ಪ್ರಚಲಿತ

ಬ್ರೇಕಿಂಗ್: ಬಿಜೆಪಿಗೆ ಗುಡ್ ನ್ಯೂಸ್ ನೀಡಿದ ರಾಜ್ಯಪಾಲರು..! ಬಿಜೆಪಿ ಅಧಿಕಾರಕ್ಕೆ ಶತ ಸಿದ್ಧ…!

25K Shares

ಯಾವಾಗ ಭಾರತೀಯ ಜನತಾ ಪಕ್ಷದ ಸಂಖ್ಯಾಬಲ 104ಕ್ಕೆ ಕುಸಿತ ಕಂಡಿತೋ ಆ ಸಮಯದಿಂದ ರಾಜಕೀಯ ಡೊಂಬರಾಟಗಳು ಬಹಳನೇ ಜೋರಾಗಿಯೇ ನಡೆಯುತ್ತಿದೆ. ಭಾರತೀಯ ಜನತಾ ಪಕ್ಷವನ್ನು ಶತಾಯ ಗತಾಯ ಅಧಿಕಾರಕ್ಕೇರಲು ಬಿಡಬಾರದು ಎಂದು ಹಠವನ್ನು ಹೊಂದಿದ್ದ ಕಾಂಗ್ರೆಸ್ ಹಾಗೂ ಜನತಾ ದಳದ ನಾಯಕರಿಗೆ ರಾಜ್ಯಪಾಲರು ಶಾಕ್ ನೀಡಿದ್ದಾರೆ.

ಭಾರತೀಯ ಜನತಾ ಪಕ್ಷದ ನಿಯೋಗದ ಮನವಿಯ ಮೇರೆಗೆ ಈ ಬಾರಿ ಸರ್ಕಾರ ರಚನೆಗೆ ಬರುವಂತೆ ಆಹ್ವಾನ ನೀಡಿದ್ದರೆ. 104ಕ್ಕೆ ಭಾರತೀಯ ಜನತಾ ಪಕ್ಷದ ಸ್ಥಾನಗಳು ಕುಸಿತ ಕಂಡೊಡನೆ ವಿರೋಧ ಪಕ್ಷಗಳು ಭಾರೀ ಜಿಗಿತವನ್ನು ಕಂಡಿದ್ದವು. ಹೇಗಾದರೂ ಮಾಡಿ ಕಮಲವನ್ನು ಮುದುಡಿಸಬೇಕು ಎಂಬ ಹಠ ಹೊಂದಿದ್ದ ವಿರೋಧಿ ಪಡೆಗಳು ಒಂದಾಗಿ ಸರ್ಕಾರ ರಚನೆಗೆ ಮುಂದಾಗಿತ್ತು.

ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಮುಖ್ಯತಮಂತ್ರಿ ಪಟ್ಟವನ್ನು ನೀಡಿ ಕಾಂಗ್ರೆಸ್‍ಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡೋದು ವಿರೋಧಿ ಪಡೆಗಳ ಲೆಕ್ಕಾಚಾರ. ಆದರೆ ಈ ಎಲ್ಲಾ ಲೆಕ್ಕಾಚಾರಗಳನ್ನು ರಾಜ್ಯಪಾಲರು ಉಲ್ಟಾ ಮಾಡಿದ್ದಾರೆ. ಸಹಜವಾಗಿಯೇ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚಿಸುವಂತೆ ಆಫರ್ ನೀಡಿದ್ದಾರೆ.

Image result for yeddyurappa

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕ ಮುರುಳೀಧರ್ ರಾವ್, ಸಂಸದೆ ಶೋಭಾ ಕರಂದ್ಲಾಜೆ ಸಹಿತ ನಾಯಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಮಾಡಿತ್ತು.

ಆದರೆ ಇದರ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಈ ವೇಳೆ ಕುತೂಹಲ ಗರಿಗೆದರಿತ್ತು. ಆ ಕೂಡಲೇ ಮೈತ್ರಿ ಮಾಡಲು ಹೊರಟಿರುವ ಉಭಯ ನಾಯಕರು ಸುದ್ಧಿಗೋಷ್ಟಿ ನಡೆಸಿ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದರ ಮಧ್ಯೆಯೇ ರಾಜ್ಯಪಾಲರು ಭಾರತೀಯ ಜನತಾ ಪಕ್ಷಕ್ಕೆ ಗುಡ್ ನ್ಯೂಸ್ ನೀಡಿದ್ದಾರೆ.

Related image

ಅತಿದೊಡ್ಡ ಸರ್ಕಾರವಾಗಿ ಹೊರಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿಯ ಸರ್ಕಾರ ಮಾಡಲು ಅವಕಾಶ ಇದೆ. ಆದರೆ ಬಹುಮತವನ್ನು ಸಾಭೀತು ಪಡಿಸಬೇಕು. ಬಹುಮತ ಸಾಭೀತು ಪಡಿಸುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ನಿಯೋಗ ನೀಡಿದ್ದರಿಂದ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿದೆ.

ಒಟ್ಟಾರೆ ಈ ಬಾರಿ ಯಡಿಯೂರಪ್ಪ ನೇತೃತ್ವದ ಭಾರತೀಯ ಜನಾತ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವುದು ಶತ ಸಿದ್ಧ ಎಂದು ಹೇಳಲಾಗುತ್ತಿದ್ದು ಇಂದು ಸಂಜೆ ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ ಸಭೆಯೂ ನಡೆಲಿದೆ.

-ಸುನಿಲ್ ಪಣಪಿಲ

25K Shares
Tags

Related Articles

FOR DAILY ALERTS
Close