ಪ್ರಚಲಿತ

ಬಿಜೆಪಿ ಕಾರ್ಯಕರ್ತರಿಗೆ ಗುಡ್ ನ್ಯೂಸ್ ನೀಡಿದ ಜಾವ್ಡೇಕರ್..! ನಾಳೆಯೇ ಪ್ರಮಾಣ ವಚನಕ್ಕೆ ಬನ್ನಿ ಎಂದ ಬಿಜೆಪಿ ದಿಗ್ಗಜ..!

ನಿನ್ನೆಯಿಂದ ಭಾರೀ ಕೋಲಾಹಲಗಳಿಗೆ ಕಾರಣವಾಗಿದ್ದ ಅತಂತ್ರ ವಿಧಾನ ಸಭೆಯ ಫಲಿತಾಂಶದಿಂದ ರಾಜ್ಯದ ಜನತೆಯಲ್ಲಿ ಕುತೂಹಲಗಳೇ ಮೂಡಿದ್ದವು. ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಮುಖ್ಯಮಂತ್ರಿ ಆಗುವ ಆಸೆಯಿಂದ ಕಾಂಗ್ರೆಸ್ ಜೊತೆ ಕೈಜೋಡಿಸಿ ಮತ್ತೆ ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ ಇದೀಗ ಭಾರತೀಯ ಜನತಾ ಪಕ್ಷ ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದ್ದು ಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದ ಕುಮಾರ ಸ್ವಾಮಿಗೆ ಆಘಾತವಾಗಿದೆ. 

ಜಾವ್ಡೇಕರ್ ನೀಡಿದರು ಗುಡ್ ನ್ಯೂಸ್..!

ಭಾರತೀಯ ಜನತಾ ಪಕ್ಷ ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿರುವ ಪ್ರಕಾಶ್ ಜಾವ್ಡೇಕರ್ ರಾಜ್ಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಾಳೆನೇ ಸರ್ಕಾರ ರಚನೆ, ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರು ನಾಳೆನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ.

Image result for javadekar with yeddyurappa

“ರಾಜ್ಯದ ಯಾವುದೇ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ಗೊಂದಲ ಬೇಡ. ರಾಜ್ಯದ ಬಿಜೆಪಿ ನಾಯಕರಿಗೂ ಗೊಂದಲ ಬೇಡ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾಳೆ ಎಲ್ಲರೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ದರಾಗಿ ಅಷ್ಟೆ. ನಾಳೆ ಮುಂದಿನ ಸರ್ಕಾರದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಉಳಿದಂತೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ” ಎಂದು ಕರ್ನಾಟಕದ ಭಾರತೀಯ ಜನತಾ ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ ಜಾವ್ಡೇಕರ್ ತಿಳಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಪ್ರಕಾಶ್ ಜಾವ್ಡೇಕರ್ ಈ ರೀತಿ ಹೇಳಿದ್ದಾರೆ.   ಈ ಮೂಲಕ ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರೋದು ಶತ ಸಿದ್ಧ ಹಾಗೂ ಮುಂದಿನ 5 ವರ್ಷ ಭಾರತೀಯ ಜನತಾ ಪಕ್ಷವೇ ಸರ್ಕಾರ ನಡೆಸೋದು ಎಂಬ ಸಂದೇಶವನ್ನು ಸಾರಿದ್ದಾರೆ.

Image result for yeddyurappa

ಅತ್ತ ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷ ಕೂಡಾ ರಣತಂತ್ರವನ್ನು ಹೆಣೆಯುತ್ತಿದ್ದು ರಾಜ್ಯದ ಜನತೆಗೆ ಫುಲ್ ಕನ್‍ಫ್ಯೂಶನ್ ಆಗಿಬಿಟ್ಟಿದೆ. ಬಹುತೇಕ ಮಂದಿಗೆ ಈ ಬಾರಿ ಭಾರತೀಯ ಜನತಾ ಪಕ್ಷದ ಸರ್ಕಾವೇ ಬೇಕೆಂದು ಜನಾದೇಶ ನೀಡಿರುವುದರಿಂದ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು ಎಂಬ ಒಲವೂ ಇದೆ.

ಒಟ್ಟಾರೆ ಈ ಬಾರಿ ಅಧಿಕಾರದ ಗದ್ದುಗೆಯನ್ನು ಏರಲೇ ಬೇಕು ಹಾಗೂ ಕಾಂಗ್ರೆಸ್ ಮುಕ್ಯತ ಕರ್ನಾಟಕದ ಕನಸು ನನಸಾಗಿಸಬೇಕೆಂಬ ಜಿದ್ದಿಗೆ ಬಿದ್ದಿದ್ದಾರೆ. ಸ್ವತಃ ಭಾರತೀಯ ಜನತಾ ಪಕ್ಷದ ಚಾಣಾಕ್ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕಾರ್ಯತಂತ್ರಕ್ಕೆ ಇಳಿದಿದ್ದು ಸರ್ಕಾರ ರಚನೆ ಮಾಡೋದು ಪಕ್ಕಾ ಎನ್ನಲಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close