೋಗಿ ಆದಿತ್ಯರ ಗುರುವಾಗಿದ್ದರು…

ಕೆಲ ಸಮಯದ ಬಳಿಕ ಗುರು ಮಹಾಂತ ಅವೈದ್ಯನಾಥ್ ಗೋರಖ್ ಪುರ ಮಠದಲ್ಲಿ ವಿಸ್ ನಗರ ಮಠವನ್ನು ಗುಲಾಬ್ ನಾಥ್ ಬಾಪು ನೋಡಿಕೊಳ್ಳುತ್ತಿದ್ದರು. ಗುರು ಮಹಾಂತ ಅವೈದ್ಯನಾಥ್ ಕಾಲವಾದ ನಂತರ ಆದಿತ್ಯನಾಥ್ ಪೀಠಾಧಿಪತಿಯಾದರು!!

ಕಳೆದ ವರ್ಷ ಮುಸ್ಲಿಂ ಧರ್ಮದಿಂದ ನಾಥ ಪಂಥಕ್ಕೆ ಬಂದ ಗುಲಾಬ್ ನಾಥ್ 86 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಈ ವೇಳೆ ಗುರು ಸಹೋದರನ
ಉತ್ತರಾಧಿಕ್ರಿಯೆಗಳನ್ನು ನೆರವೇರಿಸಿದ್ದು ಅದೇ ಆದಿತ್ಯನಾಥ್ ಎಂದು ಸ್ವತಃ ಗುಲಾಬ್ ನಾಥ್ ಸಹೋದರನೇ ಹೇಳಿಕೊಂಡಿದ್ದಾರೆ… ಗುಲಾಬ್ ನಾಥ್ ಆನಾರೋಗ್ಯ ಪೀಡಿತರಾದ ಸಂದರ್ಭದಲ್ಲಿ ಉತ್ತರ ಪ್ರದೇಶದ ತಮ್ಮ ಮಠದಿಂದ ದೂರವಾಣಿ ಕರೆ ಮಾಜಿ ಗುಲಾಬ್ ನಾಥ್ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದರು. ಗುಲಾಬ್ ನಾಥ್ ಕಾಲವಾದ ನಂತರ ಕೆಲ ತಿಂಗಳು ವಿಸ್ ನಗರ ಮಠದ ಮಹಾಂತರಾಗಿದ್ದರು. ಸಂಕರ್ನಾಥ್ ಅವರನ್ನು ಮಹಾಂತರನ್ನಾಗಿ ಆದಿತ್ಯನಾಥ್ ನೇಮಿಸಿದರು.. ಸಂಕರ್ನಾಥ್ ಹೇಳುವಂತೆ ಇವರಿಬ್ಬರ ನಡುವೆ ಸಾಕಷ್ಟು ಆತ್ಮೀಯತೆ ಇತ್ತು. ವರ್ಷಕ್ಕೆ ಎರಡು ಬಾರಿ ಮಠಕ್ಕೆ ಭೇಟಿ ನೀಡುತ್ತಿದ್ದರಂತೆ. ಗುಜರಾತ್ ನಲ್ಲಿ ಯಾವುದೇ ಪ್ರವಾಸ ಕೈಗೊಳ್ಳುವುದಿದ್ದರೂ ಅದು ವಿಸ್ ನಗರ ಮಠದಿಂದ ಪ್ರಾರಂಭಗೊಳ್ಳುತ್ತಿತ್ತು.

ಆದಿತ್ಯನಾಥ್ ಅವರೊಂದಿಗೆ ಗುರು ದೀಕ್ಷೆ ಪಡೆದವರು ಮುಸ್ಲಿಂ ಧರ್ಮದಿಂದ ಬಂದವರಾಗಿದ್ದರು ಅನ್ನುವುದು ಉಲ್ಲೇಖಿಸಿರುವ ಉದ್ದೇಶ ಇಷ್ಟೇ. ಆದಿತ್ಯನಾಥ್ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಅದರಲ್ಲಿ ಅರ್ಥವಿಲ್ಲ. ಮುಸ್ಲಿಂರೊಂದಿಗೆ ಅವರಿಗೆ ನಿಕಟ ಸಂಪರ್ಕವಿತ್ತು. ಆತ್ಮೀಯ ಬಳಗದಲ್ಲಿ ಮುಸ್ಲಿಂರು ಕೂಡಾ ಇದ್ದಾರೆ ಅನ್ನುವುದನ್ನು ತಿಳಿಸುವುದಷ್ಟೇ ಉದ್ದೇಶ. ಹಿಂದೂ ಧರ್ಮದ ಮೇಲಿನ ದಾಳಿಯನ್ನು ಸಹಿಸದೇ ಅನ್ಯ ಧರ್ಮದ ಮೇಲೆ ಅವರು ಕೆಂಡ ಕಾರಿದ್ದಾರೆ. ಹಾಗಂತ ಬೇರ ಧರ್ಮವನ್ನು ದ್ವೇಷಿಸಿದವರಲ್ಲ ಆದಿತ್ಯನಾಥ್. ಅವರ ಮಠದ ಪರಂಪರೆ ಕೂಡಾ ಬೇರೆ ಧರ್ಮವನ್ನು ದ್ವೇಷಿಸುವುದಕ್ಕೆ ಒಪ್ಪುವುದಿಲ್ಲ. ಹೀಗಾಗಿಯೇ ಅವರು ಸಿಎಂ ಆಗಿದ್ದಾರೆ. ಪ್ರತಿಯೊಬ್ಬರಿಗೂ ಅಭಿವೃದ್ಧಿ ಮಂತ್ರ ಬೋಧಿಸುವ ಕ್ರಾಂತಿಕಾರಿ ಖಾವಿಧಾರಿಯಾಗಿದ್ದಾರೆ.

source: sanskritimagazine.com

-ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close