ದೇಶಪ್ರಚಲಿತ

ಬರೀ ಕೈಯಲ್ಲಿ ಬಂದ ರಾಬರ್ಟ್ ವಾದ್ರಾ ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿದ್ದು ಹೇಗೆ? ಕಾಂಗ್ರೆಸ್‌ನಲ್ಲಿ ಕೇವಲ ಒಂದು ಕುಟುಂಬ ಅಭಿವೃದ್ಧಿ ಹೊಂದಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ?

ಕಾಂಗ್ರೆಸ್ ಎಂದರೆ ಅದೊಂದು ಕುಟುಂಬದ ಪಕ್ಷ, ದೇಶದ್ರೋಹಿಗಳ ಪಕ್ಷ, ದೇಶವನ್ನು ಲೂಟಿ ಹೊಡೆದವರ ಪಕ್ಷ ಎಂದು ಯಾರು ಬೇಕಾದರೂ ಹೇಳುತ್ತಾರೆ. ಇಂತಹ ಗಂಭೀರ ಆರೋಪ ಮಾಡಲು ಸಾಕಷ್ಟು ಉದಾಹರಣೆಗಳು ಇವೆ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಯಾವ ರೀತಿ ನಮ್ಮ ದೇಶದ ಸಂಪತ್ತನ್ನು ದೋಚಿಕೊಂಡು ಹೋದರೋ ಅದಕ್ಕಿಂತ ಹೆಚ್ಚು ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಲೂಟಿ ಮಾಡಿದೆ ಎಂಬ ಸತ್ಯಾಂಶವನ್ನು ನಾವು ತಿಳಿದುಕೊಳ್ಳಲೇಬೇಕು. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್‌ನ ಕೇವಲ ಒಂದು ಕುಟುಂಬ ಮಾತ್ರ ಆಡಳಿತ ನಡೆಸಿಕೊಂಡು ಬಂದಿದಿಯೇ ವಿನಃ ಬೇರೆ ಯಾವೊಬ್ಬನಿಗೂ ಈ ಅವಕಾಶ ನೀಡಲಿಲ್ಲ ಕಾಂಗ್ರೆಸ್. ಅದೇ ರೀತಿ ಏನೂ ಇಲ್ಲದ ಒಬ್ಬ ವ್ಯಕ್ತಿ ಕಾಂಗ್ರೆಸ್‌ನ ನಕಲಿ ಗಾಂಧಿ ಕುಟುಂಬ ಸೇರಿಕೊಂಡರೆ ಸಾಕು ಆತ ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಆಸ್ತಿಯ ಒಡೆಯನಾಗುತ್ತಾನೆ ಎಂಬುವುದರಲ್ಲಿ ಸಂಶಯವಿಲ್ಲ, ಅದಕ್ಕೆ ನಮ್ಮ ಕಣ್ಣ ಮುಂದಿರುವ ಸಾಕ್ಷಿ ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ.!

ರಾಬರ್ಟ್ ವಾದ್ರಾ ಇಂದು ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ ಎಂದರೆ ಅದಕ್ಕೆ ಮುಖ್ಯ ಕಾರಣ ಕಾಂಗ್ರೆಸ್. ಪ್ರಿಯಾಂಕ ಗಾಂಧಿಯ ಕೈ ಹಿಡಿದ ರಾಬರ್ಟ್ ವಾದ್ರಾ ಕೈಯನ್ನು ಕಾಂಗ್ರೆಸ್ ಹಿಡಿಯಿತು. ರಾಬರ್ಟ್ ವಾದ್ರಾಗೆ ದೇಶವನ್ನು ಕೊಳ್ಳೆ ಹೊಡೆಯಲು ಸಂಪೂರ್ಣ ಅವಕಾಶ ನೀಡಿತ್ತು ಈ ಕಾಂಗ್ರೆಸ್. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಸದ್ಯ ಈ ರಾಬರ್ಟ್ ವಾದ್ರಾ ಮೇಲೆ ಕಣ್ಣಿಟ್ಟಿದ್ದು, ವಾದ್ರಾನ ಜಾತಕ ಬಯಲಿಗೆಳೆಯಲು ಸಜ್ಜಾಗಿದ್ದಾರೆ.!

ಪ್ರಿಯಾಂಕ ಬಂದ ತಕ್ಷಣ ಕಾಂಗ್ರೆಸ್ ಗೆಲ್ಲುತ್ತೋ ಅಥವಾ ವಾದ್ರಾ ಗೆಲ್ಲುತ್ತಾನೋ?

ಪ್ರಶ್ನೆ ನಿಜವಾಗಿಯೂ ಪ್ರತಿಯೊಬ್ಬರೂ ಕೇಳಬೇಕಿದೆ. ಯಾಕೆಂದರೆ ಇತ್ತೀಚೆಗೆ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಪ್ರಿಯಾಂಕ ಗಾಂಧಿ ಈ ಬಾರಿ ನರೇಂದ್ರ ಮೋದಿಯವರನ್ನು ಸೋಲಿಸುತ್ತಾರೆ ಎಂಬ ನಂಬಿಕೆ ಕಾಂಗ್ರೆಸ್ ಕಾರ್ಯಕರ್ತರದ್ದು. ನೋಡಲು ಇಂದಿರಾ ಗಾಂಧಿ ರೀತಿ ಇರುವ ಪ್ರಿಯಾಂಕ ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಗೆಲ್ಲಿಸಿಕೊಡುತ್ತಾರೆ ಎಂಬ ಅಪಾರ ನಂಬಿಕೆ ಕಾಂಗ್ರೆಸ್‌ನಲ್ಲಿದೆ. ಆದರೆ ನಿಜವಾಗಿಯೂ ಅರ್ಥ ಮಾಡಿಕೊಳ್ಳಬೇಕಾದ ವಿಚಾರವೇನೆಂದರೆ, ಪ್ರಿಯಾಂಕ ಗಾಂಧಿ ಎಂಟ್ರಿಯಿಂದ ಪಕ್ಷಕ್ಕೆ ಯಾವ ಲಾಭ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ತನ್ನ ಪತಿ ರಾಬರ್ಟ್ ವಾದ್ರಾಗೆ ಲಾಭ ಗ್ಯಾರಂಟಿ.

ಯಾಕೆಂದರೆ ಈಗಾಗಲೇ ಸಾವಿರಾರು ಕೋಟಿ ಅಕ್ರಮ ಆಸ್ತಿ ಹೊಂದಿರುವ ರಾಬರ್ಟ್ ವಾದ್ರಾ ವಿರುದ್ಧ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದು ಯಾವ ಕ್ಷಣದಲ್ಲಿ ಬೇಕಾದರೂ ಬಂಧಿಸುವ ಸಾಧ್ಯತೆ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕ, ಮತ್ತೆ ಅಧಿಕಾರ ಸಿಕ್ಕರೆ ತನ್ನ ಪತಿಯನ್ನು ಈ ಕಂಟಕದಿಂದ ಪಾರು ಮಾಡಬಹುದು ಎಂಬ ಲೆಕ್ಕಾಚಾರ. ಆದರೆ ಈ ವಾದ್ರಾ ಕೇವಲ ಹತ್ತು ವರ್ಷದಲ್ಲಿ ಇಷ್ಟೊಂದು ಆಸ್ತಿ ಮಾಡಿಟ್ಟಿರುವ ಹಿನ್ನೆಲೆ ಹುಡುಕುತ್ತಾ ಹೋದರೆ ನಮಗೆ ತಿಳಿಯುವ ಸತ್ಯಾಂಶಗಳೇ ಬೇರೆ. ವಾದ್ರಾ ವಿರುದ್ಧ ಇರುವ ಪ್ರಕರಣಗಳು ಒಂದಲ್ಲ ಎರಡಲ್ಲ, ಭಾರತದಲ್ಲಿ ತೆರಿಗೆ ಪಾವತಿ ಮಾಡದೆ ವಂಚಿಸಿ ಲಂಡನ್‌ನಲ್ಲಿ ಕೋಟಿ ಕೋಟಿ ಬೆಲೆಬಾಳುವ ಆಸ್ತಿ ಖರೀದಿಸಿರುವ ವಾದ್ರಾ, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದಿಲ್ಲಿಯಲ್ಲೂ ಸಾಕಷ್ಟು ಆಸ್ತಿ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಡಿಎಲ್‌ಎಫ್ ನಿಂದ ಬಡ್ಡಿ ರಹಿತ ಕೋಟಿ ಅನಿರ್ದಿಷ್ಟವದಿ ಸಾಲ ಪಡೆದಿರುವ ಆರೋಪ ಮತ್ತು ಕಾರ್ಪೋರೇಷನ್ ಬ್ಯಾಂಕ್‌ನಿಂದ ಕೋಟಿ ಕೋಟಿ ಬಡ್ಡಿ ರಹಿತ ಸಾಲ ಪಡೆದಿರುವ ಆರೋಪ ಕೂಡ ಇದೆ. ವಾದ್ರಾ ಅವರ ಹಗರಣಗಳಲ್ಲಿ ಪ್ರಮುಖವಾದದ್ದು ‘ಕಿಕ್‌ಬ್ಯಾಕ್ ಹಗರಣ’, ರಾಬರ್ಟ್ ವಾದ್ರಾ ಮಾಡಿರುವ ಲೂಟಿ ಅಷ್ಟಿಷ್ಟಲ್ಲ. ಯಾಕೆಂದರೆ ಸರಕಾರದ ಜೊತೆ ಉದ್ಯಮಿಗಳು, ದೊಡ್ಡ ದೊಡ್ಡ ಕಂಪನಿಗಳು ಮಾಡಿಕೊಳ್ಳುವ ಒಪ್ಪಂದದಲ್ಲಿ ವಾದ್ರಾ ಕಿಕ್ಕ‌ಬ್ಯಾಕ್ ಹಣ ಪಡೆದಿರುವ ಆರೋಪ ಇದೆ. ಈ ರೀತಿ ಪಡೆದುಕೊಂಡ ಹಣದಿಂದಲೇ ಲಂಡನ್‌ನಲ್ಲಿ ಕೋಟಿ ಬೆಲೆಬಾಳುವ ಆಸ್ತಿ ಕೂಡ ಖರೀದಿ ಮಾಡಲಾಗಿದೆ. ಇಂತಹ ಚಾಣಕ್ಷ ಲೂಟಿಕೋರ ರಾಬರ್ಟ್ ವಾದ್ರಾ ಸುತ್ ಸದ್ಯ ಇಡಿ ಇಲಾಖೆ ದಿಗ್ಬಂಧನ ಹಾಕಿದ್ದು ವಿಚಾರಣೆ ನಡೆಸುತ್ತಿದ್ದಾರೆ.!

ಅಸಲಿಗೆ ರಾಬರ್ಟ್ ವಾದ್ರಾ ಅವರ ತಂದೆ ಬ್ರಿಟಿಷ್ ಮಹಿಳೆಯೊಬ್ಬರನ್ನು ಮದುವೆ ಆದವರು, ಇತ್ತ ವಾದ್ರಾ ಕೂಡ ಪ್ರಿಯಾಂಕ ಗಾಂಧಿಯನ್ನು ಮದುವೆಯಾಗಿ ನಕಲಿ ಗಾಂಧಿ ಕುಟುಂಬಕ್ಕೆ ಹತ್ತಿರವಾದವನು. ಏನೂ ಇಲ್ಲದ ವಾದ್ರಾ ಇಂದು ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿದ್ದಾನೆ. ಭಾರತಕ್ಕೆ ವಂಚಿಸಿ ಲಂಡನ್‌ನಲ್ಲೂ ಆಸ್ತಿ ಖರೀದಿ ಮಾಡಿಟ್ಟುಕೊಂಡ ವಾದ್ರಾ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ 2012ರಲ್ಲಿ ಗಂಭೀರವಾದ ಆರೋಪ ಮಾಡಿದ್ದರು.‌ವಾದ್ರಾ ದೆಹಲಿಯ ಸುತ್ತಮುತ್ತ ಸುಮಾರು 300 ಕೋಟಿಗೂ ಅಧಿಕ ಬೆಲೆಬಾಳುವ ಆಸ್ತಿ ಕಬಳಿಸಿದ್ದಾರೆ, ದೆಹಲಿಯ ಅತೀ ದೊಡ್ಡ ರಿಯಾಲ್ಟಿ ಕಂಪನಿ ಡಿಎಲ್ಎಫ್ ಜೊತೆ ಸೇರಿ ಮಾಡಿದ ವಂಚನೆಯಲ್ಲೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇಂದು ಕಾಂಗ್ರೆಸ್ ಇವೆಲ್ಲವನ್ನೂ ಮರೆತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ತಮ್ಮ ಕಳ್ಳ ಮುಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ.!

2009ಕ್ಕೂ ಮೊದಲು ಲಂಡನ್‌ನಲ್ಲಿ ಕೇವಲ ಒಂದು ಆಸ್ತಿ ಮಾತ್ರ ಹೊಂದಿದ್ದ ವಾದ್ರಾ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ (2005 – 2010ರ ನಡುವೆ) ಬರೋಬ್ಬರಿ 9 ಆಸ್ತಿಯನ್ನು ಖರೀದಿ ಮಾಡಿಕೊಂಡಿದ್ದರು. ಐಶಾರಾಮಿ ಬಂಗಲೆ, ಮನೆ ಸೇರಿದಂತೆ ಕೋಟಿ ಬೆಲೆಬಾಳುವ ಕಾರು ಬೈಕ್‌ಗಳಲ್ಲಿ ಸುತ್ತಾಡುವ ವಾದ್ರಾ ಜೀವನವೇ ಒಂದು ರೀತಿಯ ಲಕ್ಸೂರಿ. ಯಾಕೆಂದರೆ ಕಾಂಗ್ರೆಸ್ ಅವಧಿಯಲ್ಲಿ ಏನೂ ಮಾಡಿದರೂ ಕೇಳುವವರೇ ಇಲ್ಲದಂತಾಗಿತ್ತು. ಆದರೆ ಯಾವಾಗ ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಬಂದರೋ ಅಂದಿನಿಂದ ವಾದ್ರಾನಂತಹ ಲೂಟಿಕೋರರ ಅಂತ್ಯ ಸಮೀಪಿಸಿದೆ. ಯಾಕೆಂದರೆ ನಾನೂ ತಿನ್ನುವುದಿಲ್ಲ ಇತರರಿಗೆ ತಿನ್ನಲೂ ಬಿಡುವುದಿಲ್ಲ ಎಂದು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲೇ ಹೇಳಿಕೊಂಡ ಪ್ರಧಾನಿ ಮೋದಿ, ಸದ್ಯ ಎಲ್ಲಾ ಲೂಟಿಕೋರರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಬಂದ ಮಾತ್ರಕ್ಕೆ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಆದರೆ ಕಾಂಗ್ರೆಸ್‌ನ “ಆ ಒಂದು ಕುಟುಂಬ” ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬುದು ಮಾತ್ರ ಸತ್ಯ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close