ಪ್ರಚಲಿತ

ವೀರ ಯೋಧರ ಬಲಿದಾನದ ಸಂಕೇತವಾಗಿ ಧರಿಸಿದ ಗ್ಲೌಸ್‌ಗೆ ಏಕೆ ವಿರೋಧ! ಅಷ್ಟಕ್ಕೂ ಈ ಚಿಹ್ನೆಗೆ ಇರುವ ಗೌರವ ಎಂತದ್ದು?

ಳೆದ ಕೆಲವು ದಿನಗಳಿಂದ ದೇಶಾದ್ಯಂತ ಸುದ್ದಿಯಾಗುತ್ತಿರುವ ಒಂದು ವಿಚಾರವೆಂದರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಎಮ್ ಎಸ್ ಧೋನಿ ಅವರು ಈ ಬಾರಿಯ ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯದಲ್ಲಿ ಆಟದ ವೇಳೆ ವಿಕೆಟ್ ಕೀಪಿಂಗ್ ಮಾಡುವಾಗ ಭಾರತೀಯ ವೀರ ಯೋಧರ ಬಲಿದಾನದ ಸಂಕೇತವಾದ “ಬಲಿದಾನ್ ಬ್ಯಾಡ್ಜ್”ನ ಚಿಹ್ನೆ ಇರುವ ಗ್ಲೌಸ್ ಬಳಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಧೋನಿ ದೇಶಪ್ರೇಮಿ ಆಟಗಾರ ಎಂಬುದರಲ್ಲಿ ಸಂಶಯವಿಲ್ಲ, ಆದರೆ ಈ ಬಾರಿ ಧೋನಿಯ ಈ ಒಂದು ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಐಸಿಸಿ ಸಂಸ್ಥೆ ಧೋನಿಗೆ ವಿರುದ್ಧವಾಗಿ ನಿಂತರೆ, ಇತ್ತ ಬಿಸಿಸಿಐ ಧೋನಿ ಪರವಾಗಿ ನಿಂತಿದೆ.‌ ಕ್ರಿಕೆಟ್ ಪಂದ್ಯಾಟದ ವೇಳೆ ಮೈದಾನದಲ್ಲಿ ಯಾವುದೇ ಧಾರ್ಮಿಕ ಅಥವಾ ಸೇನೆಗೆ ಸಂಬಂಧಿಸಿದ ವಸ್ತುಗಳನ್ನು ಬಳಸುವಂತಿಲ್ಲ ಎಂಬುದು ಕ್ರಿಕೆಟ್ ಕ್ಲಬ್‌ನ ನಿಯಮವಿದೆ. ಆದರೆ ಧೋನಿ ಮೊನ್ನೆ ನಡೆದ ಪಂದ್ಯದ ವೇಳೆ ಭಾರತೀಯ ಸೇನಾ ಯೋಧರ ಬಲಿದಾನದ ಸಂಕೇತವಾದ “ಬಲಿದಾನ್ ಬ್ಯಾಡ್ಜ್” ಧರಿಸಿ ಆಟ ಆಡಿದ್ದರು.‌ ಆದರೆ ಈ ಚಿಹ್ನೆ ಹಾಕಬಾರದು ಎಂದು ಐಸಿಸಿ ಪಟ್ಟು ಹಿಡಿದಿದ್ದು, ದೇಶಾದ್ಯಂತ ಧೋನಿಗೆ ಬೆಂಬಲ ವ್ಯಕ್ತವಾಗಿದೆ.!

See the source image

ಅಷ್ಟಕ್ಕೂ ಧೋನಿ ಮಾಡಿದರಲ್ಲಿ ತಪ್ಪೇನಿದೆ?

ಕ್ರಿಕೆಟ್ ನಿಯಮದ ಪ್ರಕಾರ ಸೇನೆಗೆ ಅಥವಾ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಚಿಹ್ನೆ ಅಥವಾ ವಸ್ತು ಬಳಸುವಂತಿಲ್ಲ. ಆದರೆ ಧೋನಿ ಗ್ಲೌಸ್‌ನಲ್ಲಿ ಭಾರತೀಯ ಸೈನಿಕರ ಬಲಿದಾನದ ಚಿಹ್ನೆ ಬಳಸಿದ್ದು ಮಾತ್ರ ವಿವಾದಕ್ಕೆ ಕಾರಣವಾಗಿದೆ. ಪಂದ್ಯ ಮುಗಿದ ನಂತರ ಈ ವಿಚಾರ ಬೆಳಕಿಗೆ ಬಂದಿದ್ದು, ಮುಂದಿನ ಪಂದ್ಯದಲ್ಲಿ ಈ ಗ್ಲೌಸ್ ಬಳಸದಂತೆ ಐಸಿಸಿ ನೇರವಾಗಿ ಬಿಸಿಸಿಐ ಗೆ ಸೂಚಿಸಿದೆ. ಇದು ಸೇನೆಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಪಂದ್ಯಾಟದ ವೇಳೆ ಬಳಸಿದ್ದು ತಪ್ಪು ಎಂಬಂತೆ ಆರೋಪಿಸಿದ ಐಸಿಸಿ ಧೋನಿಗೂ ಸೂಚನೆ ನೀಡಿದೆ. ಆದರೆ ಇತ್ತ ಧೋನಿ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಧೋನಿ ಈ ಹಿಂದೆ ಕೂಡ ಇದೇ ರೀತಿ ದೇಶಪ್ರೇಮ ಮೆರೆದಿದ್ದಾರೆ. ಹುತಾತ್ಮ ಸೈನಿಕರಿಗೆ ಗೌರವ ನೀಡುವ ಈ ಚಿಹ್ನೆ ಬಳಸಿದ್ದು ತಪ್ಪಲ್ಲ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಸೇರಿದಂತೆ ಕೆಲವು ದೇಶದ ಆಟಗಾರರಿಂದ ಮೈದಾನದಲ್ಲಿ ಇಂತಹ ಅನೇಕ ಘಟನೆಗಳು ಸಂಭವಿಸಿದ್ದು, ಆ ಸಂದರ್ಭದಲ್ಲಿ ವಿರೋಧಿಸದ ಐಸಿಸಿ ಈಗ ಏಕೆ ವಿರೋಧಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.!

ಈ ಹಿಂದೆ ನಡೆದ ಘಟನೆಗಳೇನು?

ಅಷ್ಟಕ್ಕೂ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಯಾಕೆಂದರೆ ಈ‌ ಹಿಂದೆ ಇಂಗ್ಲೆಂಡ್‌ನ ಆಟಗಾರ ಮೊಹಿನ್ ಆಲಿ ಆಟದ ಸಂದರ್ಭದಲ್ಲಿ “ಸೇವ್ ಘಾಜಾ” ಎಂಬ ಬ್ಯಾಡ್ಜ್‌ನ್ನು ತಮ್ಮ ಕೈಗೆ ಕಟ್ಟಿಕೊಂಡಿದ್ದು, ಪ್ಯಾಲೆಸ್ತೇನಿಯ ದೇಶದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಇದು ಕೂಡ ಒಂದು ದೇಶಕ್ಕೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಕ್ರಿಕೆಟ್ ನಿಯಮದ ಪ್ರಕಾರ ಇದೂ ಕೂಡ ತಪ್ಪು. ಆದರೆ ಆ ಸಂದರ್ಭದಲ್ಲಿ ಐಸಿಸಿ ಈ ಆಟಗಾರನ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಮತ್ತು ಆ ತಂಡದ ವಿರುದ್ಧ ಕೂಡ ಮಾತನಾಡಿರಲಿಲ್ಲ. ಅದೇ ರೀತಿ ಪಾಕಿಸ್ತಾನದ ಆಟಗಾರ ಶೇಹದ್ ಆದ್ ಅವರು ಪಂದ್ಯ ಮುಗಿಯುವ ವೇಳೆಗೆ ಶ್ರೀಲಂಕಾದ ಆಟಗಾರ ದಿಲ್ಶನ್ ಅವರಿಗೆ ಒಂದು ಮಾತು ಹೇಳುತ್ತಾರೆ, “ನೀವು ಈಗ ಇಸ್ಲಾಂ ಧರ್ಮದಲ್ಲಿ ಇಲ್ಲ, ಇಸ್ಲಾಂ ಗೆ ಸೇರಿದರೆ ನೀವು ಏನೆ ಮಾಡಿದರು ಕೂಡ ಸ್ವರ್ಗಕ್ಕೆ ಹೋಗುತ್ತೀರಿ” ಎಂದು ಹೇಳುತ್ತಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು ಮಾತ್ರವಲ್ಲದೆ ಅನೇಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌‌ ಆದರೆ ಐಸಿಸಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿತ್ತು. ಮಾತ್ರವಲ್ಲದೆ ಪಾಕಿಸ್ತಾನಿ ಆಟಗಾರರು ಆಟದ ಮೈದಾನದಲ್ಲಿ ನಮಾಜ್ ಮಾಡಿದರೂ ಕೂಡ ವಿರೋಧ ವ್ಯಕ್ತಪಡಿಸದ ಐಸಿಸಿ ಸದ್ಯ ಧೋನಿಗೆ ವಿರುದ್ಧವಾಗಿ ನಿಂತಿದೆ. ಧೋನಿ ಧರಿಸಿದ ಗ್ಲೌಸ್‌ನಲ್ಲಿ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸುವ ಚಿಹ್ನೆ ಇತ್ತೇ ಹೊರತು ಯಾವುದೇ ದೇಶಕ್ಕೆ, ಧರ್ಮಕ್ಕೆ ಅಥವಾ ಸೇನೆಗೆ ಅವಮಾನ ಮಾಡುವ ರೀತಿ ಇರಲಿಲ್ಲ. ಆದರೂ ಐಸಿಸಿ ಮಾತ್ರ ವಿರೋಧಿಸುತ್ತಿರುವುದು ಆಶ್ಚರ್ಯ ಪಡುವಂತೆ ಮಾಡಿದೆ.!

ಇತ್ತ ಧೋನಿಗೆ ವಿರುದ್ಧವಾಗಿ ಐಸಿಸಿ ಮಾತ್ರ ನಿಂತರೆ, ಧೋನಿಯ ಪರವಾಗಿ ಕೇಂದ್ರ ಸಚಿವರು, ಮಾಜಿ ಸೈನಿಕರು ಮಾತ್ರವಲ್ಲದೆ ಕೋಟಿ ಕೋಟಿ ಭಾರತೀಯರು ಪರವಾಗಿ ನಿಂತಿದ್ದಾರೆ. ಧೋನಿ ಮಾಡಿರುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ ಎಂದು ಬೆಂಬಲಕ್ಕೆ ನಿಂತ ಸಮೂಹ, ಐಸಿಸಿ ವಿರುದ್ಧ ಕೆಂಡಕಾರಿದ್ದಾರೆ. ಅದೇನೇ ಇರಲಿ ಇಂಗ್ಲೆಂಡ್, ಪಾಕಿಸ್ತಾನದ ಆಟಗಾರರಿಗೆ ಅನುವು ನೀಡಿದ ಐಸಿಸಿ ಧೋನಿಗೆ ವಿರುದ್ಧವಾಗಿ ನಿಂತಿರುವುದು ವಿಪರ್ಯಾಸವೇ ಸರಿ..!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
 
FOR DAILY ALERTS
 
Close