ಅಂಕಣಪ್ರಚಲಿತ

ಲಾಲ್ ಸಲಾಮ್ ಹೊಡೆಯುತ್ತಿದ್ದ ಮಾರ್ಕ್ಸವಾದಿಯೊಬ್ಬರು ಕಳೆದ ಚುನಾವಣೆಯಲ್ಲಿ ಮೋದಿಗೆ ಮತ ನೀಡಿಲ್ಲವಾದರೂ 2019 ರಲ್ಲಿ ಮೋದಿಗೇ ನನ್ನ ಮತ ಎಂದು ಎದೆ ತಟ್ಟಿ ಹೇಳುತ್ತಿರುವುದೇಕೆ? ಅಂಥದ್ದೇನು ಮಾಡಿದರು ಮೋದಿ!!

 

ಈ ವ್ಯಕ್ತಿ ನಮ್ಮೆಲ್ಲರಂತೆಯೆ “ಜ್ಯಾತ್ಯಾತೀತ” ದೇಶದಲ್ಲಿದ್ದೇವೆ ಎನ್ನುವ ಭ್ರಮೆಯಲ್ಲೆ ಬೆಳೆದವರು. ನಮ್ಮೆಲ್ಲರಂತೆಯೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಒಂದೆ ತಾಯಿಯ ಮಕ್ಕಳು ಎಂದು ಹಾಡುತ್ತಲೆ ಬಂದವರು. ನಮ್ಮಂತೆಯೆ ಕಮ್ಯೂನಿಷ್ಟ್ ಆಧಾರಿತ ಪಾಠ ಪುಸ್ತಕಗಳನ್ನೆ ಅರೆದು ಕುಡಿದು, ಪಾಶ್ಚಾತ್ಯರು ಬಾರಿ ಮುಂದುವರಿದವರು, ಅರ್ಯನ್ನರು ದ್ರಾವಿಡರ ಮೇಲೆ ಆಕ್ರಮಣ ಮಾಡಿದರು, ಭಾರತ ನಿರಕ್ಷರಕುಕ್ಷಿಗಳ ಬಡ ದೇಶ ಎನ್ನುವ ಭ್ರಮೆಯಲ್ಲಿದ್ದವರು.

ಇನ್ನಿತರ ಲಾಲ್ ಸಮಾಮಿಗರಂತೆ ಅಥವಾ ಒಬ್ಬ ಅಮಾಯಕ ಮತದಾರನಂತೆ ಗುಜರಾತ್ ದಂಗೆಗೆ ಮೋದಿ ಕಾರಣ, ಬಿಜೆಪಿ ದ್ವೇಷ ಬಿತ್ತುತ್ತದೆ, ಕೋಮು ಭಾವನೆ ಹರಡುತ್ತದೆ, ಆರ್.ಎಸ್.ಎಸ್ ಕೆಟ್ಟದ್ದು, ಅಣ್ಣಾ ಹಜಾರೆ ಭಾರೀ ಒಳ್ಳೆ ವ್ಯಕ್ತಿ, ಈ ದೇಶದಿಂದ ಭ್ರಷ್ಟಚಾರವನ್ನು ಓಡಿಸುವ ಶಕ್ತಿ ಇರುವುದು ಕೇವಲ ಕೇಜ್ರಿವಾಲನಿಗೆ ಮಾತ್ರ ಎಂದುಕೊಂಡು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಮತ ನೀಡಿರಲಿಲ್ಲ. ಆದರೆ ಈಗ ಈ ವ್ಯಕ್ತಿ ನಾನು 2019 ರಲ್ಲಿ ಮೋದೀಗೆ ಮತ ನೀಡುತ್ತೇನೆ ಎನ್ನುತ್ತಾ ನಮೋ ಎನ್ನುತ್ತಿದ್ದಾರೆ! ಈ ಬದಲಾವಣೆಗೆ ಕಾರಣಗಳೇನು?

ವೃತ್ತಿಯಲ್ಲಿ ವಾಸ್ತುಶಿಲ್ಪಿ ಆಗಿರುವ ಆಭಾಸ್ ಮಲ್ದಾಹಿಯರ್ ತನ್ನ ಅಧ್ಯಯನ ಸಮಯದಲ್ಲಿ ಅಜಂತಾ ಎಲ್ಲೋರದ ಗುಹಾಲಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಅಧ್ಯಯನ ಅವರ ಜೀವನದ ದೃಷ್ಟಿಕೋನವನ್ನೆ ಬದಲಾಯಿಸಿ ಬಿಟ್ಟಿತು. ಎಲ್ಲರಂತೆಯೆ ಎಡಚರು ಬರೆದಿದ್ದ ಕಾಗೆ-ಗೂಬೆ ಕಥೆಯನ್ನೆ ನಂಬಿದ್ದ ಆಭಾಸ್ ಭ್ರಮೆಯ ಪೊರೆ ಕಳಚಿ ಬಿದ್ದು ಭಾರತೀಯ ಇತಿಹಾಸದ ನಗ್ನ ಸತ್ಯ ಅವರ ಕಣ್ಣ ಮುಂದೆ ರಾಚುತ್ತಿತ್ತು. ಭಾರತವನ್ನು ತುಂಡರಿಸಲು, ಭಾರತೀಯತೆಯನ್ನು ನಿಕೃಷ್ಟವಾಗಿ ತೋರಿಸಲು ಎಡಚ್ಚರು ಹೆಣೆದಿದ್ದ ವ್ಯವಸ್ತಿತ ಜಾಲದ ಅರಿವು ಯಾವಾಗ ಅವರಿಗೆ ಆಯಿತೋ ಅವರು ಲಾಲ್ ಸಲಾಮ್ ಅನ್ನು ತ್ಯಜಿಸಿ ಸನಾತನದ ಕೇಸರಿ ಬಣ್ಣದಲ್ಲಿ ಮುಳುಗೆದ್ದರು.

ಇದು ಆಭಾಸ್ ಒಬ್ಬರ ಅನುಭವವಲ್ಲ ಇದು ನಮ್ಮ ನಿಮ್ಮೆಲ್ಲರ ಕಥೆ. ಇದಕ್ಕೆ ನಾವು ಹೊಣೆಯಲ್ಲ, ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಅದನ್ನು ಬದಲಾಯಿಸುವ ಛಾತಿ ಇಲ್ಲದ ನಪುಂಸಕ ಸರಕಾರಗಳ ಹೇಡಿತನದ ಪರಿಣಾಮ. ನಮ್ಮ ಭವ್ಯ ಇತಿಹಾಸದ ಗುರುಕುಲ ಪದ್ದತಿಯ ಶಿಕ್ಷಣ ವ್ಯವಸ್ಥೆ ಜಾರಿಗೆ ಬರದೆ ಭಾರತ ಬದಲಾದರೂ ಮನಸ್ಥಿತಿ ಬದಲಾಗದು.

ಕಟ್ಟಾ ಮೋದಿ ವಿರೋಧಿಯಾಗಿದ್ದ ಆಭಾಸ್ ಮೋದಿ ಪ್ರೇಮಿಯಾಗಲು ಕಾರಣಗಳೇನು?

ಈ ನಾಲ್ಕೂವರೆ ವರ್ಷಗಳ ಮೋದಿ ಆಡಳಿತವನ್ನು ಅವರು “ಮೋದಿ ವರ್ಷಗಳು” ಎಂದು ವ್ಯಾಖ್ಯಾನಿಸುತ್ತಾರೆ. ಮೋದಿ ಸರ್ಕಾರವು ಪ್ರತಿ ಸಾಮಾನ್ಯ ಮನುಷ್ಯನ ಜೀವನವನ್ನು ಬಲಪಡಿಸುವ ಸಲುವಾಗಿ ವ್ಯಾಪಕವಾಗಿ ಕೆಲಸ ಮಾಡಿದೆ. ಕೇವಲ ಮೂರ್ಖ ವ್ಯಕ್ತಿಯೊಬ್ಬನಷ್ಟೆ ಮೋದಿಯ ಸಮರ್ಪಣೆ ಮತ್ತು ಫಲಿತಾಂಶಗಳನ್ನು ಪ್ರಶ್ನಿಸುತ್ತಾನೆ ಎನ್ನುತ್ತಾರೆ.

ಮೋದಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನದಂದು ಸಾರ್ಕ್ ನ ಸದಸ್ಯ ದೇಶಗಳನ್ನು ಆಮಂತ್ರಿಸುವ ಮೂಲಕ ಆತ ತನ್ನ ಛಾಪನ್ನು ಜಗತ್ತಿಗೆ ತೋರಿಸಿದ್ದರು. ತದ ನಂತರ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಮಗಳ ಮದುವೆಗೆ ಹೋಗಿದ್ದ ಮೋದಿ ವಿಶ್ವಕ್ಕೆ ಒಂದು ಮಹತ್ವದ ಸಂದೇಶ ನೀಡಿದ್ದರು. ಭಾರತ ಪಾಕಿಸ್ತಾನದ ಸ್ನೇಹ ಬಯಸುತ್ತದೆ ಆದರೆ ಪಾಕಿಸ್ತಾನ ಅದಕ್ಕೆ ಲಾಯಕ್ಕಲ್ಲ ಎನ್ನುವ ಸಂದೇಶ ಜಗತ್ತಿಗೆ ರವಾನೆಯಾಗಿತ್ತು. ಈ ಘಟನೆ ಬಳಿಕವೂ ಪಾಕಿಸ್ತಾನ ಭಾರತದ ಮೇಲೆ ಛದ್ಮ ಯುದ್ದ ಮಾಡುವುದನ್ನು ನಿಲ್ಲಿಸಲಿಲ್ಲ. ಇದರಿಂದ ಇಡಿಯ ಜಗತ್ತೆ ಪಾಕಿಸ್ತಾನದ ಬಗ್ಗೆ ಋಣಾತ್ಮಕ ಭಾವನೆಯನ್ನು ಬೆಳೆಸಿಕೊಂಡವು ಮಾತ್ರವಲ್ಲ ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನ ಬೀದಿ ಭಿಕಾರಿಯಾಯಿತು.

ಇನ್ನು ಪಧಾನಿಯಾಗಿ ಮೋದಿ ಅವರು ಜಗತ್ತಿನ ಎಲ್ಲಾ ರಾಷ್ಟ್ರಗಳ ಜೊತೆ ಸಮನ್ವವ ಸಾಧಿಸಿಕೊಂಡರು. ಸುಶ್ಮಾ ಸ್ವರಾಜ್ ಮತ್ತು ಧರ್ಮೇಂದ್ರ ಪ್ರಧಾನ್ ತೈಲ ಸಂಪನ್ನ ದೇಶಗಳ ಮನವೊಲಿಸುವಲ್ಲಿ ಸಫಲರಾಗಿ ಆನ್-ಟೈಮ್ ಡೆಲಿವರಿ ಪ್ರೀಮಿಯಂ ಶುಲ್ಕಗಳನ್ನು ಉಳಿಸಿ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಲಾಭ ತಂದರು. ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಅನ್ನು ಪಾಕಿಸ್ತಾನ ಮತ್ತು ವಿರೋಧ ಪಕ್ಷಗಳನ್ನು ಹೊರತು ಪಡಿಸಿ ಎಲ್ಲರೂ ಕೊಂಡಾಡಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದ ತನ್ನ ರಣನೀತಿಯನ್ನು ಹೆಣೆಯಲು ವಿದೇಶಗಳ ಜೊತೆ ಮಾಡಿಕೊಂಡ ಒಪ್ಪಂದಗಳು ಅತ್ಯದ್ಭುತ.

ಭಾರತವು ಸುಮಾರು 1416 ಮೆವ್ಯಾ ಸಾಮರ್ಥ್ಯದ ಜಲವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಭೂತಾನಿನಲ್ಲಿ 3 ಅಣೆಕಟ್ಟುಗಳನ್ನು ನಿರ್ಮಿಸಿ ಹಸಿರು ಇಂಧನದಲ್ಲಿ ಸಿಂಹ ಪಾಲು ಪಡೆಯಿತು. ಭೂತಾನಿನ 3/4 ನೇ ಶಕ್ತಿಯು ಈಗ ಭಾರತಕ್ಕೆ ರಫ್ತಾಗುತ್ತದೆ. 2016 ರಲ್ಲಿ ದ್ವಿಪಕ್ಷೀಯ ವಹಿವಾಟು 8,723 ಕೋಟಿ ರೂ.ಗಳಾಗಿದ್ದು, ಆಮದು 5,528.5 ಕೋಟಿ ರೂ ಮತ್ತು 3,205.2 ಕೋಟಿ ರೂ ರಫ್ತು ವಹಿವಾಟು ನಡೆದಿದೆ. ಇದೆ ರೀತಿ ಚೀನಾಗೆ ಚೆಕೆ ಮೇಟ್ ನೀಡಿ ನೇಪಾಳವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡ ಮೋದಿ ಸರ್ಕಾರ, ಅತಿ ದೊಡ್ಡ ಅಣೆಕಟ್ಟು ಕಟ್ಟಿ 83% ಪಾಲನ್ನು ಉಚಿತವಾಗಿ ಭಾರತಕ್ಕೆ ದಕ್ಕಿಸಿಕೊಂಡು ಹಸಿರು ಇಂಧನ ದೈತ್ಯನಾಗಿ ಬೆಳೆದಿದೆ. ಜಪಾನಿಗೆ ದಂಬಾಲು ಬಿದ್ದ ಮೋದಿ, ದೆಹಲಿ- ಮುಂಬೈ ಇನ್ವೆಸ್ಟ್ ಮೆಂಟ್ ಕಾರಿಡಾರ್ನಲ್ಲಿ $ 30 ಬಿಲಿಯನ್ ಹೂಡಿಕೆ ಮಾಡಿಸುವಲ್ಲಿ ಸಫಲರಾಗಿದ್ದಾರೆ.

ಮೋದಿ ಸರಕಾರದ ಜನಪರ ಯೋಜನೆಗಳಾದ ಸ್ವಚ್ಚ ಭಾರತ ಅಭಿಯಾನ, ಉಜ್ವಲಾ ಯೋಜನೆ, ಸೌಭಾಗ್ಯ ಯೋಜನೆ, ಆಯುಶ್ಮಾನ್ ಭಾರತ್ ಯೋಜನೆ, ಡಿಜಿಟಲ್ ಇಂಡಿಯಾ, ನಮಾಮಿ ಗಂಗೆ, ಸ್ಟಾರ್ಟಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಬೇಟಿ ಬಚಾವೋ, ಜನಧನ ಯೋಜನೆ, ಜನೌಷಧಿ ಕೇಂದ್ರ ಇವೆಲ್ಲಾ ಸೂಪರ್ ಹಿಟ್ ಎಂದು ಈಗಾಗಲೆ ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಸಂಸ್ಥೆ, ಐ.ಎಮ್.ಎಫ್ಗಳು ಷರಾ ಬರೆದಿವೆ.

2019ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮತ ನೀಡಲು ನನಗೆ ಇನ್ನೂ ಹೆಚ್ಚಿನ ಕಾರಣಗಳಿವೆ . ಕಳೆದ ಹಲವಾರು ದಶಕಗಳಲ್ಲಿ ಯಾವ ಸರಕಾರವೂ ಮಾಡದ ಬದಲಾವಣೆಯನ್ನು ಅವರು ಮಾಡಿ ತೋರಿದ್ದಾರೆ. 2019ರಲ್ಲಿ ಅವರನ್ನು ಮರಳಿ ತರಲು ಸಾಧ್ಯವಾಗದಿದ್ದರೆ ಇದು ಭಾರತದ ಅತಿ ದೊಡ್ಡ ದುರಾದೃಷ್ಟ ಎನ್ನುತ್ತಾರೆ ಆಭಾಸ್. ಆಭಾಸ್ ಅವರಿಗೆ ಅರ್ಥವಾದ ಸತ್ಯ ಇನ್ನಿತರರಿಗೆ ಅರ್ಥವಾಗುವುದೆ?

–ಶಾರ್ವರಿ
ಮೂಲ ಲೇಖ: ಆಭಾಸ್ ಮಲ್ದಾಹಿಯರ್ (ಓರ್ಗನೈಸರ್.ಓರ್ಗ್)

follow aabhas on twitter : @Aabhas24

Tags

Related Articles

FOR DAILY ALERTS
 
FOR DAILY ALERTS
 
Close