ಪ್ರಚಲಿತ

ಗುಡ್ ನ್ಯೂಸ್.! ಬಡವರ ಜೇಬಿಗೆ ಬೀಳಲಿದೆ 2,500ರೂ.! 15 ಲಕ್ಷ ಎಲ್ಲಿ ಎಂದು ಕೇಳುವವರಿಗೆ ಮೋದಿ ಬ್ರಹ್ಮಾಸ್ತ್ರ.!

2014ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು “ಕಾಂಗ್ರೆಸ್ಸಿಗರು ಲೂಟಿ ಹೊಡೆದ ಹಣಗಳಲ್ಲಿ ಬಡವರ ಪ್ರತಿ ಖಾತೆಗೆ 15 ಲಕ್ಷ ಹಣ ಹಾಕಬಹುದು” ಎಂದು ಹೇಳಿದ್ದರು. ಇದೇ ಮಾತನ್ನು ನೆಪವಾಗಿಟ್ಟುಕೊಂಡಿದ್ದ ವಿರೋಧಿಗಳು ಮೋದಿ ಪ್ರಧಾನಿ ಆಗುತ್ತಿದ್ದಂತೆ “15 ಲಕ್ಷ ಹಾಕುತ್ತೇನೆ ಎಂದು ಹೇಳಿದ್ದಿರಿ, ಎಲ್ಲಿದೆ ಆ ಹಣ” ಎಂದು ಕೇಳುತ್ತಿದ್ದಾರೆ. ಆದರೆ ಇದೀಗ ಸ್ವತಃ ಕಾಂಗ್ರೆಸ್ ಸಹಿತ ವಿರೋಧಿಗಳೇ ಬೆಚ್ಚಿ ಬೀಳುವಂತಹ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಳ್ಳುವ ನಿರೀಕ್ಷೆ ದಟ್ಟವಾಗಿದೆ.

ಬಡವರ ಜೇಬಿಗೆ 2,500.!

ಬಡ ರೇಖೆಗಿಂತ ಕೆಳಗಿರುವ, ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ತಿಂಗಳಿಗೆ 2,500 ರೂಗಳನ್ನು ಹಾಕುವ ಯೋಜನೆಗೆ ಪ್ರಧಾನಿ ಮೋದಿಯವರು ಮುಂದಾಗಿದ್ದಾರೆ. ಈಗಾಗಲೇ ಇದರ ತಯಾರಿ ನಡೆದಿದ್ದು ಶೀಘ್ರ ಘೋಷಣೆಯಾಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಈ ಹಿಂದಿನಿಂದಲೂ ಸಾಲಮನ್ನಾ ಯೋಜನೆಯ ವಿರುದ್ಧವಾಗಿರುವ ಪ್ರಧಾನಿ ಮೋದಿಯವರು ಈಗಲೂ ಇದೇ ನಿಲುವು ತಾಳಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಲಮನ್ನಾ ಯೋಜನೆಗಿಂತ “ರೈತಬಂಧು”ವಾದ ಈ ಯೋಜನೆ ಉತ್ತಮವಾದುದು ಎಂಬುವುದು ಪ್ರಧಾನಿ ಮೋದಿಯವರ ಅಭಿಪ್ರಾಯವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರ ಖಾತೆಗೆ ನೇರವಾಗಿ 2,500 ರೂಗಳು ಬೀಳಲಿದ್ದು ಇನ್ನು ಭೂಮಾಲೀಕರಿಗೆ ಎಕರೆಯೆಂತೆ ಪ್ರತೀ ವರ್ಷ 8000 ರೂಗಳಷ್ಟು ಹಣ ದೊರೆಯಲಿದೆ. ಭೂಮಿ ಗುತ್ತಿಗೆ ಪಡೆದಿರುವ ರೈತರಿಗೆ ಈ ಲಾಭ ಲಭ್ಯವಾಗೋದಿಲ್ಲ. ಇದರ ಹೊರತಾಗಿರುವ ಉಳಿದ ಭೂಮಾಲೀಕರಿಗೆ ಈ ಲಾಭ ಸಿಗಲಿದೆ.

ಇನ್ನು ರೈತಬಂಧು ಯೋಜನೆಗೆ ಅರ್ಹವಾದ ಫಲಾನುಭವಿಗಳಿಗೆ ಗ್ಯಾಸ್ ಸಬ್ಸಿಡಿ ದೊರೆಯುವುದಿಲ್ಲ. ಗ್ಯಾಸ್ ಸಬ್ಸಿಡಿಯನ್ನು ಕಡಿತಗೊಳಿಸಲಾಗುತ್ತದೆ. ಆದರೆ ಅದಕ್ಕಿತ 4 ಪಟ್ಟು ಹೆಚ್ಚು ಹಣವನ್ನು ಕುಳಿತಲ್ಲಿಯೇ ಪಡೆದುಕೊಳ್ಳಬಹುದಾದ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೊಳಿಸುವ ಸಿದ್ಧತೆಯಲ್ಲಿದ್ದಾರೆ.

ಈ ಯೋಜನೆಗೆ 32,000 ಕೋಟಿಗಳಷ್ಟು ಹಣವನ್ನು ಮೀಸಲಿಡಬೇಕಾಗುತ್ತದೆ. ಈಗಾಗಲೇ ಈ ಬಗ್ಗೆ ಚರ್ಚೆ ನಟಡೆದಿದ್ದು ಶೀಘ್ರ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಈ ಯೋಜನೆ ಜಾರಿಯಾಗಿದ್ದೇ ಆದಲ್ಲಿ ಪ್ರಧಾನಿ ಮೋದಿಯವರ ಮತ್ತೊಂದು ಮಹತ್ವದ ಯೋಜನೆ ಇದಾಗಲಿದೆ. ಮಾತ್ರವಲ್ಲದೆ ಲೋಕಸಭಾ ಚುನಾವಣೆಯಲ್ಲೂ ಪ್ರಧಾನಿ ಮೋದಿಯವರಿಗೆ ಆರ್ಥಿಕವಾಗಿ ಹಿಂದುಳಿದವರ ಬೆಂಬಲ ಪೂರ್ಣವಾಗಿ ದಕ್ಕಿಸಿಕೊಳ್ಳಬಹುದಾಗಿದೆ.

-ಸುನಿಲ್ ಪಣಪಿಲ

Tags

Related Articles

FOR DAILY ALERTS
 
FOR DAILY ALERTS
 
Close