ಪ್ರಚಲಿತ

ಉತ್ತರ ಪ್ರದೇಶದಲ್ಲಿ ಶಿವಭಕ್ತರ ಮೇಲೆ ಯೋಗಿ ಕೃಪಾ ಕಟಾಕ್ಷ!! ಯಾವ ಕಾಂವಡ ಯಾತ್ರೆಗೆ ಮುಸಲ್ಮಾನರು ಕಲ್ಲು ತೂರುತ್ತಿದ್ದರೋ ಅಲ್ಲಿಂದು ಅದೆ ಯಾತ್ರೆಯ ಮೇಲೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ!!

ಇನ್ನೂರು ವರ್ಷಗಳ ಹಿಂದಿನ ಮಾತಲ್ಲ ಇದು, ಕೇವಲ ಎರಡೆ ವರ್ಷಗಳ ಹಿಂದೆ ಉತ್ತರಪ್ರದೇಶವೆಂಬ ರಾಮ-ಕೃಷ್ಣ-ಶಿವನ ನಗರಿ ಅಕ್ಷರಶಃ ಮುಘಲರ ಆಡಳಿತದಲ್ಲಿದ್ದಂತೆ ಇತ್ತು. ಹಿಂದೂಗಳು ಗಟ್ಟಿಯಾಗಿ ಉಸಿರಾಡಲೂ ಭಯ ಪಡುವಂತ ವಾತಾವರಣ ನಿರ್ಮಾಣವಾಗಿತ್ತು. ಉತ್ತರ ಪ್ರದೇಶದಲ್ಲಿ ಹಿಂದೂ ದೇವ-ದೇವಿಯರ ಮೆರವಣಿಗೆ ಹೋಗುತ್ತಿದ್ದಾಗ ಮುಸ್ಲಿಮರು ಭಕ್ತರ ಮೇಲೆ ಕಲ್ಲು ತೂರುತ್ತಿದ್ದರು. ಇದು ದೂರದ ಅಫಘಾನಿಸ್ತಾನದಲ್ಲಿ ನಡೆಯುತ್ತಿದ್ದ ಘಟನೆಗಳಲ್ಲ, ನಮ್ಮದೆ ಭಾರತದ ಉತ್ತರಪ್ರದೇಶವೆಂಬ ರಾಜ್ಯದಲ್ಲಿ ನಡೆಯುತ್ತಿದ್ದ ಘಟನೆ. ರಾಮ-ಕೃಷ್ಣರು ಹುಟ್ಟಿ ಓಡಾಡಿದ ಜಾಗದಲ್ಲಿ ಅವರ ಹಬ್ಬ ಹರಿದಿನಗಳನ್ನೆ ಆಚರಿಸುವಂತಿರಲಿಲ್ಲ ಎಂದರೆ ಜಾತ್ಯಾತೀತ ಸರಕಾರಗಳು ಹಿಂದೂಗಳ ಜೀವನವನ್ನು ಯಾವ ರೀತಿ ನರಕ ಸದೃಶವಾಗಿಸಿದ್ದರು ಯೋಚಿಸಿ.

ಮಾಯಾವತಿ ಮತ್ತು ಅಖಿಲೇಶ್ ಯಾದವ್ ಸರಕಾರಗಳ ಅಲ್ಪರ ಅತಿಯಾದ ಓಲೈಕೆಯಿಂದಾಗಿ ಮುಸ್ಲಿಮರು ಮದವೇರಿದ ಗಜದಂತಾಡಿ ಹಿಂದೂಗಳನ್ನು ಕಾಲಡಿ ಹಾಕಿ ಹೊಸಕುತ್ತಿದ್ದರು. ಅಂತಹ ಉತ್ತರಪ್ರದೇಶದಲ್ಲಿ ಇಂದು ಹಿಂದೂಗಳು ಹೋಳಿ ಆಚರಿಸಲು ಅನುಕೂಲವಾಗುವಂತೆ ಮಸೀದಿಯ ನಮಾಜ್ ಸಮಯವನ್ನೇ ಬದಲಾಯಿಸುತ್ತಾರೆ ಮುಸ್ಲಿಮರು! ಎರಡು ವರ್ಷಗಳ ಹಿಂದೆ ಯಾವ ಕಾಂವಡ ಯಾತ್ರೆಯ ಮೇಲೆ ಮುಸ್ಲಿಮರು ಕಲ್ಲು ತೂರುತ್ತಿದ್ದರೋ ಇಂದು ಅದೆ ಯಾತ್ರೆಗೆ ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ ಮಾಡಲಿದ್ದಾರೆ ಹಿಂದೂ ಹೃದಯ ಸಮ್ರಾಟ ಸನಾತನ ಸಂತ ಯೋಗಿ!

ಕಾಂವಡ ಯಾತ್ರೆಯೆಂದರೆ ಶಿವ ಭಕ್ತರು ನಡೆಸುವಂತಹ ವಾರ್ಷಿಕ ಯಾತ್ರೆ. ಹರಿದ್ವಾರಾ, ಉತ್ತರಾಖಂಡ್, ಗಂಗೋತ್ರೀ, ಗೋಮುಖ ಮತ್ತು ಬಿಹಾರದ ಸುಲ್ತಾನ್ ಗಂಜ್ ನಿಂದ ಸಾವಿರಾರು ಶಿವ ಭಕ್ತರು ಗಂಗೆಯ ತಟದವರೆಗೆ ಮೆರವಣಿಗೆ ನಡೆಸುತ್ತಾರೆ. ಈ ಶಿವಭಕ್ತರನ್ನು ಕಾಂವಡಿಯಾ ಅಥವಾ ಭೋಲೆ ಎಂದು ಕರೆಯಲಾಗುತ್ತದೆ. ಬಿದಿರಿನ ಕೋಲುಗಳಿಗೆ ಕಟ್ಟಿದ ಪಾತ್ರೆಗಳಲ್ಲಿ ಗಂಗಾ ನದಿಯ ಪವಿತ್ರ ನೀರನ್ನು ಸಂಗ್ರಹಿಸಿ ತಮ್ಮ ತಮ್ಮ ಊರಿನಲ್ಲಿರುವ ಶಿವಲಿಂಗದ ಮೇಲೆ ಜಲಾಭಿಷೇಕ ನಡೆಸುವ ಸಲುವಾಗಿ ಭಕ್ತರು ಸಾವಿರಾರು ಕಿ.ಮೀ ದೂರ ಪ್ರಯಾಣಿಸುತ್ತಾರೆ. 1980 ರಲ್ಲಿ ಕೆಲವೆ ಕೆಲವು ಶಿವಭಕ್ತರಿಂದ ಪ್ರಾರಂಭಿಸಲ್ಪಟ್ಟ ಯಾತ್ರೆಯಲ್ಲಿ ಇವತ್ತು ಕೋಟಿಗಟ್ಟಲೆ ಜನರು ಭಾಗವಹಿಸುತ್ತಾರೆ.

ಹಿಂದೆ ಮುಸಲ್ಮಾನರ ಕೇರಿಗಳಲ್ಲಿ ಕಾಂವಡ ಯಾತ್ರಿಗಳು ತೆರಳುತ್ತಿದ್ದಾಗ ಅವರ ಮೇಲೆ ಕಲ್ಲು ತೂರಲಾಗುತ್ತಿತ್ತು. ಶಿವ ಭಕ್ತರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತಿದ್ದವು. ನಂಬುತ್ತಿರೋ ಇಲ್ಲವೋ ಕಾಂವಡ ಯಾತ್ರೆಯ ಸಮಯದಲ್ಲಿ ಡಿ.ಜೆಯನ್ನು ಉಪಯೋಗಿಸಿಲೂ ಅನುಮತಿ ಇರಲಿಲ್ಲ. ದಶಕಗಳ ಬಳಿಕ ಮೊದಲ ಬಾರಿಗೆ ಡಿ.ಜೆ ಉಪಯೋಗಿಸಲು ಅನುಮತಿ ನೀಡಿದೆ ಯೋಗಿ ಸರಕಾರ. ಮಾತ್ರವಲ್ಲ ಉತ್ತರಾಖಂಡದಿಂದ ದೆಹಲಿಯ ಸರಹದ್ದಿನವರೆಗೆ ಕಾಂವಡ ಯಾತ್ರಿಗಳ ಮೇಲೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ ಮಾಡಲಾಗುತ್ತದೆ ಎಂದು ವರದಿಯಾಗಿದೆ!! ಶಂಭೋ ಶಂಕರ!! ಇದು ಹಿಂದೂ ಹುಲಿಯ ತಾಕತ್ತು!!

ಕಾಂವಡ ಯಾತ್ರೆ 28 ಜುಲೈಯಿಂದ ಪ್ರಾರಂಭಗೊಳ್ಳಲಿದೆ. ಶಿವರಾತ್ರಿಯಂದು ಶಿವನ ಮಂದಿರದ ಮೇಲೂ ಪುಷ್ಪವೃಷ್ಟಿ ನಡೆಸಲಾಗುವುದು ಎನ್ನಲಾಗಿದೆ. ಕಳೆದ ವರ್ಷ ನಾಲ್ಕು ಕೋಟಿ ಶಿವಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಐದು ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಉತ್ತರಪ್ರದೇಶ ಪೋಲೀಸರು ತಿಳಿಸಿದ್ದಾರೆ, ಯಾತ್ರೆಗೆ ಬಿಗಿ ಭದ್ರತೆ ಒದಗಿಸಲು ಸಕಲ ಸಿದ್ದತೆಗಳನ್ನೂ ಮಾಡಲಾಗುತ್ತಿದೆ. ಹೆಚ್ಚುವರಿ ಫೋರ್ಸ್ ಗಳನ್ನು ಪಶಿಮ ಉತ್ತರಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಪೋಲೀಸರು ತಿಳಿಸಿದ್ದಾರೆ.

ಭಾರತದ ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಹಿಂದೂ ಹಿತಕ್ಕಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸರಕಾರಗಳು ಕೇಂದ್ರ ಮತ್ತು ಉತ್ತರ ಪ್ರದೇಶದಲ್ಲಿವೆ. ಸನಾತನ ಸಂತರಾದ ಮೋದಿ-ಯೋಗಿಯ ರಾಜ್ಯದಲ್ಲಿ ಹಿಂದೂಗಳು ತಮ್ಮ ಹಬ್ಬ ಹರಿದಿನಗಳನ್ನು ನೆಮ್ಮದಿಯಿಂದ ಆಚರಿಸುವಂತಾಗಿದೆ. ದೆಹಲಿಯಲ್ಲಿ ಮೋದಿ-ಯುಪಿಯಲ್ಲಿ ಯೋಗಿ ಜೋಡಿ ಶಾಶ್ವತವಾಗಿರಲಿ ಎನ್ನುವುದು ಸಮಸ್ತ ಹಿಂದೂಗಳ ಹಾರೈಕೆ.

-ಶಾರ್ವರಿ

Tags

Related Articles

FOR DAILY ALERTS
 
FOR DAILY ALERTS
 
Close