ಪ್ರಚಲಿತ

ರಾಹುಲ್ ರ”ಫೇಲ್”ನ ಬೆಂಗಳೂರು ತಂತ್ರ ವಿಫಲ.! ರಾಹುಲ್ ಗಾಂಧಿಗೆ ನೋಎಂಟ್ರಿ ಎಂದ ಹೆಚ್.ಎ.ಎಲ್.!

ಪ್ರಧಾನಿ ನರೇಂದ್ರ ಮೋದಿ ಓರ್ವ ಭ್ರಷ್ಟ ಎಂದು ಬೊಬ್ಬೆ ಬಿಡುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಇದೀಗ ಮುಜುಗರ ಅನುಭವಿಸುವಂತಾಗಿದೆ. ಕಳೆದ 4 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವೊಂದೂ ಭ್ರಷ್ಟಾಚಾರ ಪ್ರಕರಣದಲ್ಲೂ ಭಾಗಿಯಾದ ಘಟನೆಗಳು ಸಂಭವಿಸದೇ ಇದ್ದುದು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ವಿಭಿನ್ನ ಯೋಜನೆಗಳ ಮೂಲಕ ಭಾರತೀಯರ ಮನಗೆದ್ದಿದ್ದ ಪ್ರಧಾನಿ ಮೋದಿ ಸರ್ಕಾರದ ನೀತಿಯಿಂದ ಕಾಂಗ್ರೆಸ್ಸಿಗೆ ಅಡಚಣೆಯುಂಟಾಗಿತ್ತು.

ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಫ್ರಾನ್ಸ್ ಸರ್ಕಾರದೊಂದಿಗೆ ನಡೆಸಿರುವ ರಫೇಲ್ ಡೀಲ್ ಎಂಬ ಒಪ್ಪಂದವನ್ನು ಹಿಡಿದುಕೊಂಡು ಆಧಾರ ರಹಿತವಾದ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಈ ನಿಮಿತ್ತ ಹಲವಾರು ಕಡೆಗಳಲ್ಲಿ ಆರೋಪ ಮಾಡಿದ್ದ ರಾಹುಲ್ ಗಾಂಧಿಗೆ ಸ್ವತಃ ಫ್ರಾನ್ಸ್ ಸರ್ಕಾರವೇ ತಪರಾಕಿ ನೀಡಿತ್ತು. “ಇಂತಹಾ ಯಾವುದೇ ಅಕ್ರಮಗಳು ನಡೆದಿಲ್ಲ. ನಮ್ಮ ನಡುವಿನ ಒಪ್ಪಂದ ಪಾರದರ್ಶಕವಾಗಿದೆ” ಎಂದು ಹೇಳಿತ್ತು.

Image result for rafale deal

ಆದರೆ ಮುಂದಿನ ಚುನಾವಣೆಯಲ್ಲಿ ಪ್ರಧಾನಮಂತ್ರಿ ಆಗುವ ಕನಸಿನಲ್ಲಿರುವ ರಾಹುಲ್ ಗಾಂಧಿ ಮತ್ತೆ ಮತ್ತೆ ಮೋದಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈಯುತ್ತಿದ್ದಾರೆ. ಇದಕ್ಕಾಗಿ ಅನೇಕ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲಿ ಒಂದು ಬೆಂಗಳೂರಿನ ಹೆಚ್.ಎ.ಎಲ್ ಘಟಕಕ್ಕೆ ಭೇಟಿ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನ ಹೆಚ್.ಎ.ಎಲ್ (ಹಿಂದೂಸ್ತಾನ್ ಏರೊನೋಟಿಕ್ಸ್ ಲಿಮಿಟೆಡ್) ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಉದ್ಯೋಗಿಗಳೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿಮಾನದ ಸಂಕೀರ್ಣ ಭಾಗಗಳನ್ನು ತಯಾರಿಸುವ ಹೆಚ್.ಎ.ಎಲ್ ಘಟಕಕ್ಕೆ ತೆರಳಿ ಅಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಿದ್ದರು. ಆದರೆ ಇಂತಹಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಕಾಂಗ್ರೆಸ್ಸಿಗೆ ಮುಜುಗರ ಉಂಟಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಸಂಸ್ಥೆಯಲ್ಲಿ ರಾಹುಲ್ ಗಾಂಧಿಗೆ ಸಂವಾದ ನಡೆಸಲು ಅವಕಾಶ ನೀಡೋದಿಲ್ಲ ಎಂದು ಹೆಚ್.ಎ.ಎಲ್ ಹೇಳಿದೆ.

Image result for rahul gandhi

ಇದೀಗ ರಾಹುಲ್ ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಇರುವ “ವಿನ್ಸ್ಕ್ ಸ್ಕ್ವೇರ್”ನಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸ್ ಅಧಿಕಾರಿಗಳಿಂದ ಅವಕಾಶ ಕೇಳಲು ಮುಂದಾಗಿದೆ. ಹೆಚ್.ಎ.ಎಲ್ ಸ್ಪಷ್ಟವಾಗಿ ಕಾಂಗ್ರೆಸ್ ಹಾಗೂ ರಾಹಲ್ ಗಾಂಧಿಗೆ ಮಂಗಳಾರತಿ ಮಾಡಿ ಕಳಿಸಿದ್ದು ಮುಂದಿನ ದಾರಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ.

-ಏಕಲವ್ಯ

Tags

Related Articles

FOR DAILY ALERTS
 
FOR DAILY ALERTS
 
Close