ದೇಶರಾಜ್ಯ

ಮೋದಿಯ ವಿದೇಶ ಪ್ರವಾಸವನ್ನು ಖಂಡಿಸುವವರಿಗೆ ಇಲ್ಲಿದೆ ಒಂದು ತಕ್ಕ ಉತ್ತರ!! ಭಾರತದಲ್ಲಾಗುವ ಬದಲಾವಣೆ ಏನು ಗೊತ್ತಾ?

ಯಾವ ದೇಶಗಳು ನರೇಂದ್ರ ಮೋದಿಯವರಿಗೆ ತಮ್ಮ ದೇಶಕ್ಕೆ ಬರಲು ವೀಸಾ ನೀಡುವುದಿಲ್ಲ ಎಂದು ಹೇಳಿಕೊಂಡಿತ್ತೋ, ಅದೇ ದೇಶ ನರೇಂದ್ರ ಮೋದಿಯವರು ಪ್ರಧಾನಿಯಾದ ಕೂಡಲೇ ರೆಡ್ ಕಾರ್ಪೇಟ್ ಹಾಕಿ ತಮ್ಮ ದೇಶಕ್ಕೆ ಸ್ವಾಗತಿಸಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರ ದೇಶವು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುತ್ತಲೇ ಹೋಗುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಬುಧಾಬಿಗೆ ಇದೇ ತಿಂಗಳ ಆರಂಭದಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಂಗಳೂರಿನ ಭೂಗತ ವ್ಯೂಹಾತ್ಮಕ ತೈಲಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸುವ ಒಪ್ಪಂದಕ್ಕೆ ಎಡಿಎನ್’ಒಸಿ ಜತೆ ಸಹಿ ಹಾಕಿದ್ದರು. ಅದರ ಫಲವಾಗಿ ಇಂದು ಅಬುಧಾಬಿ ಕಂಪನಿಯ ಶೇ.65ರಷ್ಟು ತೈಲ ಭಾರತದಲ್ಲಿ ನೆಲೆಯಾಗಲಿದೆ.

ಹೌದು…. ಸಂಯುಕ್ತ ಅರಬ್ ಸಂಸ್ಥಾನದೊಂದಿಗೆ(ಯುಎಇ) ಭಾರತ ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಅಲ್ಲಿನ ಸರಕಾರಿ ಸ್ವಾಮ್ಯದ ಅಬುಧಾಬಿ ರಾಷ್ಟ್ರೀಯ ಇಂಧನ ಕಂಪನಿ(ಎಡಿಎನ್‍ಒಸಿ) ಉತ್ಪಾದಿಸುವ ಶೇ.65ರಷ್ಟು ಕಚ್ಚಾ ತೈಲದ ಮೇಲೆ ಭಾರತಕ್ಕೆ ಹಕ್ಕು ದೊರೆತಿದೆ. ಅಂದರೆ, 60 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ಭಾರತಕ್ಕೆ ದೊರಕಲಿದ್ದು, ಮಂಗಳೂರಿನಲ್ಲಿರುವ ಚೊಚ್ಚಲ ವ್ಯೂಹಾತ್ಮಕ ತೈಲಾಗಾರದಲ್ಲಿ ದಾಸ್ತಾನು ಮಾಡಲಾಗುತ್ತದೆ.

ಏನಿದು ವ್ಯೂಹಾತ್ಮಕ ತೈಲಾಗಾರ?

ದೇಶದ ತುರ್ತು ಅಗತ್ಯಗಳನ್ನು ಪೂರೈಸುವ ಸಲುವಾಗಿ ಭೂಮಿಯ ಆಳದಲ್ಲಿ ವ್ಯೂಹಾತ್ಮಕ ತೈಲಾಗಾರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ, ಭದ್ರತಾ ಅಪಾಯಗಳನ್ನು ನಿಭಾಯಿಸುವ ಸಲುವಾಗಿ ಭೂಗತ ತೈಲಾಗಾರಗಳಲ್ಲಿ ತುರ್ತು ದಾಸ್ತಾನು ವ್ಯವಸ್ಥೆ ಇರುತ್ತದೆ. ಇಲ್ಲಿ 3.6 ಕೋಟಿ ಬ್ಯಾರೆಲ್ ಇಂಧನವನ್ನು ದಾಸ್ತಾನು ಮಾಡಬಹುದು ಎನ್ನಲಾಗಿದೆ. ಅಂದರೆ, ದೇಶದಲ್ಲಿನ ಮೂರು ತೈಲಾಗಾರದಲ್ಲಿನ ದಾಸ್ತಾನಿನಿಂದ ದೇಶದ 10 ದಿನಗಳ ಇಂಧನದ ಅಗತ್ಯವನ್ನು ಪೂರೈಸಬಹುದಾಗಿದೆ.

ಈಗಾಗಲೇ ಎಡಿಎನ್’ಒಸಿ ಕಚ್ಚಾ ತೈಲವನ್ನು ಪೂರೈಕೆ ಮಾಡುತ್ತಿದ್ದು, ಈ ಹಿಂದೆ ಜಪಾನ್, ದಕ್ಷಿಣ ಕೊರಿಯಾಕ್ಕೆ ಈ ಮೊದಲು ಕಚ್ಚಾ ತೈಲವನ್ನು ಎಡಿಎನ್‍ಒಸಿ ಪೂರೈಕೆ ಮಾಡಿತ್ತು. ಆದರೆ ಇದೀಗ, ಏಷ್ಯಾದಲ್ಲಿ ಮಂಗಳೂರು ತೈಲಾಗಾರವು ಮೂರನೇ ದಾಸ್ತಾನು ಕೇಂದ್ರವಾಗಲಿದ್ದು, ಈ ದಾಸ್ತಾನಿನಿಂದ ಇಡೀ ದೇಶದ 2.8 ದಿನಗಳ ಇಂಧನ ಅಗತ್ಯವನ್ನು ಪೂರೈಸಬಹುದಾಗಿದೆ.

1.1 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸುವ ತೈಲಾಗಾರ!!

”ಮೂರು ಬೃಹತ್ ಹಡಗುಗಳಲ್ಲಿ ಎಡಿಎನ್’ಒಸಿ ಕಚ್ಚಾ ತೈಲ ರವಾನಿಸುವ ಪ್ರಕ್ರಿಯೆಯನ್ನು ಏಪ್ರಿಲ್‍ನಿಂದ ಆರಂಭಿಸಲಿದೆ. ಹಾಗಾಗಿ ಮಂಗಳೂರಿನ ಕಚ್ಚಾ ತೈಲ ಸಂಗ್ರಹಗಾರವು 15 ಲಕ್ಷ ಟನ್ ಅಂದರೆ, 1.1 ಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸುವ ತೈಲಾಗಾರಗಳನ್ನು ಹೊಂದಿದೆ. ಅದರ ಅರ್ಧದಷ್ಟು ಇಂಧನವನ್ನು ಎಡಿಎನ್‍ಒಸಿ ಇಲ್ಲಿಗೆ ಪೂರೈಸಲಿದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ತೈಲಾಗಾರಗಳ ಸಂಸ್ಥೆಯು (ಐಎಸ್‍ಪಿಆರ್‍ಎಲ್) ಪಶ್ಚಿಮ ಕರಾವಳಿಯ ಮಂಗಳೂರು ಮತ್ತು ಉಡುಪಿಯ ಪಾದೂರು, ಪೂರ್ವ ಕರಾವಳಿಯ ವಿಶಾಖಪಟ್ಟಣದಲ್ಲಿ ಮೂರು ವ್ಯೂಹಾತ್ಮಕ ತೈಲಾಗಾರಗಳನ್ನು ನಿರ್ಮಾಣ ಮಾಡಿದೆ. ಅಷ್ಟೇ ಅಲ್ಲದೇ, ಮಂಗಳೂರಿನಲ್ಲಿನ ದಾಸ್ತಾನಿನಿಂದ ಇಡೀ ದೇಶದ 2.8 ದಿನಗಳ ಇಂಧನ ಅಗತ್ಯವನ್ನು ಪೂರೈಸಬಹುದಾಗಿದೆ. ವಿಶಾಖ ಪಟ್ಟಣದ ತೈಲಾಗಾರದಲ್ಲಿನ ದಾಸ್ತಾನು ಬಳಸಿ, ದೇಶದ 4.7 ದಿನಗಳ ಇಂಧನ ಬೇಡಿಕೆಯನ್ನು ಪೂರೈಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿ ಸಂಗ್ರಹವಾಗುವ ಶೇ.35ರಷ್ಟು ಕಚ್ಚಾ ತೈಲವನ್ನು ಎಡಿಎನ್‍ಒಸಿ ತನ್ನ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳಲಿದೆ. ಅಂದರೆ ಸಂಸ್ಕರಣಾ ಘಟಕಗಳಿಗೆ ಅಗತ್ಯವಾದಾಗ ಮಾರಾಟ ಮಾಡಲಿದೆ. ಉಳಿಕೆ ಶೇ.65ರಷ್ಟು ಕಚ್ಚಾ ತೈಲವು ಭಾರತಕ್ಕೆ ಸೇರಲಿದೆ. ತುರ್ತು ಸಂದರ್ಭಗಳಲ್ಲಿ ಅಂದರೆ, ಭಾರತಕ್ಕೆ ವಿದೇಶಗಳಿಂದ ಇಂಧನ ಪೂರೈಕೆಯಲ್ಲಿ ತೊಡಕಾದಾಗ ಅಥವಾ ದೇಶದ ಇಂಧನ ಬೇಡಿಕೆಯನ್ನು ಪೂರೈಸುವ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸವನ್ನು ಕಂಡಿಸುವ ಬುದ್ದಿಜೀವಿಗಳು ಅರ್ಥ ಮಾಡಿಕೊಳ್ಳಬೇಕಾಗಿದ್ದು ಏನೆಂದರೆ, ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಕೈಗೊಂಡಿರುವುದರಿಂದ ಭಾರತ ದೇಶವು ಇಂದು ವಿಶ್ವದೆಲ್ಲೆಡೆ ಪ್ರಬಲ ರಾಷ್ಟ್ರವಾಗಿ ಮಿಂಚುತ್ತಿದೆಯಲ್ಲದೇ, ಆರ್ಥಿಕವಾಗಿ ಸದೃಢ ರಾಷ್ಟ್ರವಾಗುತ್ತ ಇದೆ ಎನ್ನುವುದುಕ್ಕೆ ಇದೂ ಕೂಡ ಒಂದು ಸಾಕ್ಷಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾಗಿದೆ!!

ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವವನ್ನೇ ಮೋಡಿಗೊಳಿಸಿದ್ದಾರೆ ಎಂಬುವುದಕ್ಕೆ ಮತ್ತೊಂದು ಸಾಕ್ಷಿ ಏನೆಂದರೆ ಮೋದಿ ಅವರು ದುಬೈಗೆ ತೆರಳಿದ ಬೆನ್ನಲ್ಲೇ ದುಬೈ ರಾಜಕುಮಾರ ಜೈ ಶ್ರೀ ರಾಮ್ ಎಂದು ಭಾಷಣ ಆರಂಭಿಸಿದ್ದರು!! ಹೌದು, ಅಬುದಾಬಿ ರಾಜಕುಮಾರ ಮೊಹಮ್ಮದ್ ಬಿನ್ ಜಾಯೆಡ್ ಅಲ್ ನೆಹ್ಯಾನ್ ಅವರು ಜೈ ಶ್ರೀರಾಮ್ ಎನ್ನುವ ಮೂಲಕ ಭಾಷಣ ಆರಂಭಿಸಿದ್ದು, ಈ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ, ಮೊರಾರಿ ಬಾಪು ಅವರ ನೇತೃತ್ವದ ರಾಮಕಥಾ ಕಾರ್ಯಕ್ರಮದಲ್ಲಿ ದುಬೈ ರಾಜಕುಮಾರ ಜೈ ಶ್ರೀರಾಮ್ ಎಂದು ಭಾಷಣ ಆರಂಭಿಸಿದ್ದು, ಭಾರತದ ಸಂಸ್ಕೃತಿ ಹಾಗೂ ಮೋದಿ ಅವರ ಮೋಡಿ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿತ್ತು!!

ಅಷ್ಟೇ ಅಲ್ಲದೇ, ನರೇಂದ್ರ ಮೋದಿ ಅವರು ಅಬುಧಾಬಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಂಗಳೂರಿನ ಭೂಗತ ವ್ಯೂಹಾತ್ಮಕ ತೈಲಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸುವ ಒಪ್ಪಂದಕ್ಕೆ ಎಡಿಎನ್‍ಒಸಿ ಜತೆ ಸಹಿ ಹಾಕಿದ್ದು, 60 ಲಕ್ಷ ಬ್ಯಾರೆಲ್ ಕಚ್ಚಾ ತೈಲವು ಭಾರತಕ್ಕೆ ದೊರೆಯಲಿದೆ!! ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಸಹಿ ಹಾಕಿರುವ ಒಪ್ಪಂದ ಇಂತಿವೆ;

* ಭಾರತವು ಶೇ.80ಕ್ಕೂ ಅಧಿಕ ಮಟ್ಟದಲ್ಲಿ ಕಚ್ಚಾ ತೈಲದ ಬೇಡಿಕೆ ಹೊಂದಿದ್ದು, ಇದರಲ್ಲಿ ಶೇ.8ರಷ್ಟನ್ನು ಯುಎಇ ಸರಬರಾಜು ಮಾಡುತ್ತಿದೆ.
* ವಿಶಾಖ ಪಟ್ಟಣದ ವ್ಯೂಹಾತ್ಮಕ ತೈಲಾಗಾರವು 12.3 ಲಕ್ಷ ಟನ್ ಇಂಧನ ಸಂಗ್ರಹದ ಸಾಮರ್ಥ್ಯವನ್ನು ಹೊಂದಿದೆ.
* ಮಂಗಳೂರಿನ ವ್ಯೂಹಾತ್ಮಕ ತೈಲಾಗಾರದ ಸಾಮರ್ಥ್ಯ 15 ಲಕ್ಷ ಟನ್
* ಪಡೂರಿನ ತೈಲಾಗಾರದ ಸಾಮರ್ಥ್ಯ 25 ಲಕ್ಷ ಟನ್‍ಗಳು

ಒಟ್ಟಿನಲ್ಲಿ, ಸಂಯುಕ್ತ ಅರಬ್ ಸಂಸ್ಥಾನದೊಂದಿಗೆ(ಯುಎಇ) ಭಾರತ ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಅಲ್ಲಿನ ಸರಕಾರಿ ಸ್ವಾಮ್ಯದ ಅಬುಧಾಬಿ ರಾಷ್ಟ್ರೀಯ ಇಂಧನ ಕಂಪನಿ(ಎಡಿಎನ್‍ಒಸಿ) ಉತ್ಪಾದಿಸುವ ಶೇ.65ರಷ್ಟು ಕಚ್ಚಾ ತೈಲದ ಮೇಲೆ ಭಾರತಕ್ಕೆ ಹಕ್ಕು ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿನಿಂದ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದ್ದು ಅತೀ ಮುಖ್ಯ!!

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close