ಅಂಕಣ

2000 ವರ್ಷದ ಅಂತರದಲ್ಲಿ ಭಾರತದ ಭೂಪಟ ಬದಲಾಗಿದ್ದೇಗೆ?! ಭಾರತೀಯ ಇತಿಹಾಸದ ಕ್ಷಿಪ್ರ ನೋಟ!!

3000 – 1000 ಬಿ.ಸಿ.ಇ

ನಾಗರಿಕತೆಗಳಲ್ಲಿ ಒಂದಾಗಿರುವ ಸಿಂಧೂ ಕಣಿವೆಯ ನಾಗರಿಕತೆಯಿಂದ ಆರಂಭಿಸೋದಾದರೆ, ಈ ನಾಗರೀಕತೆಯ ಜನರು ಕಟ್ಟಡ, ನೈರ್ಮಲ್ಯ, ಕುಂಬಾರಿಕೆ ಮತ್ತು ವ್ಯಾಪಾರದಲ್ಲಿ ಪ್ರವರ್ತಕರಾಗಿದ್ದರು. ಆದರೆ 200 ವರ್ಷಗಳ ಕಾಲ ಸಂಭವಿಸಿದ ಬರಗಾಲದಿಂದಾಗಿ ಸಿಂಧೂ ಕಣಿವೆಯೇ ಹೊಡೆದು ಹೋಯಿತು. ತದನಂತರ ಈ ನಾಗರಿಕತೆಯು ಪೂರ್ವ ಮತ್ತು ದಕ್ಷಿಣಕ್ಕೆ ಹೆಚ್ಚು ಚಲಿಸಲು ಪ್ರಾರಂಭಿಸಿತು. ಆದರೆ 1500 ಬಿಸಿಇ ಯಿಂದ 500 ಬಿಸಿಇಯವರೆಗೆ ಭಾರತೀಯ ಇತಿಹಾಸವಿದ್ದರೂ ಆ ಅವದಿಯಲ್ಲಿ ಅದೇನಾಯಿತು ಎಂಬುವುದು ಸ್ಪಷ್ಟವಾಗಿ ಗೊತ್ತಿಲ್ಲ.

600 ಬಿಸಿಇ – ಸಾಮ್ರಾಜ್ಯಗಳ ಯುಗ ಆರಂಭ

ಇದು ಮಹಾಜನಪದಗಳ ಯುಗ ಮಾತ್ರವಲ್ಲದೇ ಮಹಾಭಾರತವು ಇದೇ ಅವಧಿಯಲ್ಲಿ ಸಂಭವಿಸಿವೆ ಎಂದು ನಂಬಲಾಗಿದೆ. ಕೆಳಗಿನ ನಕ್ಷೆಯಲ್ಲಿ 11 ಕುರು ರಾಜ್ಯ (ಕೌರವರ)ಗಳ ಮಾಹಿತಿಗಳೂ ದಾಖಲಾಗಿದೆ.

323 ಬಿಸಿಇ – ಅಲೆಕ್ಸಾಂಡರ್ ನ ಆಕ್ರಮಣ

ನಾನಾ ರೀತಿಯ ಯುದ್ಧಗಳು ನಡೆದ ನಂತರ (ಅವುಗಳಲ್ಲಿ ಕೆಲವು ಭಾರತೀಯ ಮಹಾಕಾವ್ಯಗಳಲ್ಲಿ ಅಮರವಾದವು), ಮಗಾಧರು ನಂದಾ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು!!! ಆದರೆ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸಿದ ಬಳಿಕ ಭಾರತದ ಈಡೀ ಚಿತ್ರಣವೇ ಬದಲಾಗಿ ಹೋಯಿತು. ಆದರೆ ಆ ಸಂದರ್ಭದಲ್ಲಿ ಈ ಮಗಾಧರಿಗೆ ಈತನೊಂದಿಗೆ ಹೋರಾಡಲು ಅವಕಾಶವೇ ಸಿಗಲಿಲ್ಲ.

200 ಬಿಸಿಇ – ಮೌರ್ಯರ ಆಡಳಿತ

ಅಲೆಕ್ಸಾಂಡರ್ ದಾಳಿ ನಡೆಸಿದ ಸಂದರ್ಭದಲ್ಲಿ ತಕ್ಸಿಲಾ ಪ್ರಾಧ್ಯಾಪಕ ಚಾಣಕ್ಯರಂತಹ ಕೆಲವರು ಈತನ ಮೇಲೆ ಕೋಪಗೊಂಡು, ಬೃಹತ್ ಸಾಮ್ರಾಜ್ಯವನ್ನು ಹೊಂದಿದ್ದ ನಂದರನ್ನು ಅನುಸರಿಸಿದರು!! ಇದು ಚಂದ್ರಗುಪ್ತನಿಂದ ನಿರ್ಮಿಸಲ್ಪಟ್ಟು, ತದನಂತರದಲ್ಲಿ ಅಶೋಕನಿಂದ ಸಾಮ್ರಾಜ್ಯ ವಿಸ್ತಾರಗೊಂಡಿತು!! ಮೊದಲ ಬಾರಿಗೆ, ಇಡೀಯ ಭಾರತವು ಒಂದೇ ಆಳ್ವಿಕೆಗೆ ಒಳಪಟ್ಟಿತ್ತ ಕಾಲ ಅದಾಗಿತ್ತು. ಅಷ್ಟೇ ಅಲ್ಲದೇ, ಮೊದಲ ಬಾರಿಗೆ ದಕ್ಷಿಣ ಭಾರತದ ಅರಸರು ಅಶೋಕನ ಆಡಳಿತದಲ್ಲಿ ರಾಜ್ಯಭಾರ ನಡೆಸಿದರು ಎನ್ನಲಾಗಿದೆ.

100 ಬಿಸಿಇ – ಇಂಡೋ-ಗ್ರೀಕರ ಆಳ್ವಿಕೆ

ಮೌರ್ಯರ ಆಡಳಿತದ ನಂತರ ಇಂಡೋ-ಗ್ರೀಕರು (ವಿವಿಧ ಸಂಪ್ರದಾಯಗಳಿಂದ) ಇಡೀ ಗುಂಪನ್ನು ವಹಿಸಿಕೊಳ್ಳಲು ಪ್ರಾರಂಭಿಸಿದರು. ಕ್ರಿ.ಪೂ. 300ಗಿಂತ ಮುಂಚಿತವಾಗಿಯು ಈ ಯುಗ ಗೊಂದಲದ ಅವಧಿಯಾಗಿತ್ತು!!

1 ಸಿಇ – ಏಕೀಕರಣದ ಪ್ರಾರಂಭ

ಈ ಸಮಯದಲ್ಲಿ, ಇಂಡೋ-ಪಾರ್ಥಿಯನ್ನರು, ಇಂಡೋ-ಸಿಥಿಯನ್ಸ್ (ಭಾರತೀಯರು ಮತ್ತು ಮಧ್ಯ ಏಷ್ಯನ್ನರ ನಡುವೆ), ಆಂಧ್ರದ ಶತವಾಹನರು ಮತ್ತು ಒರಿಸ್ಸಾದ ಕಲಿಂಗರು ವ್ಯಾಪಕ ಪ್ರದೇಶಗಳನ್ನು ಆಳಿದರಲ್ಲದೇ ಎಲ್ಲ ಸಾಮ್ರಾಜ್ಯಗಳನ್ನು ಏಕೀಕರಣಗೊಳಿಸಲು ಪ್ರಾರಂಭಿಸಿದರು. ಇಲ್ಲಿ ನೀವು, ಈಗಿರುವ ಮಣಿಪುರವನ್ನು ಈಶಾನ್ಯದಲ್ಲಿರುವುದನ್ನು ಕಾಣಬಹುದು.

100 ಸಿಇ – ಕುಶನರು

ಮಧ್ಯ ಏಷ್ಯನ್ನರ ಪ್ರಭಾವವು ಹೆಚ್ಚಿದ್ದ ಅವಧಿಯಲ್ಲಿ ಚಕ್ರವರ್ತಿ ಕನಿಷ್ಕನು ಬಹಳಷ್ಟು ಉತ್ತಮ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದನಲ್ಲದೇ ಮಧ್ಯ ಏಷ್ಯಾದ ರಾಷ್ಟ್ರಗಳು ಭಾರತದ ಭಾಗವಾಯಿತು. ಪೆಶಾವರ್, ತಕ್ಸಿಲಾ, ಮಥುರಾ ಮತ್ತು ಬಗ್ರಾಮ್ (ಆಫ್ಘಾನಿಸ್ತಾನ) ರಾಜಧಾನಿಗಳಾಗಿದ್ದವು. ಶತವಾಹನರು ಇನ್ನೂ ದಕ್ಷಿಣದ ಆಡಳಿತವನ್ನು ಹೊಂದಿದ್ದರಲ್ಲದೇ ಇವರ ಕಾಲದಲ್ಲಿ ಕಲೆಗಳಿಗೆ ಮಹತ್ವವನ್ನು ನೀಡಿದ್ದರು. ಅದಕ್ಕೆ ಸಾಕ್ಷಿಯೇ ಅಮರಾವತಿ ಮತ್ತು ಸಾಂಚಿ!!

480 ಸಿಇ- ಗುಪ್ತರ ಅವಧಿ

ಕುಶನರ ನಂತರದಲ್ಲಿ ಭಾರತದಲ್ಲಿ ಗುಪ್ತರ ಸಾಮ್ರಾಜ್ಯ ಆರಂಭವಾಯಿತು. ಇದು ಸುವರ್ಣ ಯುಗದ ಕಾಲ!! ಇವರು ಭಾರತದ ಸಂಸ್ಕೃತಿ, ಆರ್ಥಿಕತೆ ಮತ್ತು ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಲ್ಲದೇ, ಅದನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು!! ದಕ್ಷಿಣದಲ್ಲಿ ದೀರ್ಘಕಾಲ (ಚೋಳರು, ಚೆರರು ಮತ್ತು ಪಾಂಡ್ಯರು ಬದಲಾಗಿ ಕಲಭ್ರರಾದರು) ಮತ್ತು ಅಸ್ಸಾಂನ ಕಾಮರುಪ ಸಾಮ್ರಾಜ್ಯವು ವೇಗವನ್ನು ಪಡೆದಿದ್ದರು ಎನ್ನುವುದನ್ನು ಇಲ್ಲಿ ನೋಡಬಹುದು. ಈ ಸಮಯದಲ್ಲಿ ಕಳಿಂಗರ ಪ್ರಾಮುಖ್ಯತೆ ಕಡಿಮೆಯಾಯಿತು.

500 ಸಿಇ-

2 ಶತಮಾನಗಳ ಆಳ್ವಿಕೆಯ ನಂತರ ಗುಪ್ತರು ಮಧ್ಯ ಏಷ್ಯಾದ ಹುನಾರಿಂದ ಹಿಂದೆ ಸರಿಯಬೇಕಾಯಿತು!! ಅದೇ ಅವಧಿಯಲ್ಲಿ ಮಧ್ಯ ಏಷ್ಯಾದ ಅಲೆಮಾರಿಗಳು ಸೆಂಟ್ಯಾನಿಡ್ ಮತ್ತು ರೋಮನ್ನರನ್ನು ನಾಶಗೊಳಿಸಿದರು. ಆ ವೇಳೆ ಮೌರ್ಯರು ಮತ್ತು ನಂದರು ಪಾಟ್ನಾವನ್ನು ಆಳಿದರು.

600 ಸಿಇ ಹರ್ಷನ ಸಾಮ್ರಾಜ್ಯ

ಗುಪ್ತರ ಪತನದ ನಂತರ, ಚಕ್ರವರ್ತಿ ಹರ್ಷನು ಹನರೊಂದಿಗೆ ಹೋರಡುತ್ತಾನಲ್ಲದೇ ದಾಳಿಕೋರರನ್ನು ದೂರ ಓಡಿಸುತ್ತಾನೆ. ಗುಪ್ತರ ಸುವರ್ಣ ಯುಗವನ್ನು ಈತನ ಕಾಲದಲ್ಲಿ ಮರಳಿ ತರಲು ಅವನು ಪ್ರಯತ್ನಿಸಿದನು. ಆದರೆ ಅವನ ಸಾಮ್ರಾಜ್ಯವು ಅವನು ಸತ್ತ ತಕ್ಷಣ ಕೊನೆಗೊಂಡಿತು!! ದಕ್ಷಿಣದಲ್ಲಿ ಚೋಳ, ಚೇರಾ, ಪಾಂಡ್ಯರು ಅಂತಿಮವಾಗಿ ಕಲಾಭ್ರಾರ ಸಾಮ್ರಾಜ್ಯವನ್ನು ವಶಪಡಿಸಿಕೊಂಡಿರುವುದನ್ನು ನೀವು ನೋಡಬಹುದು. ಕಲಾಭ್ರಾರು ನಂತರ ಸಂಪೂರ್ಣವಾಗಿ ನಾಶಹೊಂದುತ್ತಾರೆ!! ತದನಂತರ ಪಲ್ಲವರು ಸ್ರಾಮ್ರಾಜ್ಯವನ್ನು ವಿಸ್ತರಿಸಲು ಪ್ರಾರಂಭಿಸುತ್ತರಲ್ಲದೇ, ಮಹಾಬಲಿಪುರಂನಂಥ ಕೆಲವು ಕಲ್ಲಿನ ದೇವಾಲಯಗಳನ್ನು ಇವರು ನಿರ್ಮಿಸುತ್ತಾರೆ. ಇದೇ ಇವರು ಕಲೆಗೆ ನೀಡಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

800 ಸಿಇ ಪಾಲರು

ಇದು ಪೂರ್ವ ಭಾರತದಲ್ಲಿದ್ದ ಬೌದ್ಧ ಸಾಮ್ರಾಜ್ಯವಾಗಿತ್ತು. ಪಾಲರು, ಗುಪ್ತರು ನಿರ್ಮಿಸಿದ ನಳಂದ ವಿಶ್ವವಿದ್ಯಾಲಯವನ್ನು ಎತ್ತರಕ್ಕೆ ತೆಗೆದುಕೊಂಡು ಹೋದರು!!

900 ಸಿಇ – ಕನೌಜ್ ರಾಜವಂಶದ ಆಳ್ವಿಕೆ

ಕನೂಜ್ (ಉತ್ತರ ಪ್ರದೇಶ) ನ ಗುರ್ಜರರು ಗುಪ್ತ ಪ್ರದೇಶದ ಉತ್ತರ ಭಾಗದಲ್ಲಿ ಸುತ್ತುವರೆದರು!! ದಕ್ಷಿಣದಲ್ಲಿ, ರಾಷ್ಟ್ರಕೂಟರು ಮತ್ತು ಚೋಳರು ಅಧಿಕಾರಕ್ಕಾಗಿ ಹೋರಾಟ ನಡೆಸಿದರು!!

1000 ಸಿಇ – ಚೋಳರ ಅವಧಿ

ರಾಷ್ಟ್ರಕೂಟರು ದಕ್ಷಿಣದ ಚಾಲುಕ್ಯರಿಗೆ ದಾರಿ ಕಲ್ಪಿಸುತ್ತಿದ್ದರಲ್ಲದೇ ಉತ್ತರವನ್ನು ವಿಂಗಡಿಸಲು ಸಹಾಯ ಮಾಡಿದರು!! ಈ ಕಾಲದಲ್ಲಿ ದಕ್ಷಿಣದ ಚೋಳರು ತಮ್ಮ ಪ್ರಾಬಲ್ಯವನ್ನು, ಅದರಲ್ಲೂ ವಿಶೇಷವಾಗಿ ಆಗ್ನೇಯ ಏಷ್ಯಾದಲ್ಲಿ ಪ್ರಾರಂಭಿಸುತ್ತಾರಲ್ಲದೇ ಅವರು ಶ್ರೀಲಂಕಾ ಮತ್ತು ಎಸ್‍ಇ ಏಶಿಯಾವನ್ನು ನಿಯಂತ್ರಿಸುತ್ತಾರೆ.

Can you see the looming Ghaznavid empire at the top left? They will slowly start moving into India.

1200 ಸಿಇ- ಭಾರತವನ್ನು ಮುತ್ತಿಗೆ ಹಾಕುತ್ತಾರೆ

ಇದು ಭಾರತದ ಅತ್ಯಂತ ಕೆಟ್ಟ ಅವಧಿಗಳಲ್ಲಿ ಒಂದಾಗಿದೆ!! ಘುರಿದ್ ಸುಲ್ತಾನರು ಉತ್ತರ ಭಾರತರನ್ನು ಆಕ್ರಮಿಸಿಕೊಂಡರು!! ನಳಂದದಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳು ಇವರ ಕಾಲದಲ್ಲಿ ನಾಶವಾದವು. ದಕ್ಷಿಣ ಭಾಗವು ಹಲವು ಕಾರಣದಿಂದಾಗಿ ಹಲವಾರು ಭಾಗವಾದವು!!

1400 ಸಿಇ – ದೆಹಲಿ ಸುಲ್ತಾನರು ಮತ್ತು ವಿಜಯನಗರ

ಉತ್ತರ ಮತ್ತು ದಕ್ಷಿಣವು ಈ ಯುಗದಲ್ಲಿ ಸ್ವಲ್ಪ ವಿಭಜನೆಯಾಗುತ್ತ ಹೋಯಿತು. ಉತ್ತರದ ಆಫ್ಘನ್ನರು ದೆಹಲಿ ಸುಲ್ತಾನರ ಆಳ್ವಿಕೆಗೆ ಒಳಗಾಗುತ್ತಾರೆ, ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಏಕೀಕರಣಗೊಳ್ಳುತ್ತದೆ. ಈ ಎರಡೂ ಆಳ್ವಿಕೆಯ ಕಾಲದಲ್ಲಿ ಅದ್ಭುತ ಕಲಾ ಕೃತಿಗಳು ಹೊರಹೊಮ್ಮಿದವು!! ಅಷ್ಟೇ ಅಲ್ಲದೇ, ಇವರು ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರು.


ಮೊಘಲರು (1605- 1707)

ದೆಹಲಿ ಸುಲ್ತಾನರು ಸುಮಾರು 150 ವರ್ಷ ಆಳಿದ ಕಾರಣದಿಂದಾಗಿ ಮೊಘಲರಿಗೆ ದಾರಿ ಕಲ್ಪಿಸಿದರು. ತಾಜ್ ಮಹಲ್ ನಂತಹ ಉತ್ತರದ ಕೆಲವು ಮಹಾನ್ ವಾಸ್ತುಶೈಲಿಯನ್ನು ಈ ಅವಧಿಯಲ್ಲಿ ನಿರ್ಮಿಸಲಾಯಿತು. ತದನಂತರ ತನ್ನ ಸ್ಥಳೀಯ ಸಾಮ್ರಾಜ್ಯಗಳನ್ನು ಕಳೆದುಕೊಂಡ ನಂತರದಲ್ಲಿ ದಕ್ಷಿಣವು ಪ್ರಕ್ಷುಬ್ಧ ಸ್ಥಿತಿಯನ್ನು ಎದುರಿಸಬೇಕಾಯಿತು!!

1750 ಸಿಇ – ಮರಾಠರು

ಶಿವಾಜಿ ಹಾಗೂ ಈತನ ನಂತರ ಮರಾಠರು ಮೊಘಲ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡರಲ್ಲದೇ ವಿಸ್ತರಿಸಲು ಪ್ರಾರಂಭಿಸುತ್ತಾರೆ. ಆ ಸಂದರ್ಭದಲ್ಲಿ ಮರಾಠರಿಗೆ ಭಾರತವನ್ನು ಏಕೀಕರಿಸುವ ಉತ್ತಮ ಅವಕಾಶವನ್ನು ಹೊಂದಿದ್ದರೂ ಕೂಡ, ಅಫ್ಘಾನಿಸ್ತಾನದ ಅಹ್ಮದ್ ಶಾ ಅಬ್ದಾಲಿಯೊಂದಿಗೆ ಹೋರಾಡಿ ಸೋತರಲ್ಲದೇ, 3 ನೇ ಪಾಣಿಪತ್ ಯುದ್ಧದಲ್ಲಿ ಸೋತ ಪರಿಣಾಮ ಇದು ಸಾಧ್ಯವಾಗಲಿಲ್ಲ!! ಇವರ ಪತನದಿಂದಾಗಿ ಈಸ್ಟ್ ಇಂಡಿಯಾ ಕಂಪನಿಯು ತನ್ನ ಅಧಿಕಾರ ಸ್ಥಾಪಿಸಲು ಸುಲಭದ ಮಾರ್ಗವನ್ನು ಕಂಡುಕೊಂಡರು!!

ಭಾರತ ನಕ್ಷೆ 1857ರಲ್ಲಿ

ಮರಾಠರಿಂದ ಬಿಟ್ಟು ಹೋದ ತುಂಡು ಭಾಗಗನ್ನು ಈಸ್ಟ್ ಇಂಡಿಯಾ ಕಂಪೆನಿಯು ವಶಪಡಿಸಿಕೊಂಡು ತಮ್ಮ ಅಧಿಪತ್ಯ ಸ್ಥಾಪಿಸಲು ಪ್ರಾರಂಭಿಸುತ್ತಾರೆ. 1857 ರಲ್ಲಿ ಬ್ರಿಟಿಷ್ ರಾಜರಿಂದ ಈ ಸಾಮ್ರಾಜ್ಯವನ್ನು ಮತ್ತೆ ಸ್ವಾಧೀನ ಪಡಿಸಿಕೊಂಡರು!!

1930 – ಬ್ರಿಟಿಷ್ ರಾಜ್

1937 ರವರೆಗೆ ಬ್ರಿಟನ್, ಕೆಲ ಭಾರತೀಯ ರಾಜರಗಳ ಸಹಾಯದಿಂದಾಗಿ ಏಷ್ಯಾವನ್ನು ನಿಯಂತ್ರಿಸುತ್ತಿದ್ದರು!!. ನಂತರ ಭಾರತದಿಂದ ಬರ್ಮಾವನ್ನು ಬೇರ್ಪಡಿಸಿದರು!! ಇನ್ನು, ಸಿಲೋನ್ ಅನ್ನು ಬ್ರಿಟನ್ ಲಾಭದಾಯಕವೆಂದು ಪರಿಗಣಿಸದಿದ್ದರೂ ಕೂಡ ಅದು ಭಾರತದ ನಿಯಂತ್ರಣದಲ್ಲಿರಲಿಲ್ಲ. ಹಾಗಾಗಿ ಅವರು ಭಾರತದಿಂದ ಅದೆಷ್ಟೋ ಜನರನ್ನು ಸಿಲೋನ್ ಮತ್ತು ಮಲೇಶಿಯಾಕ್ಕೆ ಸ್ಥಳಾಂತರಿಸಿದರು.

1947ರ ಸ್ವಾತಂತ್ರ್ಯ – ಇದು 1947 ರ ಆಗಸ್ಟ್ 15 ರಂದು ವಿಭಜನೆಗೂ ಮುಂಚಿತವಾಗಿ ಇದ್ದ ಭಾರತ!!

1953 ರಲ್ಲಿ ಭಾರತ – 1953 ರಲ್ಲಿ, ಭಾರತವು ಭಾಷಾಶಾಸ್ತ್ರದ ರೇಖೆಗಳಲ್ಲಿ ರಾಜ್ಯಗಳನ್ನು ಮರುಸಂಘಟಿಸಲು ಆರಂಭಿಸಿತು.


ಇದು ಪ್ರಸ್ತುತದಲ್ಲಿರುವ ನಮ್ಮ ಭಾರತ. ಇದೀಗ ವಿಶಾಲವಾದ ತೆರೆದ ಕೈಗಳನ್ನು ಹೊಂದಿರುವ ವ್ಯಕ್ತಿಯಂತೆ ನಿಂತಿದೆ.


ಪ್ರಪಂಚದ ಎಲ್ಲಾ ರಾಷ್ಟ್ರಗಳಂತೆ, ಭಾರತದ ಗಡಿಯು ಕಳೆದ 5000 ವರ್ಷಗಳ ಇತಿಹಾಸದಲ್ಲಿ ಮೇಲುಗೈ ಸಾಧಿಸಿರುವ ಜೊತೆಗೆ ಕ್ಷೀಣಿಸುತ್ತಲೇ ಬರುತ್ತಿದೆ. ಇಲ್ಲಿರುವ ವಿವಿಧ ಭಾರತೀಯ ಸಾಮ್ರಾಜ್ಯಗಳ ನಕ್ಷೆಯನ್ನು ಗಮನಿಸಿದಾಗ ಅನೇಕರು ಆಳ್ವಿಕೆ ಮಾಡಿದ ಉದಾಹರಣೆಗಳನ್ನು ಕಾಣಬಹುದಾಗಿದೆ!! 300-200 ಬಿಸಿಇ ನಡುವೆ ಇದ್ದ ಮೌರ್ಯರು ಉಪಖಂಡದ ಶೇಕಡಾ 80 ಕ್ಕಿಂತ ಹೆಚ್ಚು ಸಾಮ್ರಾಜ್ಯವನ್ನು ಆಳ್ವಿಕೆ ನಡೆಸಿದ್ದರು!! ಮೊಘಲರು ಸುಮಾರು ಶೇಕಡಾ 90ರಷ್ಟು ಭೂಭಾಗವನ್ನು ಆಳಿದರು ಎಂಬುವುದನ್ನು ಇಲ್ಲಿ ಕಾಣಬಹುದು!!

ಮೂಲ:https://www.quora.com/How-did-the-map-of-India-change-from-1-AD-to-the-20th-century/answer/Balaji-Viswanathan-2?share=a59e4083&srid=hB3V4

Postcard team

Tags

Related Articles

FOR DAILY ALERTS
 
FOR DAILY ALERTS
 
Close