ಪ್ರಚಲಿತ

ಮತ್ತೆ ವಿಭಜನೆ ಮಂತ್ರ! ಭಾರತದಿಂದ ಮತ್ತೊಂದು ಮುಸ್ಲಿಂ ರಾಷ್ಟ್ರ ಬೇಕಂತೆ! ಕಾಂಗ್ರೆಸ್ ನಾಯಕರು ಈ ಕೃತ್ಯಗಳಿಗೆ ಬೆಂಬಲ ನೀಡುವ ಹಿಂದಿರುವ ಮರ್ಮವೇನು?

1947ರಲ್ಲೇ ಪಾಕಿಸ್ಥಾನವೆಂಬ ರಾಷ್ಟ್ರ ಭಾರತದಿಂದ ವಿಭಜನೆಯಾಗಿ ಹೋದಾಗ ಅದೆಷ್ಟೋ ಪ್ರಾಣ ಹಾನಿಗಳು ಸಂಭವಿಸಿದೆ. ಭಾರತದಿಂದ ರಾಷ್ಟ್ರವೊಂದನ್ನು ವಿಭಜನೆ ಮಾಡಿದಾಗ ಸಂಭವಿಸಿದ ಸಾವು ನೋವು ಅಷ್ಟಿಷ್ಟಲ್ಲ. ಒಂದು ಕಡೆ ಆ ಪಾಕಿಸ್ಥಾನದಿಂದ ಭಾರತಕ್ಕೆ ಓಡಿ ಬರುವ ಹಿಂದೂಗಳು, ಮತ್ತೊಂದೆಡೆ ದೇಶವಿಭಜನೆಯನ್ನು ವಿರೋಧಿಸಿ ಅಂದಿನ ನೆಹರೂ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಭಾರತೀಯರು. ಈ ಮಧ್ಯೆ ತಣ್ಣಗೆ ತನ್ನ ಕೆಲಸವನ್ನು ಮುಗಿಸಿ ಮುಂದಿನ ಹತ್ತು ತಲೆಮಾರಿಗೆ ತಾನು ಹಾಗೂ ತನ್ನ ಕುಟುಂಬವೇ ಪ್ರಧಾನಿ ಎಂದು ಸಂತಸಪಟ್ಟುಕೊಳ್ಳುತ್ತಿದ್ದ ಜವಹರಲಾಲ್ ನೆಹರೂ.

ಅಂದಿನ ರಾಷ್ಟ್ರವಿಭಜನೆಯ ಕಹಿ ನೆನಪು ಭಾರತೀಯರ ಮನದಿಂದ ಇನ್ನೂ ಮಾಸಿಲ್ಲ. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುವ ಮುನ್ನ ಆಗಸ್ಟ್ 14ರಂದು ನಡೆದಿದ್ದ ಭಾರತ ವಿಭಜನೆಯೆಂಬ ಆ ಕರಾಳ ದಿನವನ್ನೂ ಭಾರತೀಯರು ಇಂದಿಗೂ ನೆನಪಿಸಿಕೊಳ್ಳುವಂತಾಗಿದೆ. ವಿವಿಧ ಸಂಘಟನೆಗಳಿಂದ ಆಗಸ್ಟ್ 14ರಂದು ರಾತ್ರಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯನ್ನೂ ಹಮ್ಮಿಕೊಂಡು ಆ ಕರಾಳ ದಿನದ ಮೆಲುಕನ್ನು ಇಂದಿಗೂ ಹಾಕಲಾಗುತ್ತಿದೆ. ಅಂದಿನ ವೀರ ಸ್ವಾತಂತ್ರ್ಯ ಹೋರಾಟದ ಕಿಚ್ಚು ಇಂದಿನ ಪ್ರತಿಯೋರ್ವ ಯುವಕನಿಗೂ ಸ್ಪೂರ್ತಿದಾಯಕವಾಗಿರುತ್ತದೆ.

ಅಂದು ಪಾಕಿಸ್ಥಾನವನ್ನು ಪ್ರತ್ಯೇಕ ರಾಷ್ಟ್ರಮಾಡಿ ನೀಡಿದ್ದಾಗ ಮುಸ್ಲಿಂ ನಾಯಕರು ಆ ಭಾಗದಲ್ಲಿದ್ದ ಹಿಂದೂಗಳನ್ನು ಹೊರಹಾಕಿದ್ದರು. ಹಿಂಸೆ ನೀಡಿ ಹೊರದಬ್ಬಿದ್ದರು. ಅದೆಷ್ಟೋ ಹಿಂದೂ ಕುಟುಂಬಗಳು ಪಾಕಿಸ್ಥಾನದಿಂದ ನೂಕಲ್ಪಟ್ಟು ಆಶ್ರಯವಿಲ್ಲದೆ ನಿರಾಶ್ರಿತರಾಗಿದ್ದರು. ಸಾವಿರಾರು ಹಿಂದೂಗಳು ತಮ್ಮ ನೆತ್ತರು ಹರಿಸಿಕೊಂಡು ನೆಲಕ್ಕುರುಳಿದ್ದರು. ಆದರೆ ಇಲ್ಲಿ (ಭಾರತ) ಮಾತ್ರ ಎಲ್ಲವೂ ಉಲ್ಟಾ ಆಗಿತ್ತು. ಸ್ವಾತಂತ್ರ್ಯ ನೀಡಿದ್ದ ಮಹಾತ್ಮ ಎಂದು ಕರೆಸಿಕೊಂಡ ಗಾಂಧೀ ಹಾಗೂ ನೆಹರೂ ಗುಂಪುಗಳು ಭಾರತದಲ್ಲಿರುವ ಎಲ್ಲಾ ಮುಸಲ್ಮಾನರು ಇಲ್ಲೇ ಇರಿ. ನಿಮ್ಮನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಭಾರತದಲ್ಲಿ ರಕ್ತಪಾತಕ್ಕೆ ಅಂದೇ ಮುನ್ನುಡಿಯಿಟ್ಟಾಗಿತ್ತು. ನಂತರ ನಡೆದದ್ದೇ ಓಲೈಕೆಯ ರಾಜಕಾರಣ. ಓಟಿನ ಆಸೆಗಾಗಿ ತುಷ್ಟೀಕರಣ ನಡೆಸಿ ಹಿಂದೂಗಳನ್ನು ಜಾತಿ ಜಾತಿಯಂತೆ ಒಡೆದು ಹಾಕಿ ಸ್ವಾತಂತ್ರ್ಯ ನಂತರವೂ ಭಾರತವನ್ನು ಚಿಂತಾಕ್ರಾಂತಿಗೆ ದೂಡಿತ್ತು. ಭಾರತ ಅಕ್ಷರಷಃ ತಲ್ಲಣಗೊಂಡಿತ್ತು.

ಮತ್ತೆ ಬೇಕಂತೆ ಪ್ರತ್ಯೇಕ ರಾಷ್ಟ್ರ..!

ಅಂದು ಕೊಬ್ಬಿದ ಭಾರತದಲ್ಲಿನ ಮುಸಲ್ಮಾನರ ಅಹಂಕಾರದ ಮದ ಇಂದಿಗೂ ಇಳಿದಿಲ್ಲ. ಕಳೆದ ಅಷ್ಟೂ ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ನಾಯಕರು ಈ ಮುಸ್ಲಿಂ ನಾಯಕರನ್ನು ಓಟಿಗಾಗಿ ಹಿಂದೂಗಳ ವಿರುದ್ಧ ಅಥವಾ ಸಂಘಪರಿವಾರದ ವಿರುದ್ಧ ಎತ್ತಿಕಟ್ಟಿ ಕೋಮುಧ್ವೇಷ ಸೃಷ್ಟಿಸುವಂತಹಾ ಹುನ್ನಾರ ನಡೆಸಿದ್ದರು. ಇಂದಿಗೂ ನಡೆಸುತ್ತಿದ್ದಾರೆ. ಅದೆಷ್ಟೋ ಬಾರಿ ಭಾರತದಲ್ಲಿ ಹಿಂದೂ-ಮುಸ್ಲಿಂ ಗಲಾಟೆಗಳು ಸಂಭವಿಸಿದೆ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಎಂಬುವುದು ಗುಟ್ಟಾಗಿ ಉಳಿದಿಲ್ಲ.

2014ರವರೆಗೂ ಬಾಯಿ ಮುಚ್ಚಿಕೊಂಡು ಕಾಂಗ್ರೆಸ್ ಆಡಳಿತದಿಂದ ಆರಾಮಾಗಿ ರಾಜಗಾಂಭೀರ್ಯದಿಂದ್ದಿದ್ದ ಮುಸ್ಲಿಂ ನಾಯಕರೆನಿಸಿಕೊಂಡವರು ಇದೀಗ ತಮ್ಮ ಬಾಲವನ್ನು ಬಿಚ್ಚುತ್ತಿದ್ದಾರೆ. ಯಾಕೆಂದರೆ ಅಂದು ಮೋದಿ ಯುಗ ಅರ್ಥಾತ್ ಹಿಂದೂ ಯುಗ ಆರಂಭವಾಗಿತ್ತು. ಇನ್ನೇನು ಭಾರತ ಹಿಂದೂ ರಾಷ್ಟ್ರವಾಗುತ್ತೆ ಎನ್ನುವ ಭೀತಿಯಿಂದ ಮೋದಿ ಆಡಳಿತವನ್ನು ಮನಬಂದಂತೆ ನಿಂದಿಸಲು ಶುರುವಿಟ್ಟುಕೊಳ್ಳುತ್ತಾರೆ. ಆರಂಭದಲ್ಲಿ ಕಾಂಗ್ರೆಸ್ ನಾಯಕರು ಬಿಟ್ಟ ಅಸಹಿಷ್ಣುತೆ ಎಂಬ ಅಸ್ತ್ರ ದೇಶದಲ್ಲಿ ಸಖತ್ತಾಗಿಯೇ ಪ್ರಚಾರ ಗಿಟ್ಟಿಸಿಕೊಂಡಿತ್ತು. ಆದರೆ ಅಷ್ಟೇ ಬೇಗ ಅಸಹಿಷ್ಣು ಮಂತ್ರ ಪ್ರಚಾರಕರ ಬಾಯಿಗೆ ಬೀಗವೂ ಬಿದ್ದಿತ್ತು.

ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ಕಾನೂನು ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿತ್ತು. ಅದರಲ್ಲೂ ಕಾಂಗ್ರೆಸ್ ಆಡಳಿತದಲ್ಲಿ ಪ್ರೋತ್ಸಾಹವನ್ನು ಪಡೆದುಕೊಂಡಿದ್ದ ಕೆಲ ಅಸಂವಿಧಾನಿಕ ಕಾನೂನನ್ನೇ ಮೋದಿ ಮುರಿದುಬಿಟ್ಟಿದ್ದರು. ತ್ರಿಪಲ್ ತಲಾಕ್ ಸಹಿತ ಅನೇಕ ಕಾನೂನಗಳನ್ನು ಮೋದಿ ನಿಷೇಧಗೊಳಿಸಿದ್ದರು. ಇದರಿಂದ ಮುಸ್ಲಿಂ ಮಹಿಳೆಯರಿಗೆ ಭಾರೀ ಅನುಕೂಲವಾದರೆ ಕಾಂಗ್ರೆಸ್ ನಾಯಕರಿಗೆ ಇದರಿಂದ ಭಾರೀ ಹೊಡೆತವನ್ನೇ ನೀಡಿತ್ತು.

ಇದನ್ನೆಲ್ಲಾ ಗಮನಿಸಿಕೊಂಡೇ ಬಂದಿದ್ದ ಭಾರತದ ಮುಸ್ಲಿಮರ ತಂಡ ಅಂದರೆ ಮೋದಿ ವಿರೋಧಿ ಹಾಗೂ ರಾಷ್ಟ್ರವಿರೋಧಿ ಮುಸ್ಲಿಮರು ಮತ್ತೆ ಪ್ರತ್ಯೇಕ ಭಾರತವನ್ನು ಕೇಳಿದ್ದಾರೆ. ಭಾರತದಲ್ಲಿ ಇರುವ ಸಂವಿಧಾನ ಹಾಗೂ ಅದರ ಅಡಿಯಲ್ಲಿ ಬರುವ ಕಾನೂನನ್ನು ನಾವು ಒಪ್ಪಿಕೊಳ್ಳೋದಿಲ್ಲ. ನಮಗೆ ಪ್ರತ್ಯೇಕ ನ್ಯಾಯಾಲಯ ಬೇಕು. ಕೊಲೆ, ದರೋಡೆ, ಅತ್ಯಾಚಾರದಂತಹ ಪ್ರಕರಣಗಳನ್ನು ನಾವೇ ನಮ್ಮ ಮುಸ್ಲಿಂ ಧರ್ಮದ ಶರಿಯತ್ ಎಂಬ ನ್ಯಾಯಾಲಯದಲ್ಲಿ ತೀರ್ಮಾಣ ಮಾಡುತ್ತೇವೆ. ನಮಗೆ ಪ್ರತ್ಯೇಕ ನ್ಯಾಯಾಲಯ ಕೊಡಿ ಇಲ್ಲವಾದರೆ ಪ್ರತ್ಯೇಕ ರಾಷ್ಟ್ರ ಕೊಡಿ ಎಂದು ಮುಸ್ಲಿಂ ಮುಖಂಡರು ಕೇಳಿದ್ದಾರೆ. ಜಮ್ಮು-ಕಾಶ್ಮೀರದ ಡೆಪ್ಯುಟಿ ಗ್ರಾಂಡ್ ಮುಫ್ತಿ ನಾಸಿರ್ ಉಲ್ ಇಸ್ಲಾಂ ಈ ಮಾತನ್ನು ಹೇಳಿದ್ದಾನೆ.

ಪ್ರತ್ಯೇಕ ಕೋರ್ಟ್ ನೀಡದಿದ್ದರೆ ನಮಗೆ ಪ್ರತ್ಯೇಕ ರಾಷ್ಟ್ರವನ್ನೇ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಆ ಮೌಲ್ವೀ ಆಗ್ರಹ ಮಾಡಿದ್ದಾನೆ. “ನಮ್ಮನ್ನು ಕಾಯುವ ಪಕ್ಷ ನಮಗೆ ಬೇಕಾಗಿದೆ. ಇಲ್ಲಿ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದೆ. ಮೋದಿ ಪ್ರಧಾನಿಯಾಗೋವರೆಗೂ ಭಾರತದಲ್ಲಿ ನಮಗೆ ಉಳಿಗಾಲವಿಲ್ಲ. ಮುಸ್ಲಿಮರೆಂದರೆ ಮೋದಿ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಇಷ್ಟವಿಲ್ಲ, ಹೀಗಾಗಿ ನಮಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಆಗ್ರಹಿಸಿದ್ದಾನೆ. ಕೆಲ ಮುಸ್ಲಿಮರೂ ಮೋದಿಯನ್ನು ಹಿಂಬಾಲಿಸುವುದನ್ನು ಸಹಿಸಲಾಗದ ಶರಿಯತ್ ಮುಸ್ಲಿಂ ಮುಖಂಡ ಈ ರೀತಿ ಹೇಳಿದ್ದಾನೆ. ಈ ಮೂಲಕ ಮತ್ತೆ ವಿಭಜನೆಯ ಸೂತ್ರವನ್ನು ಮುಂದಿಟ್ಟಿದ್ದಾನೆ.

ಈ ಹಿಂದೆ ಜನವರಿಯಲ್ಲಿಯೇ ಹೇಳಿಕೆ ನೀಡಿದ್ದ ಈ ಶರಿಯತ್ ಮುಸ್ಲಿಂ ನಾಯಕರು ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ವಿರುದ್ಧ ಕೆಂಡ ಕಾರಿದ್ದರು. ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿನ ಮುಸಲ್ಮಾನರನ್ನು ಬೆದರಿಸುತ್ತಿದ್ದಾರೆ. ಲವ್ ಜಿಹಾದ್, ತ್ರಿಪಲ್ ತಲಾಖ್, ಗೋಹತ್ಯೆ, ಕೊಲೆಗಳಂತಹ ಕೃತ್ಯಗಳ ವಿಚಾರವಾಗಿ ಮುಸ್ಲಿಂ ಸಮಾಜವನ್ನು ನಿಂದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದನು. ಇದನ್ನು ಶರಿಯತ್ ನಾಯಕ ಅಂದರೆ ಗ್ರಾಂಡ್ ಮುಫ್ತಿ ಕೂಡಾ ಒಪ್ಪಿಕೊಂಡು ಅದನ್ನು ಸಮರ್ಥಿಸಿಕೊಂಡಿದ್ದ. ಆದರೆ ಇದೀಗ ನಮಗೆ ಪ್ರತ್ಯೇಕ ರಾಷ್ಟ್ರವನ್ನೇ ನೀಡಬೇಕು ಎನ್ನುತ್ತಿರುವ ಮುಸ್ಲಿಂ ನಾಯಕರ ಹುಚ್ಚುತನ ಮಿತಿಮೀರುವತ್ತ ದಾಟುತ್ತಿದೆ.

ಕಾಂಗ್ರೆಸ್ ಬೆಂಬಲ..!

ಮುಸ್ಲಿಂ ಮೂಲಭೂತವಾದಿಗಳಿಗೆ ಹಾಗೂ ಅವರ ಕುಕೃತ್ಯಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡೋದು ಹೊಸ ವಿಚರವೇನಲ್ಲ. ಆದರೆ ಇದೀಗ ರಾಷ್ಟ್ರವನ್ನೇ ವಿಭಜಿಸಿ ಎನ್ನುತ್ತಿರುವ ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ಬಹಿರಂಗವಾಗಿಯೇ ಬೆಂಬಲ ನೀಡಿದ್ದು ಭಾರತೀಯರಲ್ಲಿ ಆಕ್ರೋಶ ಮೂಡುವಂತಾಗಿದೆ. ಶರಿಯತ್ ನಾಯಕರ ಮಾತುಗಳನ್ನು ಸಮರ್ಥಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಮುಸ್ಲಿಂ ನಾಯಕರ ಪ್ರತ್ಯೇಕ ಕಾನೂನು ಹಾಗೂ ಪ್ರತ್ಯೇಕ ರಾಷ್ಟ್ರಕ್ಕೆ ಬೆಂಬಲ ನೀಡಿದ್ದಾನೆ. ಓರ್ವ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ಇಂತಹಾ ಹೇಳಿಕೆಯನ್ನು ನೀಡಿ ದೇಶದ್ರೋಹ ಮೆರೆದಿರುವುದು ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಇನ್ನು ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಮುಸ್ಲಿಂ ನಾಯಕರೊಂದಿಗೆ ರಹಸ್ಯ ಸಭೆ ನಡೆಸಿದ್ದು ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಇನ್ನು ಮುಂದೆ ಉಗ್ರ ಚಟುವಟಿಕೆ ಸಹಿತ ಮುಸ್ಲಿಮರ ಯಾವುದೇ ಅಕ್ರಮ ಹಾಗೂ ಕಾನೂನು ಬಾಹಿರ ಕೃತ್ಯಗಳು ಭಾರತದಲ್ಲಿ ನಡೆಯೋದಿಲ್ಲ ಎಂದು ತಿಳಿದ ಮುಸ್ಲಿಂ ಮುಖಂಡರು ಇದೀಗ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿರುವುದು ಅವರ ಅಹಂಕಾರ ಹಾಗೂ ಈ ಅಹಂಕಾರಕ್ಕೆ ಬೆನ್ನುಲುಬಾಗಿ ಕಾಂಗ್ರೆಸ್ ನಿಂತಿರುವುದು ದೇಶದ್ರೋಹದ ಪರಮಾವಧಿಯಾಗಿದೆ ಎಂಬುವುದರಲ್ಲಿ ಸಂದೇಹವೇ ಇಲ್ಲ. ಮೋದಿಯನ್ನು ಸೋಲಿಸಲು ಮತ್ತೆ ಇಂತಹಾ ನಾಟಕಗಳನ್ನು ವಿರೋಧಿಗಳು ಆಡುತ್ತಿದ್ದಾರೆ. ಆದರೆ ಇದು ಠುಸ್ ಪಟಾಕಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

  • ಸುನಿಲ್ ಪಣಪಿಲ
Tags

Related Articles

FOR DAILY ALERTS
 
FOR DAILY ALERTS
 
Close