ಇತಿಹಾಸ

ಅಕ್ಬರನ ಗೋರಿಯನ್ನು ಬಗೆದು ಆತನ ಅಸ್ಥಿ ಪಂಜರವನ್ನೆ ಸುಟ್ಟು ಹಾಕಿದ ಔರಂಗಜೇಬನಿಗೆ ತಲೆನೋವಾಗಿದ್ದ ರಾಜಾರಾಮ್ ಜಾಟ್ ಎಂಬ ಹಿಂದೂ ವೀರ ಮುಘಲರನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ !!

ಭಾರತದ ಇತಿಹಾಸದ ಪುಟದಲ್ಲಿ ಮಾಸಿ ಹೋದ ಅನೇಕ ಹಿಂದೂ ಮಹಾನಾಯಕರುಗಳಿದ್ದಾರೆ. ಈ ಹಿಂದೂ ವೀರರ ಪರಾಕ್ರಮವನ್ನು ಭಾರತದ ಪ್ರಜೆಗಳಿಗೆ ತಿಳಿಸುವಂತಹ ಯಾವ ಕ್ರಮಗಳನ್ನೂ ಯಾರೂ ಕೂಡಾ ಮಾಡುವುದಿಲ್ಲ. ಭಾರತದಲ್ಲಿ ಶಿವಾಜಿ, ಮಹಾರಾಣಾ ಪ್ರತಾಪರಂತೆಯೆ ಮುಘಲರ ನಿದ್ದೆ ಗೆಡಿಸಿದ್ದ ಹಲವಾರು ಮಹಾನಾಯಕರಿದ್ದಾರೆ. ಅದರಲ್ಲಿ ಒಬ್ಬ ರಾಜರಾಮ್ ಜಾಟ್. ಜಾಟ್ ಸಮುದಾಯಕ್ಕೆ ಸೇರಿದ ಈ ಪರಮ ಪ್ರತಾಪಿ ಹೆಸರು ಕೇಳಿದರೆ ಮುಘಲರು ಅರಮನೆಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರು. ವಿಪರ್ಯಾಸವೆಂದರೆ ಈ ವ್ಯಕ್ತಿಯ ಬಗ್ಗೆ ಶಾಲಾ ಪಾಠ ಪುಸ್ತಕಗಳಲ್ಲಿ ಕಲಿಸಲಾಗಿಲ್ಲ. ಈತನ ಪರಾಕ್ರಮವನ್ನು ಪರಿಚಯಿಸುವ ಧಾರಾವಾಹಿ-ಸಿನಿಮಾಗಳಾಗಲೀ ನಿರ್ಮಾಣವಾಗಿಲ್ಲ.

ಭಾರತದಲ್ಲಿ ಔರಂಗಜೇಬನೆಂಬ ಮತಾಂಧನ ದಾಳಿ ತೀವ್ರವಾಗಿದ್ದ ಕಾಲವದು. ಹಿಂದೂಗಳು ತಮ್ಮದೆ ನಾಡಿನಲ್ಲಿ ರೌರವ ನರಕ ಅನುಭವಿಸುತ್ತಿದ್ದ ಕಾಲ. ಆಗ ಉದಿಸಿದನೊಬ್ಬ ಸನಾತನ ಧರ್ಮ ರಕ್ಷಕ ರಾಜಾರಾಮ್ ಜಾಟ್. ಸಿಖ್, ರಜಪೂತ ಮತ್ತು ಮರಾಠಾರಂತೆಯೆ ಜಾಟ್ ಸಮುದಾಯ ಕೂಡಾ ಪರಾಕ್ರಮಕ್ಕೆ ಹೆಸರಾದ ಸಮುದಾಯ. ಉತ್ತರ ಭಾರತದಲ್ಲಿ ಸಿನ್ ಸಿನ್ ವಾರ್ ಜಾಟರ ನಾಯಕ ಭಜ್ಜಾಸಿಂಗ್ ಪುತ್ರ ಈ ರಾಜಾರಾಮ್ ಜಾಟ್. ಬಹುಮುಖ ಪ್ರತಿಭೆಯ ಧನಿ, ಸಾಹಸಿ ಸೈನಿಕ ಮತ್ತು ವಿಲಕ್ಷಣ ರಾಜನೀತಿಜ್ಞ ರಾಜಾರಾಮ್. ಜಾಟರಲ್ಲಿ ಹರಿದು ಹಂಚಿದ್ದ ಸೇಘರಿಯಾ ಮತ್ತು ಸಿನ್ ಸಿನ್ ವಾರ್ ಸಮುದಾಯಗಳನ್ನು ಬಹು ಚಾಣಾಕ್ಷತೆಯಿಂದ ಒಟ್ಟುಗೂಡಿಸಿ ಮುಘಲರ ವಿರುದ್ದ ಹೋರಾಡಲು ಬಲಿಷ್ಟ ಸೈನ್ಯ ತಯಾರು ಮಾಡಿದ್ದ.

ಸೇಘರಿಯಾ ಸಮುದಾಯದ ರಾಮಚಹರ್ ಈತನ ಬಲಗೈ ಬಂಟ. ಈ ಇಬ್ಬರೂ ಸೇರಿ ಮುಘಲರನ್ನು ಅಟ್ಟಾಡಿಸಿಕೊಂಡು ಹೊಡೆದು ಹೈರಾಣಾಗಿಸುತ್ತಿದ್ದರು. ಮುಘಲ ಕಾಮಾಂಧನೊಬ್ಬ ತನ್ನ ಹಳ್ಳಿಯ ವಿವಾಹಿತ ಯುವತಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ವಿಷಯ ರಾಜಾರಾಮನ ಕಿವಿಗೆ ಬಿದ್ದಾಗ ಆತನನ್ನು ಕೊಲ್ಲುವ ಉಪಾಯ ಮಾಡುತ್ತಾನೆ ಈ ಜಾಟ್ ವೀರ. ಮುಘಲ ಚೌಕಿಯೊಳಗೆ ಹೋಗುವ ಹುಲ್ಲು ತುಂಬಿದ ಎತ್ತಿನ ಗಾಡಿಯಲ್ಲಿ ಅಡಗಿ ಕುಳಿತು, ಚೌಕಿಯೊಳಗೆ ಪ್ರವೇಶಿಸಿ ಮುಘಲ ಹಂದಿಗಳ ಮೇಲೆ ಸಿಂಹದಂತೆ ಆಕ್ರಮಣ ಮಾಡಿ ತರಿ ತರಿದು ಹಾಕುತ್ತದೆ ರಾಜಾರಾಮ್ ನ ಸೈನ್ಯ. ಈ ಘಟನೆಯ ಬಳಿಕ ಜಾಟ ಸೈನ್ಯವನ್ನು ಸುವ್ಯವಸ್ತಿತ ಗೊಳಿಸಿ ಮೊಘಲರ ವಿರುದ್ದ ತೊಡೆ ತಟ್ಟುತ್ತಾನೆ ರಾಜಾರಾಮ.

ಜಾಟ್ ಪ್ರದೇಶದ ಕಾಡುಗಳಲ್ಲಿ ತನ್ನವರ ಸುರಕ್ಷಿತತೆಗಾಗಿ ತೋಪಿನಿಂದಲೂ ಒಡೆಯಲಾಗದಂತಹ ಭದ್ರವಾದ ಕೋಟೆ ಕಟ್ಟುತ್ತಾನೆ. ದೌಲಪುರದಿಂದ ಆಗ್ರಾಗೆ ಪ್ರಯಾಣಿಸುವ ನಾಗರಿಕರಿಂದ ಸುಂಕ ವಸೂಲಾತಿ ಮಾಡಿ ಆ ಹಣದಿಂದ ತನ್ನ ಸೈನ್ಯವನ್ನು ಯುದ್ದ ನಿಷ್ಣಾತನಾಗಿಸುತ್ತಾನೆ. ಈತನ ಬಳಿ ತರಬೇತಿ ಹೊಂದಿದ ಸೈನಿಕರು ಮುಘಲರನ್ನು ಹುಡುಕಿ ಹುಡುಕಿ ಚಿವುಟಿ ಹಾಕುತ್ತಾರೆ. ಹೇಗೆ ಮುಘಲರು ಹಿಂದೂ ಮಂದಿರಗಳನ್ನು ಧ್ವಂಸ ಮಾಡಿ ಹಣ ಕೊಳ್ಳೆ ಹೊಡೆಯುತ್ತಿದ್ದರೋ ಅದೇ ರೀತಿ ರಾಜಾರಾಮ್ ಜಾಟ್ ಮುಘಲರ ಮಸೀದಿ, ಗೋರಿಗಳನ್ನು ಧ್ವಂಸ ಮಾಡಿ ಅದರೊಳಗಿದ್ದ ಚಿನ್ನಾಭರಣಗಳನ್ನು ದೋಚುತ್ತಿದ್ದನಂತೆ! ಸೇರಿಗೆ ಸವ್ವಾಸೇರು ಅಂದರೆ ಇದುವೆ. ಆತನ ಪರಾಕ್ರಮದಿಂದಾಗಿ ಉತ್ತರ ಭಾರತದಲ್ಲಿ ರಾಜಾರಾಮ್ ಜಾಟ್ ಹೆಸರು ಮನೆ ಮಾತಾಗಿತ್ತು.

ರಾಜಾರಾಮನ ಪರಾಕ್ರಮದ ಕಥೆಗಳು ಔರಂಗಜೇಬನ ಕಿವಿಗೂ ಬಿದ್ದಿತ್ತು. ರಾಜಾರಾಮನನ್ನು ಮಣಿಸಲು ಮೊದಲು ಆತ ತನ್ನ ಮಗ ಆಜಮ್ ಖಾನ್, ತದನಂತರ ಆಜಮ್ ಖಾನ್ ಮಗ ಬೀದರ್ ಬಖ್ತ್ ನನ್ನು ಕಳುಹಿಸಿತ್ತಾನೆ. ಆದರೆ ರಾಜಾರಾಮನ ಸೈನಿಕರು ಮೊದಲೆ ಅವರ ಮೇಲೆ ಆಕ್ರಮಣ ಮಾಡಿ ಮುಘಲ ಸೈನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಾರೆ. ಮಾರ್ಚ್ 1688 ರಲ್ಲಿ ರಾಜಾರಾಮ್ ಜಾಟ್ ಸೇನೆ ಸಿಂಕಂದರಾದಲ್ಲಿ ಮುಘಲರ ಮೇಲೆ ಆಕ್ರಮಣ ಮಾಡಿ 400 ಸೈನಿಕರನ್ನು ಯಮಪುರಿಗಟ್ಟುತ್ತದೆ. ಇತಿಹಾಸ ಬಲ್ಲವರ ಪ್ರಕಾರ ಆಗ್ರಾದಲ್ಲಿರುವ ಅಕ್ಬರನ ಗೋರಿಯನ್ನು ಬಗೆದು, ಆತನ ಅಸ್ಥಿಪಂಜರವನ್ನು ಹೊರತೆಗೆದು ಅದನ್ನು ಸುಟ್ಟು ಹಾಕುತ್ತಾನೆ ರಾಜಾರಾಮ್ ಜಾಟ್!!

ಆತನ ಬಗ್ಗೆ ಉತ್ತರ ಭಾರತದಲ್ಲಿ ಹೀಗೆ ಹೇಳಲಾಗುತ್ತದೆ.

ಢಾಯೀ ಮಸತಿ ಬಸತಿ ಕರೀ ಖೋದ್ ಕಬ್ರ್ ಕರಿ ಖಡ್ಡ್
ಅಕಬರ್ ಔರ್ ಜಹಾಂಗೀರ್ ಕೆ ಗಾಢೇ ಕಡೀ ಹಡ್ಡ್||

ಅಕಬರ ಮತ್ತು ಔರಂಗಜೇಬರ ಗೋರಿಗಳನ್ನು ಬಗೆದು, ಅದರೊಳಗೆ ಹೂತಿದ್ದ ಅಸ್ತಿಪಂಜರಗಳನ್ನು ಹೊರತೆಗೆದು ಅದನ್ನು ನಷ್ಟ ಪಡಿಸಿದ್ದ ಎನ್ನುವುದು ಇದರ ತಾತ್ಪರ್ಯ. ಮನೂಚಿಯ ಕಥನದ ಪ್ರಕಾರ, ರಾಜಾರಾಮ್ ಜಾಟ್ ನ ಸೇನೆ ಮುಘಲರ ಕಂಚಿನ ವಿಶಾಲವಾದ ಗೇಟುಗಳನ್ನು ಮುರಿದು ಹಾಕುತ್ತಿತ್ತು. ಗೋರಿಗಳನ್ನು ಮಸೀದಿಗಳನ್ನು ಒಡೆದು ಹಣ-ಚಿನ್ನಾಭರಣ ದೋಚುತ್ತಿತ್ತು. ಯಾವುದನ್ನು ದೋಚಲು ಸಾಧ್ಯವಿರಲಿಲ್ಲವೊ ಅದನ್ನು ಧ್ವಂಸ ಮಾಡಿ ಪುಡಿಗೈಯುತ್ತಿತ್ತು. ಈತನ ಭೀತಿಯಿಂದ ಮುಘಲರು ಮನೆಗಳಲ್ಲಿ ಅಡಗಿಕುಳಿತುಕೊಳ್ಳುತ್ತಿದ್ದರು. ಇಂತಹ ಪ್ರತಾಪಿಯನ್ನು 4 ಜುಲಾಯಿ 1688 ರಲ್ಲಿ ಮುಘಲರ ಜೊತೆ ನಡೆದ ಯುದ್ದದಲ್ಲಿ ಮೋಸದಿಂದ ಕೊಲ್ಲಲಾಗುತ್ತದೆ. ಯುದ್ದ ನಿರತನಾದ ರಾಜಾರಾಮ್ ಜಾಟ್ ನ ಬೆನ್ನಿಗೆ ಚೂರಿ ಇಕ್ಕಿ ಕೊಲ್ಲುತ್ತಾರೆ ಹೇಡಿ ಮುಘಲರು. ಆತನ ತಲೆ ಕಡಿದು ಔರಂಗಜೇಬನ ಆಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಆತನ ಮಿತ್ರ ರಾಮಚಹರ್ ನನ್ನು ಬಂಧಿಸಿ ಆಸ್ಥಾನಕ್ಕೆ ಕೊಂಡೊಯ್ದು ಆತನ ತಲೆಯನ್ನೂ ಕಡಿಯಲಾಗುತ್ತದೆ. ಅಲ್ಲಿಗೆ ಭಾರತ ಕಂಡ ಇಬ್ಬರು ಶೂರ ವೀರ ಮಹಾನಾಯಕರ ಜೀವನ ದುರಂತ ಅಂತ್ಯ ಕಾಣುತ್ತದೆ.

ಇತಿಹಾಸದ ಪುಟಗಳಿಂದಷ್ಟೆ ಅಲ್ಲ, ಜನಮಾನಸದಿಂದಲೂ ದೂರಾದ ಭಾರತದ ಮಹಾನಾಯಕ ಹಿಂದೂ ಕಲಿಗಳಾದ ರಾಜಾರಾಮ್ ಜಾಟ್ ಮತ್ತು ರಾಮಚಹರ್ ಸೇಘರಿಯಾ ಬಲಿದಾನಕ್ಕೆ ಕೋಟಿ ಕೋಟಿ ಪ್ರಣಾಮಗಳು. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರಿಲ್ಲದಿದ್ದರೂ ಪರ್ವಾಗಿಲ್ಲ, ಜನರ ಹೃದಯದಲ್ಲಿ ನಿಮ್ಮ ಹೆಸರುಗಳು ಚಿರಸ್ಥಾಯಿಯಾಗಿರಲಿ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close