ಇತಿಹಾಸ

ಬ್ರೇಕಿಂಗ್! ಭಾರತ್ ಬಂದ್‌ಗೆ ಬೆಂಬಲ ನೀಡದ ರೈತರು ಮತ್ತು ವ್ಯಾಪಾರಿಗಳು! ಬಂದ್‌ಗೆ ಕರೆ ನೀಡಿದ ಮೋದಿ ವಿರೋಧಿಗಳಿಗೆ ಭಾರೀ ಮುಖಭಂಗ!

ವಿಪಕ್ಷಗಳು ಎಷ್ಟೇ ಪ್ರಯತ್ನಿಸಿದರು ಕೂಡ ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸಲು ಸಾಧ್ಯವಾಗುತ್ತಿಲ್ಲ ಮತ್ತು ತಾವು ತೋಡಿದ ಗುಂಡಿಗೆ ತಾವೇ ಬಿದ್ದು ಹೊರಳಾಡುವಂತಾಗಿದೆ. ಯಾಕೆಂದರೆ ಕೇಂದ್ರ ಸರಕಾರದ ಕಾರ್ಮಿಕ ನೀತಿಯ ವಿರುದ್ಧ ಸಿಡಿದೆದ್ದ ಕೆಲ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳು ಬಂದ್‌ಗೆ ಬೆಂಬಲ ನೀಡಿ ಮೋದಿ ವಿರುದ್ಧ ಪಿತೂರಿ ನಡೆಸಿದ್ದವು. ಭಾರತ್ ಬಂದ್‌ಗೆ ಪರ ವಿರೋಧ ವ್ಯಕ್ತವಾಗುತ್ತಿದ್ದಂತೆ ಇದೀಗ ಮೋದಿ ವಿರೋಧಿಗಳಿಗೆ ಭಾರೀ ಮುಖಭಂಗ ಉಂಟಾಗಿದೆ. ಯಾಕೆಂದರೆ ನಾಳಿನ ಭಾರತ್ ಬಂದ್‌ಗೆ ಯಾವುದೇ ರೀತಿಯ ಬೆಂಬಲ ಇಲ್ಲ ಎಂದು ರೈತರು , ವ್ಯಾಪಾರಿಗಳು ಸೇರಿದಂತೆ ಅನೇಕ ಪ್ರಮುಖ ಸಂಘಟನೆಗಳು ಸ್ಪಷ್ಟಪಡಿಸಿವೆ. ಪ್ರತಿಯೊಂದಕ್ಕೂ ಬಂದ್ ಮಾಡುವುದೇ ಪರಿಹಾರವಲ್ಲ ಎಂದು ಹೇಳುವ ಮೂಲಕ ಜನವರಿ 8 ಮತ್ತು 9 ರಂದು ಎಂದಿನಂತೆ ಕಾರ್ಯನಿರ್ವಹಿಸುತ್ತೇವೆ ಎಂದು ವ್ಯಾಪಾರ ಸಂಘದ ಅಧ್ಯಕ್ಷರು , ಪೆಟ್ರೋಲ್ ಬಂಕ್ ಸಂಘದ ಅಧ್ಯಕ್ಷರು ಹೇಳಿಕೊಂಡಿದ್ದಾರೆ.!

ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ ವ್ಯಾಪಾರಿಗಳು!

ಮೋದಿ ಸರಕಾರ ಕಾರ್ಮಿಕರಿಗೆ ವಿರುದ್ಧವಾದ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ವಿಪಕ್ಷಗಳ ಪ್ರೇರಣೆಯಿಂದ ಕೆಲ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಬಂದ್‌ಗೆ ಯಾವುದೇ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದು ಇದೀಗ ಬೆಂಗಳೂರಿನಲ್ಲಿ ವ್ಯಾಪಾರಿಗಳು ಮತ್ತು ರೈತರು ಕೂಡ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎನ್ನುವ ಮೂಲಕ ನಾವು ಪ್ರಧಾನಿ ಮೋದಿಯವರ ಪರವಾಗಿದ್ದೇವೆ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಳಿನ ದಿನ ವಿಪಕ್ಷಗಳು ನೀಡಿರುವ ಭಾರತ್ ಬಂದ್‌ಗೆ ಹೊಟೇಲುಗಳು, ಪೆಟ್ರೋಲ್ ಬಂಕ್‌ಗಳು ಕೂಡ ಬೆಂಬಲ ನೀಡುವುದಿಲ್ಲ ಎಂಬುದಾಗಿ ಹೇಳಿಕೊಂಡಿದ್ದು, ವಿಪಕ್ಷಗಳ ಎಲ್ಲಾ ತಂತ್ರಗಳು ವಿಫಲವಾಗಿದೆ. ಯಾವುದೇ ಪೆಟ್ರೋಲ್ ಬಂಕ್ ಕೂಡ ಬಂದ್ ಇರುವುದಿಲ್ಲ ಎಂಬುದಾಗಿ ಸ!ಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ಸ್ಪಷ್ಟಪಡಿಸಿದ್ದು, ಜನರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂಬುದಾಗಿ ಹೇಳಿದ್ದಾರೆ.!

ಅದೇ ರೀತಿ ಕೆ ಆರ್ ಮಾರ್ಕೆಟ್ ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂಬುದಾಗಿ ಸಂಘದ ಮುಖ್ಯಸ್ಥರು ಹೇಳಿಕೊಂಡಿದ್ದು ರೈತರು ಕೂಡ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಿಂತಿದ್ದಾರೆ. ಪ್ರತೀ ಬಾರಿ ಒಂದು ರೈತರನ್ನು ಕೇಂದ್ರ ಸರಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುವ ವಿಪಕ್ಷಗಳಿಗೆ ಇದೀಗ ಭಾರೀ ಮುಖಭಂಗ ಉಂಟಾಗಿದೆ. ಕೆಲ ಕಾಂಗ್ರೆಸ್ ಪ್ರೇರಿತ ಸಂಘಟನೆಗಳು ಬಂದ್ ಮಾಡಲೇಬೇಕು ಎಂದು ಒತ್ತಾಯಿಸಿದರೂ ಕೂಡ ರೈತರು, ವ್ಯಾಪಾರಿಗಳು, ಪೆಟ್ರೋಲ್ ಬಂಕ್ ಅಸೋಸಿಯೇಷನ್, ಹೋಟೆಲ್ ಗಳು ಸೇರಿದಂತೆ ಅನೇಕ ಸಂಘಟನೆಗಳು ಬಂದ್‌ಗೆ ವಿರೋಧ ವ್ಯಕ್ತಪಡಿಸಿದೆ. ಆದ್ದರಿಂದ ವಿಪಕ್ಷಗಳು ನೀಡಿದ ಭಾರತ್ ಬಂದ್ ವಿಫಲವಾಗುವ ಎಲ್ಲಾ ಮುನ್ಸೂಚನೆ ಸಿಕ್ಕಿದ್ದು, ನಾಳಿನ ದಿನ ಏನಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.!

-ಅರ್ಜುನ್

Tags

Related Articles

FOR DAILY ALERTS
 
FOR DAILY ALERTS
 
Close