ಅಂಕಣದೇಶ

ವಿದೇಶದಲ್ಲೂ ಮೊಳಗಿದ ಛತ್ರಪತಿ ಕಹಳೆ!! ಈ ದೇಶ ಯುದ್ಧ ಗೆಲ್ಲಲು ಶಿವಾಜಿಯೇ ಸ್ಫೂರ್ತಿ ಹೇಗೆ ಗೊತ್ತಾ?!

ಮಧ್ಯಯುಗದ ಭಾರತದ ಇತಿಹಾಸದಲ್ಲಿ ಮುಸಲ್ಮ್ಮಾನರ ಆಕ್ರಮಣವಾಗುವುದರೊಂದಿಗೆ ಮತಾಂಧತೆ, ಮತಾಂತರ, ದೇವಾಲಯಗಳ ನಾಶ, ಸ್ತ್ರೀಯರ ಮೇಲಿನ ದೌರ್ಜನ್ಯ ಇತ್ಯಾದಿಗಳು ಮೆರೆದಾಡಿದಾಗ, ಹಿಂದೂಗಳ ಅಸ್ತಿತ್ವಕ್ಕೇ ಹಾನಿಯಾಯಿತು. ಆ ನಿರ್ಣಾಯಕ ದಿನಗಳಲ್ಲಿ ಹಿಂದೂ ಸಾಮ್ರಾಜ್ಯವೊಂದು ಮರಾಠಾ ನಾಯಕತ್ವದಲ್ಲಿ ತಲೆಯೆತ್ತಿತು….ಆ ಸಮಯದಲ್ಲಿ ಅದಿಪತ್ಯವನ್ನು ವಹಿಸಿಕೊಂಡವನೇ ಛತ್ರಪತಿ ಶಿವಾಜಿ!!!! ಮೊದಲು ಸ್ವರಾಜ್ಯ ಪದವನ್ನು ಹೇಳಿದ ವೀರ ಛತ್ರಪತಿ ಶಿವಾಜಿ!! ಹಿಂದೂಧರ್ಮವನ್ನೂ ಗಟ್ಟಿಗೊಳಿಸಲು ಹೋರಾಟ ಮಾಡಿದ ಭಾರತದ ವೀರ ಈತ!! ಶಿವಾಜಿಯ ಸಾಹಸದ ಬಗ್ಗೆ ಹೇಳ ಹೊರಟರೆ ಒಂದು ಬಾರಿ ಮೈ ಜುಮ್ಮೆನ್ನುವುದು.. ಅಂದಿನಿಂದ ಇಂದಿನವರೆಗೆ ಪ್ರತೀಯೊಬ್ಬ ಭಾರತೀಯ ಹಿಂದುವಿನ ಮೈಯಲ್ಲಿ ಶಿವಾಜಿ ಹೆಸರು ಕೇಳಿದರೆ ಅವರ ಸಾಹಸದ ಬಗ್ಗೆ ನೆನೆಪಿಸಿದರೆ, ಹಿಂದೂ ಧರ್ಮದ ಉಳಿಗಾಗಿ ಮಾಡಿದ ಹೋರಾಟ ಇದೆಲ್ಲವನ್ನು ನೆನಪಿಸಿದರೆ ಒಂದು ಬಾರಿ ಮೈನವಿರೇಳುತ್ತದೆ…..ಮುಖದಲ್ಲೇ ಆ ವೀರತ್ವದ ತೇಜಸ್ಸು ಎದ್ದು ಕಾಣುತ್ತದೆ… ಆದರೆ ಇವರ ಸಾಹಸ ಬಗ್ಗೆ ಇವರ ಜೀವನದ ಬಗ್ಗೆ ಕೆದಕುತ್ತಾ ಹೋದಷ್ಟು ಮತ್ತಷ್ಟು ರಸಹ್ಯಗಳು ಸಿಗುತ್ತಾ ಹೋಗುತ್ತವೆ…

ವಿಯೆಟ್ನಾಂನ ವಿದೇಶಾಂಗ ಸಚಿವೆ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಆಕೆ ಮಹಾತ್ಮ ಗಾಂಧೀಜಿ ಅವರ ಸಮಾಧಿ ಹಾಗೂ ಕೆಂಪುಕೋಟೆಗೆ ಭೇಟಿ ನೀಡಿದ್ದರು. ತಕ್ಷಣ ಆಕೆ ಛತ್ರಪತಿ ಶಿವಾಜಿ ಸಮಾಧಿ ಎಲ್ಲಿದೆ?’ ಎಂದು ಪ್ರಶ್ನಿಸುತ್ತಾರೆ.. ಆಗ ಅಲ್ಲಿ ಉಪಸ್ಥಿತರಿದ್ದ ಅಧಿಕಾರಿಯೊಬ್ಬರು ಶಿವಾಜಿ ಸಮಾಧಿ ಇಲ್ಲಿಂದ ಬಹುದೂರದಲ್ಲಿರುವ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿದೆ ಎಂದು ಉತ್ತರಿಸಿದ್ದರು. ವಿಯೆಟ್ನಾಂನ ಸಚಿವೆ ಆ ಜಾಗಕ್ಕೆ ಭೇಟಿ ನೀಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಅಲ್ಲಿಗೆ ಭೇಟಿ ನೀಡಿದರು ಕೂಡ. ಶಿವಾಜಿಯ ಸಮಾಧಿಗೆ ನಮಿಸಿದ ಬಳಿಕ ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡು ಆ ಸಚಿವೆ ಹೇಳಿದ ಒಂದೇ ಒಂದು ವಾಕ್ಯ-`ಶಿವಾಜಿ ನಮ್ಮ ದೇಶದಲ್ಲಿ ಹುಟ್ಟಿದ್ದರೆ!’ ಆ ಬಳಿಕ ಸಮಾಧಿ ಬಳಿಯಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಅದನ್ನು ಹಣೆಗೆ ಹಚ್ಚಿಕೊಂಡರು. ಅದರಲ್ಲಿ ಸ್ವಲ್ಪ ಭಾಗವನ್ನು ಪರ್ಸ್‍ನಲ್ಲಿ ಜೋಪಾನವಾಗಿ ತೆಗೆದಿಟ್ಟ ಆಕೆ ಹೇಳಿದ್ದು ಇಷ್ಟು: ‘ಈ ಮಣ್ಣನ್ನು ನನ್ನ ದೇಶದ ಮಣ್ಣಿನಲ್ಲಿ ಬೆರೆಸಿದ ಬಳಿಕ ಭಗವಾನ್ ಬುದ್ಧನಲ್ಲಿ ಪ್ರಾರ್ಥಿಸುವುದಿಷ್ಟೇ `ಶಿವಾಜಿ ಮಹಾರಾಜ್ ವಿಯೆಟ್ನಾಂನಲ್ಲಿ ಮರುಜನ್ಮ ತಾಳಲಿ. ಆ ಮೂಲಕ ನನ್ನ ದೇಶ ಇನ್ನೊಮ್ಮೆ ಗುಲಾಮಗಿರಿಗೆ ಗುರಿಯಾಗದಂತೆ ಕಾಪಾಡಲಿ’ ಎಂದು ಹೇಳುತ್ತಾರೆ… ಹೀಗೆ ಯೋಚಿಸುತ್ತಿರಬೇಕಾದರೆ ನಮ್ಮ ಶಿವಾಜಿಗೂ ವಿಯೆಟ್ನಾಂನ ವಿದೇಶಾಂಗ ಸಚಿವ ಭಾರತಕ್ಕೆ ಈ ರೀತಿ ಶಿವಾಜಿ ಸಮಾಧಿಯ ಎದುರು ಹೇಳಿರುವುದಕ್ಕೆ ಕಾರಣವಾದರೂ ಏನಿರಬಹುದು..??

ಇಂತಹ ಶೌರ್ಯನ ಬಗ್ಗೆ ಅಂದಿನ ಕಾಂಗ್ರೆಸ್ ಸರಕಾರ ವಿವೆಟ್ನಾಂನ ವಿದೇಶಾಂಗ ಸಚಿವೆ ಹೇಳಿರುವ ಮಾತನ್ನು ಮುಚ್ಚಿಟ್ಟಿದ್ದಾರೂ ಯಾಕೆ ಗೊತ್ತಾ?!.. ಶಿವಾಜಿ ಹಿಂದುತ್ವದ ಉಳಿಯುವಿಕೆಗಾಗಿ ಹೋರಾಟ ಮಾಡಿದವನು.. ಅದಕ್ಕೋಸ್ಕರ ಇಂತಹ ವಿಷಯವನ್ನು ಎಲ್ಲೂ ಹೊರಬಿಚ್ಚದೆ ಅಲ್ಲಿಗೇ ಮೌನವಾಗಿ ಬಿಟ್ಟಿದ್ದರು… ಅಂದಹಾಗೆ ಛತ್ರಪತಿ ಶಿವಾಜಿಗೂ ವಿಯೇಟ್ನಾಂಗೂ ಇವರುವ ಸಂಬಂಧವಾದರೂ ಏನು ಎಂಬುವುದು ಎಲ್ಲರ ಪ್ರಶ್ನೆ!!

ಜೈ ಶಿವಾಜಿ ಎಂದ ವಿಯೆಟ್ನಾಂ!

ಛತ್ರಪತಿ ಶಿವಾಜಿ ಮಹಾರಾಜ್ ಔರಂಗಜೇಬ್‍ನಂಥ ಶಕ್ತಿಶಾಲಿ ಸಾಮ್ರಾಟನನ್ನು ಸೋಲಿಸುವಲ್ಲಿ ಸಫಲನಾಗಿದ್ದು ಹೇಗೆ ಎಂಬ ನಿಟ್ಟಿನಲ್ಲಿ ಭಾರತೀಯರು ಚಿಂತನೆ ನಡೆಸದೇ ಇರಬಹುದು. ಆದರೆ, ಭಾರತದಿಂದ ಸ್ವಲ್ಪವೇ ದೂರದಲ್ಲಿರುವ ವಿಯೆಟ್ನಾಂ ಮಾತ್ರ ನಮ್ಮ ಈ ಇತಿಹಾಸ ವೀರನ ಸಾಹಸಗಳ ಅಧ್ಯಯನ ನಡೆಸಿ ರೂಪಿಸಿದ ರಣನೀತಿಗೆ ಅಮೆರಿಕದಂಥ ಬಲಾಢ್ಯ ರಾಷ್ಟ್ರವೇ ಸೋತು ಶರಣಾಗಿತ್ತು. ಇನ್ನು ಈ ರಹಸ್ಯದ ಕುರಿತು ಭಾರತೀಯ ಮೂಲದವರು ವಿಶ್ಲೇಷಣೆ ನಡೆಸಿದರೆ ಅದನ್ನು ಅವರೇ ಸೃಷ್ಟಿಸಿದ ಕಟ್ಟುಕತೆ ಎಂದು ಹೇಳಿ ನಿರಾಕರಿಸಿ ಬಿಡಬಹುದಿತ್ತು. ಆದರೆ, ಈ ರಹಸ್ಯವನ್ನು ವಿಯೆಟ್ನಾಂನ ಪ್ರಧಾನಮಂತ್ರಿ ಹಾಗೂ ವಿದೇಶಿ ಮಂತ್ರಿಗಳೇ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಘಟನೆ ನಡೆದು ದೀರ್ಘಕಾಲವೇ ಆಗಿರಬಹುದು, ಆದರೆ ಅವಕಾಶ ಸಿಕ್ಕಾಗ ವಿಯೆಟ್ನಾಂ ನಾಯಕರು ಈ ಸತ್ಯವನ್ನು ಜಗತ್ತಿನ ಮುಂದೆ ಸಾದರಪಡಿಸಲು ಹಿಂಜರಿಯಲಿಲ್ಲ. `ಭಾರತೀಯ ಇತಿಹಾಸದಲ್ಲಿ ಬರುವ ಮಹಾನ್ ನಾಯಕ ಛತ್ರಪತಿ ಶಿವಾಜಿ ಮಹಾರಾಜ್ ಜೀವಚರಿತ್ರೆಯ ಅಧ್ಯಯನ ನಡೆಸದಿದ್ದರೆ ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ಎದುರಿಸುವ ತಾಕತ್ತು ನಮಗೆ ಬರುತ್ತಿರಲಿಲ್ಲ’ ಎಂದು ವಿಯೆಟ್ನಾಂ ನಾಯಕರೇ ಸ್ಪಷ್ಟಪಡಿಸಿದ್ದಾರೆ.

ವಿಯೆಟ್ನಾಂಗೆ ತಲೆಬಾಗಿದ ಜಗತ್ತಿನ ದೊಡ್ಡಣ್ಣ !

ಶಿವಾಜಿ ಮಹಾರಾಜರ ಬಗ್ಗೆ ಮಹಾರಾಷ್ಟ್ರದ ನಾಗರಿಕರು ಅಪಾರ ಗೌರವ ಹೊಂದಿದ್ದಾರೆ. ಶಿವಾಜಿಯ ಶೌರ್ಯ, ಸಾಹಸಗಳ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ ಎಂಬ ಭಾವನೆ ಅವರಲ್ಲಿದೆ. ಆದರೆ, ಬೇರೆ ರಾಜ್ಯಗಳ ಜನ ಅವರ ಬಗ್ಗೆ ತಿಳಿದುಕೊಂಡಿರುವುದು ತುಸು ಕಡಿಮೆಯೇ. ಅಂಥ ನಾಯಕನ ಯುದ್ಧತಂತ್ರವನ್ನು ಅನ್ಯ ರಾಷ್ಟ್ರವೊಂದು ಅಳವಡಿಸಿಕೊಂಡು ಜಯ ಸಾಧಿಸಿರುವುದು ಕಡಿಮೆ ಸಾಧನೆಯೇ? ಸರಿಸುಮಾರು ನಾಲ್ಕು ದಶಕಗಳ ಹಿಂದೆ ಸೋಲೊಪ್ಪಿಕೊಳ್ಳುವಂತೆ ಅಮೆರಿಕದ ಮೇಲೆ ವಿಯೆಟ್ನಾಂ ಒತ್ತಡ ಹೇರಿತ್ತು. ಅಷ್ಟೇ ಅಲ್ಲ, ಅಮೆರಿಕದಂಥ ರಾಷ್ಟ್ರ ಯಾವುದೇ ಒಂದು ದೇಶವನ್ನು ಚಿಕ್ಕದು ಅಥವಾ ಬಲಹೀನ ಎಂದು ಭಾವಿಸಿ ಅದನ್ನು ಸೋಲಿಸಬಹುದು ಎಂಬ ಲೆಕ್ಕಾಚಾರ ಹಾಕುವುದು ತಪ್ಪು ಎಂಬ ಪಾಠವನ್ನು ಕೂಡ ಕಲಿಸಿತು. ಅಮೆರಿಕಕ್ಕೆ ವಿಯೆಟ್ನಾಂ ಎದುರಿನ ಸೋಲು ಅತ್ಯಂತ ಕಹಿಘಟನೆಯಾಗಿದ್ದು, ಅದರಿಂದ ಆದ ಅಪಮಾನವನ್ನು ಇಂದಿಗೂ ಮರೆತ್ತಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜತೆಗೆ ಬಲಾಢ್ಯ ಸೇನಾಪಡೆಯನ್ನು ಹೊಂದಿರುವ ಅಮೆರಿಕ ವಿಯೆಟ್ನಾಂನಂಥ ರಾಷ್ಟ್ರವನ್ನು ಸೋಲಿಸುವುದು ತುಂಬ ಸುಲಭ ಎಂದೇ ಭಾವಿಸಿತ್ತು. ಅಷ್ಟೇ ಅಲ್ಲ, ತನ್ನ ಕುಟಿಲ ರಾಜತಾಂತ್ರಿಕ ನಡೆಗಳ ಮೂಲಕ ವಿಯೆಟ್ನಾಂಗೆ ಬೆದರಿಕೆ ಹಾಕುವ ಪ್ರಯತ್ನವನ್ನೂ ಮಾಡಿತು. ಆದರೆ, ವಿಯೆಟ್ನಾಂಗೆ ತನ್ನ ಸ್ವಾತಂತ್ರ್ಯನ್ನು ಉಳಿಸಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿತ್ತು. ಹೀಗಾಗಿ ಅದು ಅಮೆರಿಕದ ಬೆದರಿಕೆಗೆ ಜಗ್ಗಲೂ ಇಲ್ಲ, ಹೆದರಲೂ ಇಲ್ಲ. ಬದಲಿಗೆ ಅಮೆರಿಕ ಈಟಿ ಎಸೆದರೆ ಅದಕ್ಕೆ ಪ್ರತಿಯಾಗಿ ಕಲ್ಲುಗಳನ್ನು ಪ್ರತಿ ಅಸ್ತ್ರವಾಗಿ ಬಳಸುವ ಮೂಲಕ ದಿಟ್ಟ ಹೋರಾಟ ಸಂಘಟಿಸಿತು. ಪರಿಣಾಮ ಹಲವು ರಾಷ್ಟ್ರಗಳ ಹೆಡೆಮುರಿ ಕಟ್ಟಿ, ದೊಡ್ಡಣ್ಣನಂತೆ ವರ್ತಿಸುತ್ತಿದ್ದ ಅತ್ಯಾಧುನಿಕ ಶಸ್ತ್ರಸಜ್ಜಿತ ಅಮೆರಿಕ ಒಂದು ದಿನ ವಿಯೆಟ್ನಾಂ ಎಂಬ ಪುಟ್ಟ ರಾಷ್ಟ್ರದ ಮುಂದೆ ತಲೆಬಾಗಬೇಕಾಯಿತು. ಮುಂದೆಂದೂ ಭವಿಷ್ಯದಲ್ಲಿ ಅಮೆರಿಕ ವಿಯೆಟ್ನಾಂ ಕಡೆಗೆ ಮುಖ ಮಾಡಿ ನೋಡುವ ಸಾಹಸಕ್ಕೆ ಮುಂದಾಗಲಿಲ್ಲ.!!

ಅಷ್ಟಕ್ಕೂ ವಿಯೆಟ್ನಾಂಗೆ ಶಿವಾಜಿ ಸಹಾಯ ಮಾಡಿದ್ದು ಹೇಗೆ?

ವಿಶ್ವದ ದೊಡ್ಡಣ್ಣನ ಜೊತೆ ಈ ಪುಟ್ಟ ರಾಷ್ಟ್ರ ಯುದ್ಧ ಮಾಡುವುದು ಹೇಗೆ ಎಂದು ಯೋಚಿಸುತ್ತಿರಬೇಕಾದರೆ ಅವರಿಗೆ ಒಮ್ಮಲೆ ನೆನೆಪಾಗಿದ್ದು… ಭಾರತ!! ವಿಯೆಟ್ನಾಂ ಜನರಿಗೆ ನೆನಪಾಗಿದ್ದು ಶಿವಾಜಿ ಮಹರಾಜ್!!! ಔರಂಗಜೇಬ್‍ನ ವಿರುದ್ಧ ಶಿವಾಜಿ ಬಹಿರಂಗ ಯುದ್ಧ ಸಾರದೆ ಮರೆಯಲ್ಲಿ ನಿಂತು ಹೋರಾಡುವ ತಂತ್ರ ಅನುಸರಿಸಲು ನಿರ್ಧರಿಸಿದರು. ಔರಂಗಜೇಬ್‍ನ ಬಲಿಷ್ಠ ಸೇನೆಯ ವಿರುದ್ಧ ಮರೆಯಲ್ಲಿ ಅವಿತು ಕುಳಿತು ಒಮ್ಮೆಗೆ ದಾಳಿ ಮಾಡುವ ತಂತ್ರವನ್ನು ಅನುಸರಿಸುವ ಮೂಲಕ ಶಿವಾಜಿ ಸೈನಿಕರು ಜಯ ಸಾಧಿಸುತ್ತಿದ್ದರು. ಯಾವ ದಿಕ್ಕಿನಿಂದ, ಎಲ್ಲಿಂದ ದಾಳಿ ನಡೆಯಬಹುದು ಎಂಬ ಸೂಚನೆಯೂ ಮೊಘಲ ಸೈನಿಕರಿಗೆ ಸಿಗುತ್ತಿರಲಿಲ್ಲ. ಒಟ್ಟಾರೆ ಶಿವಾಜಿಯ ಗೆರಿಲ್ಲಾ ಯುದ್ಧತಂತ್ರ ಔರಂಗಜೇಬ್‍ನ ಸೇನೆಗೆ ಮಣ್ಣು ಮುಕ್ಕಿಸಿತ್ತು. ವಿಯೆಟ್ನಾಂ ಕೂಡ ಅಮೆರಿಕದ ವಿರುದ್ಧ ಮರೆಯಲ್ಲಿ ನಿಂತು ಯುದ್ಧ ಮಾಡುವ ತಂತ್ರ ಅನುಸರಿಸಿತು. ವಿಯೆಟ್ನಾಂನ ಗೆರಿಲ್ಲಾ ತಂತ್ರಕ್ಕೆ ಮಣಿದು ಅಮೆರಿಕ ಅಲ್ಲಿಂದ ಜಾಗ ಖಾಲಿ ಮಾಡುವುದು ಅನಿವಾರ್ಯವಾಗಿತ್ತು. ಕೆಲವೇ ದಿನಗಳಲ್ಲಿ ವಿಯೆಟ್ನಾಂನ ಬೆರಳೆಣಿಕೆಯಷ್ಟು ಸೈನಿಕರು ಅಮೆರಿಕದ ಬೃಹತ್ ಸೇನಾಪಡೆಗಳನ್ನು ಓಡಿಸಿ ವಿಜಯದ ನಗೆ ಬೀರಿದ್ದರು.!!

ಗೆಲುವಿನ ಖುಷಿಯಲ್ಲಿ ಶಿವಾಜಿಗೆ ತಲೆಬಾಗಿದ ವಿಯೆಟ್ನಾಂ

ಶಿವಾಜಿಯ ಯುದ್ಧತಂತ್ರಗಳು, ಆದರ್ಶಗಳಿಂದ ಪ್ರೇರಣೆ ಸಿಗದೆ ಹೋಗಿದ್ದರೆ ಈ ಜಯ ಸಾಧ್ಯವಾಗುತ್ತಿರಲಿಲ್ಲ. ದೇಶ ಗುಲಾಮಗಿರಿಗೆ ಒಳಗಾಗಬೇಕಿತ್ತು ಎಂಬುದನ್ನು ವಿಯೆಟ್ನಾಂನ ಸೇನಾಧಿಕಾರಿಗಳು ಹಾಗೂ ನಾಯಕರು ಸದಾ ಸ್ಮರಿಸುತ್ತಾರೆ. ವಿಯೆಟ್ನಾಂನ ಜನತೆ ಶಿವಾಜಿಯನ್ನು ಎಷ್ಟು ಆರಾಧಿಸುತ್ತಾರೆ ಎಂಬುದಕ್ಕೆ ಒಂದು ಚಿಕ್ಕ ನಿದರ್ಶನ. ಅಮೆರಿಕದ ವಿರುದ್ಧ ಹೋರಾಟದ ನೇತೃತ್ವ ವಹಿಸಿದ್ದ ಅಲ್ಲಿನ ಅಂದಿನ ಅಧ್ಯಕ್ಷರು ನಿಧನರಾದಾಗ ಅವರ ಸಮಾಧಿ ಮೇಲೆ ಒಂದು ವಾಕ್ಯ ಬರೆಯಲಾಗಿತ್ತು: `ವಿಯೆಟ್ನಾಂ ಅಮೆರಿಕದ ವಿರುದ್ಧ ದಾಖಲಿಸಿದ ವಿಜಯದ ಶ್ರೇಯಸ್ಸು ಯಾರಿಗಾದರೂ ಸಲ್ಲುವುದಾದರೆ ಅದು ಛತ್ರಪತಿ ಶಿವಾಜಿ ಮಹಾರಾಜನಿಗೆ ಮಾತ್ರ. ಆತನ ಅನುಯಾಯಿಯ ರೂಪದಲ್ಲಿ ನಾನು ಸೇನೆಯ ನೇತೃತ್ವ ವಹಿಸಿದ್ದೆ ಅಷ್ಟೆ’. ಅಂದಿನ ರಾಷ್ಟ್ರಪತಿಗಳು ವಿಜಯ ಸಿಕ್ಕ ಬಳಿಕ ಶಿವಾಜಿ ಕುರಿತು ಒಂದು ಮಾತು ಆಡಿದ್ದರು: ` ನಮ್ಮ ದೇಶದಲ್ಲಿ ಶಿವಾಜಿಯಂತಹ ಒಬ್ಬ ನಾಯಕನಿದ್ದಿದ್ದರೆ ನಾವು ಇಡೀ ವಿಶ್ವವನ್ನೇ ಆಳುತ್ತಿದ್ದೆವು’. ವಿಯೆಟ್ನಾಂ ಜನತೆ ಶಿವಾಜಿಯ ಕುರಿತು ತೋರುತ್ತಿರುವ ಆದರ, ಗೌರವ ಅಪಾರ. ಆದರೆ ಭಾರತೀಯರಾದ ನಾವು ಶಿವಾಜಿ ಬಗ್ಗೆ ಎಷ್ಟು ತಿಳಿದುಕೊಂಡಿದ್ದೇವೆ?

ಶಿವಾಜಿ ಶೌರ್ಯದ ಬಗ್ಗೆ ಮರೆ ಮಾಚಿದ ಕಾಂಗ್ರೆಸ್!

ವಿಯೆಟ್ನಾಂ ನಾಯಕರು ಈ ವಿಜಯಕ್ಕಾಗಿ ಛತ್ರಪತಿ ಶಿವಾಜಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದರು. ಶಿವಾಜಿ ತಮ್ಮ ನೆಲದಲ್ಲೇ ಜನ್ಮ ತಳೆದ ಮಹಾತ್ಮ ಎನ್ನುವಂತೆ ಆತನಿಗೆ ಗೌರವ, ಭಕ್ತಿ ಸಮರ್ಪಿಸಿದರು. ಆದರೆ, ನೋವಿನ ಸಂಗತಿ ಎಂದರೆ ಈ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಈ ವಿಜಯಕ್ಕೆ ಸಂಬಂಧಿಸಿ ಒಂದೇ ಒಂದು ಮಾತನ್ನೂ ಆಡಲಿಲ್ಲ. ಶಿವಾಜಿಯ ಗುಣಗಾನವನ್ನೂ ಮಾಡಲಿಲ್ಲ. ಹೀಗಾಗಿ ಭಾರತೀಯರಿಗೆ ಈ ವಿಚಾರದ ಬಗ್ಗೆ ಮಾಹಿತಿಯೇ ಸಿಗಲಿಲ್ಲ. ಆದರೆ, ಸತ್ಯವನ್ನು ಬಹಳ ದಿನಗಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ. ಕೊನೆಗೂ ವಿಯೆಟ್ನಾಂ ನಾಯಕರು ಸತ್ಯವನ್ನು ಜಗತ್ತಿನ ಮುಂದೆ ಬಹಿರಂಗಪಡಿಸಿದರು. ಆದರೆ, ಇದರಿಂದ ಅಂದು ಭಾರತದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಮತ್ತು ಅದರ ನಾಯಕರಿಗೆ ಪಶ್ಚಾತ್ತಾಪ ಆಯಿತೋ ಇಲ್ಲವೋ ಗೊತ್ತಿಲ್ಲ. ಅಂದ ಹಾಗೇ ವಿಯೆಟ್ನಾಂ ವಿಜಯದ ಗುಟ್ಟನ್ನು ರಟ್ಟು ಮಾಡಿದ್ದು ಅಲ್ಲಿನ ಅಂದಿನ ಅಧ್ಯಕ್ಷರು. ಅದೂ ಭಾರತ ಪ್ರವಾಸ ಸಂದರ್ಭದಲ್ಲೇ.!!

ಇಂತಹ ಮಣ್ಣಿನಲ್ಲಿ ನಾವು ಬದುಕುತ್ತಿರುವುದು ಯಾವ ಜನ್ಮದ ಪುಣ್ಯವೋ ತಿಳಿಯದು!! ಆ ಕೆಚ್ಚೆದೆಯ ವೀರ ಸಾಮ್ರಾಟನಿಗೆ, ಭಾರತ ಮಣ್ಣಿನ ಮಗನಿಗೆ ನಾವು ಯಾವಾಗಲೂ ಗೌರವವನ್ನು ಕೊಡಬೇಕು!! ಇಂತಹ ಅದೆಷ್ಟೋ ಸಾಹಸಗಾಥೆಗಳು ಇತಿಹಸ ಪುಟದಲ್ಲಿ ಮರೆಮಾಚಿದೆಯೋ ದೇವರೇ ಬಲ್ಲ!!…

ಪವಿತ್ರ

Tags

Related Articles

FOR DAILY ALERTS
 
FOR DAILY ALERTS
 
Close