ಪ್ರಚಲಿತ

ಹಿಂದೂಗಳಿಗೆ ಗುಡ್ ನ್ಯೂಸ್.! ಫೈಜಾಬಾದ್ ಜಿಲ್ಲೆ ಇನ್ನು ಅಯೋಧ್ಯೆ.! ದಶರಥ, ಶ್ರೀರಾಮನೇ ಇನ್ನು ಮುಂದೆ ಶಾಶ್ವತ.! ರಾಮ ರಾಜ್ಯವೇ ನಮ್ಮ ಗುರಿ ಎಂದ ಯೋಗಿ.!

ಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಾಣ ಮಾಡಬೇಕೆಂಬುವುದು ಕೋಟ್ಯಾಂತರ ಹಿಂದೂಗಳ ಆಶಯ ಹಾಗೂ ಶತಕಗಳ ಹೋರಾಟ. ಈ ಬಾರಿ ಅದು ಕೈಗೂಡುವ ಎಲ್ಲಾ ಸಾಧ್ಯತೆಗಳೂ ಇದೆ. ಈ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ದಿಟ್ಟ ನಿರ್ಧಾರ ಮತ್ತೊಂದು ಕ್ರಾಂತಿಗೆ ಕಾರಣವಾಗಿದೆ.

ಇತ್ತೀಚೆಗೆ ಅಲಹಬಾದ್ ಎಂಬ ಹೆಸರಿನ ನಗರವನ್ನು ಪುರಾತನ ಹೆಸರು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿ ಆದೇಶಿಸಿದ್ದರು. ಇದೀಗ ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಗೆ ಈವರೆಗೆ ಇದ್ದಂತಹ ಫೈಜಾಬಾದ್ ಎಂಬ ಹೆಸರನ್ನು ಬದಲಾಯಿಸಿ ಈಗ ಅಯೋಧ್ಯೆ ಎಂದು ಮರುನಾಮಕರಣ ಮಾಡಿದ್ದಾರೆ. ಈ ಮೂಲಕ ದಾಸ್ಯದಲ್ಲಿದ್ದ ಶ್ರೀರಾಮನ ಹುಟ್ಟೂರಿಗೆ ಮತ್ತೆ ನ್ಯಾಯ ಒದಗಿಸಿ ಆದೇಶ ನೀಡಿದ್ದಾರೆ. ಇನ್ನು ಮುಂದೆ ಫೈಜಾಬಾದ್ ಎಂಬ ಹೆಸರಿನ ಜಿಲ್ಲೆ ಅಯೋಧ್ಯೆ ಎಂದು ಮರುನಾಮಕರಣವಾಗಿದೆ.

ಇನ್ನು ಉತ್ತರ ಪ್ರದೇಶದ ಮೆಡಿಕಲ್ ಕಾಲೇಜೊಂದಕ್ಕೆ ದಶರಥ ಎಂದೂ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದಕ್ಕೆ ಶ್ರೀ ರಾಮ ಎಂದೂ ನಾಮಕರಣ ಮಾಡಲಾಗಿದೆ. ಈ ಮೂಲಕ ಈವರೆಗೆ ಅಕ್ರಮಣಕಾರಿ ಮುಸಲ್ಮಾನರು ಇಟ್ಟ ಹೆಸರಿನಲ್ಲಿ ಬದುಕುತ್ತಿದ್ದ ಭಾರತೀಯರು ಇಂದು ಹಳೇ ಹೆಸರನ್ನು ಮತ್ತೆ ವಿಜ್ರಂಭಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್ “ಭಾರತದ ಸಂಸ್ಕøತಿ ಜಗತ್ತಿಗೇ ಸಂದೇಶವಾಗಿದೆ. ಈವರೆಗೆ ಹಿಂದೂಗಳು ಅಕ್ರಮಣಕಾರಿಗಳ ಹೆಸರಿನಲ್ಲಿ ಬದುಕುತ್ತಿದ್ದೆವು. ಆದರೆ ಇನ್ನು ಹಾಗೆ ಆಗೋದಿಲ್ಲ. ರಾಮ ರಾಜ್ಯ ಕಲ್ಪನೆಯನ್ನು ನಮ್ಮ ಸರ್ಕಾರ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಹೀಗಾಗಿ ರಾಮ ರಾಜ್ಯವನ್ನಾಗಿ ಮಾಡೋದೇ ನಮ್ಮ ಗುರಿ. ಇಲ್ಲಿನ ಯಾವ ಹಿಂದೂಗಳಿಗೂ ಅನ್ಯಾಯವಾಗಲು ನಾವು ಬಿಡೋದಿಲ್ಲ” ಎಂದು ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪಾವಳಿ ಉತ್ಸವದಲ್ಲಿ ಹೇಳಿದ್ದಾರೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close