ಪ್ರಚಲಿತ

ಪಂಪುವೆಲ್ ಫ್ಲೈಓವರ್’ನಲ್ಲಿ ನೇತಾಡುವವರಿಗೆ ಮಂಗಳೂರು ಸಂಸದರ ಅಭಿವೃದ್ಧಿಯ ವೇಗ ಮರೀಚಿಕೆಯಾಗಿದ್ದೇಕೆ? ಒಂದು ಫ್ಲೈ ಓವರ್ ನೂರು ಅಭಿವೃದ್ಧಿಯನ್ನು ಮರೆಮಾಚುವಂತೆ ಮಾಡಿತೇ?

ಲೋಕ ಸಮರದಲ್ಲಿ “ಕದ”ಬಡಿಯುತ್ತಿರುವ ರಾಜಕೀಯ ಪಕ್ಷಗಳು,ತಮ್ಮ ಅಭ್ಯರ್ಥಿಗಳ, ಪರವಾಗಿ, ಹಾಗೂ ವಿರೋಧ ಪಕ್ಷಗಳ ವಿರುದ್ಧವೂ ಪ್ರಚಾರದ ಬರಟೆಯನ್ನು ಹಚ್ಚಿಕೊಂಡಿದ್ದರೆ. ಆದರೆ ಒಂದಷ್ಟು ಯುವ ಜನತೆ ಟ್ರೋಲ್ ಮುಖಂತರ ಅಭ್ಯರ್ಥಿಗಳನ್ನು ಬೆವರಿಲಿಸುತ್ತಿದ್ದರೆ. ಇವೆಲ್ಲವು ಸಹಜವಾದದ್ದೆ.

ಇಂತಹ ಚುನಾವಣಾ ಕಚ್ಚಾಟಗಳ ನಡುವೆ ಈ ಬಾರಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಬಿ.ಜೆ.ಪಿ ಅಭ್ಯರ್ಥಿಯಾಗಿರುವ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಬಗ್ಗೆ ಅಪಪ್ರಚಾರಗಳು ತಾರಕ್ಕೇರುತ್ತಿದ್ದಂತೆ. ನಳಿನ್ ಕುಮಾರ್ ಅವರ ನೂನ್ಯತೆ ಮತ್ತು ಸಂಸದರಾಗಿ ಮಂಗಳೂರಿಗೆ ನೀಡಿದ ಕೊಡುಗೆಯ ಬಗೆಗೆ ಒಂದಷ್ಟು ವಿಚಾರವನ್ನು ಇಲ್ಲಿ ಹಂಚ್ಚಿಕೊಳ್ಳಬೇಕಾಗಿದೆ. ಇವತ್ತಿಗೂ ನಳಿನ್ ಕುಮಾರ್ ಕಟೀಲ್ ಅವರನ್ನು ವಿರೋಧಿಸಲು ಪಂಪವೆಲ್ ಪ್ಲೈಓವರ್ ಬಿಟ್ಟರೆ ಬೇರೆ ಯಾವುದೇ ಕಾರಣಗಳು ಎದ್ದು ಕಾಣುವುದಿಲ್ಲ.

ಆದರೆ ಎಲ್ಲೆಡೆ ಕಾಣುತ್ತಿರುವ ಅಭಿವೃದ್ಧಿಗಳ ಸಾಲಿನಲ್ಲಿ ಪಂಪವೆಲ್ ಮಾತ್ರ ಏಕೆ ಸ್ಥಗಿತಗೊಂಡಿದೆ ಎಂಬುದಕ್ಕೂ ಬಹಿರಂಗವಾಗಿ ನಳಿನ್ ಕುಮಾರ್ ಕಟೀಲ್ ಒಂದಷ್ಟು ಮಂದಿಯನ್ನು ಕಾರಣರನ್ನಾಗಿಸಿದರೂ ಅವರನ್ನು ಯಾರೂ ಪ್ರಶ್ನೇ ಮಾಡಲೂ ಇಲ್ಲ, ವಿಪರ್ಯಾಸವೆಂದರೆ ಅವರೂ ಇದನ್ನು ಸುಳ್ಳು ಎಂದು ಸಹ ಹೇಳಿಕೊಂಡಿಲ್ಲ.

ಅದು ಬಿಟ್ಟರೆ ಆಕ್ರೋಶ ಬರಿತ ಮಾತುಗಳು, ವೇಗನುಡಿಯ ಪದಯ ಪದಬಳಕೆಗಳಲ್ಲಿ ಎಡವಿರ್ಬೋದು.ಈ ಎಲ್ಲ ಸಣ್ಣ ವಿಚಾರಗಳಿಗೆ ನಳಿನ್ ಕಳಪೆ ಸಂಸದ ಎನ್ನುವವರು ಜಿಲ್ಲೆಗೆ 16ಸಾವಿರ ಕೋಟಿ ಅನುದಾನ ತಂದಿರುವ ಬಗ್ಗೆ ಯಾಕೆ ಯಾರೂ ನಮ್ಮ ಸಂಸದರನ್ನು ಹೊಗಳುವುದಿಲ್ಲ.?!
ನಮ್ಮ ಸಂಸದರು ಯಾವುದಾದರೂ ಭ್ರಷ್ಟಾಚಾರದಲ್ಲಿ ಸಿಕ್ಕಿಕೊಂಡಿದ್ದಿರಾ?.ಸಚ್ಚಾರಿತ್ಯ್ರದಲ್ಲೆನಾದರೂ ಎಡವಿಕೊಂಡಿದ್ದರಾ? ಅವ್ಯವಹಾರಗಳಲ್ಲಿ ಭಾಗಿಯಾಗಿದ್ದರಾ?

ಯಾವುದೇ ಕಪ್ಪು ಚುಕ್ಕೆ ಇಲ್ಲದ ಸಂಸದರು ಕಳಪೆಯಾದದ್ದು ಪಂಪವೆಲ್ ಗೆ ಮಾತ್ರನಾ??
ಟೈಮ್ ಪತ್ರಿಕೆಯ ಸರ್ವೆಯಲ್ಲಿ ದೇಶದಲ್ಲೆ 6ನೇ ಸ್ಥಾನ,ಆದರ್ಶ ಗ್ರಾಮ ಬಳ್ಪ ನಂ 1.ವಿಜಯವಾಣಿ ಪತ್ರಿಕೆಯ ಸರ್ವೆಯ ಪ್ರಕಾರ ರಾಜ್ಯದಲ್ಲಿ ಒಂದನೇ ಸ್ಥಾನ ಇವೆಲ್ಲವು ಪುಕ್ಕಟೆಯಾಗಿ ಸಿಗುತ್ತದೆಯೇ.?

ಕೇಂದ್ರ ಸರ್ಕಾರದಿಂದ ನಮ್ಮ ಜಿಲ್ಲೆಗೆ ವಿವಿಧ ಯೋಜನೆಗಳಲ್ಲಿ 16505.00ಕೋಟಿ ಬಿಡುಗಡೆ ಮಾಡುವಲ್ಲಿ ಸಂಸದರು ಯಶಸ್ವಿಯಾಗಿದ್ದರೆಂದು ನಾವೇಕೆ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಹೇಳಿಕೊಂಡು ಬರಲಾಗುವುದಿಲ್ಲ.

ಗ್ರಾಮೀಣ ಭಾಗದ ರಸ್ತೆಗಳ ಗುಣಮಟ್ಟದಲ್ಲಿ ನಿರ್ಮಿಸಬೇಕೆಂಬ ಉದ್ದೇಶದಿಂದ “ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 64.00ಕೋಟಿ ನಮ್ಮ ಗ್ರಾಮಗಳಿಗಾಗಿ ಕೊಟ್ಟಿದ್ದರೆ, ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ 370 ಕೋಟಿ ಬಿಡುಗಡೆ ಮಾಡಿದ್ದರೆ. ಮಂಗಳೂರು ಅದೇಷ್ಟು ವೇಗವಾಗಿ ಮತ್ತು ಅಂದಾವಾಗಿ ನಿರ್ಮಾಣವಾಗುತ್ತಿದೆ ಎಂದು ಒಂದೊಮ್ಮೆ ಸುತ್ತಿ ಬರೋಣ ನಗರವನ್ನು.

ರೈಲ್ವೇ ಇಲಾಖೆಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗೆ,ಆರೋಗ್ಯ ಇಲಾಖೆಗೆ,ಶಿಕ್ಷಣ ಇಲಾಖೆಗೆ,ನವ ಮಂಗಳೂರು ಬಂದರು ಮಂಡಳಿ, ಬಂದರು ಮತ್ತು ಮೀನುಗಾರಿಕ ಜೆಟ್ಟಿ, ಗ್ರಾಮೀಣ ನೀರು ಸರಬರಾಜು, ನಗರ ನೀರು ಸರಬರಾಜು,ಲೋಕೋಪಯೋಗಿ ಇಲಾಖೆ ,ನಬಾರ್ಡ್ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಪಿಳಿಕುಳ ನಿಸರ್ಗದಾಮ,ಕೃಷಿ ಮತ್ತು ತೋಟಗಾರಿಕಾ ಇಲಾಖೆ ,ಪ್ರವಸೋದ್ಯಮ, ಇಲಾಖೆ ಬೀಟ್ ಅಭಿವೃದ್ಧಿ , ಪ್ರಧಾನಮಂತ್ರಿ ರಾಷ್ಟ್ರೀಯ ಧನ,ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ,ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ,ಇಂಧನ ಇಲಾಖೆ,ಕೇಂದ್ರ ರಸ್ತೆ ನಿಧಿ,ರಾಷ್ಟ್ರೀಯ ಹೆದ್ದಾರಿ ,ಭಾರತೀಯ ಸಂಚಾರಿ ನಿಗಮನಿಯಮಿತ, ಒಟ್ಟಾರೆಯಾಗಿ ಈ ಎಲ್ಲಾ ಇಲಾಖೆಗಳಿಗೂ 16 ಕೋಟಿಯಲ್ಲಿ ಕೋಟಿ ಕೋಟಿ ಹಚ್ಚಿಕೆಯಾಗಿ ಹೋಗಿದೆ. ಆದರೂ ನಳೀನ್ ಕುಮಾರ್ ಏನೂ ಮಾಡಿಲ್ಲ ಎಂದು ನಾವು ಬೊಬ್ಬೆ ಹೊಡೆಯುತ್ತಿದ್ದೆವೆ.

ಕೇಂದ್ರದ_ವಿವಿಧ ಯೋಜನೆಯಲ್ಲಿ ಜಿಲ್ಲೆಯ ಓಟ್ಟು ಫಲಾನುಭವಿಗಳು ಎಷ್ಟು ಗೊತ್ತೆನೋ,??
12,42,759 ಮಂದಿ,

ಸುಕನ್ಯಾ ಸಮೃದ್ಧಿ ಇರ್ಬೊದು, ಜೀವನ ಜೋತಿ,ಸುರಕ್ಷ ಭೀಮಾ,ಜನಧನ,ಮುದ್ರಾ ಸ್ಟಾಂಡ್ ಆಪ್ ಇಂಡಿಯಾ, ಇಂಡಿಯಾ ಪೋಸ್ಟಲ್ ಪೇಮೆಂಟ್ ಬ್ಯಾಂಕ್,ಗ್ರಾಮೀಣ ಅಂಚೆ ವಿಮಾ ಯೋಜನೆ,ಉಜ್ವಲ ಯೋಜನೆ, ಪಿ.ಎಂ.ಇ.ಜಿ.ಪಿ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ಧನ,ಇಂಧನ ಇಲಾಖೆ ,ಪ್ರಧಾನ ಮಂತ್ರಿ ಆವಾಸ್ ಯೋಜನೆ. ಒಟ್ಟಾರೆಯಾಗಿ 12 ಲಕ್ಷದ 42ಸಾವಿರದ 759 ಜನರು ಉಪಯೋಗ ಪಡೆದುಕೊಳ್ಳುವಲ್ಲಿ ನಳಿನ್ ಕುಮಾರ್ ಅವರ ಮುತುವರ್ಜಿ, ಪಂಪವೆಲ್ ಗೆ ಮಾತ್ರ ಕಳಪೆಯಾಯಿತೆ???

ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಯವರ ಜನೌಷಧಿ ಕೇಂದ್ರ 23 ತೆರೆಕಂಡೀರುವುದು ಯಾರಿಗೂ ಕಾಣಲಿಲ್ಲವಲ್ಲ.
ಜಿಲ್ಲೆಯಲ್ಲಿ ಅಮಾಯಕರ, ಮುಗ್ದರ ಹತ್ಯೆಯಾದಗ, ಜನರ ಧ್ವನಿಯಾಗಿ! ಮಂಗಳೂರು ಚಲೋ- ಜನ ಸುರಕ್ಷಾ ಯಾತ್ರೆ ಹಮ್ಮಿಕೊಂಡು ಜಿಲ್ಲೆಯ ಜನತೆಗೆ ಧೈರ್ಯ ತುಂಬಿರುವ ಸಂಸದ ಇವರು.ನೇತ್ರಾವತಿ ಸಂರಕ್ಷಣೆಗಾಗಿ ಬಿದಿಗಿಳಿದು ಹೋರಾಡಿದರು. ಕಂಬಳಕ್ಕಗಿ ಧ್ವನಿಗೂಡಿಸಿದ ಹೆಮ್ಮೆಯ ಸಂಸದ.

ತೆರೆ ಮರೆಯಲ್ಲೆ ಇದ್ದುಕೊಂಡು ಕೋಟಿ ಕೋಟಿ ಅನುಧಾನ ತಂದು ಜಿಲ್ಲೆಯ ಸರ್ವತೋನ್ಮುಖ ಅಭಿವೃದ್ಧಿಗೆ ಹೆಗಲಾಗಿರುವ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಈ ಜಿಲ್ಲೆಗೆ ಅನಿವಾರ್ಯ.

ದೇಶದಲ್ಲಿ ಮೋದಿ ಮತ್ತೊಮ್ಮೆ ಚುಕ್ಕಣಿ ಹಿಡಿಯಬೇಕಾದರೆ ನಳಿನ್ ಕುಮಾರ್ ಕಟೀಲ್ ವರ ಗೆಲುವು ಅತ್ಯಂತ ಮೌಲ್ಯವಾಗಿದೆ.

-ಆದೇಶ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close