ಅಂಕಣರಾಜಕೀಯ

ಇತಿಹಾಸ ಮತ್ತೆ ಮರುಕಳಿಸುವಂತೆ ಮಾಡಿದ ನಮೋ! ಮೋದಿಯ ವಿಶ್ರಾಂತಿ ತಾಣ ಕಂಡು ಬೆರಗಾದ ದೇಶದ ಜನತೆ!

ಅಬ್ಬಬ್ಬಾ….. ಒಬ್ಬ ವ್ಯಕ್ತಿ ಈ ಮಟ್ಟದ ಜನಪ್ರಿಯತೆ ಗಳಿಸುತ್ತಾನೆ ಎಂದರೆ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಯಾರೇ ಆಗಲಿ ಒಂದಲ್ಲ ಒಂದು ಹಂತದಲ್ಲಿ ವಿಫಲರಾಗುತ್ತಾರೆ ಅಥವಾ ಹಿಂದೇಟು ಹಾಕುತ್ತಾರೆ. ಆದರೆ ಈ ವ್ಯಕ್ತಿ ತಾನು ಏನು ಹೇಳುತ್ತೇನೋ ಅದನ್ನೇ ಮಾಡಿ ತೋರಿಸುತ್ತಾರೆ ಮತ್ತು ಒಮ್ಮೆ ತೆಗೆದುಕೊಂಡ ನಿರ್ಧಾರದಿಂದ‌ ಹಿಂದೇಟು ಹಾಕಿದ ಉದಾಹರಣೆಯೇ ಇಲ್ಲ. ಹೀಗಿರುವಾಗ ಈ ವ್ಯಕ್ತಿಗೆ ಅಭಿಮಾನಿಗಳು, ಬೆಂಬಲಿಗರು ಹುಟ್ಟಿಕೊಂಡಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರೂ ಅಧಿಕಾರಕ್ಕಾಗಿ ಹೋರಾಟ ನಡೆಸಿದರೆ ಈತ ಮಾತ್ರ ಅಧಿಕಾರವನ್ನೇ ಬಳಸಿಕೊಂಡು ಯಾರೂ ಊಹಿಸದ ರೀತಿಯಲ್ಲಿ ಬದಲಾವಣೆಗಳನ್ನು ಮಾಡುತ್ತಾ, ಇತರರಿಗೆ ಮಾದರಿಯಾಗುತ್ತಾ, ಭಾರತವನ್ನು ವಿಶ್ವಗುರು ಮಾಡುತ್ತಾ ಬಂದಿದ್ದಾರೆ. ‌ಇಂದು ಭಾರತ ಮತ್ತೆ ತನ್ನ ಗತವೈಭವವನ್ನು ಮರಳಿ ಪಡೆದುಕೊಂಡಂತಾಗಿದೆ. ಯಾಕೆಂದರೆ ನಿನ್ನೆಯ ದಿನ ಆ ವ್ಯಕ್ತಿ ಮಾಡಿದ ಒಂದೇ ಒಂದು ಕೆಲಸ ಮತ್ತೊಮ್ಮೆ ಆತ ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾನೆ ಎಂಬುದನ್ನು ಸೂಚಿಸುತ್ತು.!

ಹೌದು ಇಲ್ಲಿ ಹೇಳುತ್ತಿರುವ ವ್ಯಕ್ತಿ ಬೇರಾರೂ ಅಲ್ಲ, ಭಾರತದ ಪ್ರಧಾನಸೇವಕ ಶ್ರೀ ನರೇಂದ್ರ ಮೋದಿ. ಹೆಸರಲ್ಲೇ ಒಂದು ಸೆಳೆಯುವ ಶಕ್ತಿ ಇದೆ ಎಂಬುದು ಎಷ್ಟು ನಿಜವೋ, ಅದೇ ರೀತಿ ಮೋದಿಯವರು ಮಾಡಿದ ಕೆಲಸ ಕೂಡ ಎಲ್ಲರನ್ನೂ ಆಕರ್ಷಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಕಳೆದ ಐದು ವರ್ಷಗಳ ಹಿಂದೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ತಮ್ಮದೇ ಆದ ಒಂದು ಹೊಸ ಅಲೆ ಸೃಷ್ಟಿಸಿ ದೇಶಾದ್ಯಂತ ಸಂಚರಿಸಿ ಭಾರತದ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದರು. ಅದೊಂದು ಐತಿಹಾಸಿಕ ಕ್ಷಣ ಮಾತ್ರವಲ್ಲದೆ ಕೇಸರಿ ಪಡೆಗೆ ಕಂಡು ಕೇಳರಿಯದ ಗೆಲುವು ಕೂಡ ಹೌದು. ಮೋದಿ‌ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ ನಮಗೆ ಸ್ಪಷ್ಟವಾಗಿ ತಿಳಿಯುವ ಅಂಶವೆಂದರೆ, ಮೋದಿ ಯಾವ ಧರ್ಮದ ವಿರೋಧಿಯೂ ಅಲ್ಲ, ಬದಲಾಗಿ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಎತ್ತಿ ಹಿಡಿದು ಸಾಗುತ್ತಾ ಬಂದವರು. ಅಧಿಕಾರ ವಹಿಸಿಕೊಂಡ ಕೂಡಲೇ ಅವರ ದೃಷ್ಟಿಕೋನ ಬದಲಾಗಲಿಲ್ಲ, ತನ್ನ ಉದ್ದೇಶ ಮರೆಯಲಿಲ್ಲ, ಯಾವ ಸಂಸ್ಕೃತಿಯನ್ನು ಅನುಸರಿಸುತ್ತಾ ಬಂದಿದ್ದಾರೋ ಇಂದು ಆ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.!

ಅಂದು ಪ್ರಧಾನಿ ಮೋದಿ ಕೊಟ್ಟ ಒಂದೇ ಒಂದು ಕರೆಗೆ ಇಡೀ ಜಗತ್ತು ಯೋಗ ಮಾಡಲು ಒಪ್ಪಿಕೊಂಡಿತ್ತು. ಯಾಕೆಂದರೆ ಭಾರತ ಜಗತ್ತಿಗೆ ಏನೇ ನೀಡಿದರು ಅದು ಒಳಿತನ್ನೇ ಬಯಸುತ್ತದೆ ಎಂಬ ನಂಬಿಕೆ ಇತರ ರಾಷ್ಟ್ರಗಳಿಗೆ ಇದೆ. ಅದೇ ರೀತಿ ಮೋದಿ ಅದಾಗಲೇ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಒಂದು ಹೊಸ ಛಾಪು ಮೂಡಿಸಿದ್ದರು. ಆದ್ದರಿಂದ ಮೋದಿ ಹೇಳಿದ ಕೂಡಲೇ ನಾವು ಕೂಡ ಯೋಗ ಮಾಡುತ್ತೇವೆ ಎಂದು ಮುಸ್ಲಿಂ ರಾಷ್ಟ್ರಗಳು ಕೂಡ ಮುಂದೆ ಬಂದವು. ಯೋಗ ಎಂಬುದು ಹಿಂದೂ ಧರ್ಮದ ಆಚರಣೆಗಳಲ್ಲಿ ಬರುವ ಒಂದು ಅಂಶ, ಋಷಿ ಮುನಿಗಳು ಯೋಗದ ಮೂಲಕ ಅದೆಷ್ಟೋ ಪವಾಡಗಳನ್ನು ಸೃಷ್ಟಿಸಿರುವುದು ನಮಗೆ ತಿಳಿದಿರುವ ವಿಷಯ. ‌ಇದೀಗ ಮತ್ತೆ ಯೋಗಕ್ಕೆ ಒಂದು ಹೊಸ ಬಲ ಸಿಕ್ಕಿದೆ, ಯೋಗದಿಂದ‌ ದೂರ ಸರಿದಿದ್ದ ಜನರನ್ನು ಮತ್ತೆ ಯೋಗದತ್ತ ಮುಖ ಮಾಡುವಂತೆ ಮಾಡಿದ್ದಾರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು. ಇವೆಲ್ಲವೂ ಒಂದು ವಿಚಾರಚಾದರೆ ಮೋದಿ ನಿನ್ನೆ ಮಾಡಿದ ಒಂದು ಕೆಲಸ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಸುದ್ಧಿಯಾಗಿದೆ. ಅದೇನೆಂದರೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ಒಂದೇ ಒಂದು ದಿನ‌ ವಿಶ್ರಾಂತಿ ಪಡೆದವರಲ್ಲ, ಕುಟುಂಬದ ಜೊತೆ ವಿದೇಶ ಪ್ರವಾಸ ಕೈಗೊಂಡವರಲ್ಲ.‌ ಈ ವಯಸ್ಸಿನಲ್ಲೂ ಮೋದಿಯವರು ಇಷ್ಟೊಂದು ಲವಲವಿಕೆಯಿಂದ ಇರುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.‌

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಕೆಲ ರಾಜಕಾರಣಿಗಳು ವಿದೇಶಕ್ಕೆ ಹೋಗಿ ವಿಶ್ರಾಂತಿ ಪಡೆದರೆ ಇನ್ನೂ ಕೆಲವರು ರೆಸಾರ್ಟ್‌ಗಳಲ್ಲಿ ದಿನವಿಡೀ ವಿಶ್ರಾಂತಿ ಪಡೆದರು. ಆದರೆ ಮೋದಿ ಇವರೆಲ್ಲರ ನಡುವೆ ಬಹಳ ವಿಶೇಷವಾಗಿ ಕಾಣಿಸಿಕೊಂಡರು, ಯಾಕೆಂದರೆ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಮೋದಿ ಹೋಗಿದ್ದು ಕೇದಾರನಾಥನ ಸನ್ನಿಧಿಗೆ. ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ನಮೋ ಅಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೆ ನಿನ್ನೆಯಿಂದ‌ ಇಂದಿನವರೆಗೂ ಅಲ್ಲೇ ಒಂದು ಗುಹೆಯಲ್ಲಿ ಧ್ಯಾನಕ್ಕಾಗಿ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ಒಬ್ಬ ಪ್ರಧಾನಿಯಾಗಿ ಒಂದು ಗುಹೆಯಲ್ಲಿ ಕೂತು ವಿಶ್ರಾಂತಿ ಪಡೆಯುತ್ತಾರೆ ಎಂದರೆ ಆತನ‌ ಮನಸ್ಥಿತಿ ಮತ್ತು ಆತ ಯಾವ ಪರಂಪರೆಯನ್ನು ಹೊಂದಿದ್ದಾನೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.!

ಒಂದೆಡೆ ಮಳೆ ಸುರಿಯುತ್ತಿದ್ದರೂ ಕೂಡ ಮೋದಿ ನಡೆದುಕೊಂಡೇ ಗುಹೆಯ ಜಾಗಕ್ಕೆ ಹೋಗಿದ್ದು, ಸಂಪೂರ್ಣ ಕೇಸರಿ ಧರಿಸಿ ಋಷಿ ಮುನಿಗಳಂತೆ ಗುಹೆಯಲ್ಲಿ ಧ್ಯಾನಕ್ಕೆ ಕುಳಿತಿದ್ದರು. ಇದು ನಿಜಕ್ಕೂ ಒಂದು ಅಪರೂಪದ ಕ್ಷಣ ಎಂದರೂ ತಪ್ಪಾಗದು. ಮೋದಿ ಮಾಡುವ ಪ್ರತಿಯೊಂದು ಕೆಲಸ ಕೂಡ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ ಎಂಬುದು ಇದೇ ಕಾರಣಕ್ಕೆ. ಒಂದು ದಿನ ರಜಾ ಸಿಕ್ಕಿದರೆ ಸಾಕು ಆರಾಮವಾಗಿ ಸುತ್ತಾಡಲು ಹೋಗುವ ರಾಜಕಾರಣಿಗಳ ಮಧ್ಯೆ ಮೋದಿಯೊಬ್ಬರೇ ವಿಶೇಷವಾಗಿ ಕಾಣಿಸಿಕೊಂಡರು. ಮೋದಿಜೀ ನಿಜಕ್ಕೂ ಹಿಂದೂ ಸಂಸ್ಕೃತಿಯನ್ನು ಹಿಂದೂ ಪರಂಪರೆಯನ್ನು ಮತ್ತೆ ಮರುಕಳಿಸುವಂತೆ ಮಾಡುತ್ತಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಅದೇನೇ ಇರಲಿ ಮೋದಿ ಧ್ಯಾನ ಮಾಡಿದ್ದು ಇದೀಗ ಜಗತ್ಪ್ರಸಿದ್ಧ ಎಂಬುದು ಸ್ಪಷ್ಟ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close