ಅಂಕಣ

ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ಹೆಸರು ಕೇಳಿದರೇನೇ ಸಾಕು ಶತ್ರುಗಳು ನಿದ್ದೆಯಲ್ಲೂ ಗಡಗಡ ನಡುಗುತ್ತಾರೆ ಏಕೆ ಗೊತ್ತೇ?

ಭಾರತದ ಹೆಮ್ಮೆ ಭಾರತೀಯ ಸೇನೆ. ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ಸೇನೆ ಒಬ್ಬ ಅಪ್ಪಟ ಭಾರತೀಯನ ಹೆಮ್ಮೆ. ಭಾರತೀಯ ಸೇನೆಯ ಹೆಸರು ಕೇಳಿದರೆನೇ ಶತ್ರುಗಳ ಮೈ ಯಲ್ಲಿ ನಡುಕ ಉಂಟಾಗುತ್ತದೆ. ಅದರಲ್ಲೂ ಭಾರತಿಯ ಸೇನೆಯ ಮುಕುಟ ಮಣಿ ಗೂರ್ಖಾ ರೆಜಿಮೆಂಟಿನ ಹೆಸರು ತೆಗಿದಿರೋ ಶತ್ರುಗಳು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ. ಗೂರ್ಖಾ ರಿಜಿಮೆಂಟಿನ ಪರಾಕ್ರಮೇ ಅಂತಹುದು. ಗೂರ್ಖಾಗಳ ಪರಾಕ್ರಮ ಕೇಳಿದರೆ ನಿಮ್ಮ ಎದೆ ಗರ್ವದಿಂದ ಉಬ್ಬಿ ಬರುವುದು. ಭಾರತೀಯ ಸೇನೆಯ ಮೊತ್ತ ಮೊದಲ ಬೆಟಾಲಿಯನ್ ಆದ ಗೂರ್ಖಾ 200 ವರ್ಷಗಳನ್ನು ಪೂರೈಸಿರುವ ಜೊತೆಗೆ ಪ್ರಪಂಚದ ಅತ್ಯಂತ ಕ್ರೂರತಮ ಯುದ್ದ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

ಭಾರತೀಯ ಸೇನೆಯ ಸೇನಾಧ್ಯಕ್ಷರಾಗಿದ್ದ ಸ್ಯಾಮ್ ಮಾನೆಕ್ ಶಾ ಅವರ ಮಾತುಗಳು ” ಒಂದು ವೇಳೆ ಯಾರಾದರೂ ನಿಮ್ಮಲ್ಲಿ ನನಗೆ ಮೃತ್ಯುವಿನ ಭಯವಿಲ್ಲ ಎಂದು ಹೇಳುತ್ತಾನಾದರೆ, ಒಂದೋ ಆತ ಸುಳ್ಳು ಹೇಳುತ್ತಿದ್ದಾನೆ, ಇಲ್ಲವೇ ಆತ ಗೂರ್ಖಾ ಆಗಿರುತ್ತಾನೆ!” ಸತ್ಯಸ್ಯ ಸತ್ಯ. ಹೌದು ಮೃತ್ಯುವಿನ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯವಿರುವುದು ಗೋರಖಾ ಸೈನಿಕರಿಗೆ ಮಾತ್ರ. ಇವರ ಧೈರ್ಯ ಮತ್ತು ಪರಾಕ್ರಮ ಜಗಜ್ಜನಿತ. ಭಾರತೀಯ ಸೇನೆಯಲ್ಲಿ ಗೂರ್ಖಾ ರೆಜಿಮಂಟ್ ಇರುವುದು ನಮ್ಮೆಲ್ಲರ ಸೌಭಾಗ್ಯ. ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ದಗಳಲ್ಲಿ ಬ್ರಿಟಿಷ್ ಸೈನ್ಯದ ಭಾಗವಾಗಿದ್ದ ಗೂರ್ಖಾ ಸೈನಿಕರ ಪರಾಕ್ರಮಕ್ಕೆ ಸರ್ವಾಧಿಕಾರಿ ಹಿಟ್ಲರ್ ಕೂಡಾ ಮನಸೋತಿದ್ದನಂತೆ! ಆತ ಇವರನ್ನು “ಬ್ಲಾಕ್ ಡೆವಿಲ್ಸ್” ಎಂದು ಕರೆಯುತ್ತಿದ್ದನಂತೆ. ಮಾತ್ರವಲ್ಲ, ಗೂರ್ಖಾ ಸೈನಿಕರನ್ನು ಹೊಗಳುತ್ತಾ ” ನನ್ನ ಬಳಿಯೇನಾದರೂ ಗೂರ್ಖಾ ಸೈನಿಕರಿದ್ದಿದ್ದರೆ ನಾನು ಇಡೀ ವಿಶ್ವವನ್ನೇ ಗೆಲ್ಲುತ್ತಿದ್ದೆ” ಎಂದು ಹಂಬಲಿಸುತ್ತಿದ್ದನಂತೆ. ಸ್ವತಃ ಶತ್ರು ಸೈನ್ಯದ ನಾಯಕನೇ ಬಾಯಿ ತುಂಬಾ ಹೊಗಳಬೇಕಾದರೆ ಗೋರಖಾಗಳ ಪರಾಕ್ರಮ ಇನ್ನೆಂಥದ್ದಿರಬೇಕು ಯೋಚಿಸಿ.

ಗೂರ್ಖಾಗಳ ಇತಿಹಾಸ:

ಗೂರ್ಖಾ ಎನ್ನುವುದು ನೇಪಾಲದ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಜಿಲ್ಲೆ. ಇಲ್ಲಿ ವಾಸಿಸುವವರೆಲ್ಲರೂ ಗೂರ್ಖಾಗಳು. ಗೂರ್ಖಾ ಎನ್ನುವುದು ಒಂದು ಜಾತಿಯಲ್ಲ, ಬದಲಾಗಿ ಸುನವರ್, ಗುರಾಂಗ್, ರಾಯ್, ಮಾಗರ್ ಮತ್ತು ಲಿಂಬೂ ಎಂಬಿತ್ಯಾದಿ ವಿಭಿನ್ನ ಸಮುದಾಯಗಳ ಜನರು ವಾಸಿಸುವ ಪ್ರದೇಶ. ಎಂಟನೇ ಶತಮಾನದಲ್ಲಿ ಇಸ್ಲಾಮಿನ ವಿರುದ್ಧ ತೊಡೆ ತಟ್ಟಿದ ಹಿಂದೂ ಸಂತ ಮತ್ತು ಯೋದ್ಧ ಗೋರಖನಾಥರಿಂದಾಗಿ ನೇಪಾಲದ ಈ ಪ್ರದೇಶಕ್ಕೆ ಗೋರಖಾ ಎನ್ನುವ ಹೆಸರು ಬಂತು. ರಾಜಸ್ಥಾನದ ರಜಪೂತ ರಾಜ ಪೃಥ್ವಿ ನಾರಾಯಣ ಶಾಹ್ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಕಾಲದಲ್ಲಿ ಅವರ ಸೈನ್ಯದ ಸೈನಿಕರನ್ನು ಗೋರ್ಖಾಲಿ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯೂ ಗೋರಖಾ ಆಗಿರುತ್ತಾನೆ. ಇಲ್ಲಿ ಮಕ್ಕಳು ಹುಟ್ಟಿದ ಕೂಡಲೇ “ಆಯೋ ಗೋರ್ಖಾಲೀ” ಎಂದು ಬೊಬ್ಬೆ ಹಾಕುತ್ತಾ ಕುಣಿಯುತ್ತಾರಂತೆ! ಚಿಕ್ಕಂದಿನಿಂದಲೇ ಇಲ್ಲಿಯ ಮಕ್ಕಳಿಗೆ ” ಹೆದರಿ ಬದುಕುವುದಕ್ಕಿಂತ ಸಾಯುವುದೇ ಲೇಸು” ಎನ್ನುವ ಪಾಠ ಹೇಳಿಕೊಡುತ್ತಾರಂತೆ. ಆದ್ದರಿಂದ ಇವರಿಗೆ ಮೃತ್ಯುವಿನ ಭಯವಿಲ್ಲ. ಇವರ ಮೈಯಲ್ಲಿ ರಕ್ತ ಹರಿಯುವದಿಲ್ಲ, ಬದಲಾಗಿ ಶೌರ್ಯವೇ ಹರಿಯುತ್ತದೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ.

ಗೂರ್ಖಾಗಳು ಪ್ರತ್ಯಕ್ಷ ಮಹಾಕಾಲನ ರೂಪ. ಇವರು ರಣರಂಗಕ್ಕಿಳಿದರೆಂದರೆ ಶತ್ರು ಸೈನ್ಯ ನರಕಕ್ಕೆ ಹೋಯಿತೆಂದೇ ಲೆಕ್ಕ. ಹದಿನೆರಡು ಇಂಚು ಉದ್ದದ ಚಿಕ್ಕ ತಲವಾರಿನಂತಿರುವ ಇವರ ಆಯುಧದ ಹೆಸರು ‘ಖುಖರೀ’. ಒಂದು ಬಾರಿ ಈ ಖುಖರೀ ಹೊರಗೆ ಬಂದಿತೆಂದರೆ ಶತ್ರುವಿನ ರಕ್ತ ತರ್ಪಣವಾಗದೇ ಅದು ಮತ್ತೆ ಒಳ ಸೇರುವುದೇ ಇಲ್ಲ. “ಜಯ ಮಾ ಕಾಲೀ, ಆಯೋ ಗೋರ್ಖಾಲೀ” ಎಂದು ಉದ್ಗೋಷ ಮೊಳಗುತ್ತಾ ರಣಾಗಂಣಕ್ಕೆ ಧುಮುಕುವ ಗೋರಖಾ ಸೈನಿಕರು ಥೇಟ್ ಮಹಾ ಕಾಳೀಯಂತೆ ಶತ್ರುವಿನ ರುಂಡ ಚೆಂಡಾಡುತ್ತಾರೆ. ಅದಕ್ಕೇ ಪ್ರಪಂಚದ ಅಷ್ಟೂ ದೇಶಗಳು ಗೋರಖಾ ಎಂದರೆ ಗಡ ಗಡ ನಡುಗುತ್ತಾರೆ.

ಗೋರಖಾ ರೆಜಿಮೆಂಟಿನ ಇತಿಹಾಸ:

1814 ರಲ್ಲಿ ಆಂಗ್ಲೋ-ನೇಪಾಲ ಯುದ್ದದಲ್ಲಿ ಗೂರ್ಖಾಗಳ ಪರಾಕ್ರಮಕ್ಕೆ ಮನಸೋತ ಬ್ರಿಟಿಷರು 1815 ರಲ್ಲಿ ಇವರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ. ಅಂದಿನಿಂದ ಇಂದಿನವರೆಗೂ ಗೋರಖಾಗಳು ಭಾರತೀಯ ಸೈನ್ಯದ ಭಾಗವಾಗಿದ್ದಾರೆ. ಬ್ರಿಟಿಷರು ಇವರನ್ನು “ಮಾರ್ಶಲ್ ರೇಸ್” ಎಂದು ಕರೆಯುತ್ತಿದ್ದರು. ಭಾರತವನ್ನು ಹೊರತು ಪಡಿಸಿ ನೇಪಾಲ ಮತ್ತು ಬ್ರಿಟಿಷ್ ಸೈನ್ಯಗಳಲ್ಲಿ ಮಾತ್ರ ಗೋರಖಾ ರೆಜಿಮೆಂಟ್ ಈಗಲೂ ಕಂಡು ಬರುತ್ತದೆ. ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ದ ಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಗೋರಖಾ ರೆಜಿಮೆಂಟಿನದ್ದು. ಇನ್ನೂ ಒಂದು ಹೆಗ್ಗಳಿಕೆಯೆಂದರೆ, ಗೂರ್ಖಾ ರೆಜಿಮೆಂಟ್ ಇದುವರೆಗೂ ಭಾಗವಹಿಸಿದ ಅಷ್ಟೂ ಯುದ್ದಗಳಲ್ಲಿ ಒಂದೇ ಒಂದು ಯುದ್ದವನ್ನೂ ಸೋತಿಲ್ಲ! 1947-48 ರ ಉರಿ ಸೆಕ್ಟರ್, 1962 ನ ಲಡಾಖ್ ಯುದ್ದ, 1965-1971 ನ ಜಮ್ಮು-ಕಾಶ್ಮೀರ ಯುದ್ದಗಳಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಶಾಂತಿ ಸ್ಥಾಪನೆಯ ಕಾರ್ಯಗಳಲ್ಲೂ ಗೂರ್ಖಾ ರೆಜಿಮೆಂಟನ್ನು ಬಳಸಿಕೊಳ್ಳಲಾಗಿದೆ.

ತನ್ನ ಪರಾಕ್ರಮದ ಪರಾಕಾಷ್ಠೆಗಾಗಿ ಗೋರಖಾ ರೆಜಿಮೆಂಟ್ ಮಹಾವೀರ ಚಕ್ರ ಮತ್ತು ಪರಮವೀರ ಚಕ್ರ ಎಂಬ ಸರ್ವೋಚ್ಚ ಪುರಸ್ಕಾರಗಳನ್ನು ಪಡೆದಿರುತ್ತದೆ. ಪ್ರಸ್ತುತ ಭಾರತೀಯ ಸೇನೆಯಲ್ಲಿ 1,20,000 ರಷ್ಟು ಗೋರಖಾ ಸೈನಿಕರಿದ್ದಾರೆ. ಇವರಲ್ಲಿ ಎಪ್ಪತ್ತು ಪ್ರತಿಶತ ನೇಪಾಳದವರಾದರೆ ಇನ್ನುಳಿದವರು ಭಾರತೀಯ ಗೋರಖಾಗಳಾಗಿರುತ್ತಾರೆ. ಗೂರ್ಖಾ ರೈಫಲ್ಸ್ ಒಂದರಲ್ಲೇ 80,000 ನೇಪಾಳೀ ಗೊರಖಾಗಳಿದ್ದಾರೆ. ನಿವೃತ್ತ ಗೋರಖಾ ಸೈನಿಕರು ಮಾತ್ರವಲ್ಲದೆ ಅಸ್ಸಾಮ್ ರೈಫಲ್ಸ್ ನಲ್ಲಿರುವ ಒಟ್ಟು ಗೋರಖಾಗಳ ಸಂಖ್ಯೆ ಸುಮಾರು ಒಂದು ಲಕ್ಷದಷ್ಟಿದೆ. ಗೂರ್ಖಾ ರೆಜಿಮೆಂಟ್ ನ ಪ್ರತಿಯೊಬ್ಬ ಸೈನಿಕನೂ ಒಂದು ಪರಮಾಣು ಬಾಂಬಿನಷ್ಟೇ ಶಕ್ತಿಯುಳ್ಳವನೆಂದರೆ ಅತಶಯೋಕ್ತಿಯಲ್ಲ. ಇಂತಹ ಸೈನಿಕರು ನಮ್ಮ ಸೈನ್ಯದಲ್ಲಿರುವುದು ನಮ್ಮ ಹೆಮ್ಮೆ. ಗೂರ್ಖಾಗಳಂತೆಯೇ ಪರಾಕ್ರಮಕ್ಕೆ ಹೆಸರಾದವರು ರಜಪೂತ, ಸಿಖ್ ಮತ್ತು ಮರಾಠಾ ರೆಜಿಮೆಂಟಿನ ಸೈನಿಕರು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಭಾರತೀಯ ಸೇನೆಗೆ ನಮ್ಮದೊಂದು ಸಲಾಂ. ಜೈ ಜವಾನ್….

-Sharvari

Tags

Related Articles

FOR DAILY ALERTS
 
FOR DAILY ALERTS
 
Close