ಪ್ರಚಲಿತ

ಎಟಿಎಂ ಬಳಕೆದಾರರಿಗೆ ಮೋದಿಯಿಂದ ಬಿಗ್ ಗಿಫ್ಟ್!! ಎಟಿಎಂ ಕಾರ್ಡ್ ತೋರಿಸಿದರೆ ಬ್ಯಾಂಕಲ್ಲಿ ಸಿಗುವ ಸೌಲಭ್ಯವೇನು ಗೊತ್ತಾ?!

ನೋಟ್ ಬ್ಯಾನ್ ಆದ ಬಳಿಕ ನಗದು ಹಣದ ಲೆವಾದೇವಿಯನ್ನು ಕಡಿಮೆಗೊಳಿಸಲು ಮತ್ತು ಕಾಳಧನದ ಮೇಲೆ ಕಡಿವಾಣ ಹಾಕಲು ಮೋದಿ ಸರಕಾರವು ನಾಗರಿಕರಿಗೆ ಹೆಚ್ಚು ಹೆಚ್ಚು ಡಿಜಿಟಲ್ ಮಾಧ್ಯಮಗಳನ್ನು ಉಪಯೋಗಿಸಲು ಕರೆ ನೀಡಿತು. ಸ್ವ ಪ್ರೇರಣೆಯಿಂದ ಮತ್ತು ಅನಿವಾರ್ಯವಾಗಿಯಾದರೂ ದಿನನಿತ್ಯದ ವ್ಯವಹಾರಕ್ಕೆ ಜನರು ಎ.ಟಿ.ಎಮ್ ಕಾರ್ಡ್ಗಳನ್ನು ಬಳಸುವಂತಾಯಿತು. ಈ ಎ.ಟಿ.ಎಮ್ ಕಾರ್ಡ್ಗಳು ಕೇವಲ ಹಣದ ವಿನಿಮಯ ಮಾತ್ರ ಮಾಡುವುದಲ್ಲದೆ ಗ್ರಾಹಕರಿಗೆ ವಿಮಾ ಸೌಲಭ್ಯವನ್ನೂ ಒದಗಿಸುತ್ತದೆನ್ನುವುದು ಹಲವರಿಗೆ ತಿಳಿದಿಲ್ಲ. ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದಾಡಿದರೆನ್ನುವಂತಹ ಗಾದೆ ನಮ್ಮದು.

ಎ.ಟಿ.ಎಮ್ ಕಾರ್ಡ್ ಯಾವುದೇ ತೆರನದ್ದಾಗಿರಲಿ, ಅಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವೀಸಾ ಕಾರ್ಡ್, ಮಾಸ್ಟರ್ ಕಾರ್ಡ್ ಅಥವಾ ರುಪೇ ಕಾರ್ಡ್ ಆಗಿರಲಿ, ಎಲ್ಲಾ ಕಾರ್ಡ್ಗಳಿಗೂ ಈ ಸೌಲಭ್ಯ ಅನ್ವಯವಾಗುತ್ತದೆ. ಈ ಜೀವ ವಿಮಾ ಸೌಲಭ್ಯ ಸಂಪೂರ್ಣವಾಗಿ ನಿಶುಲ್ಕವಾಗಿರುತ್ತದೆ ಹಾಗೂ ಎಲ್ಲಾ ಸರಕಾರೀ ಮತ್ತು ಖಾಸಗೀ ಬ್ಯಾಂಕುಗಳಲ್ಲೂ ಗ್ರಾಹಕರ ಸೇವೆಗೆ ಉಪಲಭ್ದವಾಗಿದೆ. ಅವಘಡದಿಂದಾಗಿ ಅಕಸ್ಮಾತ್ ಆಗಿ ಆಸ್ಪತ್ರೆ ವಾಸ ಮಾಡಿದಾಗ ಇಲ್ಲವೇ ದುರ್ಘಟನೆಯಿಂದಾಗಿ ಮೃತ್ಯುವಿನ ಸಂಧರ್ಭದಲ್ಲಿ ಎ.ಟಿ.ಎಮ್ ಕಾರ್ಡ್ಗಳ ಮೂಲಕ ನಿಮಗೆ ವಿಮಾ ಸೌಲಭ್ಯ ದೊರೆಯುವುದು. ದುರ್ಘಟನೆಯಿಂದಾಗಿ ಅಂಗವೈಕಲ್ಯ ಉಂಟಾದಾಗಲೂ ನಿಮಗೆ ವಿಮೆ ದೊರಕುವುದು.

ಸರಕಾರೀ ಮಾನದಂಡಗಳನ್ವಯ ನೀವು ಎ.ಟಿ.ಎಮ್ ಕಾರ್ಡಗಳ ಮೂಲಕ ಮಾಡುವ ವ್ಯವಹಾರಕ್ಕನುಗುಣವಾಗಿ ವಿಮಾ ಮೊತ್ತ ಶುಲ್ಕ ರೂಪಾಯಿ 25000 ದಿಂದ ಶುರುವಾಗುತ್ತದೆ ಮತ್ತು 5 ಲಕ್ಷ ರೂಪಾಯಿಗಳಲ್ಲಿ ಅಂತ್ಯವಾಗುತ್ತದೆ. ಅಂದರೆ ನಿಮ್ಮ ವ್ಯವಹಾರಕ್ಕನುಗುಣವಾಗಿ ನಿಮಗೆ ವಿಮಾ ಮೊತ್ತ ದೊರಕಲಾಗುತ್ತದೆ. ಈ ಸೌಲಭ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಯಾಕೆಂದರೆ ಬ್ಯಾಂಕುಗಳು ಜನರಿಗೆ ಇಂತಹ ಯೋಜನೆಗಳ ಬಗ್ಗೆ ತಿಳಿಸುವ ಕಾರ್ಯ ಮಾಡುವುದಿಲ್ಲ. ಈ ವಿಮಾ ಯೋಜನೆ ನಿಮ್ಮ ಚಾಲ್ತಿ ಖಾತೆಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಮತ್ತು ನಿಮ್ಮ ಪಾಸ್ ಬುಕ್ ಚಾಲ್ತಿಯಲ್ಲಿದ್ದರೆ ಮಾತ್ರ ಈ ಸೌಲಭ್ಯದ ಲಾಭ ನೀವು ಪಡೆದುಕೊಳ್ಳಬಹುದು. ಕಾರ್ಡ್ ತೆಗೆದುಕೊಂಡ ನಲವತ್ತೈದು ದಿನಗಳೊಳಗಾಗಿ ನೀವು ಕಾರ್ಡ್ ಬಳಸಿ ಲೇವಾದೇವಿ ಮಾಡಿದ್ದರೆ ನಿಮಗೆ ವಿಮೆಯ ಹಕ್ಕನ್ನು ಪಡೆಯುವ ಅಧಿಕಾರವಿರುತ್ತದೆ.

Image result for modi

ಬೇರೆ ಬೇರೆ ಪ್ರಕಾರದ ಕಾರ್ಡ್ ಗಳಲ್ಲಿ ದೊರಕುವ ಮೊತ್ತವೂ ಬೇರೆ ಬೇರೆಯಾಗಿರುತ್ತದೆ.

ಮಾಸ್ಟರ್ ರಕ್ಷಕ್ ಕಾರ್ಡ್-5 ಲಕ್ಷ ರುಪಾಯಿಗಳು
ಪ್ಲಾಟಿನಂ ಕಾರ್ಡ್- 2 ಲಕ್ಷ ರುಪಾಯಿಗಳು
ಕ್ಲಾಸಿಕ್ ಕಾರ್ಡ್- 50,000 ರುಪಾಯಿಗಳು
ಕಿಸಾನ್ ಡೆಬಿಟ್ ಕಾರ್ಡ್-50,000 ರುಪಾಯಿಗಳು
ಪಿ.ಎನ್.ಬಿ ಕಾರ್ಡ್-25,000 ರುಪಾಯಿಗಳು

ಈ ವಿಮಾ ಸೌಲಭ್ಯ ಪಡೆದುಕೊಳ್ಳಲು ನೀವೇನು ಮಾಡಬೇಕು?

1.ಅಫಘಾತವಾದಂತಹ ಸಂಧರ್ಭದಲ್ಲಿ ವಿಮೆಯ ಮೊತ್ತವನ್ನು ಪಡೆಯಲು ಮೊದಲಿಗೆ ನೀವು ಪೋಲೀಸರಿಗೆ ಸೂಚನೆ ನೀಡಬೇಕಾಗುವುದು.
2.ದುರ್ಘಟನಾ ಗ್ರಸ್ತ ವ್ಯಕ್ತಿಯ ಎಲ್ಲಾ ಪ್ರಾಸಂಗಿಕ ದಾಖಲೆಗಳನ್ನು ಜೋಪಾನವಾಗಿ ಇಡತಕ್ಕದ್ದು.
3.ಆಸ್ಪತ್ರೆಯ ದಾಖಲಾತಿ ವಿವರ ಮತ್ತು ಖರ್ಚು-ವೆಚ್ಚಗಳ ವಿವರಗಳ ದಾಖಲೆಗಳನ್ನು ಜೋಪಾನವಾಗಿ ಇಡಬೇಕು.
4.ಒಂದು ವೇಳೆ ವ್ಯಕ್ತಿಯು ಮೃತನಾಗಿದ್ದಲ್ಲಿ, ಆತನ ವಿಮೆಯ ಹಕ್ಕನ್ನು ಪಡೆಯಲು, ಅಂಚೆ ಪ್ರಮಾಣ ಪತ್ರ, ಪೋಲಿಸರಿಂದ ಪ್ರಮಾಣ ಪತ್ರ, ಮೃತ್ಯು ಪ್ರಮಾಣ ಪತ್ರ ಮತ್ತು ಮೃತ ವ್ಯಕ್ತಿಯ ವಾಹನ ಚಾಲನಾ ಪರವಾನಿಗೆಯ ಪ್ರಮಾಣ ಪತ್ರವನ್ನು ತೋರಿಸಬೇಕಾಗುವುದು.
5.ಈ ಎಲ್ಲಾ ಪ್ರಕ್ರಿಯೆಗಳನ್ನು ಅವಘಡ ನಡೆದ ಮೂವತ್ತು ದಿನಗಳೊಳಾಗಾಗಿ ಮಾಡತಕ್ಕದ್ದು.

ನಿಮ್ಮಲ್ಲಿ ಬೇರೆ ಬೇರೆ ಬ್ಯಾಂಕಿನ ಒಂದಕ್ಕಿಂತ ಹೆಚ್ಚು ಕಾರ್ಡ್ಗಳಿದ್ದಲ್ಲಿ, ಕೇವಲ ಒಂದು ಬ್ಯಾಂಕಿನ ಒಂದು ಕಾರ್ಡಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುವುದು. ಕಾರ್ಡ್ ಧಾರಕನು ಕಾರ್ಡ್ ತೆಗೆದುಕೊಂಡ ಎಷ್ಟು ದಿನಗಳೊಳಗೆ ಮಾನ್ಯ ರೀತಿಯಲ್ಲಿ ವ್ಯವಹಾರ ಮಾಡಿರುತ್ತಾನೆ ಎಂಬ ಅಂಶವೂ ಇಲ್ಲಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಬ್ಯಾಂಕಿನ ಕಾನೂನು ಮತ್ತೊಂದು ಬ್ಯಾಂಕಿನ ಕಾನೂನಿಗಿಂತ ಭಿನ್ನವಾಗಿರುತ್ತದೆ. ಯಾವುದೇ ಬ್ಯಾಂಕಿನಲ್ಲಿ ನೀವು ಖಾತೆ ತೆರೆದು ಎ.ಟಿ.ಎಮ್ ಕಾರ್ಡ್ ಪಡೆದ ಕ್ಷಣದಿಂದಲೇ ನೀವು ಈ ಸೌಲಭ್ಯಕ್ಕೆ ಬಾಧ್ಯರಾಗುತ್ತೀರ. ಅವಘಡ ನಡೆದು ವ್ಯಕ್ತಿಯು ಮೃತನಾದಲ್ಲಿ ವಿಮೆಯ ಮೊತ್ತವು ಆತನ ನಾಮಿನಿಗೆ ಹಸ್ತಾಂತರಿಸಲ್ಪಡಲಾಗುವುದು. ಅಂತಹ ಸಂಧರ್ಭದಲ್ಲಿ ಎರಡರಿಂದ ಐದು ತಿಂಗಳೊಳಗೆ ಎಲ್ಲಾ ದಾಖಲೆ ಸಮೇತ ಬ್ಯಾಂಕ್ ಗೆ ಭೇಟಿ ನೀಡಿ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದು.

ಎ.ಟಿ.ಎಮ್ ಕಾರ್ಡ್ ಇರುವ ಎಲ್ಲಾ ಗ್ರಾಹಕರು ಇಂದೇ ನಿಮ್ಮ ಬ್ಯಾಂಕ್ ಖಾತೆಗೆ ತೆರಳಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಮತ್ತು ವಿಮಾ ಸೌಲಭ್ಯದ ಲಾಭವನ್ನು ಉಚಿತವಾಗಿ ಪಡೆಯಿರಿ. ನಿಮ್ಮ ಪರಿವಾರ ಮತ್ತು ಸ್ನೇಹಿತರಿಗೂ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ.

ಶನ್ನು

Tags

Related Articles

FOR DAILY ALERTS
 
FOR DAILY ALERTS
 
Close