ಪ್ರಚಲಿತ

ಹಿಂದೂ ಸಂಸ್ಕೃತಿಯನ್ನು ಹೀಯಾಳಿಸಿದ ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದ ಹಿಂದೂಗಳು ಮಾಡಿದ್ದೇನು ಗೊತ್ತಾ? ರಾಷ್ಟ್ರ ಮಟ್ಟದಲ್ಲಿ ಹರಾಜಾಯಿತು ಸಿದ್ದರಾಮಯ್ಯ ಮಾನ?

ಹಿಂದೂಗಳು ಒಗ್ಗಟ್ಟಾದರೆ ಯಾವ ರಾಜಕಾರಣಿಯೇ ಆಗಿರಲಿ ಅಥವಾ ರಾಜಕೀಯ ಪಕ್ಷಗಳೇ ಆಗಿರಲಿ ಹಿಂದೂ ಧರ್ಮದ ಮುಂದೆ ಮಂಡಿಯೂರಲೇಬೇಕು. ಯಾಕೆಂದರೆ ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲ ಎಂಬ ಕಾರಣಕ್ಕೆ ಹಿಂದೂ ಧರ್ಮದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಕೆಲ ಬುದ್ದಿಹೀನ ರಾಜಕಾರಣಿಗಳು ಇನ್ನು ಮುಂದೆ ಮುಟ್ಟಿನೋಡುವಂತೆ ಉತ್ತರ ನೀಡಿದ್ದಾರೆ ಹಿಂದೂಗಳು.

ಹೌದು ನಿನ್ನೆಯಷ್ಟೇ ಮಂಗಳೂರಿಗೆ ಬಂದ ಶಾಸಕ ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ ನನಗೆ ನಾಮ(ತಿಲಕ) ಹಾಕಿದವರನ್ನು ಕಂಡರೆ ಭಯ ಆಗುತ್ತೆ ಎಂಬ ವಿವಾದಾತ್ಮಕ ಹೇಳಿಕೆ ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ಕೀಳಾಗಿ ಮಾತನಾಡಿದ್ದರು. ತಿಲಕ ಎಂಬುದು ಹಿಂದೂಗಳು ಬಹಳ ಭಕ್ತಿ ಶ್ರದ್ಧೆಯಿಂದ ಇಟ್ಟುಕೊಳ್ಳುವಂತಹ ಒಂದು ಪ್ರತೀಕ, ಆದರೆ ಅದರ ಬಗ್ಗೆ ಕೀಳಾಗಿ ಮಾತನಾಡಿದ ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದ ಹಿಂದೂಗಳು ಯಾವ ರೀತಿ ಪಾಠ ಕಲಿಸಿದ್ದಾರೆ ಎಂದರೆ ಸಿದ್ದರಾಮಯ್ಯನವರು ಮಂಗಳೂರಿನಲ್ಲಿ ಹೇಳಿದ ಈ ಮಾತು ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯನವರ ಮಾನ ಹರಾಜು ಮಾಡಿದೆ. ನಂಬಲು ಅಸಾಧ್ಯವಾದರೂ ಇದನ್ನು ಒಪ್ಪಿಕೊಳ್ಳಲೇಬೇಕು, ಯಾಕೆಂದರೆ ತಿಲಕದ ಬಗ್ಗೆ ಕೀಳಾಗಿ ಮಾತನಾಡಿದ ಸಿದ್ದರಾಮಯ್ಯನವರಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ್ದಾರೆ ಹಿಂದೂಗಳು.!

ಸಿದ್ದರಾಮಯ್ಯನವರ ಈ ಹೇಳಿಕೆಗೆ ತಿರುಗೇಟು ನೀಡಲು ಹೊಸ ಅಭಿಯಾನವನ್ನೇ ಆರಂಭಿಸಿದ ಹಿಂದೂಗಳು “ಸೆಲ್ಫಿ ವಿಥ್ ತಿಲಕ್” ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದರು. ಈ ಅಭಿಯಾನ ಯಾವ ರೀತಿ ಅಬ್ಬರಿಸಿತ್ತು ಎಂದರೆ ಫೇಸ್‌ಬುಕ್‌ ಟ್ವಿಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ತಿಲಕ ಇಟ್ಟುಕೊಂಡ ಹಿಂದೂಗಳ ಫೋಟೋ ರಾರಾಜಿಸತೊಡಗಿದೆ. ಸಿದ್ದರಾಮಯ್ಯನವರ ಒಂದೇ ಒಂದು ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಯಾವ ರೀತಿ ಅವರ ಮಾನ ಕಳೆಯುವಂತೆ ಮಾಡಿದೆ ಎಂದರೆ ಸ್ವತಃ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಕೂಡ ಈ ಅಭಿಯಾನದಲ್ಲಿ ಕೈಜೋಡಿಸಿಕೊಂಡಿದ್ದು ವಿಶೇಷ.

ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಯಾರೇ ಮಾತನಾಡಿದರು ರಾಜಕೀಯ ಬಿಟ್ಟು ಹಿಂದೂಗಳು ಒಂದಾದರೆ ಮಾತ್ರ ಹಿಂದೂ ಧರ್ಮದ ಮೇಲೆ ಆಗುತ್ತಿರುವ ಅನ್ಯಾಯವನ್ನು ತಡೆಯಬಹುದು. ಸದ್ಯ ಇಂತಹ ಒಂದು ಸ್ಥಿತಿ ನಿರ್ಮಿಸಿ ಕೊಟ್ಟಿರುವುದು ಕೂಡ ಹಿಂದೂ ವಿರೋಧಿ ಸಿದ್ದರಾಮಯ್ಯನವರೇ ಎಂಬುದು ವಿಶೇಷ.!

ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸಿದ್ದರಾಮಯ್ಯನವರು, ತಮ್ಮ ಪಕ್ಕದಲ್ಲಿ ನಿಂತಿದ್ದ ಓರ್ವ ನಾಮಧಾರಿ ವ್ಯಕ್ತಿಯನ್ನು ಕಂಡು, ಏನಯ್ಯ ಇಷ್ಟೊಂದು ದೊಡ್ಡ ನಾಮ ಹಾಕಿಕೊಂಡಿದ್ದೀಯಾ, ಕೇವಲ ನಾಮ‌ ಹಾಕಿಕೊಂಡರೆ ಸಾಲದು ಕೆಲಸ ಕೂಡ ಮಾಡಬೇಕು, ನನಗೆ ನಾಮ ಇಟ್ಟುಕೊಂಡವರನ್ನು ಕಂಡರೆ ಭಯ ಆಗುತ್ತೆ ಎಂದು ಹೇಳಿಕೊಂಡಿರುವುದು ಇದೀಗ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ ಸಿದ್ದರಾಮಯ್ಯನವರು ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೂಡ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಕೊಂಡು ಬಂದವರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಪದೇ ಪದೇ ಹಿಂದೂ ಧರ್ಮದ ಬಗ್ಗೆ ಏನಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ಧಿಯಾಗುವ ಸಿದ್ದರಾಮಯ್ಯನವರಿಗೆ ಈ ಬಾರಿ ಹಿಂದೂಗಳು ಭರ್ಜರಿ ತಿರುಗೇಟು ನೀಡಿದ್ದಾರೆ ಮತ್ತು ರಾಷ್ಟ್ರ ಮಟ್ಟದಲ್ಲಿ ಸಿದ್ದರಾಮಯ್ಯನವರ ಮಾನ ಹರಾಜು ಮಾಡಿದ್ದಾರೆ..!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close