ಅಂಕಣಇತಿಹಾಸ

ಬಹಿರಂಗವಾದ 1962 ರ ಭಾರತ-ಚೀನಾ ಯುದ್ಧದ ದಾಖಲೆಗಳು!! ಭಾರತ ಸೋಲಲು ನೆಹರೂವಿನ ಉದ್ದೇಶಪೂರ್ವಕ ನಡೆಯೇ ಕಾರಣ ?!

ವಾಸ್ತವವಾಗಿ, ಭಾರತ – ಚೀನಾ ಯುದ್ಧದಲ್ಲಿ, ಭಾರತ ಹೀನಾಯವಾಗಿ ಸೋಲುಂಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ?! ಅದರಲ್ಲಿಯೂ ಕೂಡ, ಪ್ರತಿಯೊಬ್ಬ ಭಾರತೀಯನಿಗೂ ಅವತ್ತು ಅರ್ಥವಾಗಿ ಹೋಗಿತ್ತು! ಭಾರತದ ಸೈನಿಕರು ಸೋತಿದ್ದು ಬಲಹೀನರಾಗಲ್ಲ, ಬದಲಾಗಿ ರಾಜಕೀಯ ಆಟಗಳಿಂದ ಎಂದು! ಚೀನಾ ಸೈನಿಕರ ಮೇಲೆ ಆಕ್ರಮಣ ಮಾಡಲೂ ಕೂಡ ನಮ್ಮ ಭಾರತೀಯ ಸೈನಿಕರಲ್ಲಿ ಮದ್ದುಗುಂಡುಗಳಿರಲಿಲ್ಲ ಎಂದು ಕೇಳಲ್ಪಟ್ಟಾಗ, ಇದ್ದ ಮದ್ದುಗುಂಡುಗಳೂ ಥಂಡಿ ಹಿಡಿದು ಸಿಡಿಯಲೇ ಇಲ್ಲವೆಂದಾಗ, ಕೈಯ್ಯಲ್ಲಿ ಬಂದೂಕಿದ್ದರೂ ಸಹ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು ನಮ್ಮ ಸೈನಿಕರು ಎಂದಾಗ, ಚೀನೀಯರು ನಮ್ಮ ಭಾರತೀಯ ಸೈನಿಕರ ಎದೆ ಮೇಲೆ ಕಾಲಿಟ್ಟು, ತಲೆಗೆ ಗುಂಡಿಟ್ಟು ರಕ್ತ ಹೀರಿದರು ಎನ್ನುವ ಸುದ್ದಿ ಕೇಳಿದಾಗಲೆಲ್ಲ, ಒಬ್ಬ ಭಾರತೀಯನಾಗಿದ್ದೇ ಹೌದಾದರೆ ರಕ್ತ ಕುದಿಯುತ್ತದೆ! ಇದಕ್ಕೆಲ್ಲ ಯಾರು ಕಾರಣಕರ್ತ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ ಕೂಡಲೇ ಆಕ್ರೋಶ ಹೆಚ್ಚುತ್ತದೆ! ಅವತ್ತೂ ಅದೇ ಆಗಿದ್ದು!! ಕೈಗೆ ಸಿಕ್ಕಿಬಿದ್ದ, ನಮ್ಮ ಭಾರತದ ಮೊದಲ ಪ್ರಧಾನ ಮಂತ್ರಿ ನೆಹರೂರನ್ನು ಜನ ಥಳಿಸಿದ್ದರು!! ಬೀದಿಗೆಳೆದು!! ತಪ್ಪೆಂದು ಹೇಳುವುದೇ ಇಲ್ಲ! ಯಾಕೆಂದರೆ, ಅವರದಕ್ಕೆ ಅರ್ಹರಾಗಿದ್ದರಷ್ಟೇ!!

ಸೋಲಿಗೆ ನೆಹರೂ ಕಾರಣ ಎಂಬುವಂತಹದ್ದು ಕೇವಲ ಬಾಯಿ ಮಾತಲ್ಲ! ಬದಕಲಿಗೆ, ಬಹಿರಂಗವಾದ ದಾಖಲೆಗಳು ಸ್ವತಃ ಬೆಟ್ಟು ಮಾಡಿ ತೋರಿಸಿದ್ದು ನೆಹರೂರವರ ಕಡೆಗೇ! ಹಾ!! ಅದೆಷ್ಟೋ ದಶಕಗಳ ಕಾಲ ಮುಚ್ಚಿಟ್ಟಿದ್ದ ಹೆಂಡರ್ಸನ್ ಬ್ರೂಕ್ಸ್ ನ ರಹಸ್ಯ ದಾಖಲೆಗಳು ನೆಹರೂವಿನ “ಫಾರ್ವರ್ಡ್ ಪಾಲಿಸಿ” ಮತ್ತು ತರಬೇತಿ ರಹಿತವಾಗಿದ್ದ ಸೈನಿಕರನ್ನು ಯುದ್ಧ ಭೂಮಿಗೆ ಕಳಿಸಿದ್ದೇ, ಚೀನಾದ ಗೆಲುವಿಗೆ ಸಹಾಯವಾಯಿತು ಎಂಬ ಘನಘೋರ ಸತ್ಯವನ್ನು ಬಹಿರಂಗಪಡಿಸಿದೆ!! ಇಲ್ಲಿಯವರೆಗೂ ಸಹ, ೧೯೬೨ ರ ಚೀನಾ – ಭಾರತ ಯುದ್ಧದ ಯಾವುದೇ ವರದಿಗಳನ್ನೂ ಸಹ ಬಿಡುಗಡೆ ಮಾಡಿರದಿದ್ದ ಏಜೆನ್ಸಿ , ಬಹಳ ರಹಸ್ಯ ದಾಖಲೆಗಳಿದೆ ಎಂಬೆಲ್ಲ ನೆಪ ಹೇಳಿತ್ತಷ್ಟೇ!! ಆದರೆ, ಭಾರತ ಮತ್ತು ಚೀನಾ ಯುದ್ಧದ ಸಮಯದಲ್ಲಿ ನಡೆದ ರಹಸ್ಯ ಕಾರ್ಯಾಚರಣೆಗಳನ್ನು ಇತ್ತೀಚೆಗಷ್ಟೇ, ಆಸ್ಟ್ರೇಲಿಯಾದ ನೆವಿಲ್ಲೆ ಮ್ಯಾಕ್ಸ್ ವೆಲ್ ಎಂಬ ವರದಿಗಾರರೊಬ್ಬರು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ!

The truth about India’s embarrassing military defeat at the hands of the Chinese in 1962 is finally out in the open.

The long suppressed classified Henderson Brooks report blames Jawaharlal Nehru’s ‘Forward Policy’ and an ill-prepared army for the debacle.

A large section of the report, completed in 1963 but never released on the grounds that it contained sensitive operational details, was recently posted by Australian journalist Neville Maxwell in his blog.

@MailOnline | DailyMail

Ghosts

ಈ “ಫಾರ್ವರ್ಡ್ ಪಾಲಿಸಿ” ಎಂಬುದೊಂದಿದೆಯಲ್ಲವಾ?! ಭಾರತ ಹೀನಾತಿಹೀನವಾಗಿ ಸೋಲಲಿಕ್ಕೆ ಈ ನೀತಿಯೇ ಕಾರಣ ಎಂಬುದನ್ನು ವರದಿ ಬಹಿರಂಗಪಡಿಸಿದೆ!! ಲಡಾಖಿನ ವಿವಾದಿತ ಪ್ರದೇಶಗಳಲ್ಲಿ, ಮತ್ತು ನಾರ್ತ್ ಈಸ್ಟ್ ಫ್ರಾಂಟೀಯರ್ ಏಜೆನ್ಸಿಯಲ್ಲಿ, ಚೀನಾ ಸೈನಿಕರು ಅಕ್ರಮವಾಗಿ ಗಸ್ತು ತಿರುಗಲು ಪ್ರಾರಂಭಿಸಿದ್ದಲ್ಲದೇ, ಕಂಡ ಕಂಡಲ್ಲಿ ಚೀನಾ ಸೈನಿಕರು ಶಿಬಿರಗಳನ್ನು ನಿರ್ಮಾಣ ಮಾಡುತ್ತ, ಕೊನೆಗೆ ಭಾರತದ ಭೂಮಿಯನ್ನು ಇಂಚು ಇಂಚಾಗಿ ಕಬಳಿಸುತ್ತ ಬಂದುದರ ಫಲವಾಗಿ, ನಮ್ಮ ದೇಶದ ಪ್ರಧಾನ ಮಂತ್ರಿ, ಚೀನಿಯರಿಗೆ ಯಾವುದೇ ರೀತಿಯ ತಿರುಗೇಟು ಕೊಡದೇ, ಚೀನೀಯರ ಕಬಳಿಸುವಿಕೆಯನ್ನು ತಡೆಯಬೇಕು ಮತ್ತು ಹೆಚ್ಚುವರಿ ಗಡಿ ಹುದ್ದೆಗಳನ್ನು ಸ್ಥಾಪಿಸುವ ಉದ್ದೆಶವನ್ನಿಟ್ಟುಕೊಂಡು “ಫಾರ್ವರ್ಡ್ ಪಾಲಿಸಿ” ಎಂಬಂತಹ ನೀತಿಯನ್ನು ನೆಹರೂ ಸರಕಾರ ಪರಿಚಯಿಸಿದ್ದೇ, ಭಾರತದ ಸೋಲಿಗೆ ಕಾರಣವಾಗಿದೆ ಎಂಬುದನ್ನು ಹೇಳಿದೆ! ಅದಲ್ಲದೇ, ಚೀನೀ ಸೈನಿಕರು ಆಕ್ರಮಣ ಮಾಡಿದರೂ ಸಹ, ಅದಕ್ಕೆ ಬೇಕಾದ ಸಿದ್ಧ ಉಪಕರಣಗಳನ್ನಾಗಲಿ, ಅಥವಾ ತರಬೇತಿ ಪೂರ್ಣ ಸೇನೆಯನ್ನಿಟ್ಟುಕೊಳ್ಳದೇ, ನೆಹರೂ ಸರಕಾರವು ಚೀನಾದ ಜೊತೆ ಅಹಂಕಾರದಿಂದ ಕೈ ಕುಲುಕಲು ನಡೆದಿತ್ತು!

The report states that the ‘Forward Policy’ of Nehru’s government, aimed at preventing the advance of the Chinese in disputed areas of Ladakh and the erstwhile North East Frontier Agency (NEFA) through aggressive patrolling and establishing additional border posts, “certainly increased” the chances of a conflict and the plan was executed by the army headquarters “without necessary backing” in the form of additional troops and equipment.

dispute

ಈ ಫಾರ್ವರ್ಡ್ ಪಾಲಿಸಿಯನ್ನು ಪರಿಚಯಿಸಿದ್ದು, ರಾಜಕೀಯದ ಬಹುದೊಡ್ಡ ತಲೆಗಳೆಂದು ಗುರುತಿಸಿಕೊಂಡ, ರಕ್ಷಣಾ ಸಚಿವರಾಗಿದ್ದ ಕೃಷ್ಣಾ ಮೆನನ್, ವಿದೇಶಾಂಗ ಕಾರ್ಯದರ್ಶಿ ಎಮ್ ಜೆ ದೇಸಾಯಿ, ಸೇನಾ ಪ್ರಧಾನ ಜನರಲ್ ಪಿ.ಎನ್‌.ಥಾಪರ್ ಮತ್ತು ಬ್ಯೂರೋದ ಅಧಕ್ಷ ಸ್ಥಾನದಲ್ಲಿದ್ದ ಬಿ.ಎನ್.ಮುಲಿಕ್!!
ಇವಿಷ್ಟೂ ಮುತ್ಸದ್ದಿಗಳ ಜೊತೆ ಕೂತು, ನಮ್ಮ ನೆಹರೂವರು ನವೆಂಬರ್ ೨, ೧೯೬೧ ರಂದು ತಮ್ಮ ಮೂರ್ಖ ನೀತಿಯಾದ ಫಾರ್ವರ್ಡ್ ಪಾಲಿಸಿಯೊಂದನ್ನು ಪರಿಚಯಿಸಿದ್ದರಷ್ಟೇ!!

ವರದಿ ಹೇಳುವುದಷ್ಟೇ!! ” ನಾಗರಿಕರು ಮತ್ತು ಸೇನಾ ನಾಯಕತ್ವದ ಮೇಲಾದ ಒಂದೇ ಸಮಯದ ದಾಳಿಯಲ್ಲಿ, ಇದೇ ಸರಕಾರವು ಭೂಪ್ರದೇಶವನ್ನು ರಾಜಕೀಯ ತಂತ್ರಗಳ ಮೂಲಕ ಮತ್ತೆ ಪಡೆಯಬೇಕಿತ್ತಾದರೂ ಸಹ, ಸರಕಾರ ಜಾಗರೂಕತೆಯಿಂದ ಒಂದು ನೀತಿಯನ್ನು ಪರಿಚಯಿಸಿತು!! ಅಚ್ಚರಿಯೆಂದರೆ, ಸೈನ್ಯದ ಪ್ರಧಾನ ಕಚೇರಿಯೊಂದು, ಭಾರತೀಯ ಸೇನೆಗೆ ತದ್ವಿರುದ್ಧವಾಗಿದ್ದ ಮತ್ತು, ಅಸಮರ್ಥವಾಗಿರುವಂತಹ ನೀತಿಯನ್ನು ನಿರ್ದೇಶಿಸಿತ್ತು!” ಎಂಬುದೊಂದು, ಕೇವಲ ನೀತಿಯಾಗಿರಲಿಲ್ಲ! ಬದಲಿಗೆ, ಭಾರತೀಯ ಸೈನಿಕರ ರಕ್ತದೋಕುಳಿಗೆ ಮುನ್ನುಡಿಯಾಗಿತ್ತಷ್ಟೇ!!

the report states, “the government who politically must have been keen to recover territory,advocated a cautious policy; whilst Army Headquarters dictated a policy that was clearly militarily unsound”.

“So far effort has been made to keep individual personalities out of this review, General Kaul, however, must be made an exception, as for now on, he becomes the central figure in the operations and important signals and orders from him are on a person to person basis, both to higher as well as lower formation commanders,” said the report which is also critical of the role played by one of his confidants, Brigadier D.K. Palit who was director of military operations.

Image result for ghosts of1962 war,dailymail

ಲೆಫ್ಟಿನೆಂಟ್ ಜನರಲ್ ಆಗಿದ್ದ ಹೆಂಡರ್ಸನ್ ಬ್ರೂಕ್ ತಯಾರಿಸಿದ ವರದಿಯೊಂದು ಸಮಕಾಲೀನ ಮಿಲಿಟರಿ ಮತ್ತು ಗುಪ್ತಚರ ದಾಖಲೆಗಳ ಆಧಾರದ ಮೇಲೆ ಚೀನಾವು, ಟಿಬೆಟ್ಟಿನಲ್ಲಿ ತಮ್ಮ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತಿದೆ ಮತ್ತು, ಸೇನಾ ಶಿಬಿರಗಳನ್ನೂ ಸಹ ಬಲಪಡಿಸಿಕೊಳ್ಳುತ್ತಿದೆ ಎಂಬುದನ್ನು, ೧೯೬೨ ರಕ್ಕಿಂತ ಮೊದಲೇ ಬಹಿರಂಗಪಡಿಸಿತ್ತು! ಆ ಸಮಯದಲ್ಲಿ, ಸೇನಾ ಕಾರ್ಪ್ಸ್ ಗಳನ್ನು ನೇಮಕ ಮಾಡಿಕೊಳ್ಳಲು ಸಹಕರಿಸಿದ್ದ ಮಿಲಿಟರಿ ಅಕಾಡೆಮಿಯ ಅಧಿಪತಿಯಾಗಿದ್ದ ಬ್ರಿಗೇಡಿಯರ್ ಪಿ ಎಸ್ ಭಗತ್ ರವರೂ ಸಹ ಬ್ರೂಕ್ ವರದಿ ತಯಾರಿಸುವಾಗ ಹೆಚ್ಚು ಬೆಂಬಲ ನೀಡಿದ್ದರು! ಅವತ್ತು, ವರದಿಯನ್ನೇನೋ ನೆಹರೂ ಸರಕಾರ ಕಡೆಗಣಿಸಿತು! ಆದರೆ, ೧೯೬೨ ರ ಅಕ್ಟೋಬರ್ ನಲ್ಲಿ ನಡೆದ ಯುದ್ದವೊಂದು ಟಿಬೆಟ್ ಸಂಪೂರ್ಣವಾಗಿ ಚೀನೀಯರ ವಶವಾಗಿದೆ ಎಂಬುದನ್ನು ಸಾಬೀತು ಪಡಿಸಿತ್ತು!!

ಆದರೆ, ಸೊಕ್ಕಿನ ನೆಹರೂ ಮಾತ್ರ ಯಾವುದೇ ರೀತಿಯ ಪೂರ್ವ ತಯಾರಿಯಿಲ್ಲದೆಯೇ, ಲೆಫ್ಟಿನೆಂಟ್ ಜನರಲ್ ಬ್ರಿಜ್ ಮೋಹನ್ ಕೌಲ್ ರನ್ನು ಮಿಲಿಟರಿ ಕಾರ್ಯಾಚರಣೆಗೆ ಕಳುಹಿಸಿದ್ದಲ್ಲದೇ, ಅವರ ಹಿಂದೆಯೇ ಸೇನಾ ತಂಡಗಳನ್ನೂ ಸಹ ದೋಹಿಯಾ ಪ್ರದೇಶಕ್ಕೆ ಕಳುಹಿಸಿತ್ತು!! ಅಚ್ಚರಿಯೇನೆಂದರೆ, ರಾಜಕೀಯ ತಂತ್ರಗಳ ಮೂಲಕವಷ್ಟೇ ಪರಿಹರಿಸಿಕೊಳ್ಳಬೇಕು ಇಂತಹ ವಿವಾದಗಳನ್ನು ಎಂದು ಬ್ರೂಕ್ ವರದಿಯಲ್ಲಿ ಸ್ಪಷ್ಟ ಚಿತ್ರಣ ಕೊಟ್ಟಿದ್ದರೂ ಸಹ ನೆಹರೂ ತಲೆಕೊಡಲಿಲ್ಲ!! ಬದಲಾಗಿ, ತರಬೇತಿ ರಹಿತವಾದಂತಹ ಸೇನಾ ತಂಡಗಳನ್ನು ಗಡಿ ಭಾಗಗಳಲ್ಲಿ ನಿಯೋಜಿಸಿದ್ದಲ್ಲದೇ, ತಂಡಗಳನ್ನು ವಾಪಾಸು ಕರೆಸಿಕೊಳ್ಳಲೂ ಒಪ್ಪಲಿಲ್ಲ ನೆಹರೂ! ಸತ್ತರೆ ಸಾಯಿರಿ ಅಲ್ಲಿಯೇ ಎಂಬಂತಹ ಮನಸ್ಥಿತಿ ಹೊಂದಿದ್ದ ನೆಹರೂರವರಿಗೆ ಭಾರತವನ್ನು ಉಳಿಸಲು ಬೇಕಾದಷ್ಟು ಸಮಯವಿತ್ತು!!

ಬ್ಯೂರೋದ ಅಧ್ಯಕ್ಷನಾಗಿದ್ದ ಮಲಿಕ್ ಮಾತ್ರ ನೆಹರೂರವರಿಗೆ ಅತ್ಯಂತ ಮೂರ್ಖ ಸಲಹೆ ನೀಡಿದ್ದರು! ನೆಹರೂರವರ ಫಾರ್ವರ್ಡ್ ಪಾಲಿಸಿಗೆ ಎಂದಿಗೂ ಚೀನಾ ಸೈನ್ಯವನ್ನು ಬಳಸಿ ಉತ್ತರ ನೀಡುವುದಿಲ್ಲ ಎಂದ ಮಲಿಕ್ ನ ಊಹೆಗೆ ವಿರುದ್ಧವಾಗಿಯೇ ಚೀನಾ ಮುಖ ಊದಿಸಿಕೊಂಡಿತ್ತು! ತಮ್ಮೆದರು ತಂದು ನಿಲ್ಲಿಸಿದ ಸೇನಾ ತಂಡಗಳ ವಿರುದ್ಧ ಶಸ್ತ್ರಾಸ್ತ್ರಗಳಲ್ಲಿಯೇ ಉತ್ತರ ಕೊಡಲು ಸಂಪೂರ್ಣವಾಗಿ ತಯಾರಿಯಾಗಿತ್ತು ಚೀನಾ!

ವರದಿಗಳು ಹೇಳುವ ಪ್ರಕಾರ, “ಭಾರತೀಯ ಸೇನಾ ತಂಡಗಳು ಯಾವುದೇ ರೀತಿಯಾದ ತರಬೇತಿಯನ್ನು ಪಡೆದಿರಲಿಲ್ಲ! ಚೀನೀ ಸೈನಿಕರನ್ನು ಮಣಿಸುವಂತಹ ಯಾವುದೇ ವಿಶೇಷ ತರಬೇತಿಗಳೂ ಇಲ್ಲದ ತಂಡಗಳನ್ನು, ವಿವಾದಿತ ಪ್ರದೇಶಕ್ಕೆ ಕಳುಹಿಸಲಾಗಿತ್ತು!! ಚೀನಾ ಶಸ್ತ್ರಾಸ್ತ್ರಗಳನ್ನು ಎದುರಿಸುವಂತಹ, ಯಾವ ಪ್ರತ್ಯಸ್ತ್ರಗಳೂ ಸಹ ಭಾರತೀಯ ಸೇನೆಯ ತಂಡಗಳಲ್ಲಿರಲಿಲ್ಲ!! ಅದಲ್ಲದೇ, ೧೯೬೨ ರಲ್ಲಿ ತೀರಾ ಮೂರ್ಖವಾಗಿದ್ದ ಫಾರ್ವರ್ಡ್ ನೀತಿಯನ್ನು ಆಧಾರವಾಗಿಸಿಕೊಂಡು ನೆಹರೂರವರಿಗೆ ನಿರ್ಧಾರ ತೆಗೆದುಕೊಳ್ಳಲೇ ಬಿಡಬಾರದಿತ್ತು ಮಲಿಕ್ ಮತ್ತು ಕೌಲ್!” ಎಂದಾಗ ಭಾರತೀಯರು ಕುಸಿದು ಬಿದ್ದಿದ್ದರು! ಯಾಕೆಂದರೆ, ಅನ್ಯಾಯವಾಗಿ ಭಾರತದ ಸೋಲಿಗೆ ಕಾರಣವಾಗಿದ್ದು ಕೇವಲ ಒಂದು ಸಹಿ ಮತ್ತು ಒಂದು ನೀತಿ ! ಅಷ್ಟೇ!!

ಅಚ್ಚರಿಯೆಂದರೆ, ನೆಹರೂವೇನಾದರೂ ಅಗತ್ಯವಾದ ಸೇನಾ ಶಿಬಿರಗಳನ್ನು ಮೊದಲೇ ತಯಾರಿ ಮಾಡಿಟ್ಟುಕೊಂಡಿದ್ದರೆ, ನೆಹರೂವೇನಾದರೂ ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ರೀತಿಯಾದ ದುರಂತವೇ ಸಂಭವಿಸುತ್ತಿರಲಿಲ್ಲ! ಯಾಕೆ ಗೊತ್ತಾ?! ಫಾರ್ವರ್ಡ್ ನೀತಿಯನ್ನು ಪರಿಚಯಿಸಿದ್ದು ಸೈನಿಕರನ್ನು ಒತ್ತೆಯಿಟ್ಟು!!ಟಿಬೆಟ್ಟಿನಲ್ಲಿ ಆಗಲೇ ಬೀಡುಬಿಟ್ಟಿದ್ದ ಚೀನಾ ತಂಡಗಳನ್ನು ಸೈನಿಕರನ್ನು ಎದುರು ನಿಲ್ಲಿಸಿ ತಡೆಯುತ್ತೇನೆ ಎಂದು ಹೊರಟಿದ್ದೇ ನೆಹರೂವಿನ ಅತಿದೊ್ಡ್ಡ ಮೂರ್ಖತನ ಎಂದ ಬ್ರೂಕ್ ಹೇಳಿದ್ದಷ್ಟನ್ನೇ! ರಾಜಕೀಯ ಸಂಧಾನದ ಮೂಲಕ ಪರಿಹರಿಸಿಕೊಳ್ಳಬೇಕಿದ್ದನ್ನು, ಸೈನ್ಯದ ಮೂಲಕ ಪರಿಹರಿಸಲು ಹೋದ ನೆಹರೂರ ಅಹಂಕಾರವೊಂದು, ಅವರ ಮೂರ್ಖತನವನ್ನೂ ತೋರಿಸಿತ್ತು!! ಚೀನಾಕ್ಕೆ ಬೇಕಿದ್ದದ್ದೂ ಅದೇ!! ಸೈನ್ಯ ನಿಲ್ಲಿಸಿದಿರಿ! ನಾವೂ ಸೈನ್ಯದ ಮೂಲಕವೇ ಉತ್ತರ ಕೊಟ್ಟೆವು ಎಂದಿತು ಚೀನಾ! ಪರಿಣಾಮ?! ಮತ್ತೆ ಭಾರತದ ಸೋಲಾಗಿತ್ತು!!

ಇಲ್ಲಿಯವರೆಗೂ ಸಹ, ರಹಸ್ಯ ದಾಖಲೆಗಳಿವೆ!! ಸಾಕ್ಷಿಗಳಿವೆ! ಎಂದೆಲ್ಲ ವರದಿಯನ್ನು ಮುಚ್ಚಿಟ್ಟಿದ್ದ ರಕ್ಷಣಾ ಸಚಿವಾಲಯ ಕೊನೆಗೂ ಸಹ, ದಾಖಲೆಗಳನ್ನೆಲ್ಲ ನಾಶಗೊಳಿಸಲು ಪ್ರಯತ್ನ ಪಟ್ಟಿತ್ತಲ್ಲದೇ, ಕಾಂಗ್ರೆಸ್ ಪಕ್ಷ ಕೂಡ ಅದಕ್ಕೆ ತಕ್ಕನಾಗಿಯೇ ಬೆಂಬಲ ನೀಡಿತ್ತು!! ಭಾರತೀಯ ಸೈನ್ಯದ ಅದೆಷ್ಟೋ ದಾಖಲೆಗಳು, ಯುದ್ಧಕ್ಕೆ ಸಂಬಂಧಪಟ್ಟಿದ್ದಂತಹ ಅದೆಷ್ಟೋ ಸಾಕ್ಷ್ತಾಧಾರಗಳನ್ನೆಲ್ಲ ಯಶಸ್ವಿಯಾಗಿಯೇ ನಾಶಗೊಳಿಸಿದ್ದ ಕಾಂಗ್ರೆಸ್ ಪಕ್ಷ ಕೊನೆಗೂ ಸಹ ಬುದ್ದಿ ಕಲಿಯಲೇ ಇಲ್ಲ!! ಇವತ್ತಿಗೂ, ನೆವಿಲ್ಲೆ ಮ್ಯಾಕ್ಸ್ ವೆಲ್ ಬಹಿರಂಗ ಪಡಿಸಿರುವ ದಾಖಲೆಗಳು ಮೂಲ ವರದಿಯ ೨೦೦ ಪುಟಗಳಷ್ಟಿಲ್ಲ! ಬದಲಾಗಿ, ಅದಕ್ಕಿಂತ ಕಡಿಮೆ ಪುಟಗಳನ್ನು ಹೊಂದಿದೆ!! ಮತ್ತು, ಸಂಪೂರ್ಣರ್ವಾಗಿ ಸಾರ್ವಜನಿಕರಿಗೆ ದಾಖಲೆಗಳನ್ನು ಬಹಿರಂಗಪಡಿಸಲು ಸಾಧ್ಯವೇ ಇಲ್ಲ ಎಂದು ಇನ್ನೂ ದಾಖಲೆಗಳನ್ನು ಹಾಗೆಯೇ ಅಡಗಿಸಿಟ್ಟಿರುವುದರ ಹಿಂದೆ, ಇನ್ಯಾವ ದುರಂತ ಕಥೆಗಳಿತ್ತೋ ಬಿಡಿ!!

ಅದಕ್ಕೇ, ನೆಹರೂವನ್ನು ಬೀದಿಯಲ್ಲಿ ಥಳಿಸಿದ್ದರು ಭಾರತೀಯರು!! ಯಾಕೆ ಗೊತ್ತಾ?! ಚೀನಾದ ಸೈನಿಕರೆದುರಿಗೆ ಸೈನ್ಯವನ್ನು ನಿಲ್ಲಿಸಿದ್ದರು ನೆಹರೂ ಸರಿ! ಆದರೆ, ನಿಲ್ಲಿಸಬೇಕೆಂಬ ತರಾತುರಿಗೆ ಬಿದ್ದರೋ, ಅಥವಾ ಅಹಂಕಾರದಲ್ಲಿ ಬುದ್ಧಿ ಕೈ ಕೊಟ್ಟಿತೋ! ಒಟ್ಟಿನಲ್ಲಿ, ಭಾರತ ಸೋಲುಂಡಿತ್ತು! ಭಾರತಕ್ಕೆ ಸೋಲಾಗಿದೆ ಎಂಬಂತಹ ಒಂದೇ ಒಂದು ವಾಕ್ಯವಿದೆಯಲ್ಲವಾ?! ಭಾರತೀಯ ಸೇನೆ ಕುಸಿದು ಬಿದ್ದಿತ್ತು!! ನೆಹರೂವಿನ ಆಡಳಿತವೊಂದು, ಭಾರತೀಯ ಸೈನಿಕರ ಬಲವನ್ನೇ ಹೀನವಾಗಿಸಿದ್ದು ಸುಳ್ಳಲ್ಲ! ಪೂರ್ವ ತಯಾರಿ ಇಲ್ಲದಿದ್ದರೂ ಸಹ, ಭಾರತೀಯ ಸೇನೆ ಅದ್ಹೇಗೋ ಸೈನಿಕರನ್ನು ಸ್ವಲ್ಪ ಕಾಲ ತಡೆಗಟ್ಟುವಲ್ಲಿ ಯಶಸ್ವಿಯಾಗಿತ್ತು!

ನೆನಪಿಡಿ!! ಈ ಇಂಡೋ – ಚೈನಾ ಯುದ್ಧವೊಂದು ನೆಹರೂವಿನ ಮೂರ್ಖತನವಾದರೂ ಸಹ, ಭಾರತೀಯ ಸೇನೆಗಾದ ನಷ್ಟವೆಷ್ಟು ಗೊತ್ತೇ?! ೧೩೮೩ ಯೋಧರು ಹತರಾಗಿದ್ದರು! ೧೦೪೭ ಯೋಧರು ಗಂಭೀರವಾಗಿ ಗಾಯಗೊಂಡಿದ್ದರು! ೧೬೯೬ ಯೋಧರು ಕೊನೆಗೂ ಸಿಗಲೇ ಇಲ್ಲ! ೩೯೬೮ ಜವಾನರನ್ನು ಚೀನಾ ಬಂಧಿಸಿತ್ತು!! ಅದೇ ಚೀನಾ?! ಚೀನಾದ ಸೈನಿಕರು ಸತ್ತಿದ್ದು ಕೇವಲ ೭೨೨! ಗಾಯಗೊಂಡವರು ಕೇವಲ ೧೬೯೭ ರಷ್ಟು!! ಅಕ್ಟೋಬರ್ ೨೦ ರಿಂದ,
ನವೆಂಬರ್ ೨೧ ರ ತನಕ ಈ ಯುದ್ಧದಲ್ಲಿ ಕಾರಣವಾಗಿದ್ದು ಬೇರಾವುದೂ ಅಲ್ಲ! ನೆಹರೂವಿನ ಅಹಂಕಾರದ ನಡೆ! ಹಿಮಾಲಯ ಗಡಿಗಳಲ್ಲಿ ಬೇರು ಬೀಡವ ತೊಡಗಿದ್ದ ಚೀನಾ ಸೈನಿಕರನ್ನು ರಾಜಕೀಯವಾಗಿ ಮಣಿಸುವುದನ್ನು ಬಿಟ್ಟು, ನೆಹರೂ ಪಗಡೆಯಾಟಕ್ಕಿಳಿದಿದ್ದರು!! ಹ್ಹ!! ಬಿಡಿ! ನೆಹರೂವಿನ ಈ ಅಪರಾಧವೊಂದಕ್ಕೆ ಭಾರತೀಯರೂ ಶಿಕ್ಷೆ ಕೊಡಲಿಲ್ಲ! ಕೊನೆ ಕೊನೆಗೆ, ಭಾರತೀಯರ ರಕ್ತದೋಕುಳಿ ಹರಿದರೂ, ಇವತ್ತೂ ಸಹ ಆ ಪಕ್ಷವೊಂದನ್ನು ರಾಜಕೀಯ ಮಾಡಲಿ ಎಂದಿಟ್ಟ ಭಾರತೀಯರೇ ಪರೋಕ್ಷವಾಗಿ ಹೊಣೆಯಾಗಬಲ್ಲರೇನೋ!

Source : http://www.dailymail.co.uk/indiahome/indianews/article-2583786/Ghosts-1962-Leaked-military-report-blames-Indias-leadership-ill-prepared-army-embarrassing-defeat-China.html

– ಅಜೇಯ ಶರ್ಮಾ

Tags

Related Articles

FOR DAILY ALERTS
 
FOR DAILY ALERTS
 
Close