ಪ್ರಚಲಿತ

ಮನೆಯಲ್ಲಿ ಒಂದು ಶಂಖ ಇದ್ದರೆ ಆಗುವ ಉಪಯೋಗ ಮತ್ತು ಬದಲಾವಣೆ ಏನು? ಶಂಖಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ ಏಕೆ?

ನಾತನ ಹಿಂದೂ ಧರ್ಮದ ಆಚಾರ ವಿಚಾರಗಳು ಪ್ರತಿಯೊಂದು ಕೂಡ ಕೇವಲ ತಮ್ಮ ಧರ್ಮದ ಜನರಿಗಾಗಿ ಮಾತ್ರ ಒಳಿತನ್ನು ಬಯಸದೆ ಜಗತ್ತಿನ ಪ್ರತಿಯೊಂದು ಧರ್ಮಕ್ಕೂ ಪ್ರತಿಯೊಂದು ಜೀವಿಗೂ ಒಳಿತನ್ನು ಬಳಸಲಾಗುತ್ತದೆ. ಪುರಾಣದಲ್ಲಿ ರಾಜ ಋಷಿಗಳು ಯಾವ ರೀತಿ ತಪಸ್ಸು ಮಾಡಿ ತಮ್ಮ ನಾಡನ್ನು ಸಮೃದ್ಧವಾಗಿರುವಂತೆ ಮಾಡುತ್ತಿದ್ದರೋ ಅಂದಿನಿಂದ ಇಂದಿನವರೆಗೂ ಹಿಂದೂ ಧರ್ಮ ಯಾವ ಅನ್ಯ ಧರ್ಮವನ್ನೂ ದ್ವೇಷಿಸುತ್ತಾ ಬಂದಿಲ್ಲ. ಈ‌ ಹಿಂದೂ ಧರ್ಮದಲ್ಲಿ ಕೆಲವೊಂದು ಆಚರಣೆಗಳು, ನಿಯಮಗಳು ಬಹಳ ವಿಶೇಷವಾಗಿ ಕಾಣಿಸುತ್ತದೆ, ಯಾಕೆಂದರೆ ಕೆಲವೊಂದು ಸಣ್ಣ ವಸ್ತುಗಳಿಗೂ ವಿಶೇಷ ಸ್ಥಾನಮಾನ ನೀಡಲಾಗುತ್ತದೆ ಮತ್ತು ಅವುಗಳಲ್ಲಿ ದೈವ ಸ್ವರೂಪ ಕಾಣಲಾಗುತ್ತದೆ. ಉದಾಹರಣೆಗೆ ಶಂಖ ಎಂಬುದು ಸಮುದ್ರದಲ್ಲಿ ಸಿಗುವ ಒಂದು ವಸ್ತುವಾಗಿದ್ದರೂ ಕೂಡ ಈ ಶಂಖವನ್ನು ಹಿಂದೂ ಧರ್ಮದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ದೇವರ ಕೋಣೆಯಲ್ಲಿ ಶಂಖವನ್ನು ಇಟ್ಟು ಪೂಜಿಸುವ ಹಿಂದೂಗಳು, ಪೂಜೆಯ ಸಂದರ್ಭದಲ್ಲೂ ಶಂಖವನ್ನು ಉಪಯೋಗಿಸುತ್ತಾರೆ.!

ಶಂಖವನ್ನು ಮನೆಯಲ್ಲಿ ಇಡುವುದರಿಂದ ಮತ್ತು ಅದನ್ನು ಪ್ರತಿನಿತ್ಯ ಬಳಸುವುದರಿಂದ ನಾವು ವಾಸಿಸುವ ಮನೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಕಾರಾತ್ಮಕ ಪರಿಣಾಮ ಬೀರುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದು ಶಾಸ್ತ್ರಗಳಲ್ಲೇ ಉಲ್ಲೇಖವಿದೆ ಮತ್ತು ಇದು ಸಾಬೀತಾಗಿದೆ. ಶಾಸ್ತ್ರಗಳು ಹೇಳುವುದನ್ನು ಕೆಲವೊಮ್ಮೆ ವೈಜ್ಞಾನಿಕವಾಗಿ ಒಪ್ಪಲು ಸಾಧ್ಯವಾಗಿರಲಿಲ್ಲ. ಆದರೆ ಶಂಖದಿಂದಾಗುವ ಸಕಾರಾತ್ಮಕ ಪರಿಣಾಮವನ್ನು ಸ್ವತಃ ವಿಜ್ಞಾನವೇ ಒಪ್ಪಿಕೊಂಡಿದೆ. ಶಂಖ ಒಂದು ಸಾಮಾನ್ಯ ವಸ್ತುವಂತೆ ಕಂಡರೂ ಇದು ಶುಭ ಸಂಕೇತವೂ ಹೌದು. ಯಾಕೆಂದರೆ ಹಿಂದೂ ಧರ್ಮದ ದೇವರ ಪೂಜೆಯ ಸಂದರ್ಭದಲ್ಲಿ ಶಂಖ ಊದುವುದು ವಾಡಿಕೆಯಾದರೆ, ಇದರಿಂದ ಉಂಟಾಗುವ ಪರಿಣಾಮ ಬಹಳ ಉಪಕಾರಿ ಕೂಡ ಹೌದು. ಯಾಕೆಂದರೆ ಹಿಂದಿನ ಕಾಲದಲ್ಲಿ ಪ್ರತೀ ಹಿಂದೂಗಳ ಮನೆಯಲ್ಲಿ ಸಂಜೆ ಅಥವಾ ಬೆಳಿಗ್ಗೆ ಹೊತ್ತು ದೇವರ ಪೂಜೆಯ ಸಂದರ್ಭದಲ್ಲಿ ಶಂಖ ಊದುವುದು ಒಂದು ಹವ್ಯಾಸವೇ ಆಗಿತ್ತು. ಆದರೆ ಕಾಲ ಕ್ರಮೇಣ ಶಂಖದ ಬಳಕೆ ಕಡಿಮೆಯಾಗುತ್ತಾ ಬಂದಿದೆ. ಆದರೆ ಇಂದಿಗೂ ಅದೆಷ್ಟೋ ಮನೆಗಳಲ್ಲಿ ಪ್ರತಿದಿನ ಶಂಖ ಉಪಯೋಗಿಸಲಾಗುತ್ತದೆ.

ಪ್ರತಿದಿನ ಶಂಖ ಊದುವುದರಿಂದ ಆ ವ್ಯಕ್ತಿಯ ಉಸಿರಾಟ ತೊಂದರೆಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ ಎಂಬುದು ಸ್ಪಷ್ಟ. ಯಾಕೆಂದರೆ ಇದು ಸ್ವತಃ ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ. ಶಂಖ ಊದುವಾಗ ನಾವು ಸಂಪೂರ್ಣ ಉಸಿರಾಟದ ಮೂಲಕ ಶಂಖ ಉಪಯೋಗಿಸುವುದರಿಂದ ದೇಹದಲ್ಲಿ ಬದಲಾವಣೆ ಕಂಡು ಬರುತ್ತದೆ. ಇದು ಶಂಖ ಉಪಯೋಗಿಸುವ ವ್ಯಕ್ತಿಗಾಗುವ ಅನುಭವವಾದರೆ, ಶಂಖ ಬಳಸುವುದರಿಂದ ಸುತ್ತಮುತ್ತಲಿನ ಪ್ರದೇಶಗಳು ಕೂಡ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದು ಸತ್ಯ.‌ ಅದೇ ರೀತಿ ದೇವರ ಕೋಣೆಯಲ್ಲಿಡುವ ಶಂಖವನ್ನು ನೇರವಾಗಿ ನೆಲದ ಮೇಲೆ ಅಥವಾ ನೀರಿನಲ್ಲಿ ಇಡುವಂತಿಲ್ಲ. ಕೇವಲ ಪೂಜೆಯ ಸಂದರ್ಭದಲ್ಲಿ ಶಂಖವನ್ನು ನೀರಿನಲ್ಲಿಟ್ಟು ಪೂಜೆಯ ನಂತರ ಆ ಶಂಖದ ನೀರನ್ನು ಕುಡಿದರೆ ಆರೋಗ್ಯಕ್ಕೆ ಉತ್ತಮ. ಶಂಖವನ್ನು ಶುಭ್ರ ಬಟ್ಟೆಯ ಮೇಲೆ ಇಡಬೇಕೆಂಬುದು ನಂಬಿಕೆ.!

ಶಂಖದಿಂದಾಗುವ ಉಪಯೋಗ ಸಾಕಷ್ಟಿದೆ. ಆದರೆ ಇಂದಿನ ಯುವ ಪೀಳಿಗೆಗೆ ಶಂಖವನ್ನು ಬಳಸಲು ಸರಿಯಾಗಿ ತಿಳಿಯದೇ ಇರುವುದರಿಂದ ಹೆಚ್ಚಿನ ಮನೆಯಲ್ಲಿ ಶಂಖ ಕಣ್ಮರೆಯಾಗಿದೆ. ಆದರೆ ಶಂಖದ ಮಹತ್ವ ತಿಳಿದವರು ಪ್ರತಿದಿನ ಶಂಖ ಬಳಸುತ್ತಾರೆ ಎಂಬುದು ನಂಬಲೇಬೇಕಾದ ಸತ್ಯ. ಅದೇನೇ ಇರಲಿ, ಹಿಂದೂ ಧರ್ಮದ ಆಚಾರ ವಿಚಾರಗಳು ಪ್ರತಿಯೊಂದರ ಹಿಂದೆ ಕೂಡ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ ಎಂಬುದಕ್ಕೆ ಶಂಖವೇ ಸಾಕ್ಷಿ..!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close