ಪ್ರಚಲಿತ

ಕಾಂಗ್ರೆಸ್ ಮತ್ತು ವಿಜಯ ಮಲ್ಯರ ನಡುವೆ ನಡೆದಿದ್ದ “ಸ್ವೀಟ್ ಡೀಲ್” ಬಯಲು!! ಬ್ಯುಸಿನೆಸ್ ಕ್ಲಾಸ್ ನ ಟಿಕೆಟ್‍ಗಳಲ್ಲಿ ಗಾಂಧಿ ಕುಟುಂಬ ಉಚಿತವಾಗಿ ಪ್ರಯಾಣಿಸುತ್ತಿದ್ದರೇ?

ಬಹುಕೋಟಿ ಸಾಲ ಪಡೆದು ವಂಚನೆಯ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯರವರು ತಾನು ಲಂಡನ್ ಗೆ ಹೋಗುವ ಮೊದಲು ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಭೇಟಿಯಾಗಿದ್ದೆ. ಈ ವೇಳೆ ಎಲ್ಲ ಬಾಕಿ ಚುಕ್ತಾ ಮಾಡೋದಾಗಿ ಭರವಸೆ ಕೂಡ ನೀಡಿದ್ದೆ ಅಂತ ಹೇಳಿರುವ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಆರ್ ಬಿ ಐ ಕಿಂಗ್ ಫಿಶರ್ ಏರ್ ಲೈನ್ಸ್ ನಡುವೆ ನಡೆದಿದ್ದ “ಸ್ವೀಟ್ ಡೀಲ್” ಗಳ ಬಗ್ಗೆ ಬಿಜೆಪಿ ಗಂಭೀರ ಆರೋಪ ಮಾಡಿದ್ದಲ್ಲದೇ ಆ ಬಗ್ಗೆ ಕೆಲ ಮಾಹಿತಿಯನ್ನು ಹೊರ ಹಾಕಿದೆ.

ಇತ್ತೀಚೆಗಷ್ಟೇ, ಮನಸ್ಸು ಮಾಡುತ್ತಿದ್ದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ವಿಜಯ್ ಮಲ್ಯ ಭಾರತ ಬಿಟ್ಟು ಹೋಗುವುದನ್ನು ತಡೆಯಬಹುದಿತ್ತು ಎಂದು ಹೇಳುವ ಮೂಲಕ ಕೇಂದ್ರ ಸರಕಾರ ವಿಜಯ್ ಮಲ್ಯ ಅವರನ್ನು ರಕ್ಷಿಸುತ್ತಿದೆಯೇ ಎಂದು ಸಾರ್ವಜನಿಕರಲ್ಲಿ ಸಂಶಯ ಬರುವ ರೀತಿಯಲ್ಲಿ ಕಾಂಗ್ರೆಸ್ ಆರೋಪ ಮಾಡಿದ್ದು ತಿಳಿದೇ ಇದೆ. ಅಷ್ಟೇ ಅಲ್ಲದೇ, ಲಂಡನ್ ಗೆ ಹೋಗುವ ಮುನ್ನ ಹಣಕಾಸು ಸಚಿವ ಜೇಟ್ಲಿಯನ್ನು ವಿಜಯ್ ಮಲ್ಯ ಭೇಟಿ ಮಾಡಿದ್ದು ತನ್ನ ಸಾಲವನ್ನು ಇತ್ಯರ್ಥ ಮಾಡಿಕೊಳ್ಳಲು ಆಫರ್ ನೀಡಿದ್ದರು ಎಂದು ಹೇಳಿದ್ದರು!!

ಇದರ ಬೆನ್ನಲ್ಲೇ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ವಿಜಯ್ ಮಲ್ಯ ಅವರಿಗೆ ಸಾಲ ನೀಡಿದ್ದು ಯುಪಿಎ ಸರಕಾರ. ಯಾಕಾಗಿ ನೀಡಿತ್ತು? ಭಾರತೀಯ ರಿಸರ್ವ್ ಬ್ಯಾಂಕ್ ಗೂ ಒತ್ತಡ ಹೇರಲಾಗಿತ್ತು. ಮಲ್ಯ ಅವರನ್ನು ಎಲ್ಲ ನಿಯಮಗಳಿಂದ ಹೊರಗಿಡಲು ಏನು ಕಾರಣ ಎಂಬುದಕ್ಕೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಮೊದಲು ಉತ್ತರಿಸಬೇಕು ಎಂದು ಹೇಳಿದ್ದರು!! ಆದರೆ ಇದೀಗ, ಈ ಹಿಂದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರೊಂದಿಗೆ ಸಾಕಷ್ಟು ‘ಸ್ವೀಟ್ ಡೀಲ್’ಗಳನ್ನು ಮಾಡಿಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.

Image result for piyush goyal

ಹೌದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುಟುಂಬ ಪ್ರತಿನಿಧಿಯ ಮೂಲಕ ಕಿಂಗ್ ಫಿಶರ್ ಏರ್ ಲೈನ್ಸ್ ನ ಭಾಗಶಃ ಮಾಲೀಕತ್ವ ಹೊಂದಿತ್ತು ಎಂದು ದೂರಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಆರ್ ಬಿ ಐ ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗೆ ಹೇಗೆ ಸ್ವೀಟ್ ಡೀಲ್ ಗಳನ್ನು ಮಾಡಿಕೊಂಡಿದೆ ಎಂಬುದಕ್ಕೆ ದಾಖಲೆಗಳಿವೆ ಎಂದು ಹೇಳಿರುವುದು ಇದೀಗ ಭಾರೀ ಸುದ್ದಿಯಾಗುತ್ತಿದೆ!!

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರ, ಕಷ್ಟದ ಪರಿಸ್ಥಿತಿಯಲ್ಲಿದ್ದ ಕಾಲದಲ್ಲಿ ವಿಜಯ್ ಮಲ್ಯ ಜತೆ ಯುಪಿಎ ಸರಕಾರ ಹಲವಾರು ಒಪ್ಪಂದ ಮಾಡಿಕೊಂಡಿತ್ತು. ಗಾಂಧಿ ಕುಟುಂಬದ ಪ್ರಭಾವದಿಂದಲೇ ಮಲ್ಯಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳಲಾಗಿತ್ತು ಎಂದು ರಾಹುಲ್ ಗಾಂಧಿ ಅವರು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದಿಷ್ಟೇ ಅಲ್ಲದೇ, ಮಲ್ಯ ಹಾಗೂ ಗಾಂಧಿ ಕುಟುಂಬ ಆಪ್ತರಾಗಿರುವುದನ್ನು ಯಾರೂ ಮರೆಯಬಾರದು. ಗಾಂಧಿ ಕುಟುಂಬ ತಮ್ಮ ಪ್ರಯಾಣಕ್ಕೆ ಮಲ್ಯ ಅವರ ಕಿಂಗ್ ಫಿಶರ್ ವಿಮಾನವನ್ನೇ ಆಯ್ಕೆ ಮಾಡಿಕೊಂಡಿತ್ತು. ಬ್ಯುಸಿನೆಸ್ ಕ್ಲಾಸ್ ನ ಟಿಕೆಟ್‍ಗಳಲ್ಲಿ ಗಾಂಧಿ ಕುಟುಂಬ ಉಚಿತವಾಗಿ ಪ್ರಯಾಣಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.

Related image

ಈ ವಿಚಾರವನ್ನು ಮುಂದುವರೆಸಿ ಮಾತಾನಾಡಿದ ಅವರು, ಗಾಂಧಿ ಕುಟುಂಬ ಮಲ್ಯ ಹಾಗೂ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಕಷ್ಟು ಸಹಾಯ ಮಾಡಿದ್ದು, ಇದಕ್ಕಾಗಿ ಅನೇಕ ಒಳ ಒಪ್ಪಂದಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್‍ಗಳಿಂದ ಏರ್ ಲೈನ್ಸ್ ತೆಗೆದುಕೊಂಡಿರುವ ಸಾಲದ ಕೆಲವು ದಾಖಲೆಗಳನ್ನು ಬಹಿರಂಗಗೊಳಿಸಿದರು. ಕಿಂಗ್ ಫಿಶರ್ ಏರ್ ಲೈನ್ಸ್ ಗೆ ನೀಡಿರುವ ಸಾಲದ ಸಂಬಂಧ ಆರ್ ಬಿ ಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಲವಾರು ಪತ್ರಗಳನ್ನು ಬರೆದಿದೆ. ಸೋನಿಯಾ ಗಾಂಧಿ ಯಾರ ಪರವಾಗಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಲಾಗಿದೆ ಎಂದು ಪಾತ್ರ ಆರೋಪಿಸಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸಂಸದ ಪಿ ಎಲ್ ಪುನಿಯಾ, ಮಾರ್ಚ್ 1, 2016ರಲ್ಲಿ ತಾವು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ವಿಜಯ್ ಮಲ್ಯ ಮತ್ತು ಅರುಣ್ ಜೇಟ್ಲಿಯವರು ಸುಮಾರು 15 ನಿಮಿಷಗಳ ಕಾಲ ಮಾತನಾಡುತ್ತಿದ್ದುದು ನೋಡಿದ್ದೆ. ಅದಾಗಿ ಎರಡು ದಿನಗಳಲ್ಲಿ ವಿಜಯ್ ಮಲ್ಯ ದೇಶದಿಂದ ಪಲಾಯನವಾಗಿದ್ದರು. ಈ ಮಾತುಕತೆ ಬಗ್ಗೆ ಜೇಟ್ಲಿಯವರು ಇದುವರೆಗೆ ಎಲ್ಲಿ ಕೂಡ ಹೇಳಿಕೊಂಡಿಲ್ಲ. ಅದನ್ನು ದಾಖಲೆಗಳು ಮತ್ತು ಸಿಸಿಟಿವಿ ಕ್ಯಾಮರಾ ಮೂಲಕ ಪರಿಶೀಲಿಸಬಹುದು ಎಂದು ಆರೋಪಿಸಿದ್ದರು!!

Related image

ಆದರೆ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲು ಸ್ವತಃ ಯುಪಿಎ ಮಲ್ಯರ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಜಾಮೀನು ನೀಡುವಂತೆ ಹಣಕಾಸು ಸಂಸ್ಥೆಗಳ ಮೇಲೆ ಒತ್ತಡ ಹಾಕಿತ್ತು. ತನ್ನ ತಪ್ಪುಗಳನ್ನು ಮರೆಮಾಚಲು ಕಾಂಗ್ರೆಸ್ ಹಣಕಾಸು ಸಚಿವ ಜೇಟ್ಲಿ ಮೇಲೆ ಆರೋಪ ಮಾಡುತ್ತಿದೆ. ತಮ್ಮ ಕುಟುಂಬ ಮತ್ತು ಮಲ್ಯ ನಡುವಿನ ಸಂಬಂಧ ಎಂತಹದ್ದು ಎಂದು ರಾಹುಲ್ ಗಾಂಧಿಯವರೇ ಬಹಿರಂಗಪಡಿಸಬೇಕು ಎಂದು ಇತ್ತೀಚೆಗಷ್ಟೇ ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದರು!! ಆದರೆ ಇದೀಗ ಕಾಂಗ್ರೆಸ್ ಮತ್ತು ಆರ್ ಬಿ ಐ ಕಿಂಗ್ ಫಿಶರ್ ಏರ್ ಲೈನ್ಸ್ ನಡುವೆ ನಡೆದಿದ್ದ ಸ್ವೀಟ್ ಡೀಲ್ ಗಳ ಬಗ್ಗೆ ಸ್ವತಃ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ದಾಖಲೆ ಸಹಿತ ಮಾಹಿತಿ ಬಹಿರಂಗಗೊಳಿಸಿದ್ದಾರೆ!! ಈ ಮೂಲಕ ಕಾಂಗ್ರೆಸ್ಸಿಗೆ ಕಪಾಳ ಮೋಕ್ಷ ಮಾಡಿದಂತಾಗಿರುವುದಂತೂ ಅಕ್ಷರಶಃ ನಿಜ.

ಮೂಲ: https://www.business-standard.com/

– ಅಲೋಖಾ

Tags

Related Articles

FOR DAILY ALERTS
 
FOR DAILY ALERTS
 
Close