ಅಂಕಣ

ದೇಹದಲ್ಲಿ 18 ಗುಂಡು ಹೊಕ್ಕಿದರೂ 48 ಉಗ್ರರ ರುಂಡವನ್ನು ಚೆಂಡಾಡಿದ ನಮ್ಮ ಭಾರತೀಯ ಯೋಧ!! ಯಾರು ಈ ಕೋಬ್ರಾ?!

ಭಾರತೀಯ ಸೇನಾ ವಲಯದಲ್ಲಿ ಕೋಬ್ರಾ ಎಂದರೆ ದಿಗೇಂದ್ರ ಕುಮಾರ್ ಅಂತ ಥಟ್ಟನೇ ಹೇಳ್ತಾರೆ. ಅಸಾಮಾನ್ಯ ಸೇನಾನಿಯಾಗಿದ್ದ ಇವರು 1999ರ ಕಾರ್ಗಿಲ್ ಕದನದಲ್ಲಿ ಜಯದ ರೂವಾರಿ. ಅಂದು ಅತೀ ದುರ್ಗಮ ಪ್ರದೇಶವಾದ ತೋಲೋಲಿಂಗ್ ಬೆಟ್ಟದ ( ಸಮುದ್ರ ಮಟ್ಟಕ್ಕಿಂತ 15,000 ಅಡಿ ಎತ್ತರ ) ತುದಿಯಲ್ಲಿ ಪಾಕಿಸ್ತಾನದ 11 ಬಂಕರ್‍ಗಳನ್ನು ನಾಶ ಮಾಡಿದ್ದಲ್ಲದೆ 48 ಶತ್ರುಗಳ ರುಂಡವನ್ನು ಚೆಂಡಾಡಿದ್ದರು.

ಹೌದು…. ಅಂದು 1999ರ ಕಾರ್ಗಿಲ್ ಯುದ್ಧದ ಸಮಯ… ಪಾಕಿಸ್ತಾನಿ ಸೈನಿಕರು ದ್ರಾಸ್ ಸೆಕ್ಟರ್ನ ತೋಲೊಲಿಂಗ್ ಬೆಟ್ಟದ ಪಾಯಿಂಟ್ 4590 ಎಂಬ ಪ್ರದೇಶವನ್ನು ಪಾಕಿಸ್ತಾನದ ಪಡೆ ವಶಪಡಿಸಿಕೊಂಡಿತ್ತು. ಅದು ಬರೋಬ್ಬರಿ 15000 ಅಡಿ ಎತ್ತರವಿತ್ತು!! ಕದನ ವಿರಾಮವನ್ನು ಉಲ್ಲಂಘಿಸಿ, ಒಪ್ಪಂದವನ್ನು ಉಲ್ಲಂಘಿಸಿದ್ದ ಪಾಕಿಸ್ತಾನ ಈ ಪ್ರದೇಶವನ್ನು ತನ್ನ ನರಿ ಬುದ್ಧಿಯಿಂದನೇ ವಶಪಡಿಸಿಕೊಂಡಿತ್ತು!! ಆದರೆ ನಮಗೆ ಆ ಪ್ರದೇಶ ಅಗತ್ಯವಾಗಿ ವಶಪಡಿಸಿಕೊಳ್ಳಲೇ ಬೇಕಿತ್ತು!! ಆದರೆ ಇದು ಸುಲಭದ ಮಾತಾಗಿರಲಿಲ್ಲ… ಯಾಕೆಂದರೆ 15000 ಅಡಿ ಎತ್ತರ ಎಂದರೆ ಊಹಿಸಲೂ ಸಾಧ್ಯವಿಲ್ಲ…. ಆದರೆ ನಮ್ಮ ಪ್ರದೇಶವನ್ನು ಪಾಪಿಗಳ ಕೈಯಲ್ಲಿ ಕೊಡುವುದಕ್ಕೆ ಅಲ್ಲಿದ್ದ ಯಾವ ಯೋಧರೂ ತಯಾರಾಗಿರಲಿಲ್ಲ.. ಸೇನಾ ಆದೇಶದಂತೆ ಪಾಕ್ ಜೊತೆ ಹೋರಾಡಲು ಸಿದ್ಧತೆ ನಡೆಸಿದರು!!

Related image

ಮೇಜರ್ ದಿಗೇಂದ್ರ ಕುಮಾರ್ ಪಾಕಿಗಳನ್ನು ಧ್ವಂಸ ಮಾಡಬೇಕೆಂದು ಪಣತೊಟ್ಟರು. ಇವರ ಜೊತೆ ಅತೀವ ಉತ್ಸಾಹಿ ಯೋಧರಾದ ಸುಬೇದಾರ್ ಭನ್ವರ್ಲಾಲ್ ಭಕರ್, ಸುಬೇದಾರ್ ಸುರೇಂದ್ರ ಸಿಂಗ್ ರಾತೋರ್, ಲ್ಯಾನ್ಸೆ ನಾಯಕ್, ನಾಯಕ್ ಸುರೇಂದ್ರ, ನಾಯಕ್ ಚಮನ್ ಸಿಂಗ್ ತೆವಾಟಿಯಾ, ಲಾನ್ಸ್ ನಾಯಲ್ ಬಚ್ಚನ್ ಸಿಂಗ್, ಸಿಎಂಎಚ್ ಜಶ್ವಿರ್ ಸಿಂಗ್, ಹವಾಲ್ದಾರ್ ಸುಲ್ತಾನ ಸಿಂಗ್ ನರ್ವಾರ್ ಹಾಗೂ ದಿಗೇಂದ್ರ ವಿವೇಕ್‍ಗೆ ಸಾಥ್ ನೀಡಿದರು. ಇದರಲ್ಲಿ ದಿಗೇಂದ್ರ ಕುಮಾರ್ ಅವರು ಲೈಟ್ ಮಿಷಿನ್ ಗನ್ ಗುಂಪಿನ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು!!

ಪಾಕಿಸ್ತಾನದವರ ಕಣ್ಣು ತಪ್ಪಿಸಿ ಜಾಗರೂಕತೆಯಿಂದ 16000 ಅಡಿ ಎತ್ತರ ಬೆಟಾಲಿಯನ್‍ನ್ನು ಹತ್ತಿಯೇ ಬಿಟ್ಟರು.. ಅಂತಿಮವಾಗಿ 16 ಗಂಟೆಗಳ ನಂತರ ಟೋಲೋಲಿಂಗ್ ಬೆಟ್ಟವನ್ನು ಕಷ್ಟ ಪಟ್ಟು ತಲುಪಿದರು. ನಿಜವಾಗಿ ಬೆಟ್ಟವನ್ನು ಮುಟ್ಟಲು 24 ಗಂಟೆಗಳು ಬೇಕಿತ್ತು ಆದರೆ ಕೇವಲ 16 ಗಂಟೆಯಲ್ಲೇ ಪಾಕಿಗಳ ಅಟ್ಟಹಾಸವನ್ನು ಮಟ್ಟಹಾಕಲು ಆದಷ್ಟು ಬೇಗನೇ ತಲುಪಿಬಿಟ್ಟಿದ್ದರು!! ಕೆಳಗಡೆ ನೋಡಿದರೆ 5000 ಅಡಿ ಆಳದ ಕಂದಕ. ಸ್ವಲ್ಪ ಏಮಾರಿದರೂ ಮೂಳೆಗಳೂ ಕೂಡಾ ಸಿಗಲ್ಲ. ಆದರೆ ನಮ್ಮ ತಾಯಿನಾಡನ್ನು ರಕ್ಷಿಸುವ ಪ್ರೇರಣೆಯಿಂದ ಕೇವಲ 16 ಗಂಟೆಗಳಲ್ಲಿ ಬೆಟ್ಟವನ್ನು ಬರೇ ಹಗ್ಗದಲ್ಲೇ ಯಶಸ್ವಿಯಾಗಿ ಹತ್ತಿದ್ದರು. ಬೆಟ್ಟವನ್ನು ಹತ್ತುತ್ತಿದ್ದಂತೆ ಹಸಿದ ವ್ಯಾಘ್ರನಂತೆ ಘರ್ಜಿಸಿಯೇ ಬಿಟ್ಟರು.

ಮೈಯ್ಯಲ್ಲಿ ವೀರ ರಜಪೂತ ದೊರೆಗಳು ಆವೇಶಬಂದಂತೆ ಶತ್ರುಗಳನ್ನು ಮುಗಿಸಲು ಸಿದ್ಧರಾಗಿ ನಿಂತಿದ್ದರು. ಇಷ್ಟೆಲ್ಲಾ ಆಗಿದ್ದರೂ ಪಾಕಿಗಳಿಗೆ ಇದರ ಅರಿವೇ ಆಗಿರಲಿಲ್ಲ… ಸಿಂಹದಂತೆ ಘರ್ಜಿಸಿದ ದಿಗೇಂದ್ರ ಕುಮಾರ್ ಹಾಗೂ ಯೋಧರು ಸುಮಾರು 11 ಬಂಕರ್‍ಗಳನ್ನು ನಾಶ ಮಾಡಿಯೇ ಬಿಟ್ಟರು!! ಅದಾಗಲೇ ಎಚ್ಚೆದ್ದ ಪಾಕಿಗಳು ದಿಗೇಂದ್ರ ಕುಮಾರ್ ನ ಎದೆ ಮೇಲೆ ಮೂರು ಗುಂಡುಗಳನ್ನು ಹಾರಿಸಿಯೇ ಬಿಟ್ಟರು… ಕಣ್ಣು ಮುಚ್ಚಿ ತೆಗೆಯುವುದರೊಳಗೆ ಸುಮಾರು 18 ಗುಂಡುಗಳು ದೇಹದೊಳಗೆ ಸೇರಿಯೇ ಬಿಟ್ಟಿತ್ತು!! ಇಷ್ಟಾದರೂ ಜೀವಂತವಾಗಿದ್ದೇನಲ್ಲಾ ಎಂದು ಮನದಲ್ಲಿಟ್ಟುಕೊಂಡು ದೃತಿಗೆಡದೆ ತನ್ನಲ್ಲಿದ್ದ ಎಂಎಲ್‍ಜಿಯನ್ನು ಹಿಡಿದುಕೊಂಡು ಮತ್ತೆ ಯುದ್ಧಕ್ಕೆ ತಯಾರಾಗಿಯೇ ನಿಂತಿದ್ದರು!!

ಒಂದು ಕಡೆಯಲ್ಲಿ ದಿಗೇಂದ್ರ ಕುಮಾರ್ ದೇಹಕ್ಕೆ 18 ಗುಂಡುಗಳು ಹೊಕ್ಕಿದರೆ ಇತ್ತ ಕಡೆ ಇದಕ್ಕಿಂತ ಭಿನ್ನ ಪರಿಸ್ಥಿತಿ ಇತ್ತು. ಸುಬೇದಾರ್ ಭಾನ್ವರ್ ಲಾಲ್ ಭಾಕರ್, ಲಾನ್ಸ್ ನಾಯ್ಕ್ ಜಾಸ್ವಿರ್ ಸಿಂಗ್, ನಾಯ್ಕ್ ಸುರೇಂದ್ರ, ಮತ್ತು ನಾಯ್ಕ್ ಚಮನ್ ಸಿಂಗ್ ಹುತಾತ್ಮರಾಗಿದ್ದರು. ಲಾನ್ಸ್ ನಾಯ್ಕ್ ಬಚನ್ ಸಿಂಗ್ ಮತ್ತು ಸುಲ್ತಾನ್ ಗ್ರೆನೈಡ್ ಹಾಗೂ ಪಿಸ್ತೂಲನ್ನು ನೀಡಲಾಯಿತು. ಮೇಜರ್ ವಿವೇಕ್ ಗುಪ್ತಾ ಕೂಡಾ ತಲೆಗೆ ಗುಂಡು ಬಿದ್ದ ಕಾರಣ ಹುತಾತ್ಮರಾಗಿದ್ದರು.

Related image

ಆದರೆ 18 ಗುಂಡುಗಳು ದೇಹದಲ್ಲಿ ಎಂದರೆ ಯೋಚಿಸುವಾಗಲೇ ಮೈಜುಮ್ಮೆನ್ನುತ್ತೆ!! ಆದರೂ ದಿಗೇಂದ್ರ ಅವರು ದೃತಿಗೆಡದೆ ಉಳಿದಿದ್ದ ಎಲ್ಲಾ ಬಂಕರ್ಗಳನ್ನು ಧ್ವಂಸ ಮಾಡಿದರು. ಶತ್ರು ಸೈನ್ಯದ ಕಮಾಂಡರ್ ಮೇಜರ್ ಅನ್ವರ್ ಖಾನ್ ದಿಗೇಂದ್ರನ ಮುಂದೆ ಬಂದಿದ್ದ. ಈ ವೇಳೆ ದಿಗೇಂದ್ರ ಬಳಿ ಇದ್ದದ್ದು ಬರೇ ಒಂದೇ ಬುಲೆಟ್. ವ್ಯರ್ಥ ಮಾಡದೆ ಪಿಸ್ತೂಲಿನಿಂದ ಬುಲೆಟ್ ಸಿಡಿಸಿದರು. ಆದರೆ ಅದು ವ್ಯರ್ಥವಾಯಿತು. ಆದರೂ ದೃತಿಗೆಡದ ದಿಗೇಂದ್ರ ಅವರು ಅನ್ವರ್ನ ಮೇಲೆ ಹಾರಿ ಆತನನ್ನು ಕೊಂದು ಬಿಟ್ಟರು.. ಯುದ್ಧ ಮುಗಿದು ನೋಡುವಾಗ ದಿಗೇಂದ್ರ ಅವರ ಕೈಯಿಂದ 48 ಪಾಕಿಸ್ತಾನಿ ಸೈನಿಕರು ಹೆಣವಾಗಿದ್ದರು.

ಕೊನೆಗೆ ಶತ್ರುಗಳು ನಾಶವಾಗಿದ್ದಾರೆಂದು ಅರ್ಥೈಸಿಕೊಂಡ ದಿಗೇಂದ್ರ ಕುಮಾರ್, ತಾನು ಯುದ್ಧ ಗೆದ್ದಿರುವುದನ್ನು ಅರಿತುಕೊಂಡಿದ್ದರು. ಅದು 1999 ರ ಜೂನ್ 13. ಅದೇ ದಿನ ಭಾರತೀಯ ತ್ರಿವರ್ಣ ಧ್ವಜವನ್ನು ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಹಾರಿಸಿದರು. 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ 48 ಪಾಕಿಸ್ತಾನಿ ಸೈನಿಕರನ್ನು ಮುಗಿಸಿದ್ದ ಏಕೈಕ ಭಾರತೀಯ ಕಮಾಂಡರ್ ಆಗಿದ್ದಾರೆ. ಇದೊಂದು ನಿಜಕ್ಕೂ ನೆನಪಿಸಿಕೊಂಡಿರಬಹುದಾದ ಘಟನೆಯಾಗಿದ್ದು, ಪ್ರತೀ ಭಾರತೀಯರು ನೆನಪಿಟ್ಟುಕೊಳ್ಳಲೇಬೇಕಾದ ಘಟನೆ. ಇಂತಹ ವೀರನಿಗೆ ಇಡೀ ಭಾರತೀಯರು ಸೆಲ್ಯುಟ್ ಹೊಡೆಯಲೇ ಬೇಕು!!

  • ಪವಿತ್ರ
Tags

Related Articles

FOR DAILY ALERTS
 
FOR DAILY ALERTS
 
Close