ಪ್ರಚಲಿತ

ಕಾಂಗ್ರೆಸ್ ರಫೇಲ್ ರಫೇಲ್ ಎಂದು ಅರಚಾಡುತ್ತಲೆ ಇರುವಂತೆಯೆ ಇತ್ತ ಸತತ ನಾಲ್ಕೂವರೆ ವರ್ಷಗಳಿಂದ ಬಲೆ ಬೀಸಿ ಅಗಸ್ಟಾ ವೆಸ್ಟ್ ಲ್ಯಾಂಡ್ ಮಿಕವನ್ನು ತಂದೆ ಬಿಟ್ಟಿತಲ್ಲ ಭಾರತದ ಜಯ್- ವೀರು ಜೋಡಿ!!

ಅಜಿತ್ ಧೋವಲ್……ನಾಮ್ ಹೀ ಕಾಫೀ ಹೈ….. ಈ ವ್ಯಕ್ತಿಗೆ ಈ ವ್ಯಕ್ತಿಯೆ ಉಪಮೆ. ಇವರ ಪರಿಚಯವನ್ನು ಮಾಡುವ ಅಗತ್ಯವೆ ಇಲ್ಲ! ಭಾರತದ ಇತಿಹಾಸದಲ್ಲಿ ಆಧುನಿಕ ಚಾಣಕ್ಯ-ಚಂದ್ರಗುಪ್ತ ಜೋಡಿಯೊಂದಿದ್ದರೆ ಅದುವೆ ಮೋದಿ-ಧೋವಲ್ ಜೋಡಿ. ಇಡಿಯ ಮೋದಿ ಸರಕಾರ ದೇಹವಾದರೆ ಮೋದಿ-ಧೋವಲ್ ಜೋಡಿ ಅದರ ಆತ್ಮ. ವಿದೇಶಾಂಗ ನೀತಿಯಲ್ಲಿ ಈ ಜೋಡಿಯ ಚಾಣಾಕ್ಯ್ಷತೆಯನ್ನು ಸರಿಗಟ್ಟುವ ಜೋಡಿಯೊಂದು ಬಹುಶಃ ಅಮೇರಿಕಾದ ಸಿ.ಐ.ಎನಲ್ಲೂ ಇಲ್ಲ!! ಇದು ಅತಿಶಯೋಕ್ತಿಯಲ್ಲ ನಿಜ. ಭಾರತದ ಇತಿಹಾಸದ ಜಯ್-ವೀರು ಜೋಡಿ ಏನಾದರೂ ವಾಸ್ತವದಲ್ಲಿ ಇದ್ದರೆ ಅದು ಮೋದಿ-ಧೋವಲ್ ವಿನಹ ಬೇರಾರೂ ಅಲ್ಲ.

ಮೋದಿ- ಧೋವಲ್ ಜೋಡಿ ಕಾಂಗ್ರೆಸ್ ಘಟಾನುಘಟಿಗಳನ್ನು ಅವರದ್ದೇ ಆಟದಲ್ಲಿ ಸೋಲಿಸಿದ್ದು ಹೇಗೆ?

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಮುಖ್ಯ ದಲ್ಲಾಳಿ ಕ್ರಿಶ್ಚಿಯನ್ ಮಿಶೆಲ್ ಅನ್ನು ಹಿಡಿಯಲು 2014ರಲ್ಲೆ ಬಲೆ ಬೀಸಲಾಗಿತ್ತು. ಯುಪಿಎ ಆಡಳಿತದಲ್ಲಿ ನಡೆದ ಈ ವಿವಿಐಪಿ ಹೆಲಿಕಾಪ್ಟರ್ ಹಗರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳಕ್ಕೆ ಮಿಶೆಲ್ ಅಗತ್ಯವಾಗಿ ಬೇಕಾಗಿದ್ದ. ಅಗಸ್ಟಾ ವೆಸ್ಟ್ ಲ್ಯಾಂಡ್ ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ಹಲವಾರು ಪ್ರಶ್ನೆಗಳ ಉತ್ತರ ಮಿಶೆಲ್ ಬಳಿ ಇದೆ. ಇಡಿಯ ಒಪ್ಪಂದದಲ್ಲಿ ಮಿಶೆಲ್ ಒಬ್ಬ ಮಧ್ಯವರ್ತಿಯ ಕೆಲಸ ಮಾಡಿದ್ದು, ಸತತ ನೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದ.

ಮಿಕವನ್ನು ಹಿಡಿಯಲು ಬಲೆ ಬೀಸಿದ್ದು ಹೇಗೆ

ಮೊತ್ತ ಮೊದಲು ಮೋದಿ UAE ಜೊತೆ ಸೌಹಾರ್ದ ಸಂಬಂಧ ಏರ್ಪಡಿಸಿಕೊಂಡರು. ತದನಂತರ ಭಾರತದಲ್ಲಿ ಹಲವಾರು ಕ್ಷಿಪ್ರ ಬದಲಾವಣೆಗಳಾದವು. ಒಂದರ ಹಿಂದೆ ಒಂದರಂತೆ ಮೋದಿ ಸರಕಾರ ಮಹತ್ವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಯಿತು. ಅತ್ತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಗತ್ತಿನ ಎಲ್ಲಾ ದೇಶಗಳನ್ನು ಸುತ್ತುತ್ತಲೆ ಇತ್ತ ಭಾರತದಲ್ಲಿ ಅನೇಕ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು ಮೋದಿ.

ಇತ್ತೀಚೆಗೆ ಸಿಬಿಐನಲ್ಲಿ ನಡೆದ ಬದಲಾವಣೆ ಬಹು ದೊಡ್ಡ ಗೇಮ್ ಛೇಂಜರ್. ಅಲೋಕ್ ವರ್ಮಾ ಮತ್ತು ರಾಕೇಶ ಅಸ್ಥಾನಾನನ್ನು ಸಿಬಿಐ ಇಂದ ಹೊರದಬ್ಬಿದ್ದೆ ಈ ಕಾರಣಕ್ಕಾಗಿ. ಇವರಿಬ್ಬರೂ ಕಾಂಗ್ರೆಸ್ ಬಂಟರು ತನಿಖೆ ಸಮಯದಲ್ಲಿ ನಡೆಯುವ ಎಲ್ಲಾ ವಿಷಯಗಳು ಇಟಾಲಿಯನ್ ಗ್ಯಾಂಗ್ ಗೆ ತಲುಪುತ್ತಿದ್ದುದ್ದು, ಮಹತ್ವದ ಕಡತಗಳು ಮಾಯವಾಗುತ್ತಿದ್ದುದ್ದು ಇವರಿಂದಾಗಿಯೆ. ಆ ಕಾರಣಕ್ಕಾಗಿಯೆ ಅಲೋಕ್ ವರ್ಮಾ ಜಾಗಕ್ಕೆ ಸಿಘಂ ಅಧಿಕಾರಿ ನಾಗೇಶ್ವರ್ ರಾವ್ ಅವರನ್ನು ಮಧ್ಯಂತರ ಸಿಬಿಐ ಮುಖ್ಯಸ್ತರನ್ನಾಗಿ ನೇಮಿಸಲಾಯಿತು.

ಧೋವಲ್- ನಾಗೇಶ್ವರ್ ರಾವ್ ಜೋಡಿ ಕ್ರಿಶ್ಚಿಯನ್ ಮೈಕೆಲ್ ಅನ್ನು ಕರೆತರುವಲ್ಲಿ ಕಡೆಗೂ ಯಶಸ್ವಿಯಾಯಿತು. ಇನ್ನು ಕಾಂಗ್ರೆಸ್ ಎನ್ನುವ ಶಕುನಿಯನ್ನು ಅವರದೆ ಚದುರಂಗದಾಟದಲ್ಲಿ ಮಟ್ಟ ಹಾಕಿದರು ಮೋದಿ-ಧೋವಲ್. ರಾಫೆಲ್ ಒಪ್ಪಂದದಲ್ಲಿ ಮುಚ್ಚಿಡುವಂತಹದ್ದು ಏನೂ ಇರಲಿಲ್ಲ. ಆದರೆ ಮೋದಿ-ಧೋವಲ್ ಅದನ್ನು ಮುಚ್ಚಿಟ್ಟಂತೆ ತೋರಿಸಿದರು. ಮಂಗಗಳ ಗುಂಪಿನ ಎದುರು ನೀವು ಏನನ್ನಾದರೂ ಬಚ್ಚಿಟ್ಟಂತೆ ನಾಟಕವಾಡಿದರೂ ಸಾಕು, ಅದು ಕುತೂಹಲದಿಂದ ನೋಡುತ್ತಿರುತ್ತದೆ. ನೀವು ಅಲ್ಲಿಂದ ತೆರಳುವುದನ್ನೆ ಕಾಯುತ್ತಾ ಇರುತ್ತದೆ. ನೀವು ಜಾಗ ಬಿಟ್ಟು ತೆರಳಿದ ಕೂಡಲೆ ಅಲ್ಲಿ ತನಿಖೆ ನಡೆಸಲು ಶುರುವಿಟ್ಟುಕೊಳ್ಳುತ್ತದೆ. ಅಲ್ಲಿ ಏನೂ ಸಿಗದಿದ್ದಾಗ ಪೇಚಾಡುತ್ತದೆ. ಇಂಗನ್ನು ಬೆಲ್ಲವೆಂದು ತಿಂದು ಪೆಂಗನಾದ ಮಂಗನಾದ ಕಥೆ ಗೊತ್ತಲ್ಲ?

ಕಾಂಗ್ರೆಸ್ ಪಾಡು ಥೇಟ್ ಇಂಗು ತಿಂದ ಮಂಗನಂತೆಯೆ ಆಗಿದೆ. ರಫೇಲ್ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಸಾಬೀತು ಮಾಡಲು ಕಾಂಗ್ರೆಸ್ ಹರಸಾಹಸ ಪಡಲು ಶುರುವಿಟ್ಟುಕೊಂಡಿತ್ತು. ಮೋದಿ ಒಂದು ರುಪಾಯಿಯೂ ಮುಟ್ಟುವವರಲ್ಲ ಎಂದು ಬಲವಾಗಿ ನಂಬಿದ ದೇಶದ ಜನತೆ ಮೋದಿ ಜೊತೆ ನಿಂತುಕೊಂಡಿತು. ಕಾಂಗ್ರೆಸ್ ಇಲ್ಲಿ ರಫೇಲ್ ವಿಮಾನ ಓಡಿಸುತ್ತಲೆ ಕಾಲ ಕಳೆಯಿತು ಆದರೆ ಅಲ್ಲಿ ಮೋದಿ-ಧೋವಲ್ ಜೋಡಿ ಹೆಲಿಕಾಪ್ಟರ್ ಮಿಕವನ್ನು ಹಿಡಿಯಲು ಗುಂಡಿ ತೋಡಿಯಾಗಿತ್ತು!! ಚಾಣಕ್ಯ-ಚಂದ್ರಗುಪ್ತರು ತೋಡಿದ್ದ ಖೆಡ್ಡಾಕ್ಕೆ ನಂದರ ಪರಿವಾರವೆ ಸರ್ವನಾಶವಾಗಿತ್ತು. ಹಾಗೆಯೆ ಮೋದಿ-ಧೋವಲ್ ತೋಡಿದ ಖೆಡ್ಡಾಕ್ಕೆ ಕಾಂಗ್ರೆಸ್ ಅನಾಮತ್ತಾಗಿ ಬಿದ್ದಿತ್ತು. ಇಡಿಯ ಪ್ರಪಂಚದ ಗಮನವನ್ನು ರಫೇಲ್ ಮೇಲೆ ಕೇಂದ್ರೀಕರಿಸಿ ತಣ್ಣನೆ ತಮ್ಮ ಕೆಲಸ ಮುಗಿಸಿದ ಮೋದಿ-ಧೋವಲ್ ಜೋಡಿ ಈಗ ಮೀಸೆ ಅಡಿ ಮುಸಿ ಮುಸಿ ನಗುತ್ತಿರಬಹುದು!

ಮೋದಿ-ಧೋವಲ್ ಹೆಣೆದ ಬಲೆಯನ್ನು ತುಂಡರಿಸಲು ಕಾಂಗ್ರೆಸ್ಸಿನ ಘಟಾನುಘಟಿಗಳಿಗೆ ಬಿಡಿ, ಸ್ವತಃ ಸಿಐಎಗೂ ಸಾಧ್ಯವಾಗಲಿಲ್ಲ! ಭಾರತದಲ್ಲಿ ಹುಲ್ಲು ಕಡ್ಡಿ ಅಲುಗಾಡಿದರೂ ಅಮೇರಿಕಾದ ಸಿಐಎಗೆ ತಕ್ಷಣ ಮಾಹಿತಿ ಹೋಗುತ್ತದೆ ಮತ್ತು ಇಲ್ಲಿನ ಎಲ್ಲಾ ಉಪಾಯಗಳೂ ಮಕ್ಕಾಗುತ್ತವೆ ಎನ್ನುವುದು ಧೋವಲ್ ಗೆ ಚೆನ್ನಾಗಿ ಗೊತ್ತು. ಇಟಾಲಿಯನ್ ಗ್ಯಾಂಗ್ ಗೆ ಅಪಾಯವಾಗುವ ಯಾವುದೆ ಸಾಕ್ಷಿಯನ್ನು “ಹೆಡ್ ಆಫೀಸ್” ಜೀವಂತ ಉಳಿಸುವುದಿಲ್ಲ ಹಾಗಿದ್ದರೂ ಮಿಶೆಲ್ ನನ್ನು ಜೀವಂತವಾಗಿ ತಂದಿದ್ದು ಅದ್ಭುತವೆ ಸರಿ. ಇನ್ನು ತಮ್ಮ ಸೇವಾ ಅವಧಿಯಲ್ಲಿ ಕಾಂಗ್ರೆಸ್ಸಿನ ಎಲ್ಲಾ ಮಂಗನಾಟಗಳನ್ನೂ ಹತ್ತಿರದಿಂದ ನೋಡಿದ್ದ ಧೋವಲ್ ಗೆ ಚಕ್ರವ್ಯೂಹವನ್ನು ಭೇಧಿಸುವ ವಿದ್ಯೆ ಕರಗತವಾಗಿದೆ. ಎದುರಾಳಿಗಳಿಗೆ ಮಣ್ಣು ಮುಕ್ಕಿಸುತ್ತಾ ಅವರದ್ದೆ ನೆಲದಿಂದ ಕಾರ್ಯನಿರ್ವಹಿಸುವ ಭಾರತದ ಜೇಮ್ಸ್ ಬಾಂಡ್ ಧೋವಲ್, ಮೋದಿ ಸರಕಾರದ ಮಾಸ್ಟರ್ ಮೈಂಡ್ ಎಂದೆ ಹೇಳಬಹುದು. ಮೋದಿಜಿ ತಮ್ಮ ಬಳಿಕ ಅತಿ ಹೆಚ್ಚು ನಂಬುವ ವ್ಯಕ್ತಿಗಳಲ್ಲಿ ಧೋವಲ್ ಹೆಸರು ಮೊದಲು ಬರುತ್ತದೆ ಎನ್ನಬಹುದು.

ಕ್ರಿಶ್ಚಿಯನ್ ಮೈಕೆಲ್ ಹೆಡೆಮುರಿ ಕಟ್ಟಿ ಭಾರತಕ್ಕೆ ತಂದಿರುವುದರಿಂದ ದೇಶದ್ರೋಹಿ ಇಟಾಲಿಯನ್ ಗ್ಯಾಂಗ್ ಎದೆಯಲ್ಲಿ ನಡುಕ ಹುಟ್ಟಿದೆ. ಎಲ್ಲಿ ಆತ ತಮ್ಮ ಹೆಸರು ಹೇಳುತ್ತಾನೋ ಎಂದು ದೇಶದ್ರೋಹಿ ಪಡೆ ಬೆದರಿ ಕೂತಿದೆ. ಕಾಂಗ್ರೆಸ್ಸಿನ “ದೊಡ್ಡ ಮಂಡೆ”ಗಳೆಲ್ಲಾ ಒಂದಾದ ಮೋಲೊಂದರಂತೆ ಹಗರಣದ ಕೇಸುಗಳನ್ನು ಎದುರಿಸುತ್ತ ಕೋರ್ಟ್ ಕಚೇರಿ ಅಲೆದು ಅಲೆದು ಹೈರಾಣಾಗಿವೆ. ಆ ಪರಮಾತ್ಮನೆ ಬಂದು ಮೋದಿ ವಿರುದ್ಧ ಮಾತನಾಡಿದರೂ ಜನ ನಂಬುವ ಸ್ಥಿತಿಯಲ್ಲಿಲ್ಲ! ಮೋದಿ ಆ ಮಟ್ಟಿಗೆ ಅಪ್ಪಟ ದೇಶಭಕ್ತ ಎನ್ನುವ ವಿಚಾರ ಜನರಿಗೆ ಚೆನ್ನಾಗಿ ಅರ್ಥವಾಗಿದೆ. ಕಾಂಗ್ರೆಸ್ ನ ಮಂಗನಾಟಗಳೆಲ್ಲಾ ಮೋದಿ-ಧೋವಲ್ ಮುಂದೆ ನಡೆಯದು. ಕಾಂಗ್ರೆಸ್ ವಿನಾಶ ನಿಶ್ಚಿತ…

–ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close