ಪ್ರಚಲಿತ

ಶಬರಿಮಲೆಯ ಇತಿಹಾಸವನ್ನೇ ಧ್ವಂಸ ಮಾಡಿದ ಕಮ್ಯುನಿಸ್ಟ್ ಸರ್ಕಾರ.!ಪಿಣರಾಯಿ ಅಹಂಕಾರಕ್ಕೆ ಸುಟ್ಟುಹೋದ ದೇವರನಾಡು.!

ತಿಹಾಸ ಪ್ರಸಿದ್ಧ ಶಬರಿಮಲೆ ಕ್ಷೇತ್ರಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿರುವುದು ದೇಶಾದ್ಯಂತ ಹೋರಾಟಕ್ಕೆ ಮುನ್ನುಡಿ ಬರೆದಿದೆ. ದೇವರ ನಾಡು ಎಂದು ಕರೆಯಲ್ಪಡುವ ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ರಕ್ತಪಾತವೇ ನಡೆಯುತ್ತಿದೆ. ಅಯ್ಯಪ್ಪ ಭಕ್ತರನ್ನು ನಮಸ್ಕರಿಸಿ ಗೌರವಿಸುವ ಒಂದು ಕಾಲವಿತ್ತು, ಆದರೆ ಇದೀಗ ಕೇರಳದಲ್ಲಿ ಅಯ್ಯಪ್ಪ ಮಾಲೆ ಧರಿಸಿದ ಸ್ವಾಮಿಗಳ ಮೇಲೆಯೇ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಕೇರಳ ಕಮ್ಯುನಿಸ್ಟ್ ಸರಕಾರ ಸಂಪೂರ್ಣ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸಿದ್ದು, ಶಬರಿಮಲೆಯ ಆಚಾರ ವಿಚಾರಗಳನ್ನು ನಾಶ ಮಾಡುವ ಎಲ್ಲಾ ಪ್ರಯತ್ನಕ್ಕೆ ಸ್ವತಃ ಪಿಣರಾಯಿ ಸರಕಾರವೇ ಬೆಂಬಲವಾಗಿ ನಿಂತಿದೆ. ಕೇರಳದಲ್ಲಿ ಹಿಂದೂಗಳು ಜಾತಿ ಮತ ಬಿಟ್ಟು ಒಂದಾಗಿ ಪಿಣರಾಯಿ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ, ಇತ್ತ ಕಮ್ಯುನಿಸ್ಟ್ ಗೂಂಡಾಗಳು ಬಿಜೆಪಿ ಸಂಸದರ ಮನೆ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೆ ಆರ್‌ಎಸ್‌ಎಸ್‌ ಕಛೇರಿ ಮೇಲೆ ಬಾಂಬ್ ದಾಳಿ ನಡೆಸಿ ಮತ್ತೊಂದು ವಿಧ್ವಂಸಕ ಕೃತ್ಯ ಎಸಗಿ , ಹದಗೆಟ್ಟಿರುವ ಕೇರಳದಲ್ಲಿ ಪುನಃ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಪೋಲೀಸರ ಸಮ್ಮುಖದಲ್ಲೇ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದರೂ ಕೂಡ ಪೊಲೀಸರು ಕೈಕಟ್ಟಿ ನಿಂತು ಕಮ್ಯುನಿಸ್ಟ್ ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದು ಕೇರಳ ಯಾವ ಸ್ಥಿತಿಗೆ ಬಂದು ತಲುಪಿದೆ ಎಂಬುದು ಗೋಚರಿಸುತ್ತದೆ.!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಛೇರಿ ಮೇಲೆ ದಾಳಿ!

ಕೇರಳದಲ್ಲಿ ಕಮ್ಯುನಿಸ್ಟರ ಅಟ್ಟಹಾಸಕ್ಕೆ ಈಗಾಗಲೇ ಓರ್ವ ಅಯ್ಯಪ್ಪ ಭಕ್ತನೂ ಆಗಿರುವ ಬಿಜೆಪಿ ಕಾರ್ಯಕರ್ತ ಬಲಿಯಾಗಿದ್ದು, ಅನೇಕ ಅಯ್ಯಪ್ಪ ಮಾಲೆ ಧರಿಸದ ವ್ಯಕ್ತಿಗಳ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಇಷ್ಟಾದರೂ ಕೂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ರಕ್ತಪಾತಕ್ಕೆ ಬೆಂಬಲ ನೀಡಿದ್ದು ಶಬರಿಮಲೆ ಕ್ಷೇತ್ರದ ತಂತ್ರಿಗಳನ್ನೇ ರಾಜೀನಾಮೆ ಕೊಟ್ಟು ತೆರಳಿ ಎಂದು ಹೇಳಿಕೊಂಡಿದ್ದಾನೆ. ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿದ ದೇವಾಲಯದ ತಂತ್ರಿಗಳು, ರಾಜೀನಾಮೆ ನೀಡಿ ತೆರಳಲು ನಾನೇನು ನಿಮ್ಮ ಪಕ್ಷದ ಸದಸ್ಯ ಅಲ್ಲ ಎಂದು ಖಡಕ್ಕಾಗಿ ಹೇಳಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಗೂಂಡಾಗಳು ಆರ್‌ಎಸ್ಎಸ್ ಕಛೇರಿಯ ಮೇಲೆ ಬಾಂಬ್ ದಾಳಿ ನಡೆಸಿದ್ದು, ಬಿಜೆಪಿ ಸಂಸದನ ಮನೆಗೂ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ತನಿಖೆಯ ವೇಳೆ ನಾಡ ಬಾಂಬ್ ಎಂದು ಪತ್ತೆಹಚ್ಚಿದ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.!

ಶಬರಿಮಲೆಗೆ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಈಗಾಗಲೇ ಬಿಜೆಪಿ ಮತ್ತು ಇತರ ಸಂಘಪರಿವಾರಗಳು ಕೇರಳ ರಾಜ್ಯದಲ್ಲಿ ಹರಾತಾಳ ನಡೆಸಿ ವಿರೋಧ ವ್ಯಕ್ತಪಡಿಸಿದ್ದು ಪರಿಸ್ಥಿತಿ ಹದಗೆಡುತ್ತಿದೆ. ಇಷ್ಟಾದರೂ ಕೂಡ ಪಿಣರಾಯಿ ಸರಕಾರ ಮಾತ್ರ ತನ್ನ ಪಕ್ಷದ ಕಾರ್ಯಕರ್ತರನ್ನು ಬಂಧಿಸದೆ ಕೇವಲ ಸಂಘಪರಿವಾರದ ಕಾರ್ಯಕರ್ತರ ಮೇಲೆ ದೂರು ದಾಖಲಿಸಿ ಬಂಧಿಸುವ ಕೆಲಸ ಮಾಡುತ್ತಿದೆ.

Image result for sabarimala protest

ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ ಅಯ್ಯಪ್ಪ ಭಕ್ತರು!

ಶಬರಿಮಲೆ ವಿಚಾರವಾಗಿ ಹಿಂದೂಗಳ ಮೇಲೆಯೇ ದಾಳಿಗಳಾಗುತ್ತಿದ್ದು ಕೇರಳದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಅಯ್ಯಪ್ಪ ಮಾಲೆ ಧರಿಸಿದ ವ್ಯಕ್ತಿಗಳನ್ನು ಕೂಡ ಬಿಡದ ಕಮ್ಯುನಿಸ್ಟ್ ಗೂಂಡಾಗಳು ಸಿಕ್ಕ ಸಿಕ್ಕಲ್ಲಿ ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಭಕ್ತರು ಕೂಡ ಸಿಪಿಎಂ ಪಕ್ಷದ ಶಾಸಕನಾದ ಶಂಸೀರ್ ಎಂಬಾತನ ಮೇಲೆ ದಾಳಿ ನಡೆಸಿದೆ. ರಾತ್ರಿ ಹೊತ್ತಲ್ಲಿ ನಾಡ ಬಾಂಬ್ ದಾಳಿ ನಡೆಸಿದ ಒಂದು ಗುಂಪು ಘಟನೆ ನಡೆದ ನಂತರದಲ್ಲಿ ನಾಪತ್ತೆಯಾಗಿದೆ. ಪೊಲೀಸರು ಕೆಲವು ಸಂಘಟನೆಗಳ ಮುಖಂಡರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು, ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ದೇವರ ನಾಡು ಎಂದು ಕರೆಯಲ್ಪಡುವ ಕೇರಳ ಇಂದು ರಾಕ್ಷಸರ ನಾಡಾಗಿ ಪರಿವರ್ತನೆಗೊಂಡಿದೆ. ಕಮ್ಯುನಿಸ್ಟರು ಈ ಘಟನೆಯ ಹಿಂದೆ ಸಂಘಪರಿವಾರದ ಕಾರ್ಯಕರ್ತರ ಕೈವಾಡ ಇದೆ ಎಂದು ಆರೋಪಿಸಿದ್ದು, ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ.!

ಶಾಂತಿ ಕಾಪಾಡಬೇಕಾಗಿದ್ದ ಸರಕಾರವೇ ಅಶಾಂತಿ ಸೃಷ್ಟಿಸಿ ಸಂತೋಷ ಪಡುತ್ತಿದ್ದು, ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಸರಕಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸರು ಕೂಡ ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದು, ಮತ್ತಷ್ಟು ಅಹಿತಕರ ಘಟನೆಗಳು ನಡೆಯಲು ಕುಮ್ಮಕ್ಕು ನೀಡುತ್ತಿದ್ದಾರೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close